ಕೊರೊನಾವೈರಸ್ ಕಾರಣದಿಂದಾಗಿ Swiggy, CureFit ಮತ್ತು Zomato ಈ ನಿರ್ಧಾರ ತೆಗೆದುಕೊಂಡಿವೆ

ಕೊರೊನಾವೈರಸ್ ಕಾರಣದಿಂದಾಗಿ Swiggy, CureFit ಮತ್ತು Zomato ಈ ನಿರ್ಧಾರ ತೆಗೆದುಕೊಂಡಿವೆ
HIGHLIGHTS

Swiggy ಮತ್ತು Zomato ಕೂಡ ಇದೇ ರೀತಿಯದ್ದನ್ನು ಮಾಡಿದ್ದು ಕೊರೊನಾವೈರಸ್ ಹರಡುವುದನ್ನು ತಡೆಯಲು ಕೆಲವು ಕ್ರಮಗಳನ್ನು ತೆಗೆದುಕೊಂಡಿವೆ.

ಕರೋನವೈರಸ್‌ನಿಂದ ಪ್ರಪಂಚದಾದ್ಯಂತ ಜನರು ತೊಂದರೆಗೀಡಾಗಿದ್ದಾರೆ. ಆದರೆ ಜನರು ಮಾತ್ರವಲ್ಲ ಕಂಪನಿಗಳು ಕೂಡ ಸಮಸ್ಯೆಗಳನ್ನು ಎದುರಿಸುತ್ತಿವೆ. ಕೆಲವು ದಿನಗಳ ಹಿಂದೆ ಫಿಟ್‌ನೆಸ್ ಸೇವಾ ಪೂರೈಕೆದಾರ ಕಂಪನಿ ಕ್ಯೂರ್‌ಫಿಟ್ ತನ್ನ ಎಲ್ಲಾ ತರಗತಿಗಳನ್ನು 14 ದಿನಗಳವರೆಗೆ ಮುಚ್ಚಿದೆ. ಇದರರ್ಥ ಪ್ರಸ್ತುತ ಕ್ಯೂರ್‌ಫಿಟ್ ಸದಸ್ಯರು ತಮ್ಮ ಸೇವೆಗಳನ್ನು ಸದ್ಯಕ್ಕೆ ಪುನರಾರಂಭಿಸಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಾಗಿ ಕಂಪನಿಯು ಎಲ್ಲಾ ಸದಸ್ಯರ ಸದಸ್ಯತ್ವವನ್ನು 14 ದಿನಗಳ ನಂತರ ವಿಸ್ತರಿಸಿದೆ. ಇದು ಕಂಪನಿಯ ನಷ್ಟವನ್ನು ಅನುಭವಿಸಲು ಕಾರಣವಾಗಿದೆ. ಅದೇ ಸಮಯದಲ್ಲಿ Swiggy ಮತ್ತು Zomato ಕೂಡ ಇದೇ ರೀತಿಯದ್ದನ್ನು ಮಾಡಿದ್ದು ಕೊರೊನಾವೈರಸ್ ಹರಡುವುದನ್ನು ತಡೆಯಲು ಕೆಲವು ಕ್ರಮಗಳನ್ನು ತೆಗೆದುಕೊಂಡಿವೆ. 

ಮೊದಲಿಗೆ Swiggy ಬಗ್ಗೆ ನೋಡುವುದಾದರೆ COVID-19 ಜಾಗತಿಕ ಕಾಳಜಿಯ ವಿಷಯವಾಗಿರುವುದರಿಂದ ಕರೋನವೈರಸ್ ಹರಡುವ ಸಾಧ್ಯತೆಗಳನ್ನು ಕಡಿಮೆ ಮಾಡಲು ನಾವು ಕೆಲವು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ನಮ್ಮ ಗ್ರಾಹಕರು, ಉದ್ಯೋಗಿಗಳು, ವಿತರಣಾ ಪಾಲುದಾರರು ಮತ್ತು ರೆಸ್ಟೋರೆಂಟ್ ಪಾಲುದಾರರ ಸುರಕ್ಷತೆ ಯಾವಾಗಲೂ ನಮಗೆ ಮೊದಲ ಆದ್ಯತೆಯ ವಿಷಯವಾಗಿದೆ.  ಇದು ತನ್ನ ವಿತರಣಾ ಪಾಲುದಾರರಿಗೆ ತರಬೇತಿ ನೀಡುತ್ತಿದೆ. ಇಂತಹ ಆರ್ಡರ್ ಅಲ್ಲಿ ಅವರಿಗೆ ವೈದ್ಯಕೀಯ ಮತ್ತು ಆರ್ಥಿಕ ಸಹಾಯವನ್ನೂ ನೀಡಲಾಗುತ್ತಿದೆ. ಕಂಪನಿಯು ಈ ಮಾಹಿತಿಯನ್ನು ತನ್ನ ಬ್ಲಾಗ್‌ನಲ್ಲಿ ನೀಡಿದ್ದು ಅದನ್ನು ತನ್ನ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಿದೆ.

ಇದರ ನಂತರ Zomato ಬಗ್ಗೆ ನೋಡುವುದಾದರೆ COVID-19 ಗೆ ಸಂಬಂಧಿಸಿದಂತೆ ಕಂಪನಿಯು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಜೊಮಾಟೊ ಸಂಸ್ಥಾಪಕ ದೀಪೇಂದ್ರ ಗೋಯೆಲ್ ಹೇಳಿದ್ದಾರೆ. ಸಂಪರ್ಕವಿಲ್ಲದ ಆಹಾರ ವಿತರಣಾ ಸೌಲಭ್ಯಗಳು ಈಗಾಗಲೇ ಝೋಮೋಟೋ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ. ಈ ವಿತರಣಾ ಸೂಚನೆಗಳ ವೈಶಿಷ್ಟ್ಯದ ಅಡಿಯಲ್ಲಿ ಈ ಸೌಲಭ್ಯ ಲಭ್ಯವಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo