ನಿಮ್ಮ ಫೋನ್‌ನಲ್ಲಿರುವ ನೆಟ್‌ವರ್ಕ್ ಸೆಟ್ಟಿಂಗ್‌ಗಳ ಮೂಲಕ ಸಾಮಾನ್ಯವಾಗಿ ನೀವು ಏರ್‌ಪ್ಲೇನ್ ಮೋಡ್ (Airplane Mode) ಅನ್ನು ಪ್ರವೇಶಿಸಬಹುದು. ವಿಮಾನದ ಮೂಲಕ ಪ್ರಯಾಣಿಸುವ ಯಾರಾದರೂ ಟೇಕಾಫ್ ಮಾಡುವ ಮೊದಲು ತಮ್ಮ ಎಲೆಕ್ಟ್ರಾನಿಕ್ ಡಿವೈಸ್ ಆಫ್ ಮಾಡುವುದು ಅಥವಾ ಏರ್‌ಪ್ಲೇನ್ ಮೋಡ್ (Airplane Mode) ನಲ್ಲಿ ಇಡುವುದು ಅವರ ಮೊದಲ ಕೆಲಸವಾಗಿರುತ್ತದೆ. ಆದರೆ ಏರ್‌ಪ್ಲೇನ್ ಮೋಡ್ ನಿಖರವಾಗಿ ಏನು ಕೆಲಸ ಮಾಡುತ್ತದೆ. ಅಥವಾ ನಿಮ್ಮ ಎಲೆಕ್ಟ್ರಾನಿಕ್ ಡಿವೈಸ್‌ಗಳಾದ ಕಂಪ್ಯೂಟರ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಫೋನ್‌ಗಳನ್ನು ವಿಮಾನದ ಸಂಪೂರ್ಣ ಅವಧಿಯಲ್ಲಿ ಏರ್‌ಪ್ಲೇನ್ ಮೋಡ್‌ನಲ್ಲಿ ಇಡೀ ಎಂದು ಏಕೆ ಹೇಳುತ್ತಾರೆ ಎನ್ನುವುದನ್ನು ಯೋಚಿಸಿದ್ದೀರಾ? ಇದಕ್ಕೆ ಉತ್ತರ ಇಲ್ಲಿದೆ ನೋಡಿ.
ಮೊದಲನೆಯದಾಗಿ ನಿಮ್ಮ ಫೋನ್, ಲ್ಯಾಪ್‌ಟಾಪ್ ಅಥವಾ ಟ್ಯಾಬ್ಲೆಟ್‌ನಲ್ಲಿನ ನೆಟ್‌ವರ್ಕ್ ಸೆಟ್ಟಿಂಗ್‌ಗಳ ಮೂಲಕ ನೀವು ಸಾಮಾನ್ಯವಾಗಿ ಏರ್‌ಪ್ಲೇನ್ ಮೋಡ್ ಆನ್ ಮಾಡಬಹುದು. ಏರ್‌ಪ್ಲೇನ್ ಮೋಡ್ ಆನ್ ಮಾಡಲು ಏರ್‌ಪ್ಲೇನ್ ಐಕಾನ್ ಅನ್ನು ಪತ್ತೆ ಮಾಡಿ ಮತ್ತು ಅದರ ಮೇಲೆ ಟ್ಯಾಪ್ ಮಾಡಿ. ಏರ್‌ಪ್ಲೇನ್ ಐಕಾನ್ ಶೀಘ್ರದಲ್ಲೇ ನಿಮ್ಮ ಫೋನ್‌ನಲ್ಲಿರುವ ಸಿಗ್ನಲ್ ಬಾರ್‌ಗಳನ್ನು ಬದಲಾಯಿಸುತ್ತದೆ. ವಿಮಾನವು ವೈಫೈ ಸಿಸ್ಟಮ್ ಅನ್ನು ಸ್ಥಾಪಿಸಿದ್ದರೆ ಮತ್ತು ಏರ್‌ಲೈನ್ ಅದರ ಬಳಕೆಯನ್ನು ಅನುಮತಿಸಿದರೆ ನೀವು FAA ಅವಶ್ಯಕತೆಗಳ ಪ್ರಕಾರ ನಿಮ್ಮ ಡಿವೈಸ್ ನಲ್ಲಿ ವೈಫೈ ಸಂಪರ್ಕವನ್ನು ಬಳಸಬಹುದು.
ನಿಮ್ಮ ಡಿವೈಸ್ ಏರ್‌ಪ್ಲೇನ್ ಮೋಡ್ ಸೆಲ್ಯುಲಾರ್ ಸಿಗ್ನಲ್‌ಗಳನ್ನು ಕಳುಹಿಸುವುದನ್ನು ನಿಲ್ಲಿಸುತ್ತದೆ. ಇದರಿಂದಾಗಿ ನಿಮ್ಮ ಮೊಬೈಲ್ ನೆಟ್‌ವರ್ಕ್‌ನಿಂದ ಕರೆಗಳು ಅಥವಾ ಟೆಕ್ಸ್ಟ್ ಗಳನ್ನು ಸ್ವೀಕರಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಈ ಮೋಡ್ ಸಾಮಾನ್ಯವಾಗಿ ನಿಮ್ಮ Wi-Fi ಅನ್ನು ಸಹ ಆಫ್ ಮಾಡುತ್ತದೆ. ಆದರೆ ನೀವು ವೈಫೈ ನೆಟ್‌ವರ್ಕ್‌ಗೆ ಪ್ರವೇಶವನ್ನು ಹೊಂದಿದ್ದರೆ ಆ ವೈಫೈ ಅನ್ನು ಆನ್ ಮಾಡುವ ಮೂಲಕ ಇಂಟರ್ನೆಟ್ ಬಳಸಬಹುದು.
ನಿಮ್ಮ ಎಲೆಕ್ಟ್ರಾನಿಕ್ ಡಿವೈಸ್‌ಗಳ ಸಿಗ್ನಲ್‌ಗಳು ವಿಮಾನದ ಸಂವಹನ ವ್ಯವಸ್ಥೆಯನ್ನು ಅಡ್ಡಿಪಡಿಸಬಹುದು. ನಿಮ್ಮ ಸೆಲ್ಯುಲಾರ್-ಸಂಪರ್ಕಿತ ಎಲೆಕ್ಟ್ರಾನಿಕ್ಸ್‌ನಿಂದ ಬಲವಾದ ರೇಡಿಯೋ ತರಂಗಗಳು ಮತ್ತು ವಿದ್ಯುತ್ಕಾಂತೀಯ ಹಸ್ತಕ್ಷೇಪವನ್ನು ಹೊರಸೂಸಲಾಗುತ್ತದೆ. ಪೈಲಟ್‌ಗೆ ಏರ್ ಟ್ರಾಫಿಕ್ ಕಂಟ್ರೋಲ್ ಅಥವಾ ಯಾವುದೇ ನೆಲದ ಸಿಬ್ಬಂದಿಯೊಂದಿಗೆ ಸಂವಹನ ಮಾಡುವುದು ಅಸಾಧ್ಯವಾಗುತ್ತದೆ. ಆ ಎಲ್ಲಾ ಫೋನ್ ಸಿಗ್ನಲ್‌ಗಳ ಸಂಯೋಜಿತ ಪರಿಣಾಮವು ತುಂಬಾ ಅಗಾಧವಾಗಿರುತ್ತದೆ. ಏಕೆಂದರೆ ಪ್ರತಿದಿನ ಲಕ್ಷಾಂತರ ಜನರು ವಿಮಾನದಲ್ಲಿ ಪ್ರಯಾಣಿಸುವುದರಿಂದ ತಮ್ಮ ಎಲೆಕ್ಟ್ರಾನಿಕ್ ಡಿವೈಸ್ ಏರ್‌ಪ್ಲೇನ್ ಮೋಡ್‌ಗೆ ಬದಲಾಯಿಸುವಂತೆ ವಿಮಾನ ಸಿಬ್ಬಂದಿ ಯಾವಾಗಲೂ ಪ್ರಯಾಣಿಕರನ್ನು ಕೇಳುತ್ತಾರೆ.
ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ಪ್ರಕಾರ ಫೋನ್‌ನಿಂದ ಸೆಲ್ಯುಲಾರ್ ಸಿಗ್ನಲ್‌ಗಳು ನೆಲದ ಮೇಲಿನ ಸೆಲ್ ಟವರ್‌ಗಳನ್ನು ಅತಿಕ್ರಮಿಸಬಹುದು. ಇದು ಸೇವೆಯನ್ನು ಅಡ್ಡಿಪಡಿಸಬಹುದೆಂಬ ಕಾರಣಕ್ಕಾಗಿ FAA ವಿಮಾನದಲ್ಲಿ ಎಲೆಕ್ಟ್ರಾನಿಕ್ ಡಿವೈಸ್ ಬಳಸುವುದರ ಮೇಲೆ ಹಲವಾರು ನಿಷೇಧಗಳನ್ನು ಜಾರಿಗೆ ತಂದಿದೆ. ಆದರೆ ನಿಮ್ಮ ಫೋನ್ ವಿಮಾನದ ಸಂಪೂರ್ಣ ಪ್ರಯಾಣ ಏರ್‌ಪ್ಲೇನ್ ಮೋಡ್‌ನಲ್ಲಿದ್ದರೂ ನೀವು ಬ್ಲೂಟೂತ್ ಅಥವಾ ವೈಫೈ ಅನ್ನು ಬಳಸಬಹುದು. ಸೆಲ್ ಫೋನ್‌ಗಳಿಂದ ಪ್ರಸರಣಗಳು ಪ್ರಮುಖ ವಿಮಾನ ಉಪಕರಣಗಳೊಂದಿಗೆ ಹಸ್ತಕ್ಷೇಪ ಮಾಡಬಹುದು. ಆದ್ದರಿಂದ FCC ಮತ್ತು FAA ಗಾಳಿಯಲ್ಲಿರುವಾಗ ಅವುಗಳ ಬಳಕೆಯನ್ನು ನಿಷೇಧಿಸುತ್ತವೆ. ಡಿವೈಸ್ ಬಳಸುವಾಗ ಸೆಲ್ಯುಲಾರ್ ಸಂಪರ್ಕವನ್ನು ಆಫ್ ಮಾಡಬೇಕು ಅಥವಾ ಏರ್‌ಪ್ಲೇನ್ ಮೋಡ್‌ನಲ್ಲಿರಬೇಕು.