Direct to Device by BSNL: ಸ್ಮಾರ್ಟ್ ಡಿವೈಸ್‌ಗಳಿಗೆ ಸ್ಯಾಟಿಲೈಟ್ ಸೇವೆ ಪೂರೈಸಲು ಹೊಸ ಡೈರೆಕ್ಟ್-ಟು-ಡಿವೈಸ್ ಸೇವೆ ಆರಂಭ!

Direct to Device by BSNL: ಸ್ಮಾರ್ಟ್ ಡಿವೈಸ್‌ಗಳಿಗೆ ಸ್ಯಾಟಿಲೈಟ್ ಸೇವೆ ಪೂರೈಸಲು ಹೊಸ ಡೈರೆಕ್ಟ್-ಟು-ಡಿವೈಸ್ ಸೇವೆ ಆರಂಭ!
HIGHLIGHTS

ದೇಶದಲ್ಲಿ ಮೊಟ್ಟ ಸ್ಯಾಟಿಲೈಟ್ ಮೂಲದ ಡೈರೆಕ್ಟ್ ಟು ಡಿವೈಸ್ (D2D) ಸೇವೆಯನ್ನು BSNL ಬಿಡುಗಡೆಗೊಳಿಸದೆ.

Direct to Device by BSNL ಸೇವೆ ನಿಮ್ಮ ಸ್ಮಾರ್ಟ್ ಡಿವೈಸ್‌ಗಳಿಗೆ ನೇರವಾಗಿ ಇಂಟರ್ನೆಟ್ ನಂತಹ ಸೇವೆಗಳನ್ನು ಪೂರೈಸುತ್ತದೆ.

BSNL ಕ್ಯಾಲಿಫೋರ್ನಿಯಾ ಮೂಲದ ಸಂವಹನ ತಂತ್ರಜ್ಞಾನ ಕಂಪನಿಯಾಗಿರುವ Viasat ಜೊತೆಗೆ ಸೇರಿ ದೇಶದಲ್ಲಿ ಅಭಿವೃದ್ಧಿಪಡಿಸಲಾಗಿದೆ.

Direct to Device by BSNL: ಸರ್ಕಾರಿ ಸೌಮ್ಯದ ಜನಪ್ರಿಯ ಟೆಲಿಕಾಂ ಕಂಪನಿಯಾಗಿರುವ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ದೇಶದಲ್ಲಿ ಮೊಟ್ಟ ಮೊದಲ ಸ್ಯಾಟಿಲೈಟ್ ಮೂಲದ ಡೈರೆಕ್ಟ್ ಟು ಡಿವೈಸ್ (D2D) ಸೇವೆಯನ್ನು ಅಧಿಕೃತವಾಗಿ ಬಿಡುಗಡೆಯಗೊಳಿಸಿದೆ. ಏನಪ್ಪ ಇದು ಎನ್ನುವವರಿಗೆ ಸರಳ ಭಾಷೆಯಲ್ಲಿ ಹೇಳುವುದಾದರೆ ಈ ಡೈರೆಕ್ಟ್ ಟು ಡಿವೈಸ್ (D2D) ಸೇವೆ ನಿಮ್ಮ ಸ್ಮಾರ್ಟ್ ಡಿವೈಸ್‌ಗಳಿಗೆ ನೇರವಾಗಿ ಇಂಟರ್ನೆಟ್ ನಂತಹ ಸೇವೆಗಳನ್ನು ಪೂರೈಸುತ್ತದೆ. ಇದರ ಬಗ್ಗೆ ಮತ್ತಷ್ಟು ಪುಷ್ಟಿಯನ್ನು ನೀಡಲು ಭಾರತೀಯ ದೂರಸಂಪರ್ಕ ಇಲಾಖೆ (DoT) ಈ ಬಿಡುಗಡೆಯ ಬಗ್ಗೆ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಸಹ ಮಾಡಿದೆ.

ಭಾರತೀಯ ಟೆಲಿಕಾಂ ಈ ತಂತ್ರಜ್ಞಾನವನ್ನು ಕ್ಯಾಲಿಫೋರ್ನಿಯಾ ಮೂಲದ ಸಂವಹನ ತಂತ್ರಜ್ಞಾನ ಕಂಪನಿಯಾಗಿರುವ Viasat ಜೊತೆಗೆ ಸೇರಿ ದೇಶದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದು ದೇಶದ ದೂರದ ಮತ್ತು ಪ್ರತ್ಯೇಕ ಮೂಲೆಗಳಲ್ಲಿಯೂ ಸಹ ಬಳಕೆದಾರರಿಗೆ ತಡೆರಹಿತ ಸಂಪರ್ಕವನ್ನು ನೀಡುವ ಗುರಿಯನ್ನು ಹೊಂದಿದೆ. BSNL ಮೊದಲ ಬಾರಿಗೆ ಇಂಡಿಯನ್ ಮೊಬೈಲ್ ಕಾಂಗ್ರೆಸ್ (IMC) 2024 ನಲ್ಲಿ ಸೇವೆಯನ್ನು ಅನಾವರಣಗೊಳಿಸಿತು ಮತ್ತು ಅದರ ಸಾಮರ್ಥ್ಯವನ್ನು ಪರೀಕ್ಷಿಸಲು ಪ್ರಾರಂಭಿಸಿದೆ ಎಂದು ಹೈಲೈಟ್ ಮಾಡಿದೆ.

Also Read: ಕೇವಲ 11,499 ರೂಗಳಿಗೆ 12GB RAM ಮತ್ತು 108MP ಕ್ಯಾಮೆರಾದ ಲೇಟೆಸ್ಟ್ ಇನ್ಫಿನಿಕ್ಸ್ 5G Smartphone ಲಭ್ಯ!

ಭಾರತದಲ್ಲಿ BSNL ಹೊಸ ಡೈರೆಕ್ಟ್ ಟು ಡಿವೈಸ್ (D2D) ಸೇವೆಯನ್ನು ಆರಂಭಿಸಿದೆ:

Direct to Device by BSNL

ಈ ಹೊಸ ಡೈರೆಕ್ಟ್ ಟು ಡಿವೈಸ್ (D2D) ಸೇವೆಯ ಬಿಡುಗಡೆಯ ಬಗ್ಗೆ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಭಾರತೀಯ ದೂರಸಂಪರ್ಕ ಇಲಾಖೆ (DoT) ಇದು ಹೊಸ ಟೆಕ್ನಾಲಜಿ ಅಲ್ಲ ಆದರೆ ಸ್ಮಾರ್ಟ್ ಫೋನ್ ಮೂಲಕ ಬಳಕೆ ಮೊದಲ ಬಾರಿಯಾಗಲಿದೆ. ಈ ಸೇವೆಯನ್ನು ಪ್ರಸ್ತುತ iPhone 14 Series ಮೇಲ್ಪಟ್ಟ ಡಿವೈಸ್ಗಳಿಗೆ ಬೆಂಬಲಿಸಲಿದೆ ಅಲ್ಲದೆ ಈ ಹೊಸ ಸಾಮಾನ್ಯ ಜನರಿಗೆ ಲಭ್ಯವಿರೋದಿಲ್ಲ.

ಪ್ರಸ್ತುತ ಈ ಸೇವೆ ಪೂರ್ತಿಯಾಗಿ ಕೇವಲ ಮಿಲಿಟರಿ ಮತ್ತು ಇತರೆ ಸರ್ಕಾರಿ ತುರ್ತು ಸೇವೆಯನ್ನು ಪಾಲಿಸುವ ಏಜೆನ್ಸೀಗಳಿಗೆ ನೀಡಲಾಗುತ್ತಿದೆ. ಸಮಯ ಕಳೆದಂತೆ ಈ ಸೇವೆ ಜನ ಸಾಮಾನ್ಯರಿಗೂ ಲಭ್ಯವಾಗುವುದಾಗಿ ನಿರೀಕ್ಷಿಸಬಹುದು. ಈ ಸೇವೆಗಳನ್ನು ಬಳಸುವವರನ್ನು ತಮ್ಮ ಪ್ರೀತಿಪಾತ್ರರೊಂದಿಗೆ ಸಂಪರ್ಕದಲ್ಲಿರಲು ಸಹಾಯ ಮಾಡುತ್ತದೆ. ಅವರು ಸಾಮಾನ್ಯ ಜನರಿರುವ ಪ್ರದೇಶವಾಗಿರಲಿ ಅಥವಾ ಯಾರು ಹೋಗದ ಸ್ಪಿತಿ ಕಣಿವೆಯಾಗಲಿ ಈ ಡೈರೆಕ್ಟ್-ಟು-ಡಿವೈಸ್‌ನೊಂದಿಗೆ BSNL ತನ್ನ ಎಲ್ಲಾ ಬಳಕೆದಾರರಿಗೆ ಸೇವೆಯನ್ನು ನೀಡುತ್ತಿದೆ.

ಈ ಹೊಸ ಡೈರೆಕ್ಟ್ ಟು ಡಿವೈಸ್ (D2D) ಸಾಮಾನ್ಯ ನೆಟ್ವರ್ಕ್ ಆಧಾರಿತ ಸೇವೆಗಳಿಗಿಂತ 10 ಪಟ್ಟು ಉತ್ತಮವಾಗಲಿರುವುದನ್ನು ಊಹಿಸಬಹುದು. ಯಾಕೆಂದರೆ ನಾವು ನೀವು ಬಳಸುವ ಸಾಮಾನ್ಯ ನೆಟ್ವರ್ಕ್ ಗೋಡೆ ಅಥವಾ ಕಟ್ಟಡಗಳ ಕಾರಣದಿಂದಾಗಿ ಕಡತಗೊಳ್ಳುತ್ತದೆ ಆದರೆ ಸ್ಯಾಟಿಲೈಟ್ ಮೂಲದ ಡೈರೆಕ್ಟ್ ಟು ಡಿವೈಸ್ (D2D) ಸೇವೆಗೆ ಯಾವುದೇ ಅಡ್ಡಿ ಇರೋದಿಲ್ಲ.

Direct to Device by BSNL

Direct to Device by BSNL ಸಾಮಾನ್ಯ ಬಳಕೆದಾರರಿಗೂ ಲಭ್ಯ:

ಜನ ಸಾಮನ್ಯರ ಸೆಲ್ಯುಲಾರ್ ನೆಟ್‌ವರ್ಕ್ ಅಥವಾ ವೈ-ಫೈ ಕನೆಕ್ಷನ್ ಲಭ್ಯವಿಲ್ಲದಿದ್ದಾಗ ಅಥವಾ ತುರ್ತು ಕರೆಗಳನ್ನು ಮಾಡಲು ಈ ಸೇವೆಯು ಬಳಕೆದಾರರಿಗೆ ಅವಕಾಶ ನೀಡುತ್ತದೆ ಎಂದು BSNL ಹೇಳಿದೆ. ಇದೇ ಸಂದರ್ಭಗಳಲ್ಲಿ ಬಳಕೆದಾರರು SoS ಮೆಸೇಜ್ಗಳನ್ನು ಕಳುಹಿಸಬಹುದು ಮತ್ತು UPI ಪಾವತಿಗಳನ್ನು ಮಾಡಬಹುದು. ಆದಾಗ್ಯೂ ತುರ್ತು-ಅಲ್ಲದ ಸಂದರ್ಭಗಳಲ್ಲಿ ಸಹ ಕರೆಗಳು ಅಥವಾ SMS ಕಳುಹಿಸಬಹುದೇ ಎಂಬುದನ್ನು ಕಂಪನಿಯು ಹೈಲೈಟ್ ಮಾಡದ ಕಾರಣ ಇದರ ಬಗ್ಗೆ ಮತ್ತಷ್ಟು ಅಧಿಕೃತ ಮಾಹಿತಿ ಬರಬೇಕಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo