ಸೋಷಿಯಲ್ ಮೀಡಿಯಾ ಸೆನ್ಸೇಷನ್ ಆಗಿರುವ ಪ್ರಿಯಾ ಪ್ರಕಾಶ್ ಮೇಲೆ ಪೊಲೀಸ್ ಕೇಸ್.

ಸೋಷಿಯಲ್ ಮೀಡಿಯಾ ಸೆನ್ಸೇಷನ್ ಆಗಿರುವ ಪ್ರಿಯಾ ಪ್ರಕಾಶ್ ಮೇಲೆ ಪೊಲೀಸ್ ಕೇಸ್.
HIGHLIGHTS

ಕಣ್ ಹೊಡೆದು, ಕೈಯಲ್ಲೇ ಗನ್ ತೋರಿಸಿ ಸೋಷಿಯಲ್ ಮೀಡಿಯದಲ್ಲಿ ಸೆನ್ಸೇಷನ್ ಮಾಡಿದ್ಲು ಬೆಡಗಿ.

ಮಲಯಾಳಿ ಸೌಂದರ್ಯ ಪ್ರಿಯಾ ಪ್ರಕಾಶ್ ವಾರಿಯರ್ ಪ್ರಸ್ತುತ ಭಾರತದಾದ್ಯಂತ ಸಂವೇದನೆಯನ್ನು ಹೊಂದಿದ್ದಾರೆ. ಕೇವಲ ಒಂದು ವೀಡಿಯೊದೊಂದಿಗೆ ರಾತ್ರೋ ರಾತ್ರಿ  ತಾರೆಯಾದ ಆಕೆ ಸಾಮಾಜಿಕ ಮಾಧ್ಯಮ ಗೂಗಲಿನಲ್ಲಿ ಅತಿ ಹೆಚ್ಚು ಹುಡುಕುವ ವ್ಯಕ್ತಿಯಾಗಿ ಎರಡನೆಯ ಸ್ಥಾನವನ್ನು ಪಡೆದಿದ್ದರೆ. 

ಆದರೆ ಕಣ್ ಹೊಡೆದು ಕೈಯಲ್ಲೇ ಗನ್ ತೋರಿಸಿ ಸೋಷಿಯಲ್ ಮೀಡಿಯದಲ್ಲಿ ಸೆನ್ಸೇಷನ್ ಮಾಡಿದ ಈ ಬೆಡಗಿಯಾ ಮೇಲೆ ಭಾರಿ ವಿವಾದ ತೊಡಗುತ್ತಿದೆ. ಇದರ ಸಲುವಾಗಿ ಪ್ರಿಯಾ ಪ್ರಕಾಶ್ ವಾರಿಯರ್ ವಿರುದ್ಧ ಈಗ ಹೈದರಾಬಾದ್ನ ಫಲಾಕ್ನಾಮಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಪ್ರಿಯಾ ಪ್ರಕಾಶ್ ವಾರಿಯರಿನ ಕಣ್ ಹೊಡೆದು, ಕೈಯಲ್ಲೇ ಗನ್ ತೋರಿಸುವ ಆ ನಟನೆಯನ್ನು ಮುಸ್ಲಿಮರ ಭಾವನೆಗಳನ್ನು ನೋಯಿಸುತ್ತಿದ್ದಾರೆ ಎಂದು ದೂರು ನೀಡಿದ್ದಾರೆ. ಇದು ಪ್ರೇಮ ಕಥೆ ಮತ್ತು ದ್ವಿ ಪಾತ್ರಗಳ ಈ ಸೀನ್ ಸ್ಟೇಡಿಯಂನಲ್ಲಿ ನಡೆಯುವ ಘಟನೆಯಲ್ಲಿದೆ. ಈ ವಿಷಯದಲ್ಲಿ ಮುಸ್ಲಿಮ್ ಭಾವನೆಗಳು ಹೇಗೆ ಹೊರಬಂದವು? 

ಇದು ಆಕೆಯ ಅಭಿನಯದ ಬಗ್ಗೆಯಲ್ಲ ಆ ನಟನೆಗೆ ನೀಡಿರುವ ಈ 'ಮಾರಿಯಾಕ್ ಮಲಯಾಯ ಪೂವಿ' ಹಾಡು ಪ್ರಿಯಾ ಪ್ರಕಾಶರ ಈ ವಿವಾದಕ್ಕೆ ಕಾರಣವಾಗಿದೆ. ಮಲಬಾರ್ ಪ್ರದೇಶಕ್ಕೆ ಸೇರಿದ ಮುಸ್ಲಿಮರು ಈ ಹಾಡನ್ನು ಅವರ ಕೆಲವು ಉತ್ಸವಗಳಲ್ಲಿನ ಹಬ್ಬದಲ್ಲಿ ಹಾಡುತ್ತಾರಂತೆ. ಇದರಿಂದ ಈ ಹಾಡು ಮುಸ್ಲಿಮನರ ಭಾವನೆಯನ್ನು ನೋಯಿಸುವಂತೆ ಮಾಡಿದೆಯಂತೆ ಎಂದು ದೂರು ದಾಖಲಿಸಲಾಗಿದೆ.

ಈ ಹಾಡು ಮೊಹಮ್ಮದ್ ಪ್ರವಕ್ತ ಮತ್ತು ಅವರ ಪತ್ನಿ ಖಜೀದಾ ನಡುವೆ ಮೂಡಿಬಂದ ಹಾಡಾಗಿದ್ದು ಇದು ಅವರ ನಿಜವಾದ ಪ್ರೀತಿಯ ಸಂಕೇತವೆಂದು ಪರಿಗಣಿಸುತ್ತಾರೆ. ಒಟ್ಟಾರೆಯಾಗಿ ತಯಾರಕರು ತಮ್ಮ ಪ್ರೇಮ ಕಥೆಯನ್ನು ಇಲ್ಲಿ ಎತ್ತಿ ಹಿಡಿದು ಪ್ರಿಯಾ ಪ್ರಕಾಶ್ ವಾರಿಯರ್ ಮತ್ತು ಅವರ ಸಹ ನಟರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಡಿಜಿಟ್ ಕನ್ನಡ ಕಡೆಯ ಈ ಮಾಹಿತಿ ನಿಮಗೆ ಇಷ್ಟವಾದರೆ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ  Facebook / Digit Kannada ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo