ಇನ್ಮೇಲೆ iPhone ಖರೀದಿಸಲು ಹೊಸ ವಿಧಾನ! ಮನೆಯಿಂದಲೇ ವಿಡಿಯೋದಲ್ಲೇ ಶಾಪಿಂಗ್ ಮಾಡಿ!

Updated on 17-Mar-2023
HIGHLIGHTS

Apple ಸದ್ಯಕ್ಕೆ ಅಮೇರಿಕಾದಲ್ಲಿನ ಗ್ರಾಹಕರಿಗೆ ಹೊಸ ಲೈವ್ ಶಾಪಿಂಗ್ ಅನುಭವ ನೀಡಿದೆ

ವೀಡಿಯೊ ಮೂಲಕ ಸ್ಪೆಕ್ಲಿಸ್ಟ್‌ನೊಂದಿಗೆ ಈಗ ಐಫೋನ್ ಅನ್ನು ಖರೀದಿಸಬಹುದು

ಆಪಲ್ ತನ್ನ ಹೊಸ ಶಾಪ್ ವಿತ್ ಎ ಸ್ಪೆಷಲಿಸ್ಟ್ ಓವರ್ ವಿಡಿಯೋ ಫೀಚರ್‌ ಅನ್ನು ಬಿಡುಗಡೆ ಮಾಡಿದೆ.

Shop with Specialist: ಇಲ್ಲಿಯವರೆಗೆ ಯಾವುದೇ ಟೆಕ್ ಕಂಪನಿ ಮಾಡಲು ಸಾಧ್ಯವಾಗದಂತಹ ಕೆಲಸವನ್ನು ಆಪಲ್ (Apple) ಮಾಡಿದೆ. ಆಪಲ್ ತನ್ನ ಹೊಸ ಶಾಪ್ ವಿತ್ ಎ ಸ್ಪೆಷಲಿಸ್ಟ್ ಓವರ್ ವಿಡಿಯೋ ಫೀಚರ್‌ ಅನ್ನು ಬಿಡುಗಡೆ ಮಾಡಿದೆ. ಇದುಸದ್ಯಕ್ಕೆ ಅಮೇರಿಕಾದಲ್ಲಿನ ಗ್ರಾಹಕರಿಗೆ ಹೊಸ ಲೈವ್ ಶಾಪಿಂಗ್ ಅನುಭವ ನೀಡಲು ಪರಿಚಯ ಮಾಡಿದೆ. ವೀಡಿಯೊ ಮೂಲಕ ಸ್ಪೆಕ್ಲಿಸ್ಟ್‌ನೊಂದಿಗೆ ಶಾಪಿಂಗ್ ಮಾಡಿ ಐಫೋನ್ ಖರೀದಿಸಲು ಬಯಸುವ ಗ್ರಾಹಕರನ್ನು ರಿಟೇಲ್ ಟೀಮ್ ಸದಸ್ಯರೊಂದಿಗೆ ಏಕಮುಖ ವೀಡಿಯೊ ಶಾಪಿಂಗ್ ಸೆಷನ್ ಮೂಲಕ ಸಂಪರ್ಕಿಸುತ್ತದೆ ಎಂದು ಆಪಲ್ ತನ್ನ ಬ್ಲಾಗ್‌ಪೋಸ್ಟ್‌ನಲ್ಲಿ ತಿಳಿಸಿದೆ.

ಆಪಲ್‌ನ ಹೊಸ ಆಫರ್‌ಗಳ ಮಾಹಿತಿ:

ಈ ಫೀಚರ್‌ನೊಂದಿಗೆ ಜನರು ಇತ್ತೀಚಿನ ಮಾದರಿಗಳನ್ನು ಬ್ರೌಸ್ ಮಾಡಬಹುದು. ಹೊಸ ಫೀಚರ್‌ಗಳನ್ನು ಎಕ್ಸ್‌ಪ್ಲೋರ್ ಮಾಡಬಹುದು ಮತ್ತು ಆಫರ್‌ಗಳು, ಡೀಲ್‌ಗಳು, iOS ಅಪ್‌ಗ್ರೇಡ್‌ಗಳು ಮತ್ತು ಇತರ ಹಣಕಾಸು ಆಯ್ಕೆಗಳನ್ನು Apple ಟ್ರೇಡ್ ನಲ್ಲಿ ಕಲಿಯಬಹುದು. ಆಪಲ್‌ನ ಆನ್‌ಲೈನ್ ರಿಟೇಲ್ ಮುಖ್ಯಸ್ಥ ಕರೆನ್ ರಾಸ್‌ಮುಸ್ಸೆನ್ ರವರು ನಮ್ಮ ಗ್ರಾಹಕರಿಗೆ ಇನ್ನೂ ಹೆಚ್ಚು ವೈಯಕ್ತೀಕರಿಸಿದ ಅನುಭವವನ್ನು ನೀಡಲು ನಾವು ನಿರಂತರವಾಗಿ ಹೊಸತನವನ್ನು ಮಾಡುತ್ತಿದ್ದು ಆಪಲ್‌ನ ಮೂಲಕ ಅತ್ಯುತ್ತಮವಾದದ್ದನ್ನು ನೀಡುತ್ತಿದ್ದೇವೆ. ವೀಡಿಯೊ ಮೂಲಕ ತಜ್ಞರೊಂದಿಗೆ ಶಾಪ್ ಮಾಡಿ ನಮ್ಮ ತಂಡದ ಸದಸ್ಯರು ಗ್ರಾಹಕರೊಂದಿಗೆ ತೊಡಗಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ನಿಮಗೆ ಯಾವ ಐಫೋನ್ ಸೂಕ್ತವೆಂದು ಅವರು ಕಂಡುಕೊಂಡಂತೆ ನಿಮಗೆ ಅತ್ಯುತ್ತಮ ಸೇವೆಯನ್ನು ಒದಗಿಸುತ್ತಾರೆ ಎಂದು ಹೇಳಿದರು.

ಅಧಿಕೃತ ಆಪಲ್ ತಜ್ಞರನ್ನು ಸಂಪರ್ಕಿಸುವುದು ಹೇಗೆ?

ಆಪಲ್ https://www.apple.com/newsroom/2023/03/apple-introduces-shop-with-a-specialist-over-video/ ಗೆ ಭೇಟಿ ನೀಡುವ ಮೂಲಕ ಅತ್ಯುತ್ತಮ iPhone ಮಾಡೆಲ್ ಅನ್ನು ಆಯ್ಕೆಮಾಡಲು ಪರಿಣಿತರ ಸಲಹೆಗಾಗಿ ಗ್ರಾಹಕರು ಆಪಲ್ ತಜ್ಞರನ್ನು ತಕ್ಷಣವೇ ಸಂಪರ್ಕಿಸಬಹುದು. Apple ತಂಡದ ಸದಸ್ಯರು ಇಡೀ ಸೆಶನ್ ನಲ್ಲಿ ತಮ್ಮ ಸ್ಕ್ರೀನ್ ಅನ್ನು ಕ್ಯಾಮರಾದಲ್ಲಿ ಹಂಚಿಕೊಳ್ಳುತ್ತಾರೆ. ಆದರೆ ಅವರು ಗ್ರಾಹಕರನ್ನು ನೋಡಲು ಸಾಧ್ಯವಾಗುವುದಿಲ್ಲ. ಗ್ರಾಹಕರು ಸೆಷನ್ ಲಭ್ಯವಿಲ್ಲ ಎಂದು ಕಂಡುಕೊಂಡರೆ ಅಥವಾ ಸಂಸ್ಥೆಯ ಪ್ರಕಾರ ವ್ಯಾಪಾರ ಸಮಯದ ನಂತರ ಪುಟವನ್ನು ಪ್ರವೇಶಿಸಿದರೆ ಅವರು ಫೋನ್ ಮೂಲಕ ಅಥವಾ ಚಾಟ್ ಮೂಲಕ ದಿನದ 24 ಗಂಟೆಗಳ ಕಾಲ ಪರಿಣಿತರನ್ನು ಸಂಪರ್ಕಿಸಬಹುದು ಎಂದು ಕಂಪನಿ ಹೇಳಿದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :