
ಮುಂಬರುವ ಮಾರಾಟಕ್ಕಾಗಿ Amazon India ಸ್ಯಾಮ್‌ಸಂಗ್ ಮತ್ತು ಇಂಟೆಲ್‌ನೊಂದಿಗೆ ಪಾಲುದಾರಿಕೆ ಹೊಂದಿದೆ
ಅಮೆಜಾನ್ ಈ ಮಾರಾಟದವನ್ನು ಸದ್ಯಕ್ಕೆ Coming Soon ಎಂದು ತೋರಿಸಿದೆ. ಅಂದ್ರೆ ಅತಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ.
ಅಮೆಜಾನ್ ಇ-ಕಾಮರ್ಸ್ SBI ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಶೇಕಡಾ 10% ರಷ್ಟು ರಿಯಾಯಿತಿಯನ್ನು ಖಚಿತಪಡಿಸಿದೆ.
ಭಾರತದಲ್ಲಿ ಅಮೆಜಾನ್ ಇಂಡಿಯನ್ ತನ್ನ ಮುಂಬರಲಿರುವ ಹೊಸ ಮಾರಾಟವನ್ನು ಅತಿ ಶೀಘ್ರದಲ್ಲೇ ಆರಂಭಿಸುವ ಮಾಹಿತಿ ಎಲ್ಲೇಡೆ ಹರಡಿಕೊಂಡಿದೆ. ಅಮೆಜಾನ್ ತನ್ನ ಮುಂಬರುವ ಫೆಸ್ಟಿವಲ್ ಸೇಲ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ (Amazon Great Indian Festival sale 2023) ಅನ್ನು ಅಧಿಕೃತವಾಗಿ ಪ್ರಚಾರ ಮಾಡಲು ಈಗಾಗಲೇ ಪ್ರಾರಂಭಿಸಿದೆ. ಅಮೆಜಾನ್ ಮತ್ತು ಟ್ವಿಟ್ಟರ್ ಅಧಿಕೃತ ಖಾತೆಗಳಲ್ಲಿ ತನ್ನ ಈ ಮಾರಾಟದ ಬಗ್ಗೆ ಬ್ಯಾನರ್ ಅನ್ನು ಹಂಚಿಕೊಂಡಿದ್ದು ಈ ಮಾರಾಟದವನ್ನು ಸದ್ಯಕ್ಕೆ Coming Soon ಎಂದು ತೋರಿಸಿದೆ. ಅಂದ್ರೆ ಅತಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ.
ಮೊದಲಿಗೆ ಅಮೆಜಾನ್ ಪ್ರೈಮ್ ಸದಸ್ಯರಿಗೆ ಪ್ರವೇಶ
ಅಮೆಜಾನ್ ಮಾರಾಟ ರೂಢಿಯಂತೆ ಮೊದಲು ಅಮೆಜಾನ್ ಪ್ರೈಮ್ ಚಂದಾದಾರರಿಗೆ ಪ್ರವೇಶವನ್ನು ನೀಡಲಾಗುವುದು. ಮುಂಬರುವ ಮಾರಾಟಕ್ಕಾಗಿ Amazon India ಸ್ಯಾಮ್‌ಸಂಗ್ ಮತ್ತು ಇಂಟೆಲ್‌ನೊಂದಿಗೆ ಪಾಲುದಾರಿಕೆ ಹೊಂದಿದೆ. ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸಮಯದಲ್ಲಿ Samsung ಉತ್ಪನ್ನಗಳು ಮತ್ತು ಇಂಟೆಲ್-ಪ್ರೊಸೆಸರ್ ಆಧಾರಿತ ಕಂಪ್ಯೂಟರ್‌ಗಳ ಮೇಲೆ ಅತ್ಯಾಕರ್ಷಕ ಡೀಲ್‌ಗಳು ಮತ್ತು ರಿಯಾಯಿತಿಗಳ ಸುಳಿವನ್ನು ಸಹ ನೀಡುತ್ತದೆ. ಫ್ಲಿಪ್‌ಕಾರ್ಟ್‌ಗೆ ತದ್ವಿರುದ್ಧವಾಗಿ ಅಮೆಜಾನ್ ಮುಂಬರುವ ಮಾರಾಟದ ಕುರಿತು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ.
Keep your festive shopping list ready for the #AmazonGreatIndianFestival.
— Amazon India (@amazonIN) September 25, 2023
Find great deals on all your favourite brands, shop with No Cost EMI, and enjoy exclusive bank offers. This festive season, jab dibbey khulenge, khulengi khushiyan. #AmazonGreatIndianFestival, coming soon.… pic.twitter.com/LwZ825QVDe
ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಬ್ಯಾಂಕ್ ಆಫರ್‌ಗಳು
ಮುಂಬರುವ ಫೆಸ್ಟಿವಲ್ ಸೇಲ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ (Amazon Great Indian Festival sale 2023) ಇ-ಕಾಮರ್ಸ್ ದೈತ್ಯ SBI ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಶೇಕಡಾ 10% ರಷ್ಟು ರಿಯಾಯಿತಿಯನ್ನು ಖಚಿತಪಡಿಸಿದೆ. ವಿವಿಧ ವರದಿಗಳ ಪ್ರಕಾರ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2023 ಅಕ್ಟೋಬರ್ 10 ರಂದು ಪ್ರಾರಂಭವಾಗಲಿದೆ. ಶಾಪರ್‌ಗಳು ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಗೃಹೋಪಯೋಗಿ ಉಪಕರಣಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಉತ್ಪನ್ನಗಳ ಮೇಲೆ ಗಮನಾರ್ಹ ರಿಯಾಯಿತಿಗಳನ್ನು ನಿರೀಕ್ಷಿಸಬಹುದು.
ಈ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಆಫರ್‌ಗಳು
ಅಮೆಜಾನ್ ಮಾರಾಟದಲ್ಲಿ OnePlus 11, Samsung Galaxy S23 ಮತ್ತು Motorola Razr 40 Ultra ನಂತಹ ಜನಪ್ರಿಯ ಸ್ಮಾರ್ಟ್‌ಫೋನ್‌ಗಳು ಗಣನೀಯ ಬೆಲೆ ಕಡಿತವನ್ನು ಪಡೆಯುವ ನಿರೀಕ್ಷೆಯಿದೆ. ಹೆಚ್ಚುವರಿಯಾಗಿ iPhone 13 ಮತ್ತು iPhone 14 ಸರಣಿಯ ಮಾದರಿಗಳು ಸೇರಿದಂತೆ ವಿವಿಧ Apple ಪ್ರಾಡಕ್ಟ್‌ಗಳ ಮೇಲಿನ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ಸಹ ನಿರೀಕ್ಷಿಸಲಾಗಿದೆ. ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನ ಮುಂಬರುವ ಮಾರಾಟಗಳು ದೀಪಗಳ ಹಬ್ಬವಾದ ದೀಪಾವಳಿಯನ್ನು ಆಚರಿಸಲು ಹೊಸ ಗ್ಯಾಜೆಟ್‌ಗಳು ಮತ್ತು ಗೃಹೋಪಯೋಗಿ ಉಪಕರಣಗಳನ್ನು ಖರೀದಿಸಲು ಯೋಜಿಸುವವ ಆಸೆಯನ್ನು ಪೂರೈಸಲಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile