Common Mistakes: ಮೊಬೈಲ್‌ನಲ್ಲಿ ಅಪ್ಲಿಕೇಶನ್‌ ಡೌನ್ಲೋಡ್ ಮಾಡುವಾಗ ಈ 4 ತಪ್ಪುಗಳನ್ನು ಮಾಡಲೇಬೇಡಿ!

Updated on 18-Mar-2024
HIGHLIGHTS

ಆಕಸ್ಮಿಕವಾಗಿ ನಮ್ಮಿಂದಾಗುವ Common Mistakes ನಮಗೆ ಅರಿವಿಲ್ಲದೆ ಅನೇಕ ಸಮಸ್ಯೆಗಳಿಗೆ ತುತ್ತಾಗುತ್ತೇವೆ

ಇಂದಿನ ದಿನಗಳಲ್ಲಿ ನಾವು ಹಲವಾರು ಕೆಲಸಗಳನ್ನು ಈಗ ಮೊಬೈಲ್‌ ಫೋನ್ ಮೂಲಕ ಮನೆಯಲ್ಲೆ ಕುಳಿತು ಮಾಡಲಾಗುತ್ತಿದೆ.

ಹ್ಯಾಕರ್‌ಗಳು ಲಿಂಕ್ ಅಥವಾ ಅಪ್ಲಿಕೇಶನ್ ಮೂಲಕ ನೇರವಾಗಿ ನಿಮ್ಮ ಪರ್ಸನಲ್ ಡೇಟಾ ಮತ್ತು ಬ್ಯಾಂಕ್ ಖಾತೆಗಳಿಗೆ ಗಾಳ ಹಾಕುತ್ತಾರೆ.

Common Mistakes While Installing Apps: ಇಂದಿನ ದಿನಗಳಲ್ಲಿ ನಮ್ಮ ಸಣ್ಣ ಪುಟ್ಟ ಶಾಪಿಂಗ್‌ನಿಂದ ಹಿಡಿದು ಬ್ಯಾಂಕಿಂಗ್‌ವರೆಗಿನ ಹಲವು ಕೆಲಸಗಳನ್ನು ಈಗ ಮೊಬೈಲ್‌ ಫೋನ್ ಮೂಲಕ ಮನೆಯಲ್ಲೆ ಕುಳಿತು ಮಾಡಲಾಗುತ್ತಿದೆ. ಆದಾಗ್ಯೂ ಇದರೊಂದಿಗೆ ಸೈಬರ್ ಅಪರಾಧ (Cyber Crime) ಪ್ರಕರಣಗಳು ಸಹ ವೇಗವಾಗಿ ಹೆಚ್ಚುತ್ತಿವೆ. ಹ್ಯಾಕರ್‌ಗಳು ಬಳಕೆದಾರರನ್ನು ಹಲವು ರೀತಿಯಲ್ಲಿ ಗುರಿಯಾಗಿಸಿಕೊಂಡು ನೇರವಾಗಿ ಪರ್ಸನಲ್ ಡೇಟಾ ಮತ್ತು ಬ್ಯಾಂಕ್ ಖಾತೆಗಳಿಗೆ ಗಾಳ ಹಾಕುತ್ತಾರೆ.

ಆಕಸ್ಮಿಕವಾಗಿ ನಮ್ಮಿಂದಾಗುವ Common Mistakes

ಹೆಚ್ಚಿನ ಸಂದರ್ಭಗಳಲ್ಲಿ ಬಳಕೆದಾರರ ಡಿವೈಸ್‌ಗಳಿಗೆ ಅಪಾಯಕಾರಿ ವೈರಸ್‌ಗಳನ್ನು ಅವರಿಗೆ ಅರಿವಿಲ್ಲದ ಜಾಹೀರಾತು ಅಥವಾ ಲಿಂಕ್‌ಗಳ ಮೂಲಕ ಗುರಿಯಾಗಿಸುತ್ತಾರೆ. ಅವನ್ನು ಅರಿಯದೆ ನಾವು ಅಥವಾ ಮಕ್ಕಳಿಂದ ಆಕಸ್ಮಿಕವಾಗಿ ಕ್ಲಿಕ್ ಆಗೋಗುತ್ತೆ (common mistakes) ಈ ವೈರಸ್‌ಗಳು ಆಪ್‌ಗಳು ಮತ್ತು ಇತರ ಹಲವು ಮೂಲಗಳ ಮೂಲಕ ಬಳಕೆದಾರರ ಮೊಬೈಲ್‌ಗಳಿಗೆ ಬರುತ್ತವೆ.

Also Read: Reliance Jio ಈ ಯೋಜನೆಯಲ್ಲಿ ಬರೋಬ್ಬರಿ 14 OTT ಆಪ್‌ಗಳೊಂದಿಗೆ Unlimited 5G ಡೇಟಾ ಮತ್ತು ಕರೆ ಲಭ್ಯ!

ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡುವಾಗ ಜಾಗರೂಕರಾಗಿರಿ:

ಜನರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ವಿವಿಧ ರೀತಿಯ ಅಪ್ಲಿಕೇಶನ್‌ಗಳನ್ನು ಸ್ಥಾಪಿಸುತ್ತಾರೆ. ಈ ಅಪ್ಲಿಕೇಶನ್‌ಗಳಲ್ಲಿ ಹೆಚ್ಚಿನವು ತುಂಬಾ ಉಪಯುಕ್ತವಾಗಿದ್ದು ಅದು ಬಳಕೆದಾರರ ಜೀವನವನ್ನು ಸುಲಭಗೊಳಿಸುತ್ತದೆ. ಜನರು ತಮ್ಮ ಸ್ನೇಹಿತರ ಸಲಹೆಯ ಮೇರೆಗೆ ಕೆಲವು ಅಪ್ಲಿಕೇಶನ್‌ಗಳನ್ನು ಸಹ ಸ್ಥಾಪಿಸುತ್ತಾರೆ. ಆದರೆ ಈ ಆಪ್ ಗಳ ಮೂಲಕ ವೈರಸ್ ಗಳು ನಿಮ್ಮ ಮೊಬೈಲ್ ಗೂ ತಲುಪಬಹುದು.

Common Mistakes While Installing Apps

ಈ ವೈರಸ್‌ಗಳು ಬಳಕೆದಾರರ ಸ್ಮಾರ್ಟ್‌ಫೋನ್‌ಗಳಿಗೆ ಹಾನಿ ಮಾಡುತ್ತವೆ. ಸೈಬರ್ ಅಪರಾಧಿಗಳು (Cyber Crime) ಈ ವೈರಸ್‌ಗಳ ಮೂಲಕ ನಿಮ್ಮನ್ನು ಮೋಸ ಮಾಡಬಹುದು ಅಥವಾ ವಂಚಿಸಬಹುದು. ವೈರಸ್‌ಗಳು ಸ್ಮಾರ್ಟ್‌ಫೋನ್‌ಗಳನ್ನು ಹೇಗೆ ತಲುಪುತ್ತವೆ ಮತ್ತು ಅದನ್ನು ತಪ್ಪಿಸಲು ಪರಿಹಾರವೇನು?

ನಕಲಿ ರೇಟಿಂಗ್‌ ಅಪ್ಲಿಕೇಶನ್ಗಳ ಬಗ್ಗೆ ಪರಿಶೀಲಸಿಕೊಳ್ಳಿ:

ಸಾಮಾನ್ಯವಾಗಿ ಬಳಕೆದಾರರು ಗೂಗಲ್ ಪ್ಲೇ ಅಥವಾ ಆಪ್ ಸ್ಟೋರ್‌ನಿಂದ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುತ್ತಾರೆ. ಆದಾಗ್ಯೂ ಅನೇಕ ಹ್ಯಾಕರ್‌ಗಳು ಇಲ್ಲಿ ಭದ್ರತೆಯನ್ನು ಬೈಪಾಸ್ ಮಾಡಿ ವೈರಸ್ ಸೋಂಕಿತ ಅಪ್ಲಿಕೇಶನ್‌ಗಳನ್ನು ಸಂಗ್ರಹಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಯಾವುದೇ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡುವ ಮೊದಲು ಖಂಡಿತವಾಗಿಯೂ ಅದರ ವಿಮರ್ಶೆಗಳನ್ನು ಪರಿಶೀಲಿಸಿ.

ಆದಾಗ್ಯೂ ಅಧಿಕೃತವಾಗಿ ಬಳಕೆಗೆ ಲಭ್ಯವಿರುವ ಅಪ್ಲಿಕೇಶನ್ ಐದು ★★★★★ ಸ್ಟಾರ್ ರೇಟಿಂಗ್ ಹೊಂದಿರುವುದಿಲ್ಲ ಎಂಬುದನ್ನು ಗಮನದಲ್ಲಿಡಿ. ಅನೇಕ ಬಾರಿ ನಕಲಿ ರೇಟಿಂಗ್‌ಗಳ ಮೂಲಕ ಅಪ್ಲಿಕೇಶನ್ ಅನ್ನು ಟ್ರೆಂಡಿಂಗ್‌ಗೆ ತರಲಾಗುತ್ತದೆ ಇದಕ್ಕಾಗಿ ಡೌನ್ಲೋಡ್ ಮಾಡುವ ಮೊದಲು 1 ನಿಮಿಷ ಆ ಅಪ್ಲಿಕೇಶನ್‌ನ ಡೆವಲಪರ್ ಯಾರೆಂದು ಗೂಗಲ್‌ನಲ್ಲಿ ಸರ್ಚ್ ಮಾಡಿ ಪರಿಶೀಲಿಸಿ ಇದು ಆಪ್ ಕೆಳಗೆ ಸ್ಟೋರ್‌ನಲ್ಲಿಯೇ ಕಾಣಬಹುದು.

Common Mistakes While Installing Apps

APK ಫೈಲ್‌ಗಳ ಬಗ್ಗೆ ಕೊಂಚ ಹೆಚ್ಚು ಗಮನವಿರಲಿ Common Mistakes:

ಕೆಲವೊಮ್ಮೆ ಕೆಲವು ಅಪ್ಲಿಕೇಶನ್‌ಗಳು Google Play Store ಅಥವಾ App Store ನಲ್ಲಿ ಲಭ್ಯವಿರುವುದಿಲ್ಲ. ಆದರೆ ಕೆಲವರು ಸ್ನೇಹಿತರಿಂದ ಪಡೆದ ಲಿಂಕ್‌ಗಳ ಮೂಲಕ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುತ್ತಾರೆ. ಆದಾಗ್ಯೂ ಇದನ್ನು ಮಾಡಬಾರದು. ಕೆಲವು ಜನರು APK ಫೈಲ್‌ನಿಂದ ಅಪ್ಲಿಕೇಶನ್ ಅನ್ನು ಸ್ಥಾಪಿಸುತ್ತಾರೆ. ಇದನ್ನು ತಪ್ಪಾಗಿಯೂ ಮಾಡಬೇಡಿ ಅಥವಾ ಥರ್ಡ್ ಪಾರ್ಟಿ ಸ್ಟೋರ್‌ಗಳಿಂದ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಡಿ. ಹಾಗೆ ಮಾಡುವುದು ಅಪಾಯಕಾರಿಯಾಗಿದ್ದು ಸಮಸ್ಯೆಗಳಿಗೆ ನೀವೇ ದಾರಿ ಮಾಡಿಕೊಡುವಂತಾಗುತ್ತದೆ ಇಂತಹ ಆಪ್ ಗಳ ಮೂಲಕ ಅಪಾಯಕಾರಿ ವೈರಸ್ಗಳು ನಿಮ್ಮ ಸ್ಮಾರ್ಟ್ ಫೋನ್ಗೆ ಪ್ರವೇಶಿಸಬಹುದು.

ಅಪ್ಲಿಕೇಶನ್ Install ಆಗಲು ಕೇಳುವ ಅನುಮತಿಗಳ ಬಗ್ಗೆ ಗಮನವಿರಲಿ:

ನಾವು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಸ್ಥಾಪಿಸಿದಾಗ ಅದು ಹಲವು ರೀತಿಯ ಅನುಮತಿಗಳನ್ನು ಕೇಳುತ್ತದೆ. ಆದಾಗ್ಯೂ ಇದನ್ನು ಮಾಡುವ ಮೊದಲು ನೀವು ಡೌನ್‌ಲೋಡ್ ಮಾಡುತ್ತಿರುವ ಅಪ್ಲಿಕೇಶನ್ ನಿಮ್ಮಿಂದ ಯಾವ ಅನುಮತಿಗಳನ್ನು ತೆಗೆದುಕೊಳ್ಳುತ್ತಿದೆ ಎಂಬುದನ್ನು ನೆನಪಿನಲ್ಲಿಡಿ. ಉದಾಹರಣೆಗೆ ನೀವು ಅಲಾರಾಂ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದರೆ ಸ್ಮಾರ್ಟ್‌ಫೋನ್‌ನಲ್ಲಿ ಫೋಟೋಗಳನ್ನು ವೀಕ್ಷಿಸಲು ಅದಕ್ಕೆ ಅನುಮತಿ ಅಗತ್ಯವಿಲ್ಲ. ಅಂತೆಯೇ ಕ್ಯಾಲ್ಕುಲೇಟರ್ ಅಪ್ಲಿಕೇಶನ್‌ಗೆ ನೆಟ್‌ವರ್ಕ್ ಪ್ರವೇಶ ಅಗತ್ಯವಿಲ್ಲ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :