Tech Tips & Tricks: ನೀವೊಂದು ಸ್ಮಾರ್ಟ್ಫೋನ್ ಖರೀದಿ ಮಾಡಿದ ನಂತರ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಇಲ್ಲದಿದ್ದರೆ ನೀವು ಬಹಳಷ್ಟು ಹಣ ಖರ್ಚು ಮಾಡಬೇಕಾಗುತ್ತದೆ. ನಿಮ್ಮ ಸಣ್ಣಪುಟ್ಟ ತಪ್ಪುಗಳಿಂದಾಗಿ ನೀವು ಬಳಸುವ ಸ್ಮಾರ್ಟ್‌ಫೋನ್‌ನ ಬ್ಯಾಟರಿ ಶಾಶ್ವತವಾಗಿ ಹಾಳಾಗಬಹುದು. ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವಾಗ ನೀವು ಚಾರ್ಜಿಂಗ್ ಸಮಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಹೆಚ್ಚಿನ ಸಮಯ ಚಾರ್ಜ್ ಮಾಡಿದರು ಸಹ ನಿಮಗ ನಷ್ಟವಾಗಬಹುದು.
ಚಾರ್ಜ್ ಮಾಡುವಾಗ ನೀವು ವೀಡಿಯೋ ಗೇಮ್‌ಗಳನ್ನು ಆಡಿದರು ಎಚ್ಚರಿಕೆ ವಹಿಸಬೇಕು. ನಿಮ್ಮ ಸ್ಮಾರ್ಟ್‌ಫೋನ್ ಚಾರ್ಜ್ ಆಗುತ್ತಿರುವಾಗ ನೀವು ಗೇಮ್‌ಗಳನ್ನು ಆಡಬಾರದು ಎಂಬುದನ್ನು ನೀವು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯವಾಗಿದೆ. ಇದರಿಂದಾಗಿ ಬ್ಯಾಟರಿ ಹಾನಿಯಾಗುವ ಸಾಧ್ಯತೆಯಿದೆ. ಜನರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಚಾರ್ಜ್ ಮಾಡುವಾಗ ಗೇಮ್‌ಗಳನ್ನು ಆಡುತ್ತಾರೆ. ಇದರಿಂದ ನಿಮ್ಮ ಸ್ಮಾರ್ಟ್‌ಫೋನ್ ಮದರ್‌ಬೋರ್ಡ್‌ಗೆ ಹಾನಿಯಾಗಬಹುದು.
ಸ್ಮಾರ್ಟ್ಫೋನ್ ಬಳಕೆಗೆ ಹೆಚ್ಚಿನ ಎಚ್ಚರಿಕೆ ಅಗತ್ಯವಿದೆ. ನಾವು ನಮ್ಮ ಸ್ಮಾರ್ಟ್‌ಫೋನ್‌ಗಳನ್ನು ಎಲ್ಲಿ ಬೇಕಾದರೂ ಇಡುತ್ತೇವೆ. ಇದರಿಂದಾಗಿ ತೇವಾಂಶವು ಫೋನ್‌ನಲ್ಲಿ ಹಲವು ಬಾರಿ ಬರುವುದರಿಂದ ನಿಮಗೆ ತುಂಬಾ ಕಿರಿಕಿರಿ ಆಗಬಹುದು. ಈ ತೇವಾಂಶವು ಸ್ಮಾರ್ಟ್‌ಫೋನ್ ಬ್ಯಾಟರಿಗೆ ಬಂದರೆ ಶಾಶ್ವತವಾಗಿ ಮೊಬೈಲ್ ಬ್ಯಾಟರಿಯನ್ನ ಹಾನಿ ಮಾಡಬಹುದು. ಆದ್ದರಿಂದ ನೀವು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಚಾರ್ಜ್ ಮಾಡಿದಾಗಲೆಲ್ಲಾ ಸಮಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು. ಇಲ್ಲದಿದ್ದರೆ ನಿಮ್ಮ ಬ್ಯಾಟರಿಯು ಶಾಶ್ವತವಾಗಿ ಹಾನಿಗೊಳಗಾಗಬಹುದು ಅಥವಾ ಬ್ಲಾಸ್ಟ್ ಆಗಬಹುದು.
ಯಾವುದೇ ಒಂದು ಸ್ಮಾರ್ಟ್ಫೋನ್ ಸ್ಪೋಟಗೊಳ್ಳಲು ಅಥವಾ ಅದರ ಬ್ಯಾಟರಿ ಹಾಳಾಗಲು ಹಲವಾರು ಅಂಶಗಳು ಕಾರಣವಾಗಿ ಮಾರ್ಪಡಬಹುದು. ಅದರಲ್ಲಿ ಸಾಮಾನ್ಯವಾಗಿ ದೋಷಯುಕ್ತ ಸ್ವಿಚ್ ಬೋರ್ಡ್‌ಗಳು, ವಿದ್ಯುತ್ ಏರಿಳಿತ ಅಥವಾ ಶಾರ್ಟ್ ಸರ್ಕ್ಯೂಟ್ ಮತ್ತು ನಕಲಿ ಚಾರ್ಜರ್‌ಗಳ ಬಳಕೆ ಸಹ ಸ್ಫೋಟಕ್ಕೆ ಕಾರಣವಾಗಬಹುದು. ಆದ್ದರಿಂದ ನಿಮ್ಮ ಫೋನ್ ಜೊತೆಗೆ ಬಂದ ಚಾರ್ಜರ್ ಅನ್ನೇ ಬಳಸಿ ಮತ್ತು ಚಾರ್ಜ್ ಮಾಡಲು ಸಿಕ್ಕ ಸಿಕ್ಕ ಕಡೆ ಚಾರ್ಜ್ ಮಾಡಬೇಡಿ ಒಂದು ವೇಳೆ ಪವರ್ ಸಪ್ಲಯ್ ಹೆಚ್ಚಿದ್ದರೆ ನಿಮ್ಮ ಫೋನ್ ಜೊತೆಗೆ ನಿಮಗೆ ಹಾನಿಯಾಗಬಹುದು.