Amazon Prime Video ಬಳಕೆದಾರರಿಗೆ ಹೊಸ ಅಪ್ಡೇಟ್‍ನಲ್ಲಿ ಭಾರಿ ಬದಲಾವಣೆಗೆ ಸಜ್ಜು | Tech News

Amazon Prime Video ಬಳಕೆದಾರರಿಗೆ ಹೊಸ ಅಪ್ಡೇಟ್‍ನಲ್ಲಿ ಭಾರಿ ಬದಲಾವಣೆಗೆ ಸಜ್ಜು | Tech News
HIGHLIGHTS

ಅಮೆಜಾನ್ ಪ್ರೈಮ್ ವಿಡಿಯೋ (Amazon Prime Video) ಚಂದದಾರರಿಗೆ ಹೊಸ ವರ್ಷದಿಂದ ಭಾರಿ ಬದಲಾವಣೆ

ಈ ಬದಲಾವಣೆಯು ಹೊಸ 2024 ವರ್ಷದಿಂದ 29ನೇ ಜನವರಿ ನಂತರ ಜಾರಿಗೆ ಬರುವ ನಿರೀಕ್ಷೆಗಳಿವೆ.

ಭಾರತದಲ್ಲಿ ಜನಪ್ರಿಯ OTT ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್ ವಿಡಿಯೋ (Amazon Prime Video) ಈಗ ತಮ್ಮ ಚಂದಾದಾರಿಕೆಯನ್ನು ಪಡೆಯುವ ಬಳಕೆದಾರರಿಗಾಗಿ ಹೊಸ 2024 ವರ್ಷದಿಂದ ದೊಡ್ಡ ಬದಲಾವಣೆಯನ್ನು ಮಾಡಲು ಸಜ್ಜಾಗಿದೆ. ಆದರೆ ಈ ಬದಲಾವಣೆ ಬಳಕೆದಾರರಿಗೆ ತಲೆನೋವನ್ನು ನೀಡಲಿದೆ. ಏಕೆಂದರೆ ಈಗ ನಿಮ್ಮ ಸಿನಿಮಾ ಮತ್ತು ಶೋಗಳನ್ನು ವೀಕ್ಷಿಸುವಾಗ ಜಾಹೀರಾತುಗಳನ್ನು ತೋರಿಸಲಾಗುತ್ತದೆ ಎಂದು ಬೆಳಕಿಗೆ ಬಂದಿದೆ. ಈ ಬದಲಾವಣೆಯು ಹೊಸ 2024 ವರ್ಷದಿಂದ 29ನೇ ಜನವರಿ ನಂತರ ಜಾರಿಗೆ ಬರುವ ನಿರೀಕ್ಷೆಗಳಿವೆ.

Also Read: Redmi Note 13 Series ಮತ್ತು Vivo X100 Series ಬಿಡುಗಡೆಗೆ ಡೇಟಾ ಫಿಕ್ಸ್! ನಿರೀಕ್ಷಿತ ಬೆಲೆ ಮತ್ತು ಫೀಚರ್‌ಗಳೇನು?

Amazon Prime Video ಬಳಕೆದಾರರಿಗೆ ಹೊಸ ಅಪ್ಡೇಟ್‍

ಕಂಪನಿಯು ಮುಂದಿನ ವರ್ಷ ತನ್ನ ಆದಾಯವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ ಮತ್ತು ಈ ದಿಕ್ಕಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಸೀಮಿತ ಜಾಹೀರಾತು ವಿಷಯವನ್ನು ಚಂದಾದಾರರಿಗೆ ನಡುವೆ ತೋರಿಸಲಾಗುತ್ತದೆ. ವೀಡಿಯೊಗಳು ಮತ್ತು ಶೋಗಳ ನಡುವೆ ಜಾಹೀರಾತುಗಳನ್ನು ನೋಡಲು ಬಯಸದ ಚಂದಾದಾರರು ಪ್ರತಿ ತಿಂಗಳು $2.99 (ಸುಮಾರು ರೂ 250) ಪಾವತಿಸಬೇಕಾಗುತ್ತದೆ. ಸದ್ಯಕ್ಕೆ ಅಮೇರಿಕಾದಲ್ಲಿ ಈ ಬದಲಾವಣೆಯನ್ನು ಆರಂಭಿಸಲಾಗಿದೆ.

Amazon Prime Video

ಇದೇ ಕಾರಣಕ್ಕಾಗಿ ಭಾರಿ ಬದಲಾವಣೆ

ಅಂದ್ರೆ ಈಗ OTT ಪ್ಲಾಟ್‌ಫಾರ್ಮ್‌ನಲ್ಲಿ ನೀವು ವೀಕ್ಷಿಸುವ ಪ್ರತಿಯೊಂದು ಸಿನಿಮಾ, ವೀಡಿಯೊಗಳು ಮತ್ತು ಶೋಗಳಲ್ಲಿ ಜಾಹೀರಾತುಗಳನ್ನು ನೀಡಲಿದ್ದು ಇದರಿಂದ ಬರುವ ಆದಾಯವನ್ನು ಹೊಸ ಮತ್ತು ಉತ್ತಮ ಕಂಟೆಂಟ್‌ಗಳಲ್ಲಿ ಹೂಡಿಕೆ ಮಾಡಲಾಗುವುದು ಮತ್ತು ಬಳಕೆದಾರರು ದೀರ್ಘಕಾಲದವರೆಗೆ ಮನರಂಜನಾ ಸೇವೆಗಳನ್ನು ಪಡೆಯುವುದನ್ನು ಮುಂದುವರಿಸುತ್ತೆಂದು ಕಂಪನಿ ಹೇಳಿದೆ. ವಾಸ್ತವವಾಗಿ ಪ್ಲಾಟ್‌ಫಾರ್ಮ್ ತನ್ನ ಮೂಲ ಶೋಗಳು ಮತ್ತು ಕಂಟೆಂಟ್‌ಗಳಿಗಾಗಿ ದೊಡ್ಡ ಮೊತ್ತವನ್ನು ಖರ್ಚು ಮಾಡುವುದರಿಂದಲೇ ಅನೇಕ Amazon Original ಸೀರೀಸ್ ಉತ್ತಮವಾಗಿ ಸ್ವೀಕರಿಸಲ್ಪಟ್ಟಿವೆ ಎಂದು ಕಂಪನಿ ಹೇಳಿದೆ.

ಇಮೇಲ್ ಕಳುಹಿಸುವ ಮೂಲಕ ನೀಡಿದ ಮಾಹಿತಿ

ಹೊಸ ಬದಲಾವಣೆಯನ್ನು ಜಾರಿಗೆ ತರಲು ಹೊರಟಿರುವ ಚಂದಾದಾರರಿಗೆ ಈ ಬಗ್ಗೆ ಇಮೇಲ್ ಕಳುಹಿಸುವ ಮೂಲಕ ತಿಳಿಸಲಾಗಿದೆ ಕಂಪನಿ ಇದನ್ನು ಉಲ್ಲೇಖಿಸಲಾಗಿದೆ. ಇತರ ಸ್ಟ್ರೀಮಿಂಗ್ ಟಿವಿ ಪೂರೈಕೆದಾರರು ಮತ್ತು ಸೇವೆಗಳಿಗೆ ಹೋಲಿಸಿದರೆ ಅವರಿಗೆ ಕಡಿಮೆ ಜಾಹೀರಾತುಗಳನ್ನು ತೋರಿಸಲಾಗುತ್ತದೆ ಎಂದು ಪ್ಲಾಟ್‌ಫಾರ್ಮ್ ಈ ಇಮೇಲ್‌ನಲ್ಲಿ ಬರೆದಿದೆ. ಇದರ ಹೊರತಾಗಿ ಬಳಕೆದಾರರು ಪ್ರತ್ಯೇಕವಾಗಿ ಏನನ್ನೂ ಮಾಡಬೇಕಾಗಿಲ್ಲ ಮತ್ತು ಪ್ರೈಮ್ ಸದಸ್ಯತ್ವದ ಬೆಲೆಯಲ್ಲಿ ಯಾವುದೇ ಬದಲಾವಣೆಯಿಲ್ಲ. ಸ್ಪಷ್ಟವಾಗಿ ಚಂದಾದಾರಿಕೆಯು ಮೊದಲಿನಂತೆ ಪ್ರಸ್ತುತ ಬೆಲೆಯಲ್ಲಿ ಲಭ್ಯವಿರುತ್ತದೆ ಆದರೆ ಜಾಹೀರಾತುಗಳನ್ನು ನೋಡಬೇಕಾಗುತ್ತದೆ. ಚಂದಾದಾರರು ಜಾಹೀರಾತುಗಳನ್ನು ನೋಡಲು ಬಯಸದಿದ್ದರೆ ಅವರು ಹೆಚ್ಚುವರಿ ಹಣವನ್ನು ಪಾವತಿಸಬೇಕಾಗುತ್ತದೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo