ಭಾರತದಲ್ಲಿ ಏರ್ಟೆಲ್ ಶೀಘ್ರದಲ್ಲೇ ತಮ್ಮ ಏರ್ಟೆಲ್ ಟಿವಿ ಬಳಕೆದಾರರಿಗೆ ಉಚಿತವಾಗಿ Netflix ಚಂದದಾರಿಕೆಯನ್ನು ನೀಡುವ ನಿರೀಕ್ಷೆಯಿದೆ.

ಭಾರತದಲ್ಲಿ ಏರ್ಟೆಲ್ ಶೀಘ್ರದಲ್ಲೇ ತಮ್ಮ ಏರ್ಟೆಲ್ ಟಿವಿ ಬಳಕೆದಾರರಿಗೆ ಉಚಿತವಾಗಿ Netflix ಚಂದದಾರಿಕೆಯನ್ನು ನೀಡುವ ನಿರೀಕ್ಷೆಯಿದೆ.
HIGHLIGHTS

ಏರ್ಟೆಲ್ ಟಿವಿ ಬಳಕೆದಾರರಿಗೊಂದು ಸಿಹಿಸುದ್ದಿ ನೀಡಲಿರುವ ಭಾರ್ತಿ ಏರ್ಟೆಲ್.

ಭಾರತದಲ್ಲಿ ಜನಪ್ರಿಯ ಟೆಲಿಕಾಂ ಆಪರೇಟರಾದ ಭಾರ್ತಿ ಏರ್ಟೆಲ್ ತಮ್ಮ ಏರ್ಟೆಲ್ನ ಟಿವಿ ಅಪ್ಲಿಕೇಶನ್ನೊಂದಿಗೆ ಏರ್ಟೆಲ್ ಗ್ರಾಹಕರಿಗೆ ಉಚಿತ ಚಂದಾದಾರಿಕೆ ನೀಡಲು ಟಾಪ್ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಆಗಿರುವಂತಹ ನೆಟ್ಫ್ಲಿಕ್ಸ್ (Netflix) ಜೊತೆ ಮಾತುಕತೆ ನಡೆಸುತ್ತಿದೆ. ಇದು ಏರ್ಟೆಲ್ನ ಮತ್ತೊಂದು ಭಾರೀ ಪಾಲುದಾರಿಕೆಯಾಗುವ ಹೆಚ್ಚು ಲಕ್ಷಣಗಳಿವೆ. 

ಅಲ್ಲದೆ ಅದರಲ್ಲೂ ವಿಶೇಷವಾಗಿ ಕಂಟೆಂಟ್ ವಿಷಯದಲ್ಲಿ ಈಗಾಗಲೇ ಭಾರತದಲ್ಲಿ ತಲೆ ಎತ್ತಿ ಮೆರೆಯುತ್ತಿರುವ ರಿಲಯನ್ಸ್ ಜಿಯೊವನ್ನು ಬುಡಮೇಲು ಮಾಡುವ ನಿರೀಕ್ಷಯಿದೆ. ಏರ್ಟೆಲ್ ತಮ್ಮ ಗ್ರಾಹಕರಿಗೆ ಹೆಚ್ಚು ಅನುಕೂಲಕರವಾಗಿರಲು ಇದೀಗ ಏರ್ಟೆಲ್ ಟಿವಿ ಎಂಟರ್ಟೈನ್ಮೆಂಟ್ ವಿಭಾಗದಲ್ಲಿ ಗೂಗಲ್ ಪ್ಲೇ ಸ್ಟೋರ್ನ ಮೇಲೆ ಕುಳಿತುಕೊಳ್ಳುತ್ತಿದೆ.

ಅದೇ ರೀತಿಯಲ್ಲಿ ಭಾರ್ತಿ ಏರ್ಟೆಲ್ ಅಮೆಜಾನ್ ಪ್ರೈಮ್ ಚಂದಾದಾರಿಕೆಯನ್ನು ಸಹ ನೀಡುತ್ತಿದೆ. ಈ ಏರ್ಟೆಲ್ ಪೋಸ್ಟ್ಪೇಯ್ಡ್ ಬಳಕೆದಾರರಿಗೆ ಈ ವರ್ಷದ ಪ್ರಾರಂಭದಿಂದಲೂ ಭಾರಿ ಅನುಕೂಲಗಳನ್ನು ನೀಡುತ್ತಿದೆ. ಈಗ ನೆಟ್ಫ್ಲಿಕ್ಸ್ ಮತ್ತು ಏರ್ಟೆಲ್ ಪಾಲುದಾರಿಕೆಯ ಬಗ್ಗೆ ಪ್ರತಿಕ್ರಿಯಿಸಲು ಏರ್ಟೆಲ್ ಮುಂದೆ ಬಂದಿದ್ದಾರೆ.

ಈಗ Netflix ಮತ್ತು Airtel ತಮ್ಮೇಲ್ಲ ಮೊಬೈಲ್ ಗ್ರಾಹಕರಿಗೆ ಗಳಿಗೆ ನೀಡಲು ಪ್ರತ್ಯೇಕವಾದ ಚರ್ಚೆಗಳಲ್ಲಿ ಮುಂದುವರಿದ ಚರ್ಚೆಗಳಲ್ಲಿವೆ. ಎರಡು ಕಂಪನಿಗಳ ನಡುವೆ ಹಲವಾರು ಸುತ್ತುಗಳ ಚರ್ಚೆ ಪೂರ್ಣಗೊಂಡಿದೆ ಮತ್ತು ಮುಂಬರುವ ವಾರಗಳಲ್ಲಿ ಈ ಒಪ್ಪಂದವನ್ನು ಘೋಷಿಸುವ ನಿರೀಕ್ಷಯಿದೆ. 

ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram  ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo