Investment Scheme 2025: ನಕಲಿ ಹೂಡಿಕೆಯಲ್ಲಿ ಕೋಟ್ಯಾಂತರ ಹಣ ಕಳೆದುಕೊಂಡ ನಟಿ! ವಂಚನೆಯ ಅಸಲಿ ಕಹಾನಿ ಏನು?

Investment Scheme 2025: ನಕಲಿ ಹೂಡಿಕೆಯಲ್ಲಿ ಕೋಟ್ಯಾಂತರ ಹಣ ಕಳೆದುಕೊಂಡ ನಟಿ! ವಂಚನೆಯ ಅಸಲಿ ಕಹಾನಿ ಏನು?
HIGHLIGHTS

ದೀಪು ಶರ್ಮಾ (Deepu Sharma) ಅವರಿಂದ ವಂಚಕರು ಬರೋಬ್ಬರಿ 1.31 ಕೋಟಿ ರೂಪಾಯಿಗಳನ್ನು ಲೂಟಿ!

ಪ್ರಸಿದ್ಧ ನಟ ನಟಿಯರನ್ನು ಅದರಲ್ಲೂ ಹೆಚ್ಚು ಹೂಡಿಕೆಯಲ್ಲಿ ಆಸಕ್ತಿ ಹೊಂದಿರುವವರನ್ನು ಗುರಿಯಾಗಿಸಿಕೊಂಡಿರುವ ವಂಚಕರು.

Investment Scheme 2025 ಅಡಿಯಲ್ಲಿ ಕಡಿಮೆ ಸಮಯದಲ್ಲಿ ದ್ವಿಗುಣ ಹಣ ಗಳಿಸುವ ಆಸೆ ನೀಡಿ ವಂಚಿಸಿದ ವಂಚಕರು.

Investment Scheme 2025: ಕಡಿಮೆ ಸಮಯದಲ್ಲಿ ದ್ವಿಗುಣ ಹಣ ಗಳಿಸುವ ಆಸೆ ನೀಡಿ ಮುಂಬೈ ಮಲಾಡ್‌ನಲ್ಲಿರುವ ಬಾಲಿವುಡ್ ನಟಿ ದೀಪು ಶರ್ಮಾ (Deepu Sharma) ಅವರಿಂದ ವಂಚಕರು ಬರೋಬ್ಬರಿ 1.31 ಕೋಟಿ ರೂಪಾಯಿಗಳನ್ನು ಲೂಟಿ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹೌದು, ಈಗ ಪ್ರಸಿದ್ಧ ನಟ ನಟಿಯರನ್ನು ಅದರಲ್ಲೂ ಹೆಚ್ಚು ಹೂಡಿಕೆಯಲ್ಲಿ ಆಸಕ್ತಿ ಹೊಂದಿರುವವರನ್ನು ಗುರಿಯಾಗಿಸಿಕೊಂಡು ಮುಗ್ದ ಜನರನ್ನು ವಂಚಿಸುತ್ತಿರುವ ವಂಚಕರ ಬಲೆಗೆ ಈಗ ಮುಂಬೈ ಮೂಲದ ಬಾಲಿವುಡ್ ನಟಿ ದೀಪು ಶರ್ಮಾ (Deepu Sharma) ಬಲಿಯಾಗಿದ್ದಾರೆ. ನಟಿಯನ್ನು ವಂಚಿಸಿದ ಆರೋಪದ ಮೇಲೆ ಮುಂಬೈ ಪೊಲೀಸರು ಭಾನುವಾರ 7 ಜನರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಕಡಿಮೆ ಸಮಯದಲ್ಲಿ ದ್ವಿಗುಣ ಹಣ ಗಳಿಸುವ ಆಸೆ!

ವಂಚಕರು ನಕಲಿ ಹೂಡಿಕೆ ಯೋಜನೆಗಳಲ್ಲಿ ಹೂಡಿಕೆ ಮಾಡುವಂತೆ ಮಾಡಲು ನಕಲಿ ತಂಡದೊಂದಿಗೆ ವೀಡಿಯೊ, ಫೋಟೋಗಳನ್ನು ರಚಿಸಿ ಅಸಲಿ ನಕಲಿಯಲ್ಲಿ ಯಾವುದೇ ವ್ಯತ್ಯಾಸವಿಲ್ಲದೆ ಸಿಕ್ಕಾಪಟ್ಟೆ ಸ್ಮಾರ್ಟ್ ಕೆಲಸಗಳಿಂದ ಮುಗ್ದ ಜನರನ್ನು ವಂಚಿಸುತ್ತಿದ್ದಾರೆ. ಆದರೆ ಈ ಪ್ರಕರಣದಲ್ಲಿ 51 ವರ್ಷದ ನಟಿಯಾಗಿರುವ ದೀಪು ಶರ್ಮಾ (Deepu Sharma) ಇವರ ಸಂಬಂಧಿಕರ ಮೂಲಕ ಆರೋಪಿಯನ್ನು ಭೇಟಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಂದ್ರೆ ತಾವು ತೋಡಿಕೊಂಡ ಕುಂಡಿಗೆ ತಾವೇ ಬಿದ್ದಿರುವ ಗಾದೆ ಮಾತು ಇಲ್ಲಿ ನೆನಪಾಗುತ್ತದೆ.

Fake Investment Scheme 2025
Fake Investment Scheme 2025

ದೀಪು ಶರ್ಮಾ (Deepu Sharma) ನೀಡಿರುವ ಹೇಳಿಕೆ ಅಂದ್ರೆ ಸಂಬಂಧಿಕರ ಮೂಲಕ ಭೇಟಿಯಾದವರಲ್ಲಿ ಒಬ್ಬಳಾದ ಪ್ರೀತಿ ಸೋನವಾಡೇಕರ್ ತಾನು ಮತ್ತು ತನ್ನ ಸಹಚರರನ್ನು KBC Agro Private Limited ಕಾರ್ಯನಿರ್ವಾಹಕರು ಎಂದು ಪರಿಚಯಿಸಿಕೊಂಡರು. ಕಂಪನಿಯ ಪಾಲಿನಲ್ಲಿ ಸಣ್ಣ ಮೊತ್ತವನ್ನು ಹೂಡಿಕೆ ಮಾಡಲು ಅವರು ಅವಳನ್ನು ಮನವೊಲಿಸಿದರು 10 ತಿಂಗಳಲ್ಲಿ ಹೂಡಿಕೆಯ ಮೊತ್ತಕ್ಕಿಂತ ಎರಡು ಪಟ್ಟು ಪಡೆಯುವುದಾಗಿ ಭರವಸೆ ನೀಡಿದರು. ಶರ್ಮಾ ಸಣ್ಣ ಮೊತ್ತವನ್ನು ಹೂಡಿಕೆ ಮಾಡಿದರು ಮತ್ತು ಅದು 10 ತಿಂಗಳಲ್ಲಿ ದ್ವಿಗುಣಗೊಂಡಿತು.

Also Read: OPPO Reno 13 5G Series ಭಾರತದಲ್ಲಿ ಬಿಡುಗಡೆಗೆ ಡೇಟ್ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?

Investment Scheme 2025 ಅಡಿಯಲ್ಲಿ ನಂಬಿದವರೇ ದ್ರೋಹ ಬಗೆದರಾ?

ಈ ಕಂಪನಿಯು ವಿಶ್ವಾಸಾರ್ಹವಾಗಿದೆ ಎಂದು ಮನ ಹೋಲಿಸಿ ಬರೋಬ್ಬರಿ ₹ 1.31 ಕೋಟಿ ಹೂಡಿಕೆ ಮಾಡುವತೆ ಹೇಳಿ ಮಾಡಿಸಿಕೊಂಡರು. ಕಂಪನಿಯ ಷೇರು ಪ್ರಮಾಣಪತ್ರಗಳೆಂದು ಹೇಳಲಾದ ಕೆಲವು ದಾಖಲೆಗಳನ್ನು ಸಹ ಆಕೆಗೆ ಹಸ್ತಾಂತರಿಸಲಾಯಿತು. ಆದರೆ ನನಗೆ ನೀಡಿದ ದಾಖಲೆಗಳು ಹೂಡಿಕೆಯ ನಕಲಿ ರಸೀದಿಗಳಾಗಿವೆ ಎಂದು ನಂತರ ಅರಿವಾಯಿತು. 10 ತಿಂಗಳ ನಂತರ ಭರವಸೆ ನೀಡಿದ ಲಾಭವನ್ನು ಪಡೆಯಲು ವಿಫಲವಾದ ನಂತರ ಅವಳು ಇದನ್ನು ಅರಿತುಕೊಂಡಳು.

Fake Investment Scheme 2025
Fake Investment Scheme 2025

ನೀಡಿದ ಹಣಕ್ಕೆ ಏನಾಯಿತು ಎಂದು ಶರ್ಮಾ ಕೇಳಿದಾಗ ಕಂಪನಿಯು ನಷ್ಟದಲ್ಲಿದೆ ಎಂದು ನೆಪ ಹೇಳುವ ಮೂಲಕ ಆರೋಪಿಗಳು ಅವಳ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುತ್ತಿದ್ದಳು. ಶರ್ಮಾ ಕಂಪನಿಯ ಇತರ ಹೂಡಿಕೆದಾರರೊಂದಿಗೆ ವಿಚಾರಿಸಿದರು ಮತ್ತು ಅವರು ಭರವಸೆ ನೀಡಿದ ಹಣವನ್ನು ಸಹ ಸ್ವೀಕರಿಸಿಲ್ಲ ಎಂದು ಕಂಡುಕೊಂಡರು. ಇದರ ನಂತರ ಶರ್ಮಾ ತನ್ನ ಆರಂಭಿಕ ಹೂಡಿಕೆ ಮೊತ್ತವನ್ನು ಹಿಂದಿರುಗಿಸುವಂತೆ ಆರೋಪಿಯನ್ನು ಕೇಳಿದರು ನಂತರ ಆರೋಪಿಗಳು ಅವಳ ಕರೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲು ಪ್ರಾರಂಭಿಸಿದರು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo