ಇನ್ಮುಂದೆ ಪ್ರೆಸ್, ಪೊಲೀಸ್, ಆರ್ಮಿ ಅಂಥ ಸ್ಟಿಕರ್ ಹಾಕಿದ್ರೆ ನಿಮ್ಮ ಗಾಡಿ ಸೀಜ್ ಗ್ಯಾರಂಟಿ…

ಇನ್ಮುಂದೆ ಪ್ರೆಸ್, ಪೊಲೀಸ್, ಆರ್ಮಿ ಅಂಥ ಸ್ಟಿಕರ್ ಹಾಕಿದ್ರೆ ನಿಮ್ಮ ಗಾಡಿ ಸೀಜ್ ಗ್ಯಾರಂಟಿ…
HIGHLIGHTS

ಕೋರ್ಟ್ ಆದೇಶ ಮೇರೆಗೆ ಮಾಹಾರಾಷ್ಟ್ರದ ಪ್ರಮುಖ ನಗರಗಳಲ್ಲಿ ಸ್ಟಿಕ್ಕರ್ ಹೊಂದಿರುವ ವಾಹನಗಳ ವಿರುದ್ಧ ವಿಶೇಷ ಕಾರ್ಯಚರಣೆ ನಡೆಯುತ್ತಿದ್ದಾರೆ.

ಭಾರತದಲ್ಲಿ ಪೊಲೀಸರು ಸರ್ವಜನಿಕವಾಗಿ ತಪ್ಪಾಗಿ ಪ್ರೆಸ್, ಪೊಲೀಸ್, ಆರ್ಮಿ ಅಂಥ ಸ್ಟಿಕ್ಕರ್‌ಗಳನ್ನು ಅಂಟಿಸುವ ವಾಹನಗಳ ಮೇಲೆ ಭಾರಿ ಕ್ರಮ ಕೈಗೊಂಡಿದ್ದಾರೆ. ಏಕೆಂದರೆ ಖಾಸಗಿ ವಾಹನಗಳಲ್ಲಿ ಪೊಲೀಸ್, ಅಡ್ವೊಕೇಟ್, ಪ್ರೆಸ್, ಜಡ್ಜ್, ಗವರ್ನಮೆಂಟ್, ಆರ್ಮಿ ಮುಂತಾದ ಸ್ಟಿಕ್ಕರ್‌ಗಳನ್ನು ಬಳಸಿ ಅನಾಧಿಕೃತವಾಗಿ ಇನ್ಮುಂದೆ ಹೀಗೆ ಬೇಕಾಬಿಟ್ಟಿಯಾಗಿ ಸ್ಟಿಕ್ಕರ್ ಹಾಕಿ ಓಡಾಡುವ ವಾಹನ ಮಾಲೀಕರು ಸೀಜ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದ್ದರಿಂದ ಚಾಲಕನ ಸಂಪೂರ್ಣ ಮಾಹಿತಿಗಾಗಿ ಭಾರತ ಸರ್ಕಾರ ಅನೇಕ ಅಪ್ಲಿಕೇಶನ್ಗಳು ಮತ್ತು ವೆಬ್ಸೈಟ್ ಮೂಲಕ ಜಾತಕವನ್ನು ಹೊರ ತೆಗೆದು ಸೀಜ್ ಮಾಡೋದು ಅನಿವಾರ್ಯವಾಗಿದೆ.     

ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ ನಂತರ ಸುಲಭವಾಗಿ ತಪ್ಪಿಸಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿರುತ್ತಿದ್ದ ಪ್ರೆಸ್, ಪೊಲೀಸ್, ಲಾಯರ್ ಮತ್ತು ಆರ್ಮಿ ಸ್ಟಿಕ್ಕರ್ ಹೊಂದಿರುವ ವಾಹನ ಮಾಲೀಕರಿಗೆ ಬಾಂಬೆ ಹೈಕೋರ್ಟ್ ಶಾಕಿಂಗ್ ಸುದ್ದಿ ನೀಡಿದ್ದು ನಿಯಮಬಾಹಿರವಾಗಿ ಸ್ಟಿಕ್ಕರ್ ಗಳನ್ನು ಬಳಸುತ್ತಿರುವ ವಾಹನಗಳನ್ನು ವಶಕ್ಕೆ ಪಡೆದು ದಂಡವಿಧಿಸುವಂತೆ ಪೊಲೀಸ್ ಇಲಾಖೆಗೆ ಖಡಕ್ ಆದೇಶ ನೀಡಿದೆ.  ಮಾಹಾರಾಷ್ಟ್ರದಲ್ಲಿ ಈಗಾಗಲೇ ಖಾಸಗಿ ವಾಹನ ಮೇಲೆ ಸ್ಟಿಕ್ಕರ್ ಅಂಟಿಸುವುದು ನಿಯಮಬಾಹಿರವಾಗಿದ್ದು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಾರಿಗೆ ನಿಯಮಗಳ ಉಲ್ಲಂಘನೆ ಪ್ರಕರಣಗಳಲ್ಲಿ ಪ್ರೆಸ್, ಪೊಲೀಸ್ ಮತ್ತು ಲಾಯರ್ ವಾಹನಗಳೇ ಹೆಚ್ಚು ಭಾಗಿಯಾಗಿರುವುದು ಕಂಡುಬಂದಿದೆ. 

ಹೀಗಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪರಿಶೀಲನೆ ಮಾಡಿದ ಬಾಂಬೆ ಹೈಕೋರ್ಟ್ ಪ್ರೆಸ್, ಪೊಲೀಸ್, ಲಾಯರ್ ಮತ್ತು ಆರ್ಮಿ ಸ್ಟಿಕ್ಕರ್ ಹೊಂದಿರುವ ವಾಹನಗಳ ವಿರುದ್ದ ಕೂಡಲೇ ಕ್ರಮ ಜರುಗಿಸುವಂತೆ ಆದೇಶಿಸಿದ್ದು ಕೋರ್ಟ್ ಆದೇಶ ಮೇರೆಗೆ ಮಾಹಾರಾಷ್ಟ್ರದ ಪ್ರಮುಖ ನಗರಗಳಲ್ಲಿ ಸ್ಟಿಕ್ಕರ್ ಹೊಂದಿರುವ ವಾಹನಗಳ ವಿರುದ್ಧ ವಿಶೇಷ ಕಾರ್ಯಚರಣೆ ನಡೆಯುತ್ತಿದ್ದಾರೆ.  ಮುಂಬೈ ಮತ್ತು ಪುಣೆಯಲ್ಲಿ ಈಗಾಗಲೇ ಸಾವಿರಾರು ಸ್ಟಿಕ್ಕರ್ಸ್ ಹೊಂದಿರುವ ವಾಹನಗಳನ್ನು ವಶಕ್ಕೆ ಪಡೆದು ದಂಡವಿಧಿಸುತ್ತಿರುವ ಪೊಲೀಸರು ನಿಯಮಬಾಹಿರವಾಗಿ ಪ್ರೆಸ್, ಪೊಲೀಸ್, ಲಾಯರ್ ಮತ್ತು ಆರ್ಮಿ ಸ್ಟಿಕ್ಕರ್  ಹೊಂದಿರುವ ವಾಹನ ಮಾಲೀಕರಿಗೆ ರೂ. 200 ದಂಡ ವಿಧಿಸಿದ್ದಾರೆ. 

ಜೊತೆಗೆ ಸ್ಟಿಕ್ಕರ್ ಅಂಟಿಸುವ ಶಾಪ್ ಮಾಲೀಕರಿಗೂ ಎಚ್ಚರಿಕೆ ನೀಡಲಾಗುತ್ತಿದ್ದು ನಿಯಮಬಾಹಿರ ಸ್ಟಿಕ್ಕರ್ಸ್ ಅಂಟಿಸಿದ್ದಲ್ಲಿ ಶಾಪ್ ಮಾಲೀಕರ ವಿರುದ್ಧವೂ ಕ್ರಮ ಜರಗಿಸಲು ಮುಂದಾಗಿದ್ದಾರೆ.  ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್ ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..! ಇನ್ನು ದೇಶಾದ್ಯಂತ ಹೊಸ ವಾಹನಗಳ ಸಂಖ್ಯೆ ಹೆಚ್ಚಾದಂತೆಲ್ಲಾ ಸಂಚಾರಿ ನಿಯಮಗಳ ಉಲ್ಲಂಘಟನೆ ಪ್ರಕರಣಗಳು ಹೆಚ್ಚುತ್ತಿದ್ದು ಹೊಸ ಮೋಟಾರ್ ವೆಹಿಕಲ್ ಕಾಯ್ದೆ ಜಾರಿಗೆ ಈಗಾಗಲೇ ಸಂಸತ್ ನಲ್ಲಿ ಅನುಮೋದನೆ ಕೂಡಾ ದೊರೆತಿದೆ. ಇದರಿಂದ ಪ್ರಸ್ತುತ ಚಾಲ್ತಿಯಲ್ಲಿ ದಂಡದ ಮೊತ್ತಗಳು ದುಪ್ಪಟ್ಟಾಗಿದ್ದು ಕೆಲವು ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳಿಗೆ ಗರಿಷ್ಠ ಮಟ್ಟದ ವಿಧಿಸುವ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ಹೀಗಾಗಿ ಇಷ್ಟು ದಿನಗಳ ಕಾಲ ನಿಯಮ ಉಲ್ಲಂಘಿಸಿದರೂ ಕಡಿಮೆ ದಂಡದೊಂದಿಗೆ ಬಚಾವ್ ಆಗಬಹುದಾದ ಸನ್ನಿವೇಶ ಇನ್ಮುಂದೆ ಇರುವುದಿಲ್ಲ.  

ಹೆಚ್ಚುತ್ತಿರುವ ಅಪಘಾತ ಪ್ರಕರಣಗಳನ್ನು ತಡೆಯಲು ಈಗಾಗಲೇ ಹಲವಾರು ಕಠಿಣ ಕ್ರಮಗಳನ್ನು ಜಾರಿಗೆ ತರಲಾಗಿದ್ದು, ಲೈಸೆನ್ಸ್ ಇಲ್ಲದೇ ವಾಹನ ಸವಾರಿ ಮಾಡುವುದು, ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಮಾಡುವುದು ಮತ್ತು ಅಪಾಯಕಾರಿ ವಾಹನ ಚಾಲಾಯಿಸುವುದರ ವಿರುದ್ಧ ಭಾರೀ ಮೊತ್ತದ ದಂಡವನ್ನು ವಸೂಲಿ ಮಾಡಲಾಗುತ್ತಿದೆ. ಈ ಹಿಂದೆ ಇದ್ದ ಬಹುತೇಕ ಸಂಚಾರಿ ನಿಯಮಗಳ ದಂಡಗಳ ಮೊತ್ತವು ಕನಿಷ್ಠ 500 ರೂಗಳಿಗೆ ಏರಿಕೆಯಾಗಿದ್ದಲ್ಲಿ ಆಂಬ್ಯುಲೆನ್ಸ್  ಮತ್ತು ಯೋಗ್ಯತಾ ಪ್ರಮಾಣ ಪತ್ರವಿಲ್ಲದೆ ಸಾರ್ವಜನಿಕ ರಸ್ತೆಯ ಮೇಲೆ ಸಾರಿಗೆ ವಾಹನವನ್ನು ನಡೆಸುವುದು ಅಥವಾ ನಡೆಸಲು ಅನುಮತಿಸುವುದಕ್ಕೆ ರೂ 3 ಸಾವಿರದಿಂದ 10 ಸಾವಿರ ರೂಗಳ ತನಕ ದಂಡ ವಿಧಿಸಲು ಅನುಮತಿಸಲಾಗಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo