ವಿಶ್ವವೇ ಭಾರತದತ್ತ ತಿರುಗಿ ನೋಡುವಂತ ಇತಿಹಾಸವನ್ನು ರಚಿಸಿರುವ (ISRO – Indian Space Research Organisation) ಬಾಹ್ಯಾಕಾಶ ಜಗತ್ತಿನಲ್ಲಿ ಚಂದ್ರನ ಮೇಲೆ ಭಾರತವನ್ನು ಸಹ ಯಶಸ್ವಿಯಾಗಿ ಕಾಲಿಟ್ಟಿದೆ. ಭಾರತದ ಈ ಚಂದ್ರಯಾನ 3 (Chandrayaan 3) ನೆನ್ನೆ ಅಂದ್ರೆ 23ನೇ ಆಗಸ್ಟ್ 2023 ರಂದು ಸಂಜೆ 6.04pm ಸರಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದಿದೆ. ಇದರಲ್ಲಿ ವಿಕ್ರಮ್ (Vikram Lander) ಎಂಬ ಲ್ಯಾಂಡರ್‌ನ ಒಳಗಿಂದ ಪ್ರಗ್ಯಾನ್ (Pragyan Rover) ಎಂಬ ರೋವರ್‌ನ ನಿರ್ಗಮನ ಪ್ರಕ್ರಿಯೆ ಪ್ರಾರಂಭವಾಗಿದೆ. ಆದರೆ ಮುಂದಿನ 14 ದಿನಗಳ ನಂತರ ಏನಾಗುತ್ತದೆ? ಚಂದ್ರಯಾನ 3 ಭೂಮಿಗೆ ಪುನಃ ಮರಳುತ್ತದೆಯೇ? ಎಂಬ ಪ್ರಶ್ನೆಗಳು ನಿಮ್ಮಲ್ಲಿದ್ದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ.
ಮೊದಲು ನಿಮಗೊತ್ತಾ ಚಂದಿರನ 1 ದಿನ ಭೂಮಿಯ 14 ದಿನಗಳಿಗೆ ಸಮನಾಗಿದೆ. ಈ ಪ್ರಗ್ಯಾನ್ ಚಂದ್ರನ ಮೇಲ್ಮೈಯಲ್ಲಿ ಸರಣಿ ಪ್ರಯೋಗಗಳನ್ನು ನಡೆಸಲಿದೆ. ರೋವರ್ ಲ್ಯಾಂಡರ್‌ಗೆ ಡೇಟಾವನ್ನು ಭೂಮಿಗೆ ಕಳುಹಿಸುತ್ತದೆ. 14 ದಿನಗಳ ನಂತರ ಚಂದ್ರನ ಮೇಲೆ ರಾತ್ರಿ ಇರುತ್ತದೆ. ದಕ್ಷಿಣ ಧ್ರುವದಲ್ಲಿ ವಿಪರೀತ ಚಳಿಯ ವಾತಾವರಣವಿದ್ದು ವಿಕ್ರಮ್ ಮತ್ತು ಪ್ರಗ್ಯಾನ್ ಬಿಸಿಲಿನಲ್ಲಿ ಮಾತ್ರ ಕೆಲಸ ಮಾಡಬಹುದಾದ್ದರಿಂದ 14 ದಿನಗಳ ನಂತರ ನಿಷ್ಕ್ರಿಯವಾಗುತ್ತದೆ. ಅಲ್ಲದೆ ಲ್ಯಾಂಡರ್ ಮತ್ತು ರೋವರ್ ಎರಡನ್ನೂ 14 ದಿನಗಳವರೆಗೆ ಸರಿಯಾಗಿ ನಡೆಯುವಂತೆ ವಿನ್ಯಾಸಗೊಳಿಸಲಾಗಿದೆ. ಆದರೆ ಇಸ್ರೋ ವಿಜ್ಞಾನಿಗಳ ಹೇಳಿಕೆಯಂತೆ ಚಂದ್ರನ ಮೇಲೆ ಸೂರ್ಯನ ಕಿರಣಗಳು ಬಿದ್ದಾಗ ವಿಕ್ರಮ್ ಮತ್ತು ಪ್ರಗ್ಯಾನ್ ಮತ್ತೆ ಆಕ್ಟಿವ್ ಆಗುವ ಸಾಧ್ಯತೆಗಳಿವೆ.
ಚಂದ್ರಯಾನ 3 ಲ್ಯಾಂಡಿಂಗ್ ಸೈಟ್‌ನ ಫೋಟೋವನ್ನು ಇಸ್ರೋ ಈಗಾಗಲೇ ಹಂಚಿಕೊಂಡಿದೆ. ಈ ಪ್ರಗ್ಯಾನ್ ರೋವರ್ ಚಂದ್ರನ ಮೇಲ್ಮೈಯ ರಾಸಾಯನಿಕ ಸಂಯೋಜನೆಯನ್ನು ಪರಿಶೀಲಿಸುತ್ತಾ ಚಂದ್ರನ ಮಣ್ಣು ಮತ್ತು ಬಂಡೆಗಳನ್ನು ಪರೀಕ್ಷಿಸುತ್ತದೆ. ಇದು ಅಯಾನುಗಳು ಮತ್ತು ಎಲೆಕ್ಟ್ರಾನ್‌ಗಳ ಸಾಂದ್ರತೆ ಮತ್ತು ಧ್ರುವ ಪ್ರದೇಶದ ಸಮೀಪವಿರುವ ಚಂದ್ರನ ಮೇಲ್ಮೈಯ ಉಷ್ಣ ಗುಣಲಕ್ಷಣಗಳನ್ನು ನೈಜ ಸಮಯದಲ್ಲಿ ಅಳೆದು ಅಪ್ಡೇಟ್ ನೀಡುತ್ತದೆ.
ಈ ಪ್ರಶ್ನೆ ನಿಮಗೂ ಬಂದಿರಬಹುದು ಇದಕ್ಕೆ ಉತ್ತರ ಅಂದ್ರೆ ಈ ವಿಕ್ರಮ್ ಮತ್ತು ಪ್ರಗ್ಯಾನ್ ಮತ್ತೆ ಭೂಮಿಗೆ ಬರಬೇಕಾಗಿಲ್ಲ. ಮತ್ತು ಅದರ ಅವಶ್ಯತೆಯು ಇಲ್ಲ ಆದ್ದರಿಂದ ವಿಕ್ರಮ್ ಎಂಬ ಲ್ಯಾಂಡರ್ ಮತ್ತು ಪ್ರಗ್ಯಾನ್ ಎಂಬ ರೋವರ್‌ನ ಚಂದ್ರನ ಮೇಲೆಯೇ ಉಳಿದುಕೊಳ್ಳುತ್ತದೆ ಭೂಮಿಗೆ ಬರೋದಿಲ್ಲ.
ಚಂದ್ರಯಾನ 3 ಭಾರತದ ಸಮಯಾನುಸಾರ ಬುಧವಾರ ಸಂಜೆ 6.04pm ಸರಿಯಾಗಿ ಸಾಫ್ಟ್ ಲ್ಯಾಂಡಿಂಗ್ ನಂತರ ವಿಕ್ರಮ್ ಅವರ ಕ್ಯಾಮೆರಾದಿಂದ ಫೋಟೋ ತೆಗೆಯಲಾಗಿದೆ. ಚಂದ್ರಯಾನ 3 ಚಂದ್ರನ ದಕ್ಷಿಣ ಧ್ರುವದಲ್ಲಿ ಸಮತಟ್ಟಾದ ಪ್ರದೇಶದಲ್ಲಿ ಇಳಿಯಿತು. ಚಂದ್ರಯಾನ್ 3 ಮಿಷನ್ ಒಟ್ಟು ತೂಕ 3,900kg ಪ್ರೊಪಲ್ಷನ್ ಮಾಡ್ಯೂಲ್ 2,148kg ತೂಗುತ್ತದೆ. ಮತ್ತು ಲ್ಯಾಂಡರ್ ಮಾಡ್ಯೂಲ್ 26kg ರೋವರ್ ಸೇರಿದಂತೆ 1,752kg ತೂಗುತ್ತದೆ. ಅಲ್ಲದೆ ನಿಮಗೊತ್ತಾ ಚಂದ್ರನ ದಕ್ಷಿಣ ಧ್ರುವಕ್ಕೆ ಈವರೆಗೆ ಯಾವುದೇ ದೇಶವು ಎಂದಿಗೂ ಕಾಲಿಡಲು ಯೋಚಿಸಿಲ್ಲ. ಆದರೆ ಭಾರತ ಅಂತಹ ಸಾಹಸಕ್ಕೆ ಕೈ ಹಾಕಿ ಭರ್ಜರಿಯ ಯಶಸ್ಸನ್ನು ಪಡೆದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.