ಗೂಗಲ್ ಅಲ್ಲಿ ಈ ಕೀ ವಾರ್ಡ್ ಸರ್ಚ್ ಮಾಡಿ ನೋಡಿ, ಒಮ್ಮೆ ನಿಮ್ಮ ತಲೆ ತಿರುಗುತ್ತೇ!

ಗೂಗಲ್ ಅಲ್ಲಿ ಈ ಕೀ ವಾರ್ಡ್ ಸರ್ಚ್ ಮಾಡಿ ನೋಡಿ, ಒಮ್ಮೆ ನಿಮ್ಮ ತಲೆ ತಿರುಗುತ್ತೇ!
HIGHLIGHTS

ಆದ್ದರಿಂದ ಗೂಗಲ್ ಅಲ್ಲಿ ಈ ಕೀ ವಾರ್ಡ್ ಸರ್ಚ್ ಮಾಡಿ ನೋಡಿದರೆ ಒಂದು ನಿಮಿಷ ನಿಮ್ಮ ತಲೆ ತಿರುಗುತ್ತದೆ.

ನಿಮಗೆ ತಿಳಿದಿರುವಂತೆ Google ನಲ್ಲಿ ಸರಳವಾದ ಸರ್ಚ್ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ಹೊಂದಿಸುತ್ತದೆ. ಆದಾಗ್ಯೂ Google ಸರ್ಚ್ ಸರಳವಾಗಿ ಅವಲಂಬಿಸುವುದರಿಂದ ಕೆಲವೊಮ್ಮೆ ನಿಮಗೆ ತೊಂದರೆಯಾಗಬಹುದು. ಸದ್ಯ ಗೂಗಲ್ ಅಸಿಸ್ಟಂಟ್ ವಾಯ್ಸ್ ಸರ್ಚ್ ಫೀಚರ್ ಬಳಕೆದಾರರನ್ನು ಹೆಚ್ಚಾಗಿ ಸೆಳೆದಿದೆ. ಇವುಗಳೊಂದಿಗೆ ಗೂಗಲ್ ಕೆಲವು ಇಂಟ್ರೆಸ್ಟಿಂಗ್ ಮತ್ತು ಟೇಕ್ ಕೆರೆಯುವಂತಹ ಕ್ರೇಜಿ ಸರ್ಚ್ ವಿಧಾನಗಳನ್ನು ಹೊಂದಿದ್ದು ಗೂಗಲ್ ಪ್ರತಿಯೊಬ್ಬರಿಗೂ ಅಚ್ಚು ಮೆಚ್ಚಿಗೆ ಪಾತ್ರವಾದವುಗಳ ಬಗ್ಗೆ ಒಮ್ಮೆ ತಿಳಿದುಕೊಳ್ಳಲೇಬೇಕು. ಏಕೆಂದರೆ ಇವುಗಳನ್ನು ನೀವು ಈವರೆಗೆ ಸರ್ಚ್ ಮಾಡಿರೊಲ್ಲ ಏಕೆಂದರೆ ಎಂದು ಊಹಿಸಲಾಗದ ಗೂಗಲ್ ಸರ್ಚ್ ನಿಮಗೆ ನೀಡುತ್ತದೆ. ಆದ್ದರಿಂದ ಗೂಗಲ್ ಅಲ್ಲಿ ಈ ಕೀ ವಾರ್ಡ್ ಸರ್ಚ್ ಮಾಡಿ ನೋಡಿದರೆ ಒಂದು ನಿಮಿಷ ನಿಮ್ಮ ತಲೆ ತಿರುಗುತ್ತದೆ.

Do a Barrel Roll 

ಗೂಗಲ್  ಸರ್ಚ್ ನಲ್ಲಿ ಈ ಕೀ ವರ್ಡ್  ಟೈಪ್  ಮಾಡಿ ಸರ್ಚ್ ಮಾಡಿದರೇ ಖಂಡಿತಾ ನಿಮ್ಮ ಕಣ್ಣುಗಳ ಮುಂದೆ ಮ್ಯಾಜಿಕ್ ನಡೆಯಲಿದೆ. ಏಕೆಂದರೇ ಈ ಕೀ ವರ್ಡ್  ಸರ್ಚ್ ಮಾಡಿದಾಗ ಕಾಣಿಸುವ ಫಲಿತಾಂಶದಲ್ಲಿ Do a Barrel Roll ಫಲಿತಾಂಶ ತೆರೆಯಿರಿ ಆಗ ಫಲಿತಾಂಶದ ಪುಟ ಗಿರಗಿರನೆ ತಿರುಗಿ ಬಿಡುತ್ತದೆ. ಹಾಗೆಯೇ ಎರಡು, ಹತ್ತು, ಇಪ್ಪತ್ತು, ನೂರು ಹಾಗೂ ಸಾವಿರ ಬಾರಿ ತಿರುಗುವ ಆಯ್ಕೆ ಸಹ ಕಾಣಿಸುತ್ತದೆ.

Google zerg rush 

ಈ ಕೀ ವರ್ಡ್  ಅನ್ನು ಟೈಪ್ ಮಾಡಿದರೆ ಬರುವ ಸರ್ಚ್ ಫಲಿತಾಂಶಗಳೆಲ್ಲವು ಹಾಗೆಯೇ ಕ್ರಮೇಣ ಮಾಯವಾಗುತ್ತಾ ಹೋಗುತ್ತವೆ. zerg rush ಎನ್ನುವುದು ಒಂದು ಆಕ್ರಮಣ ತಂತ್ರವಾಗಿದ್ದು ದೊಡ್ಡ ಪಡೆಯೊಂದಿಗೆ ಅಥವಾ ಗ್ಯಾಂಗ್ ನೊಂದಿಗೆ ಆಕ್ರಮಣ ಮಾಡುವುದಾಗಿದೆ. ಅದೇ ರೀತಿ zerg rush ಸರ್ಚ್ ಮಾಡಿದಾಗ ಫಲಿತಾಂಶ ಪುಟದಲ್ಲಿ ಯೆಲ್ಲೊ ರಿಂಗ್ ಗಳು ಫಲಿತಾಂಶವನ್ನು ಮಾಯ ಮಾಡುತ್ತವೆ/ನಾಶ ಮಾಡುತ್ತವೆ.

Google Zipper

ಬಳಕೆದಾರರು ಗೂಗಲ್  ಸರ್ಚ್ ನಲ್ಲಿ Google Zipper ಕೀ ವರ್ಡ್ ಸರ್ಚ್ ಮಾಡಿದರೇ ಗೂಗಲ್ ಡ್ಯೂಡಲ್  ಪೇಜ್ ನ ಮಧ್ಯದಲ್ಲಿ ಜಿಪ್/Zipper ಕಾಣಿಸುತ್ತದೆ. ಬಳಕೆಅದರರು ಜಿಪ್/Zipper ಸರಿಸಬಹುದು. ಅಂದಹಾಗೆ Zipper ಅನ್ನು ಶೋಧಿಸ ಗಿಡಿಯಾನ್ ಸಂಡ್ ಬ್ಯಾಕ್ ಗಿಡಿಯಾನ್ ಸಂಡ್ಬ್ಯಾಕ್ ಅವರ 132 ಹುಟ್ಟಹಬ್ಬದ ನೆನಪಿಗಾಗಿ 2012ರಲ್ಲಿ ಈ ವಿಶೇಷ ಸರ್ಚ್ ವಿಧಾನ ರೂಪಿಸಿತ್ತು.

Google Mirror

ಇದು ಗೂಗಲ್ ನ ಇನ್ನೊಂದು ಆಕರ್ಷಕ ಸರ್ಚ್ ಪೇಜ್ ಅಂದರೇ ಅದು ಗೂಗಲ್ ಮೀರರ್ ಬಳಕೆದಾರರು Google Mirror ಎಂಬ ಕೀ ವರ್ಡ್  ಸರ್ಚ್ ಮಾಡಿದರೇ ಕನ್ನಡಿಯ ಬಿಂಬದಂತೆ ಗೂಗಲ ಡ್ಯೂಡಲ್ ಕಾಣಿಸುತ್ತದೆ. ಹಾಗೆಯೇ ಸರ್ಚ್ ಮಾಹಿತಿಗಳು ಸಹ ಕನ್ನಡಿ ಬಿಂಬದಲ್ಲಿ/ ಉಲ್ಟಾ ಕಾಣಿಸುತ್ತವೆ. ನೀವು ಒಮ್ಮೆ ಪ್ರಯತ್ನಿಸಿ ನೋಡಿ.

Google Underwater 

ಗೂಗಲ್ ನಲ್ಲಿ ಅಂಡರ್ ವಾಟರ್ ಕೀ ವರ್ಡ್  ಸರ್ಚ್ ಮಾಡಿದರೇ ನಿಮಗೆ ನೀರಿನಲ್ಲಿ ಗೂಗಲ್ ಸರ್ಚ್ ಬಾಕ್ಸ್  ಕಾಣಿಸುತ್ತದೆ. ಹಾಗೂ ಗೂಗಲ್ ಡ್ಯೂಡಲ್ ನೊಂದಿಗೆ ಮೀನುಗಳು ಸಹ ಕಾಣಿಸುತ್ತವೆ.

Google Zero Gravity

ಗೂಗಲ್ ನಲ್ಲಿ ಝೀರೋ ಗ್ರಾವಿಟಿ ಎಂದು ಸರ್ಚ್ ಮಾಡಿದರೇ ಕಾಣಿಸುವ ಗೂಗಲ್ ಡ್ಯೂಡಲ್ ತಕ್ಷಣಕ್ಕೆ ಕೆಳಗ ಬಿದ್ದಂತೆ ಕಾಣುತ್ತದೆ. ಏಕೆಂದರೇ ನೀವು ಸರ್ಚ್ ಮಾಡಿರುವ ಕೀ ವರ್ಡ್ ಜೀರೊ ಗ್ರ್ಯಾವಿಟಿ ಅಲ್ಲವೇ. ಈ ಕಾರಣಕ್ಕಾಗಿ ಹೀಗೆ ನಿಮಗೆ ಭಾಷಾವಾಗುತ್ತದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo