Charger Shock: ಆಟವಾಡುತ್ತಿದ್ದ ಮಗು ಚಾರ್ಜರ್ ಶಾಕ್‌ನಿಂದ ಧಾರುಣ ಸಾವು! ಪೋಷಕರೇ ಈಗಲಾದರೂ ಎಚ್ಚೆತ್ತುಕೊಳ್ಳಿ!

Updated on 06-Aug-2024
HIGHLIGHTS

ಮೊಬೈಲ್ ಚಾರ್ಜರ್ ವೈರ್ ಪಿನ್ ಅಗಿಯಲು ಆರಂಭಿಸಿದ್ದು ಅದರಲ್ಲಿ ಹರಿಯುತ್ತಿದ್ದ ವಿದ್ಯುತ್ ತಗುಲಿದ ತಕ್ಷಣ (Charger Shock) ಮಗು ಸಾವನ್ನಪಿದೆ.

ಕುಟುಂಬಸ್ಥರು ಆಕೆಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದರು ಆದರೆ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಒಮ್ಮೆ ಸುಮಾರು 300 ರೂಗಳನ್ನು ಖರ್ಚು ಮಾಡಿ Switch Box Cover Protector ಅನ್ನು ಅಮೆಜಾನ್ ಮೂಲಕ ಖರೀದಿಸಬಹುದು.

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಸಿದ್ದರಾದ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಮೃತವಾದ ಮಗುವನ್ನು ಸಾನಿಧ್ಯ ಕಲ್ಗುಟ್ಕರ್ (Sanidhya Kalgutkar) ಎಂದು ಗುರಿಸಿದ್ದು ಸಂತೋಷ ಕಲ್ಗುಟ್ಕರ್ ಮತ್ತು ಸಂಜನಾ ಕಲ್ಗುಟ್ಕರ್ ಅವರ ಪುತ್ರಿಯಾಗಿದ್ದರು ಪೊಲೀಸರ ಪ್ರಕಾರ ಮೊಬೈಲ್ ಚಾರ್ಜರ್ ಅನ್ನು ಸಾಕೆಟ್‌ಗೆ ಸಂಪರ್ಕಿಸಿದ್ದು ಸ್ವಿಚ್ ಒನ್ ಆಗಿರುವುದನ್ನು ಪರಿಶೀಲಿಸಿ ಕಾರಣವನ್ನು ಪರಿಗಣಿಸಿದ್ದಾರೆ. ಚಾರ್ಜ್ ವೈರ್ ಹಿಡಿದ ಮಗು ಮೊಬೈಲ್ ಚಾರ್ಜರ್ ವೈರ್ ಪಿನ್ ಅಗಿಯಲು ಆರಂಭಿಸಿದ್ದು ಅದರಲ್ಲಿ ಹರಿಯುತ್ತಿದ್ದ ವಿದ್ಯುತ್ ತಗುಲಿದ ತಕ್ಷಣ (Charger Shock) ಮಗು ಸಾವನ್ನಪಿದೆ. ಆದರೂ ಕುಟುಂಬಸ್ಥರು ಆಕೆಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದರು ಆದರೆ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

Also Read: Amazon Freedom Sale Live Now: ಲೇಟೆಸ್ಟ್ ಸ್ಮಾರ್ಟ್ಫೋನ್, ಸ್ಮಾರ್ಟ್ ಟಿವಿ ಮತ್ತು ಲ್ಯಾಪ್‌ಟಾಪ್‌ಗಳ ಮೇಲೆ ಭಾರಿ ಡಿಸ್ಕೌಂಟ್!

ಆಟವಾಡುತ್ತಿದ್ದ ಮುಗ್ದ ಮಗು ಚಾರ್ಜರ್ ಶಾಕ್‌ನಿಂದ ಧಾರುಣ ಸಾವನ್ನಪಿದೆ. ಪೋಷಕರೇ ಈಗಲಾದರೂ ಎಚ್ಚೆತ್ತುಕೊಳ್ಳಿ ಆಕೆಯ ತಂದೆ ಸಂತೋಷ ಕಲ್ಗುಟಕ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯಲ್ಲಿ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು ಘಟನೆಯ ವಿಷಯ ತಿಳಿದ ನಂತರ ಅವರು ಕೆಲಸದ ಸ್ಥಳದಲ್ಲಿ ಕುಸಿದುಬಿದ್ದರು. ಬಾಲಕಿಯ ಮೃತದೇಹವನ್ನು ಶವಾಗಾರಕ್ಕೆ ಸ್ಥಳಾಂತರಿಸಲಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಟುಂಬ ಸದಸ್ಯರು ಬುಧವಾರ ಹೆಣ್ಣು ಮಕ್ಕಳ ಹುಟ್ಟುಹಬ್ಬದ ಕಾರ್ಯಕ್ರಮದ ವ್ಯವಸ್ಥೆಯಲ್ಲಿ ನಿರತರಾಗಿದ್ದರೆಂದು ತಿಳಿಸಿದ್ದಾರೆ.

Charger Shock: a child died after being shocked by a mobile charger 2024

ಮೊಬೈಲ್​ ಚಾರ್ಜರ್ ಕೇಬಲ್ (Mobile Charger Shock) ಸ್ಫೋಟ

ಈ ಘಟನೆ ಹೊಸದೇನಲ್ಲ ಪ್ರತಿ ಭಾರಿ ಇಂತಹ ಘಟನೆಗಳು ಹೊರ ಬಂದಾಗ ಮನ ಕುಲುಕುವುದು ಅನಿವಾರ್ಯವಾಗಿದೆ. ಆದರೆ ಮೊಬೈಲ್‌ನಿಂದ ಎಷ್ಟು ಅನುಕೂಲ ಇದೆಯೋ ಅಷ್ಟೇ ಅನಾನುಕೂಲವೂ ಇದೆ ಎನ್ನುವುದು ನಿಮಗೆ ತಿಳಿದಿದೆ. ಆದರೂ ಅದೆಷ್ಟೋ ಬಾರಿ ಮೊಬೈಲ್‌ ಸಂಬಂಧಿಸಿದ ಸ್ಪೋಟಕಗಳು ನಡೆಯುವುದು ಕಂಡಿರಬಹುದು. ಅಲ್ಲದೆ ಅದೆಷ್ಟೋ ಬಾರಿ ಮಾತನಾಡುವಾಗ ಚಾರ್ಜ್‌ ಹಾಕುವಾಗ ಸ್ಫೋಟಗೊಂಡ ಉದಾಹರಣೆಯೂ ಇದೆ. ಇದೀಗ ಉತ್ತರ ಪ್ರದೇಶದ ಬರೇಲಿಯಲ್ಲಿ ಸೋಲಾರ್ ಪ್ಯಾನೆಲ್ ಮೂಲಕ ಚಾರ್ಜಿಂಗ್‌ನಲ್ಲಿ ಇರಿಸಲಾಗಿದ್ದ ಮೊಬೈಲ್ ಫೋನ್‌ನ ಚಾರ್ಜಿಂಗ್ ಕೇಬಲ್ ಮೂಲಕ ವಿದ್ಯುತ್ ತಗುಲಿದ ತಕ್ಷಣ ಮಗು ಸಾವನ್ನಪಿದೆ.

ನಿಮ್ಮ ಚಾರ್ಜರ್ ಕೇಬಲ್‌ಗಳಿಗೆ ಪಾಕೆಟ್‌

ಕೇಬಲ್‌ಗಳಿಗೆ ಪಾಕೆಟ್‌ಗಳನ್ನು ಹೊಂದಿರುವ ನಿಮ್ಮ ಎಲೆಕ್ಟ್ರಾನಿಕ್ ಸಾಧನಗಳಿಗಾಗಿ ಕೇಸ್‌ಗಳನ್ನು ಖರೀದಿಸಿ ಅಥವಾ ಸಾಮಾನ್ಯ ಎಲೆಕ್ಟ್ರಾನಿಕ್ಸ್ ಮತ್ತು ಕೇಬಲ್ ಆರ್ಗನೈಸಿಂಗ್ ಕೇಸ್ ಅನ್ನು ಖರೀದಿಸಬಹುದು. ನೀವು ಅವುಗಳನ್ನು ಬಳಸದೆ ಇರುವಾಗ ನಿಮ್ಮ ಕೇಬಲ್‌ಗಳನ್ನು ಅವುಗಳ ಮೇಲೆ ನಿಧಾನವಾಗಿ ಲೂಪ್ ಮಾಡಿ ಮತ್ತು ಅವುಗಳನ್ನು ಸುರಕ್ಷಿತವಾಗಿ ಮತ್ತು ರಕ್ಷಿಸಲು ಒಂದು ಸಂದರ್ಭದಲ್ಲಿ ಅವುಗಳನ್ನು ಪಾಕೆಟ್‌ಗೆ ಅಂಟಿಸಿಕೊಳ್ಳಬಹುದು. ಇದರಿಂದಾಗಿ ನಿಮ್ಮ ಚಾರ್ಜರ್ ಕೇಬಲ್ ಕೊಂಚ ಹೆಚ್ಚು ಗಟ್ಟಿ ಮುಟ್ಟಾಗಿರುತ್ತದೆ. ಇದರಿಂದ ಸರಳವಾಗಿ ಹಗೆದು ಅಥವಾ ಕೈಯಿಂದ ಕೀಳಲು ಸಾಧ್ಯವಾಗುವುದಿಲ್ಲ.

Charger Shock: a child died after being shocked by a mobile charger 2024

Switch Box Cover Protector ಖರೀದಿಸಿಕೊಳ್ಳಿ

ಇದರ ಮತ್ತೊಂದು ಅಂಶವನ್ನು ನೀವು ಗಮನಿಸಬೇಕೆಂದರೆ ಚಾರ್ಜರ್ ಅಥವಾ ಸ್ವಿಚ್ ಬೋರ್ಡ್ ಇರುವ ಕಡೆ ಮಕ್ಕಳನ್ನು ಆಡಲು ಬಿಡಬೇಡಿ ಒಂದು ವೇಳೆ ನಿಮ್ಮ ಬಳಿ ಇದಕ್ಕೆ ಯಾವುದೇ ಪರಿಹಾರವಿಲ್ಲವಾದರೆ ಒಮ್ಮೆ ಸುಮಾರು 300 ರೂಗಳನ್ನು ಖರ್ಚು ಮಾಡಿ Switch Box Cover Protector ಅನ್ನು ಅಮೆಜಾನ್ ಮೂಲಕ ಖರೀದಿಸಬಹುದು. ಇದರಲ್ಲಿ ನಿಮಗೆ ಅನೇಕ ಮಾದರಿಯ ಆಯ್ಕೆಗಳನ್ನು ಕಾಣಲು ಸಾಧ್ಯವಿರುತ್ತಾದೆ. ನಿಮ್ಮ ಮನೆ ಅಥವಾ ಸ್ವಿಚ್ ಬೋರ್ಡ್ ಅನುಗುಣವಾಗಿ ಖರೀದಿಸಬಹುದು. ಇದರಿಂದ ಮಕ್ಕಳ ಒಂದು ಕ್ಷಣಕ್ಕೆ ಸ್ವಿಚ್ ಬೋರ್ಡ್ ಬಳಿ ಹೋಗಿ ಮುಟ್ಟಿದರೂ ಯಾವುದೇ ಅಪಾಯವಾಗುವ ಮುಂಚೆ ಗಾಬರಿಯಾಗದೆ ಅವರನ್ನು ಅಲ್ಲಿಂದ ಹಿಂದಕ್ಕೆ ತರಲು ಸಹಕಾರಿಯಾಗುತ್ತದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :