ಭಾರತದಲ್ಲಿ ಅಮೆಜಾನ್ ತಮ್ಮ ಸೇವೆಗಳಲ್ಲಿ ಬೆಲೆ ಯಾವಾಗಲೂ ಬದಲಾವಣೆ ಆಗುತ್ತಿರುತ್ತದೆ. ಇ-ಕಾಮರ್ಸ್ ಇತ್ತೀಚೆಗೆ ಅಮೆಜಾನ್ ಪ್ರೈಮ್ (Amazon Prime) ಹೆಚ್ಚಿನ ಗ್ರಾಹಕರನ್ನು ಸೆಳೆಯುವ ಪ್ರಯತ್ನದಲ್ಲಿ ತನ್ನ ಪ್ರೈಮ್ ಚಂದಾದಾರಿಕೆಗೆ ರಿಯಾಯಿತಿ ಬೆಲೆಗಳನ್ನ ಘೋಷಿಸಿತು. ಆದರೆ ಅಮೆಜಾನ್ ಪ್ರೈಮ್ ತನ್ನ ಯೋಜನೆಗಳ ಬೆಲೆಯನ್ನು ಮತ್ತೊಮ್ಮೆ ಬದಲಾವಣೆ ಮಾಡಿದೆ. ಹೊಸ ಬೆಲೆಯನ್ನು ಹಿಂದಿನ ಬೆಲೆಗಳಿಗೆ ಹೋಲಿಸಿದರೆ ಭಾರಿ ಬೆಲೆ ಹೆಚ್ಚಳವಾಗಿದೆ. ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಖರೀದಿಸಲು ಬಯಸಿದರೆ ನೀವು ಈಗ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ.
ಭಾರತದಲ್ಲಿ ಅಮೆಜಾನ್ ಪ್ರೈಮ್ (Amazon Prime) ಚಂದಾದಾರಿಕೆಯ ವೆಚ್ಚವು ಈಗ 299 ರೂವಿನಿಂದ ಪ್ರಾರಂಭವಾಗುತ್ತದೆ. ಈ ಬೆಲೆಯು ಡಿಸೆಂಬರ್ 2021 ರಲ್ಲಿ ಘೋಷಿಸಲಾದ 179 ರೂ ಬೆಲೆಗಿಂತ ಹೆಚ್ಚಾಗಿದೆ. ಈ ಸೂಚನೆಯ ಪ್ರಕಾರ ಕಂಪನಿಯು ತನ್ನ ಬೆಲೆಯನ್ನು 120 ರೂವಿನಷ್ಟು ಹೆಚ್ಚಿಸಿದೆ. ಮೂರು ತಿಂಗಳ ಅಮೆಜಾನ್ ಪ್ರೈಮ್ ಯೋಜನೆಗೆ ನೀವು ಈಗ 599 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಇದನ್ನು ಮೊದಲು 459 ರೂಗಳಿಗೆ ನೀಡಲಾಗುತ್ತಿತ್ತು. ಅಂದರೆ ಈಗ ಈ ಅಮೆಜಾನ್ ಪ್ರೈಮ್ ಯೋಜನೆಯ ಬೆಲೆ 140 ರೂವಿನಷ್ಟು ಹೆಚ್ಚಿಸಿದೆ. ವಾರ್ಷಿಕ ಸದಸ್ಯತ್ವದ ಯೋಜನೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.
ಅಮೆಜಾನ್ ಪ್ರೈಮ್ (Amazon Prime) ಸದಸ್ಯರು ಪ್ರೈಮ್ ಶಿಪ್ಪಿಂಗ್ ಅನ್ನು ಬಳಸಲು ಸಾಧ್ಯವಾಗುತ್ತದೆ. ಇದು ಉಚಿತ ಗ್ರಾಹಕರಿಗೆ ಲಭ್ಯವಿರುವುದಕ್ಕಿಂತ ಮೂಲತಃ ಪಾವತಿಸದ ಬಳಕೆದಾರರಿಗೆ ವೇಗವಾಗಿ ತಲುಪುತ್ತದೆ. ಹೆಚ್ಚುವರಿಯಾಗಿ ಬಳಕೆದಾರರು ಅಮೆಜಾನ್ ಫ್ಯಾಮಿಲಿ, ಪ್ರೈಮ್ ರೀಡಿಂಗ್, ಪ್ರೈಮ್ ಗೇಮಿಂಗ್, ಪ್ರೈಮ್ ವಿಡಿಯೋ, ಪ್ರೈಮ್ ಮ್ಯೂಸಿಕ್ ಮತ್ತು ಪ್ರೈಮ್ ಡೀಲ್‌ಗಳನ್ನು ಸಹ ಬಳಸಬಹುದು.
ನೆಟ್‌ಫ್ಲಿಕ್ಸ್ ನಲ್ಲಿ ಒಟ್ಟು ನಾಲ್ಕು ಆಯ್ಕೆಗಳಿವೆ. ಪ್ರತಿಯೊಂದು ಆಯ್ಕೆಯು ಅನ್‌ಲಿಮಿಟೆಡ್ ಆಗಿದ್ದು ನೀವು ತಿಂಗಳಿಗೆ ಕೇವಲ 149 ರೂವಿಗೆ "ಮೊಬೈಲ್" ಮೂಲ ಯೋಜನೆಯಿಂದ ಭಾರತದಲ್ಲಿ ನೆಟ್‌ಫ್ಲಿಕ್ಸ್‌ಗೆ ಚಂದಾದಾರರಾಗಬಹುದು. ಒಂದೇ ಸಮಯದಲ್ಲಿ ವಿಡಿಯೋ ವೀಕ್ಷಿಸಲು ಒಂದು ಫೋನ್ ಅಥವಾ ಟ್ಯಾಬ್ಲೆಟ್ ಅನ್ನು ಸಹ ನೀವು ಬಳಸಬಹುದು. ನೆಟ್‌ಫ್ಲಿಕ್ಸ್ ನ ಮೂಲ ಯೋಜನೆಯ ತಿಂಗಳ ವೆಚ್ಚವು 199 ರೂ ಆಗಿದೆ. ಇದರಲ್ಲಿ ನೀವು ಒಂದು ಸಮಯದಲ್ಲಿ ಯಾವುದಾದರೂ ಒಂದು ಬೆಂಬಲಿತ ಡಿವೈಸ್‌ನ ಮೂಲಕ HD ಗುಣಮಟ್ಟದಲ್ಲಿ ವಿಡಿಯೋ ವೀಕ್ಷಿಸಬಹುದು. ಅಂದರೆ ಟ್ಯಾಬ್ಲೆಟ್, ಫೋನ್, ಲ್ಯಾಪ್‌ಟಾಪ್ ಮತ್ತು ಟಿವಿ ಮೂಲಕ ನೀವು ವಿಡಿಯೋ ವೀಕ್ಷಿಸಬಹುದು.