Best laptops under 40,000: ಇತ್ತೀಚಿನ ಮಾದರಿಯ ಲ್ಯಾಪ್‌ಟಾಪ್‌ಗಳು ಈ ಬೆಲೆಯ ಶ್ರೇಣಿಯಲ್ಲಿ ಇನ್ನೂ ಲಭ್ಯವಿಲ್ಲದಿದ್ದರೂ ನೀವು ಕಳೆದ ವರ್ಷದ ಕೆಲವು ಯೋಗ್ಯವಾದ ನೋಟ್‌ಬುಕ್‌ಗಳನ್ನು ಖರೀದಿಸಬಹುದು. ಐದು ಲ್ಯಾಪ್‌ಟಾಪ್‌ಗಳ ಪಟ್ಟಿಯ ಮೂಲಕ ನಾವು ರೂ 40,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಸಿಗುವ ಲ್ಯಾಪ್‌ಟಾಪ್‌ಗಳ ಮೇಲೆ ಕೇಂದ್ರೀಕರಿಸಿದ್ದೇವೆ. ಆದರೆ ಗೇಮಿಂಗ್‌ಗೆ ಒತ್ತು ನೀಡುವ ಲ್ಯಾಪ್‌ಟಾಪ್‌ಗಳು ಹೆಚ್ಚು ವೆಚ್ಚವಾಗಬಹದು. ಇಲ್ಲಿ ಕೆಲವು ಕಾರ್ಯಕ್ಷಮತೆ ಮಂದಗತಿಗಳು ಇರಬಹುದು. ಈ ಬೆಲೆಯ ಲ್ಯಾಪ್‌ಟಾಪ್‌ಗಳು 8GB RAM ಜೊತೆಗೆ ಅತ್ಯುತ್ತಮ ಫೀಚರ್ಗಳನ್ನು ಈ ಬಜೆಟ್ ವಿಭಾಗದಲ್ಲಿ ಹೊಂದಿದೆ.
ಇತ್ತೀಚೆಗೆ ಭಾರತದಲ್ಲಿ ಪ್ರಾರಂಭವಾದ ಆಲ್‌ರೌಂಡರ್ ಲ್ಯಾಪ್‌ಟಾಪ್ ಆಗಿದೆ. ಇದು 15-ಇಂಚಿನ ಪೂರ್ಣ-HD ಡಿಸ್‌ಪ್ಲೇ ಮತ್ತು ಪ್ರಮಾಣಿತ 60Hz ರಿಫ್ರೆಶ್ ದರ ಹೊಂದಿದೆ. ಈ ಲ್ಯಾಪ್ಟಾಪ್ ಕ್ವಾಡ್-ಕೋರ್ AMD Ryzen 3 (7320 ಯು) ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಇದು ಸ್ವಲ್ಪ ದುಬಾರಿಯಾಗಿದ್ದರೂ ಇಂಟೆಲ್‌ನ 11th-ಜನ್ ಇಂಟೆಲ್ ಕೋರ್ i5-1135G7 ಪ್ರೊಸೆಸರ್ ವಿರುದ್ಧ ಉತ್ತಮವಾಗಿ ಸ್ಪರ್ಧಿಸುತ್ತದೆ. ಹೆಚ್ಚುವರಿಯಾಗಿ Asus ಲ್ಯಾಪ್‌ಟಾಪ್ 8GB LPPDR5 RAM ಅನ್ನು ಹೊಂದಿದೆ. ಇದು DDR4 RAM ತಂತ್ರಜ್ಞಾನಕ್ಕಿಂತ ಹೆಚ್ಚು ಶಕ್ತಿಯ ದಕ್ಷತೆಯನ್ನು ಹೊಂದಿದೆ.
Infinix ಲ್ಯಾಪ್‌ಟಾಪ್ ಮಾರುಕಟ್ಟೆಯಲ್ಲಿ ಹೊಸ ಕಂಪನಿಯಾಗಿದ್ದರೂ ಇದು ಇತ್ತೀಚೆಗೆ ಕೆಲವು ಉತ್ತಮ ಗುಣಮಟ್ಟದ PC ಗಳನ್ನು ಉತ್ಪಾದಿಸುತ್ತಿದೆ. ಇದು ಮೆಟಲ್ ಬಾಡಿ ಮತ್ತು 16GB LPDDR4X RAM (512GB SSD ಸ್ಟೋರೇಜ್‌ನೊಂದಿಗೆ ಜೋಡಿಸಲಾಗಿದೆ) ಒಳಗೊಂಡಿರುವ ವಿಭಾಗದಲ್ಲಿ ಇದು ಅಪರೂಪದ ಲ್ಯಾಪ್‌ಟಾಪ್‌ಗಳಲ್ಲಿ ಒಂದಾಗಿದೆ. ಲ್ಯಾಪ್‌ಟಾಪ್‌ನ ಲುಕ್‌ಗೆ ನೀವು ಹೆಚ್ಚಿನ ಆದ್ಯತೆ ನೀಡಿದರೆ Infinix X1 Slim ಅತ್ಯುತ್ತಮ ಆಯ್ಕೆಯಾಗಿದೆ. ಇದು 10th-gen ಕೋರ್ i5 CPU ಜೊತೆಗೆ 14-ಇಂಚಿನ ಪೂರ್ಣ-HD ಡಿಸ್ಪ್ಲೇಯನ್ನು ಹೊಂದಿದೆ.
ಲ್ಯಾಪ್ಟಾಪ್ ಲುಕ್‌ಗೆ ಆದ್ಯತೆ ನೀಡಿದರೆ Realme Book (Slim) ಯೋಗ್ಯವಾದ ಖರೀದಿಯಾಗಿದೆ. 1.38KG ತೂಕದ Realme Book (Slim) ಹೆಚ್ಚು ಪೋರ್ಟಬಲ್ ಆಗಿದೆ. ಇದು Apple MacBooks ಅನ್ನು ಹೋಲುತ್ತದೆ. ಈ ಲ್ಯಾಪ್‌ಟಾಪ್ ನಿಮಗೆ ಅತ್ಯುತ್ತಮ ವೀಕ್ಷಣೆಯ ಅನುಭವವನ್ನೂ ನೀಡುತ್ತದೆ. ಇದು 2K QHD LCD ಮಾನಿಟರ್, ಡ್ಯುಯಲ್ ಹರ್ಮನ್ ಸ್ಪೀಕರ್‌ಗಳು, ಬ್ಯಾಕ್‌ಲಿಟ್ ಕೀಬೋರ್ಡ್, 256GB SSD ಸ್ಟೋರೇಜ್ ಮತ್ತು ಫಿಂಗರ್‌ಪ್ರಿಂಟ್ ಸ್ಕ್ಯಾನರ್ ನಂತಹ ಕೆಲವು ವಿಶಿಷ್ಟ ಫೀಚರ್‌ಗಳನ್ನು ಹೊಂದಿದೆ.
40,000 ಕ್ಕಿಂತ ಕಡಿಮೆ ಬೆಲೆಯ HP ಕಂಪ್ಯೂಟರ್‌ಗಳು ಪ್ರಸ್ತುತ ಕಂಪನಿಯ ವೆಬ್‌ಸೈಟ್‌ನಲ್ಲಿ ಲಭ್ಯವಿಲ್ಲ. ಆದರೂ HP 14s ಮಾರುಕಟ್ಟೆಯಲ್ಲಿ ಬೆಸ್ಟ್ ಸೆಲ್ಲರ್ ಆಗಿದೆ. ಇದು 14-ಇಂಚಿನ ಡಿಸ್ಪ್ಲೇ, 11th ಜನ್ ಕೋರ್ i3 CPU, 8GB RAM ಮತ್ತು 256GB ಸ್ಟೋರೇಜ್ನೊಂದಿಗೆ ತುಂಬಾ ಪೋರ್ಟಬಲ್ ಆದ ಲ್ಯಾಪ್‌ಟಾಪ್ ಆಗಿದೆ. ಅಲ್ಲದೆ SD ಕಾರ್ಡ್ ಕೂಡ ಇದೆ. ಇದು ಹ್ಯಾಂಡ್ಸ್-ಫ್ರೀ ಕ್ರಿಯೆಗಳನ್ನು ಸಕ್ರಿಯಗೊಳಿಸಲು Amazon Alexa ಸ್ಪೀಚ್ ಅಸಿಸ್ಟೆಂಟ್‌ಗೆ ಬೆಂಬಲವನ್ನು ಸಹ ಒಳಗೊಂಡಿದೆ.
HP ಲ್ಯಾಪ್‌ಟಾಪ್‌ನಂತೆಯೇ ಬ್ರಾಂಡ್ ಕಂಪನಿಗಳ ಲ್ಯಾಪ್‌ಟಾಪ್‌ಗಳನ್ನು ನೀವು ಬಯಸಿದಲ್ಲಿ Lenovo IdeaPad Slim 3i ಉತ್ತಮ ಆಯ್ಕೆಯಾಗಿದೆ. ಇದು 15.6-ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಅಲ್ಲದೆ 11th ಜನ್ ಕೋರ್ i3 ಪ್ರೊಸೆಸರ್, 8GB ನ DDR4 RAM, 256GB SSD M.2 2242 PCIe ಸ್ಟೋರೇಜ್ ಮತ್ತು ಡಾಲ್ಬಿ ಆಡಿಯೊ ಜೊತೆಗೆ ಸ್ಟೀರಿಯೋ ಸ್ಪೀಕರ್‌ಗಳನ್ನು ಹೊಂದಿದೆ.