ನಿಮ್ಮ EPF ಅಕೌಂಟಲ್ಲಿ ನಿಮ್ಮ ಮೊಬೈಲ್ ನಂಬರ್ ಮತ್ತು ನಿಮ್ಮ ಇಮೇಲ್ ಐಡಿಯನ್ನು ಬದಲಾಯಿಸುವುದು.

ನಿಮ್ಮ EPF ಅಕೌಂಟಲ್ಲಿ ನಿಮ್ಮ ಮೊಬೈಲ್ ನಂಬರ್ ಮತ್ತು ನಿಮ್ಮ ಇಮೇಲ್ ಐಡಿಯನ್ನು ಬದಲಾಯಿಸುವುದು.
HIGHLIGHTS

ಮೊಬೈಲ್ ನಂಬರ್ ಅಥವಾ ಇ-ಮೇಲ್ ಐಡಿ ಬದಲಾಯಿಸುವ ಸೌಲಭ್ಯದ ಬಗ್ಗೆ ಹೆಚ್ಚಾಗಿ ತಿಳಿದಿರುವುದಿಲ್ಲ.

ನೀವು ಈಗ ಯೂನಿಫೈಡ್ ಪೋರ್ಟಲನ್ನು ಬಳಸಿಕೊಂಡು ಸರಳ ಮತ್ತು ನೀವು ಸುಲಭವಾಗಿ EPF UAN ಖಾತೆಯಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ವಿಳಾಸವನ್ನು ಸಹ ಬದಲಾಯಿಸಬಹುದು ಅಥವಾ ನವೀಕರಿಸಬಹುದು. ಅನೇಕ ಜನರು ಈ ಸೌಲಭ್ಯದ ಬಗ್ಗೆ ಹೆಚ್ಚಾಗಿ ತಿಳಿದಿರುವುದಿಲ್ಲ. ಅಲ್ಲದೆ ಇತ್ತೀಚೆಗೆ ಬ್ಲಾಗ್ ರೀಡರ್ನಲ್ಲಿ ಒಂದು ಕಾಮೆಂಟ್ ವಿಭಾಗದಲ್ಲಿ ಪ್ರಶ್ನೆಯನ್ನು ಕೇಳುತ್ತಿರುತ್ತಾರೆ. ಆದ್ದರಿಂದ ಈ ಮಾಹಿತಿಯನ್ನು ಹಂಚಿಕೊಂಡಿದ್ದೇವೆ. ನಿಮ್ಮ ಮೊಬೈಲ್ ಸಂಖ್ಯೆಯನ್ನು ಬದಲಾಯಿಸುವ ಮತ್ತು ನವೀಕರಿಸುವ ನೈಜ ವಿಧಾನವನ್ನು ಹಂಚಿಕೊಳ್ಳುವ ಮೊದಲು ನಿಮ್ಮ EPF UAN ಖಾತೆಯೊಂದಿಗೆ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸುವುದರ ಪ್ರಯೋಜನಗಳ ಬಗ್ಗೆ ಇಲ್ಲಿ ನೋಡೋಣ.

http://sth.india.com/hindi/sites/default/files/2017/12/12/185269-epfo.jpg

1. ಎಲ್ಲಕ್ಕೂ ಮೊದಲು ನೀವು ನಿಮ್ಮ UAN ನಂಬರ್ ಮತ್ತು ಪಾಸ್ವರ್ಡ್ ನೆನಪಿಸಿಕೊಳ್ಳಿರಿ  

2. ಈಗ ನೀವು EPF ವೆಬ್ಸೈಟಿಗೆ ಹೋಗಿ Unified Member Portal ಮೇಲೆ ಕ್ಲಿಕ್ ಮಾಡಿರಿ ಅಥವಾ ಇಲ್ಲಿ ಕ್ಲಿಕ್ ಮಾಡಿ 

3. ಈಗ ನಿಮ್ಮ ಎಡ ಭಾಗದಲ್ಲಿ ನೋಡಿ ನಿಮಗೆ UAN, Password, Captcha ನೀಡಲು ಒಂದು ಪಟ್ಟಿ ಕಾಣುತ್ತದೆ

4. ಅಲ್ಲಿರುವ ಕ್ಯಾಪ್ಚಾ ಜೊತೆಗೆ ನಿಮ್ಮ UAN ಸಂಖ್ಯೆಯನ್ನು ನೀವು ಒದಗಿಸಿ ಈ ವಿವರವನ್ನು ನಮೂದಿಸಿದ ನಂತರ Submit ಬಟನ್ ಕ್ಲಿಕ್ ಮಾಡಿ. 

5. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ID ಅನ್ನು ಪ್ರದರ್ಶಿಸಲಾಗುವ ಪುಟಕ್ಕೆ ನಿಮ್ಮನ್ನು ತಿರುಗಿಸಲಾಗುತ್ತದೆ.

6. ಮೊಬೈಲ್ ಸಂಖ್ಯೆಯನ್ನು ಬದಲಿಸಲು 'Change Mobile Number' ಮತ್ತು ನಿಮ್ಮ ಹೊಸ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.

7. ಇಲ್ಲಿ 'Get Authorization Pin' ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ಗೆ OTP ಅನ್ನು ಕಳುಹಿಸಲಾಗುವುದು. OTP ಯನ್ನು ಇಲ್ಲಿ ನಮೂದಿಸಿರಿ.

8. ಇದೇ ರೀತಿಯಲ್ಲಿ ಅದರ ಕೆಳಗೆ ನೀವು ನಿಮ್ಮ ಇಮೇಲ್ ಐಡಿಯನ್ನು ಸಹ ನೀವು ಬದಲಾಯಿಸಲು ಬಯಸಿದರೆ ಬಲಾಯಿಸಬಹುದು.

ನೀವು ಸದಸ್ಯ ವಿವರಗಳನ್ನು ನೋಡಲು ಸಾಧ್ಯವಾಗುತ್ತದೆ. ನಿಮ್ಮ ಪ್ರೊಫೈಲ್ ವಿವರದಲ್ಲಿ ನಮೂದಿಸಿದ ಮೊಬೈಲ್ ಸಂಖ್ಯೆ ತಪ್ಪಾಗಿದೆ, ಮೊಬೈಲ್ ಸಂಖ್ಯೆಯ ಮುಂದೆ ನೀಡಿದ 'Change' ಲಿಂಕ್ ಕ್ಲಿಕ್ ಮಾಡಿ. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ ಡಿಜಿಟ್ ಕನ್ನಡ ಮತ್ತು ಯೌಟ್ಯೂಬ್ ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Digit Kannada
Digit.in
Logo
Digit.in
Logo