Bengaluru Auto Driver: ಸಾಮಾನ್ಯವಾಗಿ ನೀವು ಯಾವುದೇ ವಾಸ್ತವನ್ನು ಖರೀದಿಸುವಾಗ ಅಥವಾ ಯಾರಿದಾದರೂ ಹಣ ಪಾವತಿಸುವಾಗ ಈವರೆಗೆ ಪೇಮೆಂಟ್ ಮಾಡಲು ಅಲ್ಲಿಲ್ಲಿ ಅಥವಾ ಸಣ್ಣ ಪುಟ್ಟ ಬಾಕ್ಸ್ ಆಧಾರಿತ UPI QR ಕೋಡ್ಗಳಿಗೆ ಸ್ಕ್ಯಾನ್ ಮಾಡುವ ಮೂಲಕ ಪೇಮೆಂಟ್ ಮಾಡಿರಬಹುದು. ಆದರೆ ಇಂದು ನಮ್ಮ ಕರ್ನಾಟಕದ ಬೆಂಗಳೂರಿನಲ್ಲಿ ಆಟೋ ಚಾಲಕರೊಬ್ಬರ ಇತ್ತೀಚಿನ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಲ್ಲದೆ ಈ ಪೋಸ್ಟ್ ರಾಜ್ಯ ಬಿಜೆಪಿ ಸರ್ಕಾರದ (@BJP4Karnataka) ಟ್ವಿಟ್ಟರ್ ಖಾತೆಯಲ್ಲಿ ಸಿಕ್ಕಾಪಟ್ಟೆಲ್ಲಿ ಹಂಚಿಕೊಳ್ಳಲಾಗಿದೆ.
Also Read: Xiaomi Redmi Watch 5 Lite ಭಾರತದಲ್ಲಿ ಬಿಡುಗಡೆಗೆ ಡೇಟ್ ಕಂಫಾರ್ಮ್! ಇಲ್ಲಿದೆ ಒಂದಿಷ್ಟು ಮಾಹಿತಿ!
ಈ ಪೋಸ್ಟ್ ಸಿಕ್ಕಾಪಟ್ಟೆ ವಿನೋದಕರ ಪ್ರತಿಕ್ರಿಯೆಗಳು ಮತ್ತು ಕಾಮೆಂಟ್‌ಗಳೊಂದಿಗೆ ಭಾರಿ ವೈರಲ್ ಆಗುತ್ತಿದೆ. ಬೆಂಗಳೂರು ನಗರವು ತನ್ನ ಆರಂಭಿಕ ಸಂಸ್ಕೃತಿಗೆ ಹೆಸರುವಾಸಿಯಾಗಿದೆ ಮತ್ತು ಸಾಮಾನ್ಯ ಜನರು ಸಹ ತಂತ್ರಜ್ಞಾನವನ್ನು ಚೆನ್ನಾಗಿ ತಿಳಿದಿದ್ದಾರೆ. ಯಾಕೆಂದರೆ ಸಾಮಾನ್ಯವಾಗಿ ಆಟೋ ಚಾಲಕರು ತಮ್ಮ ಆಟೋದಲ್ಲಿ ಕ್ಯೂಆರ್ ಕೋಡ್ ಅಂಟಿಸಿರುತ್ತಾರೆ. ಅಥವಾ ಕ್ಯೂಆರ್ ಕೋಡ್ ಫೋಟೋವನ್ನು ಲ್ಯಾಮಿನೇಷನ್ ಮಾಡಿಸಿಕೊಂಡು ಪ್ಲಾಸ್ಟಿಕ್ ಒಳಗೆ ಇಟ್ಟುಕೊಂಡಿರುತ್ತಾರೆ.
ಈ ಆಟೋ ಚಾಲಕ ಬಾಡಿಗೆ ಪೇಮೆಂಟ್ ಪಡೆಯಲು ಸಾಮಾನ್ಯ ಕ್ಯೂಆರ್ (UPI QR) ಕೋಡ್ ಆಟೋದಲ್ಲಿ ಅಂಟಿಸುವ ಬದಲು ತಮ್ಮ ಕೈಯಲ್ಲಿ ಕಟ್ಟಿರುವ ಸ್ಮಾರ್ಟ್‌ವಾಚ್‌ನಲ್ಲಿ UPI QR ಕೋಡ್ ತೋರಿಸಿ ಪಾವತಿ ಮಾಡಿಸಿಕೊಳ್ಳುವುದು ಭಾರಿ ಪ್ರಶಂಶೆಗೆ ಅರ್ಹರಾಗಿದ್ದಾರೆ. ಈ ಫೋಟೋವನ್ನು ಬಿಜೆಪಿ ಕರ್ನಾಟಕ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ. ಇಲ್ಲಿ ತಂತ್ರಜ್ಞಾನ ವಿಚಾರಗಳಲ್ಲಿ ಇತರ ಎಲ್ಲಾ ನಗರಗಳಿಗಿಂತ ಮುಂದಿದೆ. ಇದು ಹಲವು ಬಾರಿ ಸಾಬೀತಾಗಿದೆ.
ಈ ಪೈಕಿ ಇದೀಗ ಬೆಂಗಳೂರು ಆಟೋ ಚಾಲಕನ ಸ್ಮಾರ್ಟ್‌ವಾಚ್‌ನಲ್ಲಿ ಯುಪಿಐ ಕ್ಯೂಆರ್ ಕೋಡ್ ಇದೀಗ ಭಾರಿ ಸದ್ದು ಮಾಡುತ್ತಿದೆ. ಇದನ್ನು ರಾಜ್ಯ ಸರ್ಕಾರದ (@BJP4Karnataka) ಟ್ವಿಟ್ಟರ್ ಖಾತೆಯಲ್ಲಿ ಸಿಕ್ಕಾಪಟ್ಟೆಲ್ಲಿ ಹಂಚಿಕೊಳ್ಳಲಾಗಿದೆ. ಅಲ್ಲದೆ ಪಿ ಚಿದಂಬರಂ ಅಣಕಿಸುವಾಗ ಈ ಬದಲಾವಣೆ ಬಗ್ಗೆ ಯೋಚನೆ ಕೂಡ ಮಾಡಿರಲಿಲ್ಲ.
ಇದಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದಗಳನ್ನೂ ತಿಳಿಸುತ್ತಾ ನಮ್ಮ ಬೆಂಗಳೂರಿನ ಆಟೋ ಚಾಲಕರು ಭಾರತದ ಒಕ್ಕೂಟ ನಾಯಕರಿಂದ ದಿನೇ ದಿನೇ ಸ್ಮಾರ್ಟ್ ಆಗಿದ್ದಾರೆ ಎಂದು ಬಿಜೆಪಿ ನೇರವಾಗಿ ಕಾಂಗ್ರೆಸ್ ಸರ್ಕಾರದ ಕಾಲೆಳೆದಿದೆ.