ವಿಶ್ವದ ಅತಿ ವೇಗದ ಇಂಟರ್ನೆಟ್ ಅನ್ನು ಚೀನಾ ಆರಂಭಿಸಿದ್ದು ಹೊಸ ದಾಖಲೆ ನಿರ್ಮಿಸಿದೆ. ಈ ಅಂತರ್ಜಾಲದಲ್ಲಿ 1.2 ಟೆರಾಬೈಟ್ ವೇಗ ಲಭ್ಯವಿರುತ್ತದೆ. ಅಂದರೆ ಚೀನಾದಲ್ಲಿ ಪ್ರತಿ ಸೆಕೆಂಡಿಗೆ 1200GB ವೇಗದಲ್ಲಿ ಇಂಟರ್ನೆಟ್ (Internet) ಅನ್ನು ಬಳಸಬಹುದು. ನಾವು ಸರಳ ಭಾಷೆಯಲ್ಲಿ ಬಳಕೆದಾರರು ಸೆಕೆಂಡುಗಳಲ್ಲಿ ಅನೇಕ ಕಾರ್ಯಗಳನ್ನು ಮಾಡಬಹುದು. ಈ ವೇಗದಲ್ಲಿ ಒಂದು ಸೆಕೆಂಡಿನಲ್ಲಿ 150 HD ಚಲನಚಿತ್ರಗಳನ್ನು ವರ್ಗಾಯಿಸಬಹುದು. ಪ್ರಪಂಚದಾದ್ಯಂತ ಜನರು ಇನ್ನೂ 5G ಮತ್ತು ಇತರ ಸೇವೆಗಳನ್ನು ವಿಸ್ತರಿಸಲು ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಚೀನಾ ಬೇರೆ ಉಳಿದ ದೇಶಗಳಿಗಿಂತ ಒಂದೆರಡು ಹೆಜ್ಜೆ ಮುಂದೆ ಸಾಗಿದೆ.
Also Read: 84 ದಿನಗಳ ವ್ಯಾಲಿಡಿಟಿಯೊಂದಿಗೆ ಉಚಿತ Netflix, ದಿನಕ್ಕೆ 2GB ಡೇಟಾ ನೀಡುವ Jio ಪ್ಲಾನ್ ಬೆಲೆ ಎಷ್ಟು?
ಏಕೆಂದರೆ ನಿರೀಕ್ಷೆಗಿಂತ ಮೊದಲೇ ಚೀನಾ ಈ ದೊಡ್ಡ ಕೆಲಸವನ್ನು ಮಾಡಿದ್ದು ಸಾಮಾನ್ಯವಾಗಿ ಇದನ್ನು 2025 ಇಸವಿಯ ಮೊದಲು ಅಲ್ಟ್ರಾ-ಫಾಸ್ಟ್ ಇಂಟರ್ನೆಟ್ ಸಂಪರ್ಕವನ್ನು ಕಾಣಲಾಗುವುದಿಲ್ಲ ಎಂಬ ಊಹಾಪೋಹಗಳು ಭಾರಿ ಸಡ್ಡು ಮಾಡುತ್ತಿದ್ದವು ಆದರೆ ಈಗ ನಿರೀಕ್ಷೆಗಿಂತ ಎರಡು ವರ್ಷ ಮೊದಲೇ ಚೀನಾ ಈ ಕೆಲಸವನ್ನು ಪೂರ್ಣಗೊಳಿಸಿದೆ. ಚೀನಾದ ಕೆಲವೊಂದು ಪ್ರದೇಶಗಳಲ್ಲಿ ಲೇಟೆಸ್ಟ್ ಟೆಕ್ನಾಲಜಿಯ ಫೈಬರ್ ಬ್ರಾಡ್‌ಬ್ಯಾಂಡ್ ಸೇವೆಯನ್ನು ಹರಡಿರುವ ಕಾರಣ ಈ ಅತಿ ವೇಗದ ಇಂಟರ್ನೆಟ್ ಸೇವೆಯನ್ನು ಪಡೆಯಲು ಬಹು ಮುಖ್ಯ ಕಾರಣವಾಗಿದೆ.
ಈ ಇಂಟರ್ನೆಟ್ ವೇಗವನ್ನು ಚೀನಾದ Tsinghua ವಿಶ್ವವಿದ್ಯಾಲಯದಿಂದ ಚೀನಾ ಮೊಬೈಲ್, ಹುವಾವೇ ತಂತ್ರಜ್ಞಾನ ಮತ್ತು ಸೆರ್ನೆಟ್ ಕಾರ್ಪೊರೇಷನ್ ಜಂಟಿಯಾಗಿ ಸಿದ್ಧಪಡಿಸಿವೆ ಎಂದು ಚೀನಾದ South China Morning Post ಪತ್ರಿಕೆ ಮಾಹಿತಿ ನೀಡಿದೆ. ಈ ಯೋಜನೆಯ ಕೆಲಸವು 10 ವರ್ಷಗಳಿಂದ ನಡೆಯುತ್ತಿದೆ ಮತ್ತು ಇದು ಚೀನಾದ ಭವಿಷ್ಯದ ಇಂಟರ್ನೆಟ್ ತಂತ್ರಜ್ಞಾನ ಮೂಲಸೌಕರ್ಯದ ಭಾಗವಾಗಿದೆ. CERNET ಇದು ಚೀನಾದ ಮೊದಲ ರಾಷ್ಟ್ರವ್ಯಾಪಿ ಶಿಕ್ಷಣ ಮತ್ತು ಸಂಶೋಧನಾ ಕಂಪ್ಯೂಟರ್ ಜಾಲ ಹೊಸ ಆವೃತ್ತಿಯಾಗಿದೆ. 3000 ಕಿಲೋಮೀಟರ್‌ಗಳಷ್ಟು ವ್ಯಾಪಿಸಿರುವ ಆಪ್ಟಿಕಲ್ ಫೈಬರ್ ನೆಟ್‌ವರ್ಕ್ ಮೂಲಕ ಈ ಇಂಟರ್ನೆಟ್ ಸೇವೆ ಲಭ್ಯವಿದೆ.
ಡೇಟಾ ಟ್ರಾನ್ಸ್ಮಿಷನ್ ಬಗ್ಗೆ ಮಾತನಾಡುವುದಾದರೆ ಇದು ಚೀನಾದ ಮೂರು ಭಾಗಗಳನ್ನು ಒಳಗೊಂಡಿದೆ. ಈ ಇಂಟರ್ನೆಟ್ ಸಂಪರ್ಕವು ಉತ್ತರದಲ್ಲಿ ಬೀಜಿಂಗ್, ಮಧ್ಯ ಚೀನಾದ ವುಹಾನ್ ಮತ್ತು ದಕ್ಷಿಣದಲ್ಲಿ ಗುವಾಂಗ್‌ಝೌ ಅನ್ನು ಒಳಗೊಂಡಿದೆ. ಪ್ರತಿ ಸೆಕೆಂಡಿಗೆ 1.2Tb ವೇಗದಲ್ಲಿ ಈ ಮೂರು ಬಿಂದುಗಳ ನಡುವೆ ಡೇಟಾವನ್ನು ವರ್ಗಾಯಿಸಬಹುದು. ಇತ್ತೀಚೆಗೆ ಬಿಡುಗಡೆಯಾದ ಅತಿ ವೇಗದ ಇಂಟರ್ನೆಟ್ ಪ್ರತಿ ಸೆಕೆಂಡಿಗೆ 400GB ವೇಗದಲ್ಲಿ ಕೆಲಸ ಮಾಡಿದೆ. ಪ್ರಸ್ತುತ ಇದರ ಸ್ಪೀಡ್ ಬಗ್ಗೆ ಮಾತನಾಡುವುದಾದರೆ ವಿಶ್ವಾದ್ಯಂತ ಬಳಸಲಾಗುವ ಇಂಟರ್ನೆಟ್ ಬ್ಯಾಕ್‌ಬೋನ್ ನೆಟ್‌ವರ್ಕ್‌ನಲ್ಲಿ 100Gbps ವೇಗ ಲಭ್ಯವಿದೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ