E-Challan: ನಿಮಗೂ ಬರುತಿದ್ಯಾ ಟ್ರಾಫಿಕ್ ಸಂಬಂಧಿತ ಇ-ಚಲಾನ್ ಮೆಸೇಜ್‌ಗಳು? ಎಚ್ಚರ ಅಪ್ಪಿತಪ್ಪಿಯೂ ಲಿಂಕ್ ಮೇಲೆ ಕ್ಲಿಕ್ ಮಾಡಲೇಬೇಡಿ

Updated on 22-Aug-2024
HIGHLIGHTS

ವಂಚಕರು ಈಗ ಸರ್ಕಾರಿ ಸಾರಿಗೆ ಇಲಾಖೆಯ ಇ-ಚಲನ್ (E-Challan) ಮೂಲಕ ಜನರನ್ನು ಮೋಸ ಮಾಡಲು ಸಜ್ಜಾಗಿ ಕುಳಿತ್ತಿದ್ದಾರೆ.

ವಂಚಕರು ಸಾರಿಗೆ ಇಲಾಖೆಯ ನಕಲಿ ಲಿಂಕ್ ಅನ್ನು ಮೆಸೇಜ್ ಮೂಲಕ ಜನರ ಫೋನ್‌ಗೆ ಕಳುಹಿಸುವ ಮೂಲಕ ವಂಚನೆ ಮಾಡುತ್ತಿದ್ದಾರೆ.

ಇ-ಚಲನ್ (E-Challan) ಹಗರಣ ಎಂದರೇನು? ಅದು ಹೇಗೆ ಕೆಲಸ ಮಾಡುತ್ತದೆ ಎನ್ನುದರ ಮಾಹಿತಿಯನ್ನು ಈ ಕೆಳಗೆ ತಿಳಿಯಬಹುದು.

ಇತ್ತೀಚಿನ ದಿನಗಳಲ್ಲಿ ವಂಚಕರು ಯಾವ ವಯದಲ್ಲಿ ಹೆಚ್ಚು ಜನರು ಹಣ ನೀಡಲು ಎದರುತ್ತಾರೋ ಅಂತಹ ವಿಭಾಗವನ್ನು ಆರಿಸಿ ನೇರವಾಗಿ ಸರ್ಕಾರಿ ಸಾರಿಗೆ ಇಲಾಖೆಯ ಇ-ಚಲನ್ (E-Challan) ಮೂಲಕ ಜನರನ್ನು ಮೋಸ ಮಾಡಲು ಸಜ್ಜಾಗಿ ಕುಳಿತ್ತಿದ್ದಾರೆ. ವಂಚಕರು ಸಾರಿಗೆ ಇಲಾಖೆಯ ನಕಲಿ ಲಿಂಕ್ ಅನ್ನು ಮೆಸೇಜ್ ಮೂಲಕ ಜನರ ಫೋನ್‌ಗೆ ಕಳುಹಿಸುವ ಮೂಲಕ ವಂಚನೆ ಮಾಡುತ್ತಿದ್ದಾರೆ. ಈ ಬಗ್ಗೆ ಸೈಬರ್ ತಜ್ಞರು ಮತ್ತು ಪೊಲೀಸ್ ಆಡಳಿತ ಅಲರ್ಟ್ ನೀಡಿದ್ದು ಇಂತಹ ನಕಲಿ ಇ-ಚಲನ್ ವಂಚನೆಗೆ ಬಲಿಯಾಗಬಾರದೆಂದು ನಾಗೌರ್ ಪೊಲೀಸ್ ಉನ್ನತ ಅಧಿಕಾರಿಗಳು ಜನರಿಗೆ ಮನವಿ ಮಾಡಿದ್ದಾರೆ. ಇ-ಚಲನ್ ಹಗರಣ ಎಂದರೇನು? ಅದು ಹೇಗೆ ಕೆಲಸ ಮಾಡುತ್ತದೆ ಎನ್ನುದರ ಮಾಹಿತಿಯನ್ನು ಈ ಕೆಳಗೆ ತಿಳಿಯಬಹುದು.

E-Challan ಹಗರಣ ಎಂದರೇನು? ಅದು ಹೇಗೆ ಕೆಲಸ ಮಾಡುತ್ತದೆ?

ಸಾರಿಗೆ ಇಲಾಖೆಯ ಮೂಲ ವೆಬ್‌ಸೈಟ್‌ನಂತೆ ಕಾಣುವ ಜನರ ಫೋನ್‌ಗಳಿಗೆ ಸ್ಕ್ಯಾಮರ್ ಇ-ಚಲನ್ ಸಂದೇಶವನ್ನು ಕಳುಹಿಸುತ್ತಾನೆ ಎಂದು ಸೈಬರ್ ತಜ್ಞರಾದ ಮಾಧರಮ್ ಕಲಾ ಮತ್ತು ನಾರ್ಸಿ ಕಿಲಕ್ ಹೇಳಿದ್ದಾರೆ. ಜನರ ಫೋನಿಗೆ ಬರುವ ಮೆಸೇಜ್ ಅಲ್ಲಿ ಪಾವತಿ ಲಿಂಕ್ ಅನ್ನು ಒಳಗೊಂಡಿದೆ. ನೀವು ಈ ಲಿಂಕ್ ಅನ್ನು ಕ್ಲಿಕ್ ಮಾಡಿದ ತಕ್ಷಣ ವಂಚಕರು ನಿಮ್ಮ ಡೆಬಿಟ್/ಕ್ರೆಡಿಟ್ ಕಾರ್ಡ್ ಸೇರಿದಂತೆ ಹಲವು ರಹಸ್ಯ ಮಾಹಿತಿಯನ್ನು ಸ್ಕ್ಯಾನ್ ಮಾಡುತ್ತಾರೆ.

Beware of fraudsters sending links via messages in the name of traffic E-Challan

ಈ ಹಗರಣವನ್ನು ತಪ್ಪಿಸುವುದು ಹೇಗೆ?

ವಂಚಕರು ಮುಗ್ದ ಜನರಿಗೆ ಈ ಲಿಂಕ್ ಮೂಲಕ ವಂಚನೆ ಮಾಡುತ್ತಿದ್ದಾರೆ. ಒಮ್ಮೆಗೆ ಯಾವುದು ಅಸಲಿ ಯಾವುದು ನಕಲಿ ತಿಳಿಯೋದೇ ಇಲ್ಲ ಯಾಕೆಂದರೆ ಆ ಮಟ್ಟಿಗೆ ಈ ಲಿಂಕ್ ಸರ್ಕಾರಿ ವೆಬ್‌ಸೈಟ್‌ನ ಮಾದರಿಯಲ್ಲೇ ತಯಾರಿಸಲಾಗಿದೆ. ವಂಚಕಾರು https://echallan.parivahan.in/ ಎಂಬ ಲಿಂಕ್ ಅನ್ನು ಮೆಸೇಜ್ ಮೂಲಕ ಹಂಚಿಕೊಳ್ಳುತ್ತಿದ್ದಾರೆಂದು ಕಿಲಕ್ ಹೇಳಿದರು. ಆದರೆ ಅಸಲಿ ಸಾರಿಗೆ ಇಲಾಖೆಯ ವೆಬ್‌ಸೈಟ್‌ನ ಲಿಂಕ್ https://echallan.parivahan.gov.in/ ಆಗಿದೆ ಎನ್ನುವುದನ್ನು ಜನಸಾಮಾನ್ಯರು ಗಮನಿಸಬೇಕಿದೆ. ಅಲ್ಲದೆ ಸರ್ಕಾರಿ ವೆಬ್‌ಸೈಟ್‌ನ ಲಿಂಕ್‌ನ ಕೊನೆಯಲ್ಲಿ “gov.in” ಇರುವುದು ಇಲ್ಲಿ ಗಮನಿಸಬೇಕಾದ ಸಂಗತಿಯಾಗಿದೆ. ಆದ್ದರಿಂದ ಅವರನ್ನು ಗುರುತಿಸುವಲ್ಲಿ ಯಾವುದೇ ತಪ್ಪು ಮಾಡಬಾರದು ಎಂದು ಕೇಳಿಕೊಂಡಿದ್ದಾರೆ.

Also Read: Realme 13 Series ಭಾರತದಲ್ಲಿ ಬಿಡುಗಡೆಗೆ ಡೇಟ್ ಫಿಕ್ಸ್! ನಿರೀಕ್ಷಿತ ಬೆಲೆ ಮತ್ತು ಫೀಚರ್‌ಗಳೇನು ತಿಳಿಯಿರಿ

ಚಲನ್ ಅಲರ್ಟ್ ಫೋನ್ ಸಂಖ್ಯೆಯಿಂದ ಬರುವುದಿಲ್ಲ

ನಿಮ್ಮ ಚಲನ್ ನೀಡಿದ್ದರೆ ಅದರ ಅಲರ್ಟ್ ಯಾವುದೇ ಫೋನ್ ಸಂಖ್ಯೆಯಿಂದ ಬರುವುದಿಲ್ಲ ಎಂದು ನಾಗೌರ್ ಸಂಚಾರ ಪೊಲೀಸ್ ಉಪ ಅಧೀಕ್ಷಕ ಅಲಿ ಮೊಹಮ್ಮದ್ ಹೇಳಿದ್ದಾರೆ. ಇದಲ್ಲದೆ ಯಾವುದೇ ಲಿಂಕ್‌ನಲ್ಲಿ ಆತುರದ ಪಾವತಿಯನ್ನು ಮಾಡದಿರುವುದು ಸಹ ಮುಖ್ಯವಾಗಿದೆ. ಸೈಬರ್ ಪೊಲೀಸ್ ಅಧಿಕಾರಿಗಳ ಪ್ರಕಾರ ಅಂತಹ ಲಿಂಕ್‌ಗಳನ್ನು ಕ್ಲಿಕ್ ಮಾಡುವ ಮೊದಲು ವಾಹನ ಮಾಲೀಕರು ಎಲ್ಲಾ ವಿವರಗಳನ್ನು ಸ್ವತಃ ಪರಿಶೀಲಿಸಬೇಕು. ನಿಜವಾದ ಸಂದೇಶವು ನಿಮ್ಮ ವಾಹನದ ಇಂಜಿನ್ ಸಂಖ್ಯೆ, ಚಾಸಿಸ್ ಸಂಖ್ಯೆಯಂತಹ ವಿವರಗಳನ್ನು ಒಳಗೊಂಡಿರುತ್ತದೆ. ಆದರೆ ಸ್ಕ್ಯಾಮರ್ನ ಸಂದೇಶವು ಅಂತಹ ವಿವರಗಳನ್ನು ಹೊಂದಿಲ್ಲ. ಇದಲ್ಲದೆ ಸಾರಿಗೆ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನಿಮಗೆ ಯಾವುದೇ ದಂಡ ವಿಧಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಪರಿಶೀಲಿಸಬಹುದು.

Beware of fraudsters sending links via messages in the name of traffic E-Challan

ನೀವು ವಂಚನೆಗೆ ಬಲಿಯಾದರೆ ಏನು ಮಾಡಬೇಕು

ಉನ್ನತ ಪೊಲೀಸ್ ಅಧಿಕಾರಿಗಳ ಪ್ರಕಾರ ನೀವು ಈ ರೀತಿಯ ವಂಚನೆಗೆ ಬಲಿಯಾದರೆ ಸಮಯ ವ್ಯರ್ಥ ಮಾಡದೆ ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್‌ನ ಸಹಾಯವಾಣಿ ಸಂಖ್ಯೆ 1930 ಗೆ ಕರೆ ಮಾಡಿ ಮತ್ತು ವಂಚನೆಯ ಬಗ್ಗೆ ಮಾಹಿತಿ ನೀಡಿ. ಇದರೊಂದಿಗೆ ಸೈಬರ್ ಅಪರಾಧ ವರದಿ ಪೋರ್ಟಲ್‌ನಲ್ಲಿ ತಕ್ಷಣವೇ ದೂರು ನೀಡಿ. ಇದಲ್ಲದೆ ನಿಮ್ಮ ಬ್ಯಾಂಕ್ ಮತ್ತು ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :