ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿತ್ತಾರೆ ಅಲ್ಲದೆ ಅವರ ಪ್ರತಿಯೊಂದು ಸಂತೋಷದ ಅಥವಾ ದುಃಖದ ಸಮಯವನ್ನು ಈ ಸೋಶಿಯಲ್ ಮೀಡಿಯಾದಲ್ಲಿ (Social Media) ಹಂಚಿಕೊಳ್ಳಲು ಖಾತುರರಾಗಿರುತ್ತಾರೆ. ಜನರು ತಮ್ಮ ಫೋಟೋಗಳು, ವೀಡಿಯೊಗಳು ಮತ್ತು ರೀಲ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ರಚಿಸುತ್ತಾರೆ ಮತ್ತು ಪೋಸ್ಟ್ ಮಾಡುತ್ತಾರೆ. ಜನರ ಜೀವನದಲ್ಲಿ ಏನೇ ನಡೆದರೂ ಅದಕ್ಕೆ ಸಂಬಂಧಿಸಿದ ಕಂಟೆಂಟ್ಗಳನ್ನು ಸೋಶಿಯಲ್ ಮೀಡಿಯಾದಲ್ಲಿ (Social Media) ಇನ್‌ಸ್ಟಾಗ್ರಾಮ್, ಫೇಸ್ಬುಕ್ ಅಥವಾ ಟ್ವಿಟರ್ ನಂತಹ ವೇದಿಕೆಗಳಲ್ಲಿ ಹಂಚಿಕೊಳ್ಳುವುದನ್ನು ನೀವು ನೋಡಿರಬಹುದು.
Also Read: 30 ದಿನಗಳ ವ್ಯಾಲಿಡಿಟಿಯೊಂದಿಗೆ Unlimited ಕರೆ ಮತ್ತು ದಿನಕ್ಕೆ 3GB ಡೇಟಾ ನೀಡುವ BSNL ಬೆಸ್ಟ್ ಪ್ಲಾನ್ ಬೆಲೆ ಎಷ್ಟು?
ನಿಮಗೊತ್ತಾ ಆದರೆ ಅನೇಕ ಜನರು ತಮ್ಮ ಮತ್ತು ಮಕ್ಕಳ ಫೋಟೋ ಮತ್ತು ರೀಲ್ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ (Social Media) ದುರುಪಯೋಗವಾಗಿಸಿರುವುದುನ್ನು ಸಹ ನೀವು ಗಮನಿಸಬಹುದು. ಅಷ್ಟೇಯಲ್ಲದೆ ಕೆಲವೊಮ್ಮೆ ಅಪಾಯದಿಂದ ಮುಕ್ತವಾಗುವುದಿಲ್ಲ ಎಂಬುದು ನಿಮಗೆ ತಿಳಿದಿಲ್ಲವಾದರೆ ಈ ಕೆಳಗಿನ ಅಂಶಗಳನೊಮ್ಮೆ ತಿಳಿದು ಮಾಹಿತಿ ನಿಮಗೆ ಇಷ್ಟವಾದರೆ ತಿಳಿಯದವರೊಂದಿಗೆ ಹಂಚಿಕೊಳ್ಳಿ.
ಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಬೆಳೆಯುತ್ತಿರುವಾಗ ಬಾಲ್ಯದ ಪರಿಸ್ಥಿತಿಯಲ್ಲಿ ಸೋಶಿಯಲ್ ಮೀಡಿಯಾ ಗ್ಯಾಜೆಟ್ ಹೆಚ್ಚು ಕುತೂಹಲಕಾರಿಯಾಗಿ ಕಾಣುತ್ತವೆ. ಆದರೆ ಅದರಿಂದಾಗುವ ಅಪಾಯದ ಬಗ್ಗೆ ಒಂದಿಷ್ಟು ಚಿಂತೆ ಇರೋದಿಲ್ಲ. ಆ ಸಮಯದಲ್ಲಿ ಮಕ್ಕಳು ಕಂಟೆಂಟ್‌ಗಳನ್ನು ಅರ್ಥಮಾಡಿಕೊಳ್ಳುವ ಮತ್ತು ತಮ್ಮೊಂದಿಗೆ ಸಂಪರ್ಕ ಸಾಧಿಸುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುತ್ತಾರೆ. ಅಂತಹ ಸಮಯದಲ್ಲಿ ಅವರ ಫೋಟೋಗಳು ಅಥವಾ ರೀಲ್‌ಗಳನ್ನು ಹಂಚಿಕೊಳ್ಳುವುದು ಅವರ ಗೌಪ್ಯತೆ ಮತ್ತು ನಡವಳಿಕೆಯ ಮೇಲೆ ಪರಿಣಾಮ ಬೀರಬಹುದು. ಮಕ್ಕಳಿಗೆ ಸಂಬಂಧಿಸಿದ ತಪ್ಪು ಕಂಟೆಂಟ್‌ಗಳನ್ನು ಪೋಸ್ಟ್ ಮಾಡುವುದು ಇಂಟರ್ನೆಟ್ ಜಗತ್ತಿನಲ್ಲಿ ಅಪಾಯಕಾರಿ ಎಂದು ಸಾಬೀತುಪಡಿಸಬಹುದು.
ಇಂಟರ್ನೆಟ್‌ನಲ್ಲಿ ಏನನ್ನಾದರೂ ಪೋಸ್ಟ್ ಮಾಡಿದ ನಂತರ ಅದನ್ನು ತೆಗೆದುಹಾಕುವುದು ತುಂಬಾ ಕಷ್ಟದ ಕೆಲಸವಾಗಿದೆ. ಜನರು ಆನ್‌ಲೈನ್‌ನಲ್ಲಿ ಹಂಚಿಕೊಂಡ ಕಂಟೆಂಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳುತ್ತಾರೆ. ಮಕ್ಕಳ ಯಾವುದೇ ಫೋಟೋ ಅಥವಾ ವೀಡಿಯೋವನ್ನು ಹಂಚಿಕೊಳ್ಳುವಾಗ ಈ ಫೋಟೋ-ವೀಡಿಯೋ ಮಗುವಿನ ಮೇಲೆ ಎಷ್ಟು ಪ್ರಭಾವ ಬೀರಬಹುದು ಎಂಬುದನ್ನು ಖಂಡಿತವಾಗಿ ಯೋಚಿಸಬೇಕಿದೆ. ಇದು ಮಗುವಿನ ಭವಿಷ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದಿಲ್ಲದೆ ಮಕ್ಕಳ ಮಾನಸಿಕ ಸ್ಥಿತಿಯನ್ನು ಕಂಟ್ರೋಲ್ ಮಾಡುತ್ತವೆ.
ಫೋಟೋಗಳನ್ನು ಹಂಚಿಕೊಳ್ಳುವುದು ನಿಮ್ಮ ಮಗುವಿನ ಆನ್‌ಲೈನ್ ಅಪಹರಣಕ್ಕೆ ಕಾರಣವಾಗಬಹುದು. ಇದು ನಿಜವಾದ ಅಪಹರಣವಲ್ಲವಾದರೂ ಇದು ಮಗುವಿನ ಫೋಟೋಗಳು ಮತ್ತು ವೀಡಿಯೊಗಳನ್ನು ಬೇರೆ ಹೆಸರು ಮತ್ತು ಗುರುತಿನ ಅಡಿಯಲ್ಲಿ ಬಳಸುವುದನ್ನು ಒಳಗೊಂಡಿರುತ್ತದೆ. ಆನ್‌ಲೈನ್‌ನಲ್ಲಿ ಕೆಲವರು ಇತರರ ಮಕ್ಕಳನ್ನು ತಮ್ಮ ಮಕ್ಕಳೆಂದು ಹೇಳಿಕೊಂಡಾಗ ಅನೇಕ ಬಾರಿ ಇದು ಸಂಭವಿಸುತ್ತದೆ. ಮಕ್ಕಳ ಫೋಟೋಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವ ದೊಡ್ಡ ಅಪಾಯವೆಂದರೆ ಅವರು ಸೈಬರ್ ಬೆದರಿಸುವಿಕೆಗೆ ಬಲಿಯಾಗಬಹುದು.
ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗುವ ಚಿತ್ರಗಳ ಲಾಭವನ್ನು ತಪ್ಪಾಗಿ ಪಡೆಯುತ್ತಾರೆ. ಈ ಶಿಶುಕಾಮಿಗಳು ಮುಗ್ದ ಮಕ್ಕಳ ಅಶ್ಲೀಲತೆಗೆ ಗುರಿ ಪಡಿಸುತ್ತಾರೆ ಅಂತಹ ಜನರು ಮಕ್ಕಳ ಫೋಟೋಗಳು ಮತ್ತು ವೀಡಿಯೊಗಳನ್ನು ಎಡಿಟ್ ಮಾಡುತ್ತಾರೆ ಮತ್ತು ಆಕ್ಷೇಪಾರ್ಹ ವೆಬ್‌ಸೈಟ್‌ಗಳು ಅಥವಾ ವೇದಿಕೆಗಳಲ್ಲಿ ಪೋಸ್ಟ್ ಮಾಡುತ್ತಾರೆ. ಫೋಟೋ ಅಥವಾ ವಿಡಿಯೋ ನೋಡಿದವರಲ್ಲಿ ಅನೇಕರು ಅವರನ್ನು ಚುಡಾಯಿಸುವುದು ಅಥವಾ ಕೆಟ್ಟ ಕಾಮೆಂಟ್ ಮಾಡುತ್ತಾರೆ. ಇಂತಹ ಅಸಹ್ಯಕರ ಕಾಮೆಂಟ್‌ಗಳನ್ನು ಆನ್‌ಲೈನ್‌ನಲ್ಲಿ ಮಾಡುವುದು ಇಂದಿನ ದಿನಗಳಲ್ಲಿ ಸಾಧಾರಣವಾಗಿ ಬಿಟ್ಟಿದೆ. ಆದರೆ ಇಂತಹ ಈ ಎಲ್ಲ ಸೋಶಿಯಲ್ ಮೀಡಿಯಾ(Social Media) ಮತ್ತು ಕಂಟೆಂಟ್‌ಗಳಿಂದ ಮಕ್ಕಳನ್ನು ದೂರವಿಡುವುದು ಬಹಳ ಮುಖ್ಯವಾಗಿದೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ ವಾಟ್ಸಾಪ್ Channel View ಮಾಡಿ ಸೇರಿಕೊಳ್ಳಿ!