ಬೋಟ್ ಈಗ ತಮ್ಮ ಹೊಚ್ಚ ಹೊಸ ನೆಕ್‌ಬ್ಯಾಂಡ್ boAt Nirvana 525 ANC ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
oAt Nirvana 525 ANC ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಮೆಚ್ಚುಗೆ ಪಡೆಡಿರುವ ಬ್ರಾಂಡ್ ಡಾಲ್ಬಿ ಆಡಿಯೊದಿಂದ ನಡೆಸಲ್ಪಡುತ್ತದೆ.
ಹೊಸ BoAt Nirvana 525 ANC ಅನ್ನು 2,499 ರೂಪಾಯಿಗಳ ವಿಶೇಷ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ.
ಬೋಟ್ ಈಗ ತಮ್ಮ ಹೊಚ್ಚ ಹೊಸ ನೆಕ್‌ಬ್ಯಾಂಡ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ನೆಕ್‌ಬ್ಯಾಂಡ್ ಮುಖ್ಯವಾಗಿ Dolby ಸಹಭಾಗಿತ್ವದಲ್ಲಿ ಅಧಿಕೃತವಾಗಿ ನಿರ್ವಾಣವಾಗಿದ್ದು ಇದನ್ನು boAt Nirvana 525 ANC ಎಂದು ಹೆಸರಿಸಲಾಗಿದೆ. ಇದು ವೈರ್‌ಲೆಸ್ ನೆಕ್‌ಬ್ಯಾಂಡ್ ಇಯರ್‌ಬಡ್‌ಗಳು ವಿಶೇಷ ಬೆಲೆಯಲ್ಲಿ ಬಿಡುಗಡೆಯಾಗಿ ಬಳಕೆದಾರರ ಖರೀದಿಗೆ ಈಗಾಗಲೇ ಲಭ್ಯವಿದೆ. ಬೋಟ್ ಮೂಲಕ ಬಿಡುಗಡೆಯಾಗಿರುವ ಈ ನೆಕ್‌ಬ್ಯಾಂಡ್ ಪ್ರಪಂಚದ ಮೊದಲ ವೈರ್‌ಲೆಸ್ ನೆಕ್‌ಬ್ಯಾಂಡ್ ಇಯರ್‌ಬಡ್‌ಗಳಾಗಿವೆ. boAt Nirvana 525 ANC ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಮೆಚ್ಚುಗೆ ಪಡೆಡಿರುವ ಬ್ರಾಂಡ್ ಡಾಲ್ಬಿ ಆಡಿಯೊದಿಂದ ನಡೆಸಲ್ಪಡುತ್ತದೆ.
ಭಾರತದಲ್ಲಿ boAt Nirvana 525 ANC ಬೆಲೆ ಮತ್ತು ಲಭ್ಯತೆ
ಹೊಸ boAt Nirvana 525 ANC ಅನ್ನು 2,499 ರೂಪಾಯಿಗಳ ವಿಶೇಷ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಮತ್ತು ಮೂರು ಬಣ್ಣಗಳಲ್ಲಿ ಲಭ್ಯವಿದೆ- ಸ್ಪೇಸ್ ಬ್ಲಾಕ್, ಸೆಲೆಸ್ಟಿಯಲ್ ಬ್ಲೂ ಮತ್ತು ಕಾಸ್ಮಿಕ್ ಗ್ರೇ. ಉತ್ಪನ್ನವು ಒಂದು ವರ್ಷದ ವಾರಂಟಿಯೊಂದಿಗೆ ಬರುತ್ತದೆ. ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಆನ್‌ಲೈನ್ ಔಟ್‌ಲೆಟ್‌ಗಳಲ್ಲಿ ಇಯರ್‌ಬಡ್‌ಗಳು ಪಡೆದುಕೊಳ್ಳುತ್ತವೆ. boAt ನ ಅಧಿಕೃತ ವೆಬ್‌ಸೈಟ್‌ನಲ್ಲಿ ಖರೀದಿದಾರರು ಬ್ಲೂಟೂತ್ ಇಯರ್‌ಬಡ್‌ಗಳ ಮೇಲೆ ತಮ್ಮ ಕೈಗಳನ್ನು ಪಡೆಯಬಹುದು. ಆಫ್‌ಲೈನ್ ಆಯ್ಕೆಗಳಿಗೆ ಬಂದರೆ ನೀವು ರಿಲಯನ್ಸ್ ಡಿಜಿಟಲ್, ಕ್ರೋಮಾ ಮತ್ತು ವಿಜಯ್ ಸೇಲ್ಸ್‌ನಂತಹ ವಿವಿಧ ಮಳಿಗೆಗಳಲ್ಲಿ ನೆಕ್‌ಬ್ಯಾಂಡ್ ಅನ್ನು ಖರೀದಿಸಬಹುದು.
NIRVANA 525 ANC
The World’s First Wireless Neckband Earbuds Powered by Dolby Audio.
Launching on 13 June. pic.twitter.com/9AXlHMVkbE
— boAt (@RockWithboAt) June 10, 2023
ಭಾರತದಲ್ಲಿ boAt Nirvana 525 ANC ವಿಶೇಷಣಗಳು
ಈ ಹೊಸ boAt Nirvana 525 ANC ಮೆಟಾಲಿಕ್ ಲುಕ್ ಮತ್ತು ನಯವಾದ ಒಟ್ಟಾರೆ ವಿನ್ಯಾಸವನ್ನು ಹೊಂದಿದೆ. ಇದು 11mm ಡ್ರೈವರ್‌ಗಳೊಂದಿಗೆ ಬರುತ್ತದೆ ಅದು ಕೇಳುಗರ ಆಡಿಯೊದ ಡೆಪ್ತ್ ಮತ್ತು ಸ್ಪಷ್ಟತೆಯನ್ನು ನೀಡುತ್ತದೆ. ಈ boAt Nirvana 525 ANC ಹೈಬ್ರಿಡ್ ಸಕ್ರಿಯ ನೋಯಿಸ್ ಕ್ಯಾನ್ಸಲ್ ಜೊತೆಗೆ ಬರುತ್ತದೆ. ಅದು 42dB+ ವರೆಗೆ ನೋಯಿಸ್ ಕಡಿತಗೊಳಿಸುತ್ತದೆ. ಇದರಲ್ಲಿ 4 ಮೈಕ್ರೊಫೋನ್‌ಗಳು 2 ರೆಸ್ಪೋನ್ಸ್ ಮತ್ತು 2 ಫೀಡ್‌ಫಾರ್ವರ್ಡ್ ಮೈಕ್‌ಗಳನ್ನು ಇದರಲ್ಲಿ ನೀಡಲಾಗಿದೆ.
ಇಯರ್‌ಫೋನ್‌ಗಳು IPX5 ವಾಟರ್ ಮತ್ತು ಬೆವರು ನಿರೋಧಕ ರೇಟಿಂಗ್ ಅನ್ನು ಸಹ ಹೊಂದಿವೆ. ಡ್ಯುಯಲ್ ಪೇರಿಂಗ್ ಅನ್ನು ಬೆಂಬಲಿಸುವ ಈ boAt Nirvana 525 ANC ನೆಕ್‌ಬ್ಯಾಂಡ್ ಕನೆಕ್ಷನ್ಗಾಗಿ ಬ್ಲೂಟೂತ್ v5.2 ಅನ್ನು ಹೊಂದಿದ್ದು ASAP ಚಾರ್ಜ್ ವಿಧಾನವನ್ನು ಹೊಡನಿದೆ ಈ ಮೂಲಕ ಕೇವಲ 10 ನಿಮಿಷಗಳ ಚಾರ್ಜ್‌ನೊಂದಿಗೆ 10 ಗಂಟೆಗಳ ಪ್ಲೇಬ್ಯಾಕ್ ಅನ್ನು ಒದಗಿಸುತ್ತದೆ. ಬೋಟ್ ಪ್ರಕಾರ ಡಿವೈಸ್ ಸಂಪೂರ್ಣ ಚಾರ್ಜ್ ಮಾಡಲು ಸುಮಾರು 40 ನಿಮಿಷಗಳನ್ನು ತೆಗೆದುಕೊಂಡು ನಿಮಗೆ ಒಟ್ಟು 30 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile