ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಅತ್ಯುತ್ತಮವಾದ 5 ಬೆಸ್ಟ್ ಮೋಟಾರ್ಸೈಕಲ್ಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಅತ್ಯುತ್ತಮವಾದ 5 ಬೆಸ್ಟ್ ಮೋಟಾರ್ಸೈಕಲ್ಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
HIGHLIGHTS

2018 ರಲ್ಲಿ ಹೊಸ ಮೋಟಾರ್ಸೈಕಲನ್ನು ಖರೀದಿಸಲು ಯೋಚಿಸುತ್ತಿದ್ದರೆ ಈ ಲಿಸ್ಟ್ ನಿಮಗಾಗಿದೆ.

ದಿನದಿಂದ ದಿನಕ್ಕೆ ಪೆಟ್ರೋಲ್ ಬೆಲೆ ಎತ್ತರಕ್ಕೆ ಏರುತ್ತಲೇ ಇದೆ. ಇಲ್ಲಿ ಕೆಲವು ಹೊಸ ಬೈಕುಗಳ ಪಟ್ಟಿಯಲ್ಲಿ ಕಡಿಮೆ ಅಂದ್ರೆ ಸಾಧ್ಯವಾದಷ್ಟು ಕಡಿಮೆ ಇಂಧನ ಹೀರುವ ಮೋಟಾರ್ಸೈಕಲ್ಗಳ ಆಯ್ಕೆಯನ್ನು ಇಲ್ಲಿಟ್ಟಿದ್ದೇವೆ. ಇಲ್ಲಿನ ಸಂಖ್ಯೆಗಳು ನಿಖರವಾದ ನೈಜ ಇಂಧನ ದಕ್ಷತೆಯನ್ನು ಹೊಂದಿಲ್ಲವಾದರೂ ಪ್ರತಿ ಲೀಟರ್ ಪೆಟ್ರೋಲ್ಗೆ ಹೆಚ್ಚಿನ ಕಿಲೋಮೀಟರ್ಗಳನ್ನು ಪಡೆಯುವಲ್ಲಿ ಯಾವ ದ್ವಿಚಕ್ರ ವಾಹನ ಉತ್ತಮ ಎಂಬುದು ಉತ್ತಮ ಸೂಚನೆಯಾಗಿದೆ.

Hero Splendor i3s.
ಹೀರೋ ಮೋಟೋಕಾರ್ಪ್ ಮೂಲಭೂತವಾಗಿ ಎಲ್ಲಾ ಸಮಯದ ಅತ್ಯುತ್ತಮವಾದ ಉತ್ಪನ್ನವಾದ ಸ್ಪ್ಲೆಂಡರ್ ಅನ್ನು ತೆಗೆದುಕೊಂಡು ಅದನ್ನು 'i3s ಟೆಕ್ನಾಲಜಿಯನ್ನು ಹೊಂದಿದೆ. ಇದರ ಸ್ಟಾರ್ಟ್ ಸಿಸ್ಟಮನ್ನು ನೀವು ಪುಟ್ ಮಾಡುವಾಗ ಮತ್ತೊಮ್ಮೆ ಕ್ಲಚ್ನಲ್ಲಿ ಎಳೆದು ಬದಲಿಸಬವುದು. ಅಲ್ಲದೆ ಈಗಾಗಲೇ ಹೆಚ್ಚು ಪರಿಣಾಮಕಾರಿಯಾದ ಮೋಟಾರು ಇದಾಗಿದೆ. ಇದರ ನಿರೀಕ್ಷಿತ ಮೈಲೇಜ್: 102.5kpl ಇದರಲ್ಲಿನ ಎಂಜಿನ್: 97.2cc, ಸಿಂಗಲ್-ಸಿಲಿಂಡರ್ ಕೊನೆಯದಾಗಿ ಇದರ ಬೆಲೆ: 51,911 ರೂ (ಎಕ್ಸ್ ಶೋ ರೂಂ, ದೆಹಲಿ).

TVS Sport
ಟಿವಿಎಸ್ ಸ್ಪೋರ್ಟ್ ಕೆಲವು ವರ್ಷಗಳ ಹಿಂದೆ ಚೆನ್ನೈ ಮೂಲದಲ್ಲಿ ಈ  ಕಂಪೆನಿ ಎಂಟ್ರಿ ಮಟ್ಟದ ಪ್ರಯಾಣಿಕ ಮೋಟಾರ್ಸೈಕಲ್ನ ನವೀಕರಿಸಿದ ಆವೃತ್ತಿಯನ್ನು ಬಿಡುಗಡೆ ಮಾಡಿತು. ಇದು ಇನ್ನೂ ಹೆಚ್ಚಿನ ಇಂಧನ ದಕ್ಷತೆಯನ್ನು ಹೊಂದಿದ್ದು ಮೈಲೇಜ್ನಲ್ಲಿ ಬಂಪ್ ಜೊತೆಗೆ ಟಿವಿಎಸ್ ಇನ್ನೂ ಕೆಲವು ವೈಶಿಷ್ಟ್ಯಗಳೊಂದಿಗೆ ಈ ಮೋಟಾರ್ಸೈಕಲ್ ಮೂಡಿ ಬರುತ್ತದೆ. ಇದರ ನಿರೀಕ್ಷಿತ ಮೈಲೇಜ್: 95kpl ಇದರಲ್ಲಿನ ಎಂಜಿನ್: 99.77cc, ಸಿಂಗಲ್-ಸಿಲಿಂಡರ್ ಕೊನೆಯದಾಗಿ ಇದರ ಬೆಲೆ: 39,963 ರೂ (ಎಕ್ಸ್ ಶೋ ರೂಂ, ದೆಹಲಿ).

Bajaj CT100. 
ಈ ಸಿಟಿ 100 ತನ್ನ ವಿಭಾಗದಲ್ಲಿ ಹೆಚ್ಚು ಯಶಸ್ವಿಯ ದ್ವಿಚಕ್ರ ವಾಹನಗಳಲ್ಲಿ ಒಂದಾಗಿದೆ. ಮತ್ತು ಭಾರತೀಯ ದ್ವಿಚಕ್ರದ ಜಾಗದಲ್ಲಿ ಅತಿದೊಡ್ಡ ಪಾಲನ್ನು ಹೊಂದಿರುವ ವರ್ಗವೊಂದರಲ್ಲಿ ಸ್ಪರ್ಧೆಯನ್ನು ತೆಗೆದುಕೊಳ್ಳುವಲ್ಲಿ ತನ್ನ ನಿರ್ಧಾರವನ್ನು ಸೂಚಿಸಲು ಬಜಾಜ್ ಕೆಲವು ವರ್ಷಗಳ ಹಿಂದೆ ಈ ಹೆಸರನ್ನು ತಂದಿದ್ದು ಅತ್ಯುತ್ತಮವಾದ ಮೈಲೇಜ್ ಮೋಟಾರ್ಸೈಕಲ್ ಇದಾಗಿದೆ. ಇದರ ನಿರೀಕ್ಷಿತ ಮೈಲೇಜ್: 99.1kpl ಇದರಲ್ಲಿನ ಎಂಜಿನ್: 99.2cc, ಸಿಂಗಲ್-ಸಿಲಿಂಡರ್ ಕೊನೆಯದಾಗಿ ಇದರ ಬೆಲೆ: 31,802 ರೂ (ಎಕ್ಸ್ ಶೋ ರೂಂ, ದೆಹಲಿ).

Bajaj Platina 100ES.
ಈ ಪ್ಲಾಟಿನಾ ಇಂದಿಗೂ ಬಜಾಜ್ನ ಅತ್ಯಂತ ಹೆಚ್ಚು ಮಾರಾಟವಾದ ಮತ್ತು ಮಾರಾಟವಾಗುತ್ತಿರುವ ಅತ್ಯಂತ ಸಮರ್ಥವಾದ ಮೋಟರ್ ಸೈಕಲ್ಗಳಲ್ಲಿ ಒಂದಾಗಿದೆ. ಇದು 2015 ರಿಂದ ಇಂದಿನ ವರೆಗೆ ಈ ಪ್ಲ್ಯಾಟಿನಾ ಪವರ್ ಸ್ಟಾರ್ಟ್ನೊಂದಿಗೆ ಮತ್ತು ತನ್ನದೆಯಾದ  ಸ್ಟ್ಯಾಂಡರ್ಡ್ನೊಂದಿಗೆ ಹೊಸ ಶೈಲಿಯನ್ನು ಹೊಂದಿದೆ. ಇದರಲ್ಲಿನ ಏರ್ ಕೂಲ್ಡ್ ಮೋಟಾರು ಕಂಪನಿಯ ಸ್ವಾಮ್ಯದ DTS -i ಅವಳಿ ಸ್ಪಾರ್ಕ್ ಅನ್ನು ಸುಧಾರಿತ ದಹನ ದಕ್ಷತೆಯನ್ನು ಹೊಂದಿದ್ದು ಇದು ಹೆಚ್ಚಿನ ಮೈಲೇಜ್ ಫಿಗರ್ಗೆ ಕಾರಣವಾಗುತ್ತದೆ. ಇದರ ನಿರೀಕ್ಷಿತ ಮೈಲೇಜ್: 96.9kpl ಇದರಲ್ಲಿನ ಎಂಜಿನ್: 102cc, ಸಿಂಗಲ್-ಸಿಲಿಂಡರ್ ಕೊನೆಯದಾಗಿ ಇದರ ಬೆಲೆ: 47,155 ರೂ (ಎಕ್ಸ್ ಶೋ ರೂಂ, ದೆಹಲಿ).

Hero Splendor range.
ಭಾರತದಲ್ಲಿ ಇಂಧನ ದಕ್ಷತೆಯ ಬಗ್ಗೆ ಯೋಚನೆ ಮಾಡಿದರೆ ಹೆಚ್ಚಿನ ಜನರಿಗೆ ಮನಸ್ಸಿಗೆ ಬರುವ ಮೊದಲ ಹೆಸರು ಹೀರೋ ಸ್ಪ್ಲೆಂಡರ್ ಆಗಿದೆ. ಇದು ಕಂಪನಿಯ ಉಸಿರಾಗಿದೆ. ಈ ಮೋಟಾರ್ಸೈಟನ್ನು ಬಹುಮಟ್ಟಿಗೆ ಹೆಚ್ಚು ಮೈಲೇಜ್ ಹೊಂದಿದ್ದು ಕಳೆದ ಎರಡು ದಶಕಗಳ ಉತ್ತಮ ಭಾಗದ  ಮಾರಾಟ ಚಾರ್ಟ್ಗಳಲ್ಲಿ ಅಗ್ರಸ್ಥಾನದಲ್ಲಿದೆ. ಇದರ ನಿರೀಕ್ಷಿತ ಮೈಲೇಜ್: 93.2kpl ಇದರಲ್ಲಿನ ಎಂಜಿನ್: 97.2cc, ಸಿಂಗಲ್-ಸಿಲಿಂಡರ್ ಕೊನೆಯದಾಗಿ ಇದರ ಬೆಲೆ: 48,520 ರೂ (ಎಕ್ಸ್ ಶೋ ರೂಂ, ದೆಹಲಿ).

ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo