ಬಿಗ್ ಬಾಸ್ ಕನ್ನಡ New ಸೀಸನ್ 10 ಯಾವಾಗ ಪ್ರಾರಂಭ? ಯಾವ OTT ಅಲ್ಲಿ ಲಭ್ಯ? ನಡೆಸೋದು ಯಾರು ಗೊತ್ತಾ?

ಬಿಗ್ ಬಾಸ್ ಕನ್ನಡ New ಸೀಸನ್ 10 ಯಾವಾಗ ಪ್ರಾರಂಭ? ಯಾವ OTT ಅಲ್ಲಿ ಲಭ್ಯ? ನಡೆಸೋದು ಯಾರು ಗೊತ್ತಾ?
HIGHLIGHTS

ಬಿಗ್ ಬಾಸ್ ಕನ್ನಡ ಸೀಸನ್ 10 (Bigg Boss Kannada season 10) ಕಾರ್ಯಕ್ರಮ ಶೀಘ್ರದಲ್ಲೇ ನಿಮ್ಮ ಮನೆಗಳಿಗೆ ಕಾಲಿಡಲಿದೆ.

ಈ ಬಿಗ್ ಬಾಸ್ 10 ಈಗಾಗಲೇ ಇದರ ಭರ್ಜರಿ ಟೀಸರ್ ಜೊತೆಗೆ ಎಂಟ್ರಿ ಕೊಡಲು ಸಿದ್ಧವಾಗಿದೆ.

ಕಾರ್ಯಕ್ರಮದ ತಯಾರಕರು ಕಾರ್ಯಕ್ರಮದ ಪ್ರೀಮಿಯರ್ ದಿನಾಂಕವನ್ನು ಬಹಿರಂಗಪಡಿಸಿಲ್ಲ

ಕರ್ನಾಟಕದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10 (Bigg Boss Kannada season 10) ಕಾರ್ಯಕ್ರಮ ಶೀಘ್ರದಲ್ಲೇ ನಿಮ್ಮ ಮನೆಗಳಿಗೆ ಕಾಲಿಡಲಿದೆ. ಈ ಬಿಗ್ ಬಾಸ್ 10 ಈಗಾಗಲೇ ಇದರ ಭರ್ಜರಿ ಟೀಸರ್ ಜೊತೆಗೆ ಎಂಟ್ರಿ ಕೊಡಲು ಸಿದ್ಧವಾಗಿದೆ. ಇತ್ತೀಚೆಗೆ ಕಾರ್ಯಕ್ರಮದ ತಯಾರಕರು ಸೀಸನ್ 10 ರ ಮೊದಲ ಪ್ರೋಮೋವನ್ನು ಬಿಡುಗಡೆ ಮಾಡಿದರು. ಮತ್ತು ಈ ಸೀಸನ್ ಏನಾಗಲಿದೆ ಎಂದು ಪ್ರೇಕ್ಷಕರು ಊಹಿಸುವಂತೆ ಮಾಡಿದೆ. ಪ್ರೋಮೋದಲ್ಲಿ ಬಿಗ್ ಬಾಸ್ ಧ್ವನಿಯೊಂದಿಗೆ ನಗರದಾದ್ಯಂತ ಸಿಸಿಟಿವಿ ಕ್ಯಾಮೆರಾಗಳಿವೆ. “ನಮಸ್ತೆ ಕರ್ನಾಟಕ! ನೀವೆಲ್ಲರೂ ಹೇಗಿದ್ದೀರಿ? ನೀವು ನನ್ನನ್ನು ಮಿಸ್ ಮಾಡಿಕೊಂಡ್ರಾ? ಎನ್ನುವ ಮೂಲಕ ಟೀಸರ್ ಶುರುವಾಗಿದೆ.

ಬಿಗ್ ಬಾಸ್ ಕನ್ನಡ ಸೀಸನ್ 10

ಬಿಗ್ ಬಾಸ್ ಕನ್ನಡ ಸೀಸನ್ 10 (Bigg Boss Kannada season 10) ಬಿಗ್ ಬ್ರದರ್ ನ ಕನ್ನಡ ರೂಪಾಂತರವಾಗಿದೆ. ಕಾರ್ಯಕ್ರಮವನ್ನು ಎಂಡೆಮೊಲ್ ಶೈನ್ ಇಂಡಿಯಾ ನಿರ್ಮಿಸಿದೆ. ಮತ್ತು ನಟ ರೂಪೇಶ್ ಶೆಟ್ಟಿ ಕಾರ್ಯಕ್ರಮದ ಸೀಸನ್ 9 ರ ವಿಜೇತರಾಗಿ ಹೊರಹೊಮ್ಮಿದರು. ಪ್ರದರ್ಶನದ ಸಮಯದಲ್ಲಿ ಸ್ಪರ್ಧಿಗಳು 106 ದಿನಗಳವರೆಗೆ ಅಂದ್ರೆ ಪೂರ್ತಿ 15 ವಾರಗಳು ಕಾಲ ಹೊರಗಿನ ಪ್ರಪಂಚದಿಂದ ಪ್ರತ್ಯೇಕಿಸಲ್ಪಡುತ್ತಾರೆ ಮತ್ತು ಇದರಲ್ಲಿ ಉಳಿದಿರುವ ಕೊನೆಯ ವ್ಯಕ್ತಿ ಸೀಸನ್ ಅನ್ನು ಗೆಲ್ಲುತ್ತಾರೆ.

ಬಿಗ್ ಬಾಸ್ ಕನ್ನಡ ಸೀಸನ್ 10 ಯಾವಾಗ ಪ್ರಾರಂಭ? ನಡೆಸೋದು ಯಾರು?

ಬಿಗ್ ಬಾಸ್ ಕನ್ನಡ ಸೀಸನ್ 10 (Bigg Boss Kannada season 10) ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಇಲ್ಲಿಯವರೆಗೆ ಕಾರ್ಯಕ್ರಮದ ತಯಾರಕರು ಕಾರ್ಯಕ್ರಮದ ಪ್ರೀಮಿಯರ್ ದಿನಾಂಕವನ್ನು ಬಹಿರಂಗಪಡಿಸಿಲ್ಲ. ಆದರೆ ಬಿಗ್ ಬಾಸ್ ಕನ್ನಡ ಸೀಸನ್ 10 ಇದೇ ತಿಂಗಳ ಅಂದ್ರೆ ಸೆಪ್ಟೆಂಬರ್‌ನ ಕೊನೆ ವಾರದಲ್ಲಿ ಪ್ರಾರಂಭವಾಗಲಿದೆ ಎಂದು ನಿರೀಕ್ಷಿಸಬಹುದು. ಏಕೆಂದರೆ ಅದೇ ಸಮಯದಲ್ಲಿ ಕಾರ್ಯಕ್ರಮದ ಕೊನೆಯ ಸೀಸನ್ ಕೂಡ ಪ್ರಾರಂಭವಾಯಿತು. ಇದನ್ನು ಸಾಂಪ್ರದಾಯವಾಗಿ ಹಿರಿಯ ನಟ ಕಿಚ್ಚ ಸುದೀಪ್ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದು ಪ್ರೀಮಿಯರ್ ದಿನದಂದು ಸ್ಪರ್ಧಿಗಳ ಪಟ್ಟಿಯನ್ನು ಪ್ರಕಟಿಸಲಿದ್ದಾರೆ

ಬಿಗ್ ಬಾಸ್ ಕನ್ನಡ ಸೀಸನ್ 10 ಯಾವ OTT ಅಲ್ಲಿ ಲಭ್ಯ?

ಬಿಗ್ ಬಾಸ್ ಕನ್ನಡ ಸೀಸನ್ 10 (Bigg Boss Kannada season 10) VOOT ಸೆಲೆಕ್ಟ್‌ನಲ್ಲಿ 247 ರಲ್ಲಿ ನೇರ ಪ್ರಸಾರವಾಗಲಿದೆ. 247 ಲೈವ್ ಹೊರತುಪಡಿಸಿ ಕಾರ್ಯಕ್ರಮದ ಮುಖ್ಯ ಸಂಚಿಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ. TV Ginta Modalu ಮುಖ್ಯ ಸಂಚಿಕೆಯನ್ನು ಟಿವಿಯಲ್ಲಿ ಪ್ರಸಾರ ಮಾಡುವ ಮೊದಲು ಅದನ್ನು Voot ಸೆಲೆಕ್ಟ್‌ನಲ್ಲಿ ಮಾತ್ರ ಸ್ಟ್ರೀಮ್ ಮಾಡುತ್ತದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo