Amazon Sale 2023: ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಕಂಫಾರ್ಮ್! ಆಕರ್ಷಕ ಡೀಲ್ ಇಂದಿನಿಂದ ಲಭ್ಯ | Tech News

Amazon Sale 2023: ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಕಂಫಾರ್ಮ್! ಆಕರ್ಷಕ ಡೀಲ್ ಇಂದಿನಿಂದ ಲಭ್ಯ | Tech News
HIGHLIGHTS

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನ ಹೊಸ ದಿನಾಂಕವನ್ನು ಕಂಪನಿ ಈಗ ಪ್ರಕಟಿಸಿದ್ದು

ಅಮೆಜಾನ್ ಪ್ರೈಮ್ ಸದಸ್ಯರು ಅಕ್ಟೋಬರ್ 7 ಮಧ್ಯರಾತ್ರಿಯಿಂದ ಮಾರಾಟಕ್ಕೆ ಆರಂಭಿಕ ಪ್ರವೇಶವನ್ನು ಪಡೆಯಲಿದ್ದಾರೆ

ಅಮೆಜಾನ್ ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ವಾಚ್‌, ಗೃಹೋಪಯೋಗಿ ವಸ್ತು ಮತ್ತು ಇತರ ಎಲೆಕ್ಟ್ರಾನಿಕ್ ಡಿವೈಸ್‌ಗಳ ಮೇಲೆ ಭಾರಿ ಆಫರ್

ಅಮೆಜಾನ್ ತನ್ನ ಗ್ರಾಹಕರಿಗೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನ (Amazon Sale 2023) ಹೊಸ ದಿನಾಂಕವನ್ನು ಪ್ರಕಟಿಸಿದೆ. ಈ ಸೇಲ್ 8 ಅಕ್ಟೋಬರ್ 2023 ರಂದು ಪ್ರಾರಂಭವಾಗಲಿದೆ. ಈ ಮಾರಾಟದ ಸಮಯದಲ್ಲಿ ಗ್ರಾಹಕರು ಎಲೆಕ್ಟ್ರಾನಿಕ್ ಡಿವೈಸ್‌ಗಳ ಮೇಲೆ ಭಾರಿ ರಿಯಾಯಿತಿಗಳನ್ನು ಪಡೆಯಬಹುದು. ಇದರಲ್ಲಿ ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ವಾಚ್‌, ಗೃಹೋಪಯೋಗಿ ವಸ್ತು ಮತ್ತು ಇತರ ಎಲೆಕ್ಟ್ರಾನಿಕ್ ಡಿವೈಸ್‌ಗಳ ಮೇಲೆ ಭಾರಿ ಆಫರ್ ಪಡೆಯಬಹುದು. ಇದರೊಂದಿಗೆ ಈಗಾಗಲೇ ಅಕ್ಟೋಬರ್ 8 ರಿಂದ ಅಕ್ಟೋಬರ್ 15 ರವರೆಗೆ ಪ್ರಾರಂಭವಾಗಲಿರುವ ತನ್ನ ಮಾರಾಟದ ದಿನಾಂಕವನ್ನು ಫ್ಲಿಪ್‌ಕಾರ್ಟ್ ಇಂದು ತಿಳಿಸಿದೆ. ಫ್ಲಿಪ್‌ಕಾರ್ಟ್ (Flipkart) ಪ್ರಕಟಣೆಯ ನಂತರವೇ ಅಮೆಜಾನ್ ತನ್ನ ಮಾರಾಟದ ಹೊಸ ದಿನಾಂಕದ ಬಗ್ಗೆ ತಿಳಿಸಿತು. ಇದರಿಂದ ಫ್ಲಿಪ್‌ಕಾರ್ಟ್ ಮಾರಾಟದ ದಿನಾಂಕ ಬಹಿರಂಗಗೊಂಡ ನಂತರ ಅಮೆಜಾನ್ ಈ ಬದಲಾವಣೆಯನ್ನು ಮಾಡಿದೆ.

Also Read: Flipkart Sale 2023: ಇವೇ ನೋಡಿ ಸುಮಾರು 10,000 ರೂಗಳೊಳಗಿನ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು

ಪ್ರೈಮ್ ಸದಸ್ಯರು ವಿಶೇಷ ಪ್ರಯೋಜನಗಳು

ಅಮೆಜಾನ್ ಈ ವರ್ಷದ ಜನಪ್ರಿಯ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದ ಆರಂಭವನ್ನು ಹೇಳಿದ್ದು ಇದರ ಕೊನೆಯ ದಿನಾಂಕವನ್ನು ಕಂಪನಿ ಇನ್ನೂ ಬಹಿರಂಗಪಡಿಸಲಾಗಿಲ್ಲ. ಆದರೆ ಎಂದಿನಂತೆ ಮೊದಲಿಗೆ ಅಮೆಜಾನ್ ಪ್ರೈಮ್ ಸದಸ್ಯರು ಅಕ್ಟೋಬರ್ 7 ಮಧ್ಯರಾತ್ರಿಯಿಂದ ಮಾರಾಟಕ್ಕೆ ಆರಂಭಿಕ ಪ್ರವೇಶವನ್ನು ಪಡೆಯುತ್ತಾರೆ. ಆನ್‌ಲೈನ್ ಇ-ಕಾಮರ್ಸ್ ತನ್ನ ವೆಬ್‌ಸೈಟ್‌ನಲ್ಲಿ ಕೆಲವು ಡೀಲ್‌ಗಳು ಮತ್ತು ರಿಯಾಯಿತಿಗಳ ಬಗ್ಗೆ ಮಾಹಿತಿಯನ್ನು ನೀಡಿದೆ.

Amazon Great Indian Festival Sale 2023

ಎಲ್ಲ ಗ್ರಾಹಕರಿಗೆ ವಿಶೇಷ ಆಫರ್ ಮತ್ತು ಡಿಸ್ಕೌಂಟ್‌ಗಳು

ನೀವು SBI ಕಾರ್ಡ್‌ನಲ್ಲಿ ಯಾವುದೇ ಉತ್ಪನ್ನವನ್ನು ಖರೀದಿಸಿದರೆ ನೀವು ಶೇಕಡಾ 10% ರಷ್ಟು ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಈ ಸೇಲ್‌ನಲ್ಲಿ ಮೊಬೈಲ್ ಫೋನ್‌ಗಳು ಮತ್ತು ಪರಿಕರಗಳ ಮೇಲೆ ಶೇಕಡಾ 40% ರಷ್ಟು ರಿಯಾಯಿತಿಯನ್ನು ಸಹ ನೀಡಲಾಗುತ್ತಿದೆ. ಇದರೊಂದಿಗೆ ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್‌ವಾಚ್‌ಗಳು ಇತ್ಯಾದಿಗಳ ಮೇಲೆ ಶೇಕಡಾ 75% ರಷ್ಟು ರಿಯಾಯಿತಿ ನೀಡಲಾಗುವುದು. Apple, Asus, Lenovo, OnePlus, iQoo, Realme, Samsung, boAt ಮತ್ತು Sony ಸೇರಿದಂತೆ ಹಲವು ಬ್ರಾಂಡ್‌ಗಳ ಡಿವೈಸ್‌ಗಳ ಬೆಲೆಗಳಲ್ಲಿ ನೀವು ರಿಯಾಯಿತಿಗಳನ್ನು ಪಡೆಯಬಹುದು.

Also Read: iPhone 15 Pro ಖರೀದಿಸುವ ಯೋಚನೆಯಲ್ಲಿದ್ದೀರಾ? ಮೊದಲು ಫೋನ್‌ನಲ್ಲಿನ Weird ಸಮಸ್ಯೆಗಳೇನು ತಿಳಿದುಕೊಳ್ಳಿ

ಅಮೆಜಾನ್ ಈ ಡಿವೈಸ್‌ಗಳಲ್ಲಿ ಭಾರಿ ರಿಯಾಯಿತಿ ಲಭ್ಯ

ಗ್ರೇಟ್ ಇಂಡಿಯನ್ ಫೆಸ್ಟಿವಲ್ 2023 ಮಾರಾಟಕ್ಕೆ ತಯಾರಿ ನಡೆಸುತ್ತಿರುವ ಕಂಪನಿಯು ತನ್ನ ಇ-ಕಾಮರ್ಸ್ ಸೈಟ್‌ನಲ್ಲಿ ಹಲವಾರು ಕಿಕ್‌ಸ್ಟಾರ್ಟರ್ ಡೀಲ್‌ಗಳನ್ನು ಲೈವ್ ಮಾಡಿದೆ. ಡೀಲ್‌ಗಳನ್ನು ಮಾರಾಟದ ಸಮಯದಲ್ಲಿ Samsung Galaxy S23, Nokia G42 5G, Motorola Razr 40, Tecno Pova 5 Pro, Redmi 10 Power ಮತ್ತು Lava Agni 2 ನಲ್ಲಿ ರಿಯಾಯಿತಿಗಳು ಸಹ ಲಭ್ಯವಿರುತ್ತವೆ ಎಂದು ತಿಳಿದುಬಂದಿದೆ. ಇದರ ಹೊರತಾಗಿ OnePlus Nord 3, Samsung Galaxy M34 5G ಮತ್ತು Redmi 12 5G ಸಹ ಈವೆಂಟ್‌ನಲ್ಲಿ ಕಡಿಮೆ ಬೆಲೆಯಲ್ಲಿ ಲಭ್ಯವಿರಬಹುದು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo