ಬೇಸಿಗೆ ಕಾಲ ಬರಲಿದ್ದು 2024 ಬೇಸಿಗೆಯ ದಿನಗಳಲ್ಲಿ ಶಾಖದಿಂದ ತೊಂದರೆಗೆ ಸಿಲುಕಿಕೊಳ್ಳೋದು ಅನಿವಾರ್ಯ.
Air Cooler ಬೆವರು ಮತ್ತು ಶಾಖದಿಂದ ಜನರಿಗೆ ಪರಿಹಾರವನ್ನು ನೀಡುವ ಉತ್ತಮ ಸಾಧನಗಳಲ್ಲಿ ಒಂದಾಗಿದೆ.
Air Coolers 2024: ಇನ್ನು ಕೆಲವೇ ದಿನಗಳಲ್ಲಿ ಬೇಸಿಗೆ ಕಾಲ ಬರಲಿದ್ದು 2024 ಬೇಸಿಗೆಯ ದಿನಗಳಲ್ಲಿ ಶಾಖದಿಂದ ತೊಂದರೆಗೆ ಸಿಲುಕಿಕೊಳ್ಳೋದು ಅನಿವಾರ್ಯ. ಅನೇಕ ಬಾರಿ ಮನೆಗಳಲ್ಲಿ ಅಳವಡಿಸಲಾಗಿರುವ ಫ್ಯಾನ್‌ಗಳು ಸಹ ಬೇಸಿಗೆಯಲ್ಲಿ ಶಾಖದಿಂದ ಪರಿಹಾರವನ್ನು ನೀಡಲು ವಿಫಲವಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಜನರು ಪರಿಹಾರ ಪಡೆಯಲು ಕಡಿಮೆ ಬೆಲೆಗೆ ಅತ್ಯುತ್ತಮ ಏರ್ ಕೂಲರ್‌ಗಳನ್ನು ಖರೀದಿಸುತ್ತಾರೆ. ಈ ಬೇಸಿಗೆಯಲ್ಲಿ ಬಹುತೇಕ ಮನೆಗಳಲ್ಲಿ ಬ್ರಾಂಡೆಡ್ ಕೂಲರ್‌ಗಳನ್ನು ಬಳಸುತ್ತಾರೆ. ಇದು ತನ್ನ ಸುತ್ತಲಿನ ಗಾಳಿಯನ್ನು ತಂಪಾಗಿಸುತ್ತ ತನ್ನ ಫ್ಯಾನ್ ಮೂಲಕ ಹೊರಹಾಕಿ ತಂಪಾದ ಗಾಳಿಯನ್ನು ಒದಗಿಸುತ್ತದೆ. ಇದು ಬೆವರು ಮತ್ತು ಶಾಖದಿಂದ ಜನರಿಗೆ ಪರಿಹಾರವನ್ನು ನೀಡುವ ಉತ್ತಮ ಸಾಧನಗಳಲ್ಲಿ ಒಂದಾಗಿದೆ.
Also Read: 8GB RAM ಮತ್ತು 32MP ಸೆಲ್ಫಿ ಕ್ಯಾಮೆರಾದ Infinix Hot 40i ಸ್ಮಾರ್ಟ್‌ಫೋನ್‌ನ ಟಾಪ್ 5 ಫೀಚರ್ಗಳು!
Symphony Diet 3D 55i+ Portable Tower Air Coolers
ಈ ಕೂಲರ್‌ನಲ್ಲಿ ಇತ್ತೀಚಿನ ತಂತ್ರಜ್ಞಾನವನ್ನು ಬಳಸಲಾಗಿದೆ. ಇದು ಟಚ್ ಸ್ಕ್ರೀನ್ ಹೊಂದಿದೆ. ಅಲ್ಲದೆ ಈ ಕೂಲರ್ ಐ-ಪ್ಯೂರ್ ತಂತ್ರಜ್ಞಾನವನ್ನು ಹೊಂದಿದೆ. ಈ ಕೂಲರ್ ಜೊತೆಗೆ ರಿಮೋಟ್ ಕೂಡ ಬರುತ್ತದೆ. ನೀವು ಅದನ್ನು ರಿಮೋಟ್‌ನಿಂದಲೂ ನಿಯಂತ್ರಿಸಬಹುದು. ಈ ಕೂಲರ್ 55 ಲೀಟರ್ ಸಾಮರ್ಥ್ಯದೊಂದಿಗೆ ಬರುತ್ತದೆ. ಮನೆಯಲ್ಲಿ ಬಳಸಲು ಇದು ಉತ್ತಮ ಆಯ್ಕೆಯಾಗಿದೆ. ನೀವು ಇದನ್ನು ಅಮೆಜಾನ್‌ನಿಂದ 10,890 ರೂಗೆ ಖರೀದಿಸಬಹುದು.
Bajaj DMH70 DESERT AIR COOLER
ಬಜಾಜ್‌ನ ಈ ಕೂಲರ್ 70 ಲೀಟರ್ ಸಾಮರ್ಥ್ಯದೊಂದಿಗೆ ಬರುತ್ತದೆ. ಅಲ್ಲದೆ ಈ ಕೂಲರ್ ಟರ್ಬೊ ಫ್ಯಾನ್ ತಂತ್ರಜ್ಞಾನವನ್ನು ಹೊಂದಿದೆ. ಈ ಕೂಲರ್‌ನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಫಿಲ್ಟರ್ ಮತ್ತು ಟರ್ಬೊ ಮೋಡ್ ಅನ್ನು ಸಹ ಒದಗಿಸಲಾಗಿದೆ. ಇದು ಒಂದು ವರ್ಷದ ವಾರಂಟಿಯೊಂದಿಗೆ ಬರುತ್ತದೆ. ಇದು ಮನೆಯಲ್ಲಿ ಬಳಸಲು ಉತ್ತಮವಾದ ಕೂಲರ್ ಆಗಿದೆ. ನೀವು ಈ ಕೂಲರ್ ಅನ್ನು ಅಮೆಜಾನ್‌ನಿಂದ ಖರೀದಿಸಬಹುದು. ಇದರ ಬೆಲೆ 14,821 ರೂರೂಗೆ ಖರೀದಿಸಬಹುದು.
Crompton Optimus Desert Air ಕೂಲರ್
ಈ ಕೂಲರ್‌ನ ಗುಣಮಟ್ಟ ಸಾಕಷ್ಟು ಉತ್ತಮವಾಗಿದೆ. ಇದರ ಸಾಮರ್ಥ್ಯ 65 ಲೀಟರ್. ಈ ಕೂಲರ್ ಚಕ್ರಗಳನ್ನು ಹೊಂದಿದೆ ಆದ್ದರಿಂದ ಅದನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸರಿಸಲು ತುಂಬಾ ಸುಲಭ. ನೀವು ಅದನ್ನು ಮನೆಯ ಒಳಗೆ ಅಥವಾ ಹೊರಗೆ ಎಲ್ಲಿ ಬೇಕಾದರೂ ಇಡಬಹುದು. ಅದರಲ್ಲಿ ಆರ್ದ್ರತೆಯ ನಿಯಂತ್ರಣವನ್ನು ಸಹ ಒದಗಿಸಲಾಗಿದೆ. ಇದರ MRP 12,499 ರೂಗೆ ಇದನ್ನು ಅಮೆಜಾನ್‌ನಿಂದ ಆರ್ಡರ್ ಮಾಡಬಹುದು.
V-Guard Arido P22H-N Personal Air Coolers
ಈ ವಿಗಾರ್ಡ್ ಕೂಲರ್ 22 ಲೀಟರ್ ಸಾಮರ್ಥ್ಯ ಮತ್ತು ಎರಡು ವರ್ಷಗಳ ವಾರಂಟಿಯೊಂದಿಗೆ ಬರುತ್ತದೆ. ಸೊಳ್ಳೆ ಮತ್ತು ಡಸ್ಟ್ ಫಿಲ್ಟರ್ ಅನ್ನು ಸಹ ಅದರಲ್ಲಿ ನೀಡಲಾಗಿದೆ. ಇದರ ಬೆಲೆ 5,249 ರೂಗಳಾಗಿದೆ. ನೀವು ಇದನ್ನು ಅಮೆಜಾನ್‌ನಿಂದ ಆರ್ಡರ್ ಮಾಡಬಹುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile