ಒಂದೇ ಟ್ಯಾಪ್‌ನಲ್ಲಿ ಬ್ಯಾಂಕ್ ಖಾತೆಯನ್ನು ಖಾಲಿ ಮಾಡುವುದು OTP Scam ಮೂಲಕ ಫೋನ್‌ನ ಎಲ್ಲಾ ಡೇಟಾ ಹಣಕಾಸು ಎಲ್ಲವೂ ನಾಶವಾಗುವಂತಹ ಸುದ್ದಿಗಳನ್ನು ನೀವು ಪ್ರತಿದಿನ ಅಲ್ಲಲ್ಲಿ ಕೇಳುತ್ತಿರಬಹುದು. ನಿಮ್ಮ ಫೋನ್‌ಗೆ ಬರುವ ಕೇವಲ ಒಂದೇ ಒಂದು ಮೆಸೇಜ್ (OTP Scam) ನಿಮ್ಮ ಜೀವನವನ್ನೇ ಬದಲಾಯಿಸುವ ಶಕ್ತಿಯನ್ನು ಹೊಂದಿರುತ್ತದೆ ಅಂದ್ರೆ ಲೆಕ್ಕ ಹಾಕಿ ಅದ್ಯಾವ ಮಟ್ಟಿಗೆ ಡಿಜಿಟಲ್ ದುನಿಯಾದ ಸಮಯ ನಡೆಯುತ್ತಿದೆ ಅಂತ.
ಸಾಮಾನ್ಯ ಮುಗ್ದ ಜನರು ಇದರ ಬಗ್ಗೆ ತಿಳಿದಿರಲೇಬೇಕಾದ ಅನಿವಾರ್ಯತೆಯಾಗಿದೆ. ಈ OTP Scam ಕೇವಲ ಒಂದೆರಡು ಟ್ಯಾಪ್ ಮೂಲಕ ವೇಗವಾಗಿ ಬೆಳೆಯುತ್ತಿರುವ ಇಂದಿನ ಜನಜೀವನದಲ್ಲಿ ಪ್ರತಿಯೊಂದು ಕೆಲಸವೂ ಸಿಕ್ಕಾಪಟ್ಟೆ ಸುಲಭ ಮತ್ತು ಸುರಕ್ಷತೆಯಾದರು ಇದರ ವಿರುದ್ಧವಾಗಿ ಈ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಹೆಚ್ಚುತ್ತಿರುವ ಬಳಕೆಯಿಂದಾಗಿ ವಂಚಕರು ಅಷ್ಟೇ ವೇಗವಾಗಿ ಜನರ ಡೇಟಾ ಹಣಕಾಸು ಎಲ್ಲವನ್ನು ಲೂಟಿ ಮಾಡುತ್ತಿದ್ದಾರೆ.
Also Read: ಮಕ್ಕಳು YouTube ತೆರೆದು ಏನೇನು ಮಾಡುತ್ತಾರೆ? ಪೋಷಕರು ಈ ರೀತಿ ಎಲ್ಲವನ್ನು ತಿಳಿಯಬಹುದು!
ಕಳೆದ ಕೆಲವು ವರ್ಷಗಳಲ್ಲಿ ಲಕ್ಷ-ಕೋಟಿ ಜನ ವಂಚನೆಗೆ (OTP Scam) ಬಲಿಯಾಗುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ನಿಯಂತ್ರಿಸಲು ಭಾರತ ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ. ಮತ್ತು ಕಾಲಕಾಲಕ್ಕೆ ಸಾರ್ವಜನಿಕರಿಗೆ ಜಾಗರೂಕರಾಗಿರಲು ಸಲಹೆ ನೀಡುತ್ತಲೇ ಇದೆ. ಇತ್ತೀಚೆಗೆ ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) X ಪ್ಲಾಟ್‌ಫಾರ್ಮ್‌ನಲ್ಲಿ ಸುರಕ್ಷತಾ ಸಲಹೆಗಳನ್ನು ಬಿಡುಗಡೆ ಮಾಡಿದೆ. ಇದರಿಂದಾಗಿ ಮೊಬೈಲ್ ಫೋನ್ ಬಳಕೆದಾರರನ್ನು ವಂಚಕರಿಂದ ರಕ್ಷಿಸಲಾಗುತ್ತದೆ. ಟ್ವಿಟ್ಟರ್ ಪ್ಲಾಟ್‌ಫಾರ್ಮ್‌ನಲ್ಲಿ OTP ಸೈಬರ್ ವಂಚನೆಯನ್ನು ತಪ್ಪಿಸಲು CERT-in ಕೆಲವು ಸುರಕ್ಷತಾ ಸಲಹೆಗಳನ್ನು ಹಂಚಿಕೊಂಡಿದೆ. ಇದರಲ್ಲಿ 4 ಸುರಕ್ಷತಾ ಸಲಹೆಗಳನ್ನು ನೀಡಿದ್ದಾರೆ.
ನಿಮ್ಮ ಪ್ರತಿಯೊಂದು ಹಣಕಾಸಿನ ವಹಿವಾಟಗಳ ಪರಿಶೀಲನೆಗಾಗಿ ಪ್ರತಿ ಬಾರಿ OTP ಅಂದರೆ ಒನ್-ಟೈಮ್ ಪಾಸ್‌ವರ್ಡ್ ಅನ್ನು ನಿಮ್ಮ ಬ್ಯಾಂಕ್ ಮೂಲಕ ಮೊಬೈಲ್‌ಗೆ ಕಳುಹಿಸಲಾಗುತ್ತದೆ. ಅದು ಸಾಮಾನ್ಯವಾಗಿ 6 ಅಥವಾ 4 ಸಂಖ್ಯೆಗಳಿಂದ ಕೂಡಿರುತ್ತದೆ. ಬಳಕೆದಾರರು ಈ OTP ನೀಡುವ ಮೂಲಕ ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ನಿಮಗೆ ತಿಳಿದಿರುವ ಪ್ರಕ್ರಿಯೆಯಾಗಿದೆ. ಆದರೆ ವಂಚಕರು ಇದರ ವಿರುದ್ಧವಾಗಿ ಇದರ ಲಾಭವನ್ನೂ ನಿಮಗೆ ಅರಿವಿಲ್ಲದಂತೆ ಪಡೆದು ಲೂಟಿ ಮಾಡುತ್ತಾರೆ.
ವಂಚಕರು ಬಳಕೆದಾರರ ವಹಿವಾಟಿಗಾಗಿ ಕಾಯುತ್ತಿರುತ್ತಾರೆ ಅವರ ಗಮನಕ್ಕೆ ಬಂದ ಕೂಡಲೇ ಬಳಕೆದಾರರ ಫೋನ್‌ಗಳಿಗೆ ನಕಲಿ ಒಟಿಪಿ (OTP Scam) ಕಳುಹಿಸುವ ಮೂಲಕ ಓಟಿಪಿ ವಂಚನೆ ಮಾಡುತ್ತಾರೆ. ಒಬ್ಬ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ಹಣವನ್ನು ಹಿಂಪಡೆಯಲು ಅಥವಾ ಪ್ರಮುಖ ಮಾಹಿತಿಯನ್ನು ಕದಿಯಲು ವಂಚಕರು ಇಂತಹ OTP ಬಳಸಿಕೊಂಡು ದುರುಪಯೋಗಪಡಿಸಿಕೊಳ್ಳುತ್ತಾರೆ. ಈ OTP Scam ತಪ್ಪಿಸಲು ಮತ್ತು ಇದರ ಬಗ್ಗೆ ದೂರು ನೋಂದಾಯಿಸಲು ಭಾರತೀಯ ಸರ್ಕಾರದ ಏಜೆನ್ಸಿಯಿಂದ ಕಾಲಕಾಲಕ್ಕೆ ಎಚ್ಚರಿಕೆಗಳನ್ನು ನೀಡಲಾಗುತ್ತದೆ. ಯಾರಾದರೂ ವಂಚನೆಗೆ ಬಲಿಯಾದರೆ ತಕ್ಷಣವೇ ಸೈಬರ್ ಪೊಲೀಸರಿಗೆ ಅಥವಾ CERT-In ಪ್ಲಾಟ್‌ಫಾರ್ಮ್‌ನಲ್ಲಿ ದೂರು ನೀಡಬೇಕಾಗುತ್ತದೆ.