ಜನಪ್ರಿಯ ಮತ್ತು ಹೆಚ್ಚು ಜನರನ್ನು ಹೊಂದಿರುವ ಇ-ವಾಲೆಟ್ ಸೇವಾ ಪೂರೈಕೆದಾರರಾಗಿರುವ ಪೆಟಿಎಂ (Paytm) ಈಗ ತಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ನೀಡುತ್ತಿರುವ ಹತ್ತಾರು ಸೇವೆಗಳಲ್ಲಿ ವಿವಿಧ ನಿಯಮಗಳನ್ನು ಉಲ್ಲಂಘಿಸುತ್ತಿರುವುದಾಗಿ ಬೆಳಕಿಗೆ ಬಂದಿದೆ. ಇದರ ಹಿನ್ನೆಲೆಯಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (Paytm Payments Bank) ಸೇವೆಗಳ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಕೆಲವೊಂದು ನಿರ್ಬಂಧಗಳನ್ನು ಏರಿದೆ. ಅದರಲ್ಲಿ ಮುಖ್ಯವಾದವೆಂದರೆ ಪೆಟಿಎಂ ಹೊಸ ಗ್ರಾಹಕರನ್ನು ಪಡೆಯುವಂತಿಲ್ಲ, ಹೊಸ ಪೇಮೆಂಟ್ಸ್ ಬ್ಯಾಂಕ್ ಡೆಪಾಸಿಟ್ ಮಾಡಿಸುವಂತಿಲ್ಲ ಮತ್ತು ಇದಕ್ಕೆ ಸಂಭದಿತ ಯಾವುದೇ ಪ್ರೀಪೇಡ್ ಇನ್ಸ್ಟ್ರುಮೆಂಟ್ಸ್ ಟಾಪಪ್ ಹಾಕಿಸುವಂತಿಲ್ಲವೆಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿರ್ಬಂಧ ಹಾಕಿದೆ.
ಪ್ರಸ್ತುತ ಜನ ಸಾಮಾನ್ಯರ ತಲೆಗೆ ಬರುವ ಬಹುದೊಡ್ಡ ಪ್ರಶ್ನೆ ಅಂದ್ರೆ ಇನ್ಮುಂದೆ ಪೆಟಿಎಂ (Paytm) ಅಪ್ಲಿಕೇಶನ್ ಬಳಸಬೇಕಾ ಬೇಡವಾ ಎನ್ನುವುದು ಆದರೆ ನಿಮ್ಮ ಈ RBI ನಿರ್ಬಂಧಗಳು ಕೇವಲ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (Paytm Payments Bank) ಸೇವೆಗಳ ವಿರುದ್ದವಾಗಿದೆಯೇ ವಿನಃ ಪೆಟಿಎಂ ಅಪ್ಲಿಕೇಶನ್ ಸೇವೆಗಳಲ್ಲ. ಆದ್ದರಿಂದ ಯಾರ್ಯಾರ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಸೇವೆಗಳನ್ನು ಬಳಸುತ್ತಿಲ್ಲವೋ ಅವರು ಎಂದಿನಂತೆ ಪೇಟಿಎಂ ಆ್ಯಪ್ನಲ್ಲಿರುವ ಬೇರೆಲ್ಲಾ UPI ವಹಿವಾಟು ಸೇವೆಗಳನ್ನು ಪಡೆಯಬಹುದಾಗಿದೆ. ಪೇಟಿಎಂ ಸ್ಕ್ಯಾನ್ ಮಾಡಿ ಹಣ ಪಾವತಿಸಬಹುದು. ವಿದ್ಯುತ್, ನೀರು ಇತ್ಯಾದಿ ಬಿಲ್ಗಳನ್ನು ಪಾವತಿಸಬಹುದು. ಈ ಹೊಸ ನಿಯಮ ಇದೆ 29ನೇ ಫೆಬ್ರವರಿ 2024 ರಿಂದ ದೇಶದದ್ಯಾಂತ ಅನ್ವಯವಾಗಲಿದೆ.
ಇದರ ಬಗ್ಗೆ ಸ್ಪಷ್ಟಪಡಿಸುತ್ತ ಪೆಟಿಎಂ ಬಳಕೆದಾರರು Paytm Payments Bank ವಾಲೆಟ್ ಮತ್ತು ಡೆಪಾಸಿಟ್ ಮಾಡಿರುವ ಹಣವನ್ನು ಪ್ರಸ್ತುತ ಸಾಮಾನ್ಯ ಬಳಕೆಯಂತೆ ಯಾವುದೇ ಅಡ್ಡಿಗಳಿಲ್ಲದೆ ಬಳಸಬಹುದು. ಇದರೊಂದಿಗೆ ಹಣ ಕಳುಹಿಸಲು ಅಥವಾ ಪಡೆಯಲು 29ನೇ ಫೆಬ್ರವರಿ 2024 ವರೆಗೆ ಬಳಸಬಹುದು ಇದರ ನಂತರ ಇವೆಲ್ಲ ಬಂದ್ ಆಗಲಿವೆ. ಆದ್ದರಿಂದ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಆದರೆ ನಿಮ್ಮ ಪೇಮೆಂಟ್ಸ್ ಬ್ಯಾಂಕ್ ಖಾತೆಗೆ ಜೋಡಿತವಾಗಿರುವ ಫಾಸ್ಟ್ಯಾಗ್ ಅಥವಾ ಪ್ರೀಪೇಡ್ ಇನ್ಸ್ಟ್ರುಮೆಂಟ್ಸ್ ಟಾಪಪ್ ಮಾಡುವುದು ಮತ್ತು ನಿಮ್ಮ ಪೇಮೆಂಟ್ಸ್ ಬ್ಯಾಂಕ್ ಖಾತೆಗೆ ಹಣವನ್ನು ಡೆಪಾಸಿಟ್ ಮಾಡುವುದನ್ನು ಇಂದಿನಿಂದಲೇ ನಿಲ್ಲಿಸುವುದು ಉತ್ತಮ.
ಈಗಾಗಲೇ ನೀವು ನಿಮ್ಮ ಫಾಸ್ಟ್ಯಾಗ್ ಖಾತೆಯಲ್ಲಿ ಹಣವನ್ನು ರಿಚಾರ್ಜ್ ಮಾಡಿದ್ದರೆ ಈ ತಿಂಗಳ 29ನೇ ಫೆಬ್ರವರಿ 2024 ವರೆಗೆ ಬಳಸಬಹುದು. ಇದರ ನಂತರ ನಿಮ್ಮ ಫಾಸ್ಟ್ಯಾಗ್ ಖಾತೆ ನಿಷ್ಕ್ರಿಯವಾಗಲಿದೆ. ಆದ್ದರಿಂದ ಒಂದು ವೇಳೆ ನೀವು ಈಗಾಗಲೇ ರಿಚಾರ್ಜ್ ಮಾಡಿಕೊಂಡಿದ್ದರೆ ಹೆಚ್ಚುವರಿ ಬ್ಯಾಲೆನ್ಸ್ ಇದ್ದಾರೆ ನಿಮ್ಮ KYC ಪೂರ್ತಿಗೊಂಡಿದ್ದರೆ ನೀವು ಇದರ ರಿಫಂಡ್ ಪಡೆಯಲು ನಿಮ್ಮ ಫಾಸ್ಟ್ಯಾಗ್ ಕ್ಯಾನ್ಸಲೇಷನ್ ವಿಭಾಗದಲ್ಲಿ ಇದನ್ನು ಪಡೆದ ನಿಮ್ಮ ಸೇವಾ ಪೂರೈಕೆದಾರರ ಕಸ್ಟಮರ್ ಕೇರ್ಗೆ ಕರೆ ಮಾಡಿ ಪಡೆಯಬಹುದು.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ