ಭಾರತದಲ್ಲಿ ಅತಿ ಜನಪ್ರಿಯ ಸ್ಮಾರ್ಟ್ ವಾಚ್ ಬ್ರಾಂಡ್ ಬೋಟ್ (boAt) ತನ್ನ ಹೂಚೆ ಹೊಸ ಸ್ಮಾರ್ಟ್ ವಾಚ್ ಅನ್ನು ಅದ್ದೂರಿಯ ಫೀಚರ್ಗಳೊಂದಿಗೆ ಕೈಗಟಕುವ ಬೆಲೆಗೆ ಬಿಡುಗಡೆಗೊಳಿಸಿದೆ. ಇದನ್ನು ಕಂಪನಿ boAt Ultima Vogue ಎಂದು ಹೆಸರಿಸಿದ್ದು ಭಾರತದಲ್ಲಿ ಬಜೆಟ್ ಸ್ನೇಹಿ ಸ್ಮಾರ್ಟ್ ವಾಚ್ ಆಗಿ ಬಿಡುಗಡೆ ಮಾಡಲಾಗಿದೆ. ಇದು ಕರ್ವ್ ಡಿಸ್ಪ್ಲೇ, 600 ನಿಟ್ಸ್ ಬ್ರೈಟ್‌ನೆಸ್‌ನೊಂದಿಗೆ AMOLED ಡಿಸ್ಪ್ಲೇ, ಬ್ಲೂಟೂತ್ ಕರೆ ಮಾಡುವ ಬೆಂಬಲದೊಂದಿಗೆ ಹಲವಾರು 100+ ಸ್ಪೋರ್ಟ್ಸ್ ಮೂಡ್ ಮತ್ತು ಹೆಚ್ಚಿನವುಗಳಂತಹ ಹಲವಾರು ಆಸಕ್ತಿದಾಯಕ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.
ಲೇಟೆಸ್ಟ್ ಟೆಕ್ನಾಲಜಿ ಅಪ್‌ಡೇಟ್‌ಗಳಿಗಾಗಿ ಡಿಜಿಟ್ ಕನ್ನಡ ವಾಟ್ಸಾಪ್ ಚಾನೆಲ್ ಅನ್ನು ಸೇರಿಕೊಳ್ಳಿ
ಬೋಟ್ ಅಲ್ಟಿಮಾ ವೋಗ್ ಸ್ಮಾರ್ಟ್ ವಾಚ್ ಕರ್ವ್ ಡಯಲ್ ಡಿಸ್ಪ್ಲೇ, ಮ್ಯಾಟ್ ಮೆಟಾಲಿಕ್ ಫಿನಿಶ್ ಜೊತೆಗೆ ಇದರ , ಬಲಭಾಗದಲ್ಲಿ ತಿರುಗಿಸುವ ಭೌತಿಕ ಬಟನ್ ಅನ್ನು ಸಹ ವಾಚ್ ಹೊಂದಿದೆ.
boAt ಸ್ಮಾರ್ಟ್ ವಾಚ್ 1.96 ಇಂಚಿನ AMOLED ಡಿಸ್ಪ್ಲೇ ಜೊತೆಗೆ 600 nits ಬ್ರೈಟ್‌ನೆಸ್ ಮತ್ತು 410×502 ರೆಸಲ್ಯೂಶನ್ ಜೊತೆಗೆ 100 ಕ್ಕೂ ಹೆಚ್ಚು ಗ್ರಾಹಕೀಯಗೊಳಿಸಬಹುದಾದ ವಾಚ್ ಫೇಸ್‌ಗಳನ್ನು ಹೊಂದಿದೆ.
ಸ್ಮಾರ್ಟ್ ವಾಚ್ ಒಳಗೆ ಮೈಕ್ರೊಫೋನ್ ಮತ್ತು ಬ್ಲೂಟೂತ್ ಕರೆ ಮಾಡಲು ಸ್ಪೀಕರ್‌ನೊಂದಿಗೆ ಬರುತ್ತದೆ. ಸ್ಮಾರ್ಟ್ ವಾಚ್ ಡಯಲ್ ಪ್ಯಾಡ್‌ನೊಂದಿಗೆ ಬಳಕೆದಾರರಿಗೆ 20 ಸಂಪರ್ಕಗಳನ್ನು ಸೇವ್ ಮಾಡಿಟ್ಟಿಕೊಳ್ಳಲು ಅನುಮತಿಸುತ್ತದೆ.
ಇದರಲ್ಲಿ ಬಳಕೆದಾರರು ತಮ್ಮ ಹೃದಯ ಬಡಿತ, ರಕ್ತದ ಆಮ್ಲಜನಕ (SpO2) ಮಟ್ಟಗಳು, ನಿದ್ರೆ, ಒತ್ತಡ ಮತ್ತು ಋತುಚಕ್ರವನ್ನು ಮಾನಿಟರ್ ಮಾಡಲು ಅನುಮತಿಸುತ್ತದೆ. ಅಲ್ಟಿಮಾ ವೋಗ್ ಸ್ಮಾರ್ಟ್ ವಾಚ್ ಬಳಕೆದಾರರನ್ನು ಫಿಟ್ ಮತ್ತು ಆರೋಗ್ಯಕರವಾಗಿರಿಸಲು 100+ ಸ್ಪೋರ್ಟ್ಸ್ ಮೂಡ್ ಅನ್ನು ನೀಡುತ್ತದೆ.
ಸ್ಮಾರ್ಟ್ ವಾಚ್ IP67 ರೇಟಿಂಗ್ ಅನ್ನು ಹೊಂದಿದ್ದು ಇದು ಡಸ್ಟ್ ಮತ್ತು ವಾಟರ್ ಪ್ರೂಫ್ ಆಗಿದ್ದು ಕನಿಷ್ಠ 30 ನಿಮಿಷಗಳ ಕಾಲ 15cm ನಿಂದ 1m ಆಳದಲ್ಲಿ ನೀರಿನ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ boAt ಸ್ಮಾರ್ಟ್ ವಾಚ್ 240mAh ಬ್ಯಾಟರಿಯನ್ನು ಹೊಂದಿದ್ದು ಒಂದೇ ಚಾರ್ಜ್‌ನಲ್ಲಿ 5 ದಿನಗಳವರೆಗೆ ಬರುತ್ತದೆಂದು ಕಂಪನಿ ಹೇಳಿದೆ.
ಈ ಲೇಟೆಸ್ಟ್ ಸ್ಮಾರ್ಟ್ ವಾಚ್ ಅನ್ನು ಹಲವಾರು ರೂಪಾಂತರಗಳಲ್ಲಿ ನೀಡಲಾಗುತ್ತದೆ ಮತ್ತು ಆರಂಭಿಕ ಬೆಲೆ 2,999 ರೂಗಳಾಗಿದೆ. ಬೋಟ್ ಅಲ್ಟಿಮಾ ವೋಗ್ ಮೂರು ಬಣ್ಣ ಡೀಪ್ ಬ್ಲೂ, ಜೆಟ್ ಬ್ಲ್ಯಾಕ್ ಮತ್ತು ಬೀಜ್ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಸಿಲಿಕೋನ್ ಪಟ್ಟಿಗಳನ್ನು ಹೊಂದಿದ್ದು ಮೆಟಲ್ ಬ್ಲ್ಯಾಕ್ ಮತ್ತು ಬ್ರೌನ್ ಲೆದರ್ ರೂಪಾಂತರಗಳಲ್ಲೂ ಲಭ್ಯವಿದೆ. boAt Ultima Vogue ಸ್ಮಾರ್ಟ್ ವಾಚ್‌ನ ಲೆದರ್ ಮತ್ತು ಮೆಟಾಲಿಕ್ ರೂಪಾಂತರಗಳ ಬೆಲೆ 3,299 ರೂಗಳಾಗಿದ್ದು ಸ್ಮಾರ್ಟ್ ವಾಚ್ ಅನ್ನು ಕಂಪನಿಯ ಅಧಿಕೃತ ಅಂಗಡಿ ಮತ್ತು ಅಮೆಜಾನ್ ಮೂಲಕ ಖರೀದಿಸಬಹುದು.
ಲೇಟೆಸ್ಟ್ ಟೆಕ್ನಾಲಜಿ ಅಪ್‌ಡೇಟ್‌ಗಳಿಗಾಗಿ ಡಿಜಿಟ್ ಕನ್ನಡ ವಾಟ್ಸಾಪ್ ಚಾನೆಲ್ ಅನ್ನು ಸೇರಿಕೊಳ್ಳಿ