ಮತದಾರರ ಐಡಿ ಕಾರ್ಡ್ ಮತದಾನ ಮಾಡಲುಇ ಅತಿ ಮುಖ್ಯವಾಗದೆ. ಯಾವುದೇ ಕಾರಣಕ್ಕಾಗಿ ನಿಮ್ಮ ಮತದಾರರ ಐಡಿ ಕಾರ್ಡ್ ಇಲ್ಲದಿದ್ದರೆ ನೀವು ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗುತ್ತದೆ. ಆದಾಗ್ಯೂ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲವೇ ಎಂಬುದನ್ನು ನೀವು ಆನ್ಲೈನ್ನಲ್ಲಿ ಕಂಡುಕೊಳ್ಳಬಹುದು ಮತ್ತು ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿದ್ದರೆ ನೀವು ಮತದಾರರ ಮಾಹಿತಿ ಸ್ಲಿಪ್ ಆನ್ಲೈನ್ನಲ್ಲಿ ಮಾತ್ರ ಮುದ್ರಿಸಬಹುದು. ಈ ಸ್ಲಿಪ್ ಮತ್ತು ಫೋಟೋ ID ಪ್ರೊಫ್ ಜೋತೆಗೆ ನೀವು ಮತ ಚಲಾಯಿಸಬಹುದು. ಈ ಸ್ಲಿಪ್ ಅನ್ನು ಆನ್ಲೈನ್ ಮೂಲಕ ಹೇಗೆ ಪಡೆಯಬವುದೆಂದು ತಿಳಿಯಿರಿ.
ಮೊದಲನೆಯದು ನೀವು Electoralsearch.in ವೆಬ್ಸೈಟ್ಗೆ ಹೋಗಬೇಕು. ಇಲ್ಲಿ ನೀವು ಎರಡು ಆಯ್ಕೆಗಳನ್ನು ಕಾಣಬಹುದು. ಈ ಒಂದು ಮತದಾರರ ID ಯ ವಿವರಗಳನ್ನು ನಮೂದಿಸಬೇಕು. ಎರಡನೆಯದಾಗಿ, ಮತದಾರ ID ಕಾರ್ಡ್ನ EPIC No ನಮೂದಿಸಬೇಕು. ನೀವು ಯಾವುದಾದರೂ ಒಂದನ್ನು ಆಯ್ಕೆಯನ್ನು ಆರಿಸಬಹುದು. ನಿಮ್ಮ EPIC No. ಅನ್ನು ನೀವು ಹೊಂದಿದ್ದರೆ ಆಯ್ಕೆಯನ್ನು ಆರಿಸಿ.
ಎಲ್ಲಾ ಮಾಹಿತಿಯನ್ನು ನಮೂದಿಸಿದ ನಂತರ ನೀವು ಸರ್ಚ್ ಬಟನ್ ಅನ್ನು ಕ್ಲಿಕ್ ಮಾಡಿ.
ಈಗ ತೆರೆಯುವ ಪುಟ ಸರ್ಚ್ ಫಲಿತಾಂಶವನ್ನು ಹೊಂದಿರುತ್ತದೆ. ಇದರಿಂದ ನಿಮ್ಮ ವಿವರಗಳನ್ನು ಆಯ್ಕೆಮಾಡಿ ಮತ್ತು ವಿವರಗಳನ್ನು ಕ್ಲಿಕ್ ಮಾಡಿ.
ಅದರ ನಂತರ ನಿಮ್ಮ ಎಲ್ಲಾ ವಿವರಗಳು ಹೊಸ ಟ್ಯಾಬ್ನಲ್ಲಿ ತೆರೆಯುತ್ತದೆ.
ಕೆಳಗೆ ನೀವು ಪ್ರಿಂಟ್ ಮತದಾರ ಮಾಹಿತಿ ಆಯ್ಕೆಯನ್ನು ನೀಡಲಾಗುವುದು. PDF ಸ್ವರೂಪದಲ್ಲಿ ನಿಮ್ಮ ವಿವರಗಳನ್ನು ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ.
ನೀವು ಇಲ್ಲಿ ನಿಮ್ಮ ಯಾವುದೇ ವಿವರಗಳನ್ನು ನೋಡದಿದ್ದರೆ ಚುನಾವಣಾ ಆಯೋಗದ ಟೋಲ್ ಫ್ರೀ ಸಂಖ್ಯೆ 1800111950 ಕ್ಕೆ ಕರೆ ಮಾಡಿ ಮಾಹಿತಿ ಪಡೆಯಬವುದು.