ಇನ್ನೂ ಈ ಅಮರಾನ್ (Amaran) ಸಿನಿಮಾವನ್ನು ವೀಕ್ಷಿಸದಿದ್ದರೆ ಯಾವಾಗ ವೀಕ್ಷಿಸುವಿರಿ ಕಮೆಂಟ್ ಮಾಡಬಹುದು.
ಈ ಲೇಟೆಸ್ಟ್ Amaran ಸಿನಿಮಾವನ್ನು ಇಂದಿನಿಂದ Netflix ಮೂಲಕ ಫ್ಯಾಮಿಲಿ ಜೊತೆ ಮೂಲಕ ವೀಕ್ಷಿಸಲು ಲಭ್ಯವಿದೆ
Amaran ಸಿನಿಮಾ ಭಾರತೀಯ ಸೇನೆಯಲ್ಲಿದ್ದ (Major Mukund Varadarajan) ಮೇಜರ್ ಮುಕುಂದ್ ವರದರಾಜನ್ ರಿಯಲ್ ಸ್ಟೋರಿ.
Amaran on OTT: ಭಾರತದಲ್ಲಿ ಕಳೆದ ಎರಡು ತಿಂಗಳ ಹಿಂದೆ ಅಂದ್ರೆ 31ನೇ ಅಕ್ಟೋಬರ್ 2024 ರಂದು ಬಿಡುಗಡೆಯಾಗಿ ಯಶಸ್ವಿಗೊಂಡ ಈ ಅಮರಾನ್ (Amaran) ಸಿನಿಮಾಕ್ಕಾಗಿ ಸಿನಿಮಾ ಮಂದಿರಗಳಿಗೆ ಹೋಗಲು ಸಮಯದ ಅಭಾವದಿಂದಾಗಿ ಮಿಸ್ ಮಾಡಿಕೊಂಡು ಅನೇಕ ಪ್ರೇಕ್ಷಕರ ಮುಂದೆ ಇಂದಿನಿಂದ ಅಂದ್ರೆ 5ನೇ ಡಿಸೆಂಬರ್ 2024 ರಿಂದ ಪ್ರತ್ಯೇಕವಾಗಿ Netflix ಮೂಲಕ ಫ್ಯಾಮಿಲಿ ಜೊತೆ ವೀಕ್ಷಿಸಲು ಲಭ್ಯವಿರುತ್ತದೆ. ಈ ಅಮರಾನ್ (Amaran) ಸಿನಿಮಾ ಭಾರತೀಯ ಸೇನೆಯಲ್ಲಿದ್ದ (Major Mukund Varadarajan) ಮೇಜರ್ ಮುಕುಂದ್ ವರದರಾಜನ್ ರವರ ರಿಯಲ್ ಸ್ಟೋರಿಯಾಗಿದೆ.
ಅಮರಾನ್ (Amaran) ಶಿಫಾರಸು ಮಾಡಲಾಗುವ ಸಿನಿಮಾ:
ಸಾಯಿ ಪಲ್ಲವಿ ಮತ್ತು ಶಿವಕಾರ್ತಿಕೇಯನ್ ಅಭಿನಯದ ಈ ಅಮರಾನ್ (Amaran) ಚಿತ್ರ ಥಿಯೇಟರ್ ಯಶಸ್ಸು ಕಡಿಮೆಯಾಗುತ್ತಿದ್ದಂತೆ ಅಭಿಮಾನಿಗಳು ಇದರ OTT ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಅಮರನ್ OTT ಬಿಡುಗಡೆ ದಿನಾಂಕ ಕಳೆದ ಕೆಲವು ದಿನಗಳಿಂದ ಗೂಗಲ್ ಸರ್ಚ್‌ನಲ್ಲಿ ಭಾರಿ ಟ್ರೆಂಡಿಂಗ್ ಆಗಿದೆ. ಭಾರತೀಯ ಸೇನೆಯಲ್ಲಿದ್ದ (Major Mukund Varadarajan) ಮೇಜರ್ ಮುಕುಂದ್ ವರದರಾಜನ್ ನಂತಹ ಮಹಾನ್ ಯೋಧರನ್ನು ಗುರುತಿಸಿ ಜನಸಾಮಾನ್ಯರಿಗೆ ಅವರ ಬಗ್ಗೆ ಅರಿವು ಮೂಡಿಸಿದ ನಿರ್ಮಾಪಕ ರಾಜಕುಮಾರ್ ಪೇರಿಯಾಸಾಮಿಯವರಿಗೆ (Rajkumar Periasamy) ಒಮ್ಮೆ ಕೈ ತಟ್ಟಲೇಬೇಕು.
ಕಮಲ್ ಹಾಸನ್ ಒಡೆತನದ ರಾಜ್ ಕಮಲ್ ಫಿಲ್ಡ್ ಇಂಟರ್ನ್ಯಾಷನಲ್ ನಿರ್ಮಿಸಿರುವ ಈ ಅಮರಾನ್ (Amaran) ಪ್ರಭಾವಶಾಲಿ ತಾರಾಗಣವನ್ನು ಒಳಗೊಂಡಿದೆ. ಭಾರತದ ಸೇನೆಯಲ್ಲಿ ಇಂತಹ ನೂರಾರು ಯೋಧರು ಮನಮೆಚ್ಚುವ ಮತ್ತು ಸಲ್ಯೂಟ್ ಮಾಡುವ ಕೆಲಸ ಮಾಡಿ ಮಡಿದ್ದಿದ್ದರೆ ಆದರೆ ಅವರ ಎಲ್ಲ ಸಾಧನೆ ಮತ್ತು ನಿಸ್ವಾರ್ಥ ಸೇವೆಯ ಭಾವನೆಯ ಬಗ್ಗೆ ಸೇನೆಗೆ ಸಂಪೂರ್ಣ ಅರಿವಿರುತ್ತದೆ. ಆದರೆ ನಾವುಗಳು ಸೋಶಿಯಲ್ ಮೀಡಿಯಾದ ದುನಿಯಾದಲ್ಲಿ ಸದಾ ಮುಳಿಗಿರುವ ಕಾರಣ ಇವರ ಬಗ್ಗೆ ವಿಡಿಯೋ, ಪೋಸ್ಟ್ ಅಥವಾ ಸಿನಿಮಾದಲ್ಲಿ ಕಂಡು ಬಂದ್ರೆ ಮಾತ್ರ ನೆನಪಾಗುತ್ತೆ ಅನ್ನೋದೆ ವಿಪರ್ಯಾಸ.
Also Read: Pushpa 2 The Rule Released: ಸಿನಿಮಾ ಮಂದಿರಗಳಲ್ಲಿ ಪುಷ್ಪಾ ರಾಜನ ಅಬ್ಬರ! ಮುಂಗಡ ಬುಕಿಂಗ್ ಮಾಡೋದು ಹೇಗೆ?
Amaran on OTT: ಯಾವಾಗ ಮತ್ತು ಎಲ್ಲಿ ವೀಕ್ಷಿಸಬಹುದು?
ಈ ಅಮರಾನ್ (Amaran) ಸಿನಿಮಾ ಮೂಲತಃ ಕಳೆದ 28ನೇ ನವೆಂಬರ್ ರಂದು OTT ಬಿಡುಗಡೆಗೆ ಯೋಜಿಸಲಾಗಿತ್ತು ಆದರೆ ಚಿತ್ರಮಂದಿರಗಳಲ್ಲಿ ಚಿತ್ರದ ನಿರಂತರ ಜನಪ್ರಿಯತೆಯ ಕಾರಣ ನಿರ್ಮಾಪಕರು ಅದರ ಡಿಜಿಟಲ್ ಚೊಚ್ಚಲ ಪ್ರವೇಶವನ್ನು ಕೊಂಚ ಹಿಂದಕ್ಕೆ ತಳ್ಳಲು ಕಾರಣವಾಯಿತು. ಚಿತ್ರನಿರ್ಮಾಪಕರಿಂದ ಅಧಿಕೃತ ದೃಢೀಕರಣವಾಗಿದ್ದು ಮೇಜರ್ ಮುಕುಂದ್ ವರದರಾಜನ್ (Major Mukund Varadarajan) ರವರ ರಿಯಲ್ ಸ್ಟೋರಿಯನ್ನು ಇಂದು ಅಂದ್ರೆ 5ನೇ ಡಿಸೆಂಬರ್ನಿಂದ ಈ ಚಲನಚಿತ್ರವು ನೆಟ್‌ಪ್ಲಿಕ್ಸ್‌ನಲ್ಲಿ (Netflix) ಮೂಲಕ ಸ್ಟ್ರೀಮ್ ಆಗಲು ಸಿದ್ಧವಾಗಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile