ನಿಮ್ಮ ಫೋನ್ ಈ ಲಕ್ಷಣಗಳನ್ನು ಹೊಂದಿದ್ದರೆ ನಿಮ್ಮ ಫೋನ್ ಹ್ಯಾಕ್ (Phone Hack) ಆಗಿದೆ ಎಂದರ್ಥ.
ಅಮಾಯಕ ಮುಗ್ದ ಜನರನ್ನು ದೋಚಲು ಹ್ಯಾಕರ್‌ಗಳು ಸುಧಾರಿತ ತಂತ್ರಜ್ಞಾನದ ವಿಧಾನಗಳನ್ನು ಬಳಸುತ್ತಿದ್ದರೆ.
ಸ್ಮಾರ್ಟ್‌ಫೋನ್ ಹ್ಯಾಕ್ ಆಗಿದೆಯೇ (Phone Hack) ತಿಳಿಯಲು ಕೆಲವು ಚಿಹ್ನೆಗಳು ಕಣ್ಣ ಮುಂದೆ ಇದ್ದರೂ ಸಹ ಕ್ಯಾರೆ ಅನ್ನೋದಿಲ್ಲ.
Phone Hack: ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಹ್ಯಾಕ್ ಮಾಡುವುದು ಹ್ಯಾಕರ್‌ಗಳಿಗೆ ದೊಡ್ಡ ಸಮಸ್ಯೆಯಾಗಿಲ್ಲ. ನಿಮ್ಮ ಫೋನ್ ಹ್ಯಾಕ್ ಆಗಿದ್ದರೆ ನಿಮಗೆ ತಿಳಿಸುವ ಕೆಲವು ಚಿಹ್ನೆಗಳ ಕುರಿತು ನಾವು ಪ್ರಮುಖ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳುತ್ತೇವೆ. ಈ ಹ್ಯಾಕರ್‌ಗಳು ಅಮಾಯಕ ಮುಗ್ದ ಜನರನ್ನು ಗುರಿಯಾಗಿಸಿಕೊಂಡು ಅವರ ವೈಯಕ್ತಿಕ ಮತ್ತು ಬ್ಯಾಂಕಿಂಗ್ ವಿವರಗಳು ಮತ್ತು ಇತರ ದುರುದ್ದೇಶಪೂರಿತ ಉದ್ದೇಶಗಳನ್ನು ಕದಿಯುವ ಗುರಿಯನ್ನು ಹೊಂದಿದ್ದಾರೆ. ತನ್ನ ಸ್ಮಾರ್ಟ್‌ಫೋನ್ ಹ್ಯಾಕ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ನಿರ್ಧರಿಸುವ ಕೆಲವು ಚಿಹ್ನೆಗಳು ಕಣ್ಣ ಮುಂದೆ ಇದ್ದರೂ ಸಹ ಕ್ಯಾರೆ ಅನ್ನೋದಿಲ್ಲ.
ಫೋನ್ ಒಳಗೆ ಈ ಲಕ್ಷಣಗಳು ಕಂಡರೆ Phone Hack ಆಗಿದೆ ಎಂದರ್ಥ!
ನಿಮ್ಮ ಸ್ಮಾರ್ಟ್‌ಫೋನ್ ನಿರಂತರವಾಗಿ ಬಿಸಿಯಾಗುತ್ತಿದ್ದರೆ ಬ್ಯಾಕೆಂಡ್‌ನಲ್ಲಿ ಫೋನ್ ಬಳಸುತ್ತಿರುವಾಗ ಅಥವಾ ಅಪ್ಲಿಕೇಶನ್ ಚಾಲನೆಯಲ್ಲಿರುವಾಗ ಫೋನ್ ಬಿಸಿಯಾಗುವುದರಿಂದ ನೀವು ಜಾಗರೂಕರಾಗಿರಬೇಕು. ನೀವು ಪೋಸ್ಟ್ ಮಾಡದ ಫೇಸ್‌ಬುಕ್ ಅಥವಾ ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಮಾಧ್ಯಮ ಖಾತೆಯಿಂದ ಅಂತಹ ಪೋಸ್ಟ್ ಆಗಿದ್ದರೆ ನಿಮ್ಮ ಫೋನ್ ಅಥವಾ ಸಾಮಾಜಿಕ ಮಾಧ್ಯಮ ಖಾತೆಯನ್ನು ಹ್ಯಾಕ್ ಮಾಡುವ ಸಾಧ್ಯತೆಯಿದೆ.
ನಿಮ್ಮ ಫೋನ್ ಇದ್ದಕ್ಕಿದ್ದಂತೆ ತುಂಬಾ ನಿಧಾನವಾಗಿದ್ದರೆ ನೀವು ಎಚ್ಚರದಿಂದಿರಬೇಕು. ಇದು ಹ್ಯಾಕ್ ಆಗಿರುವ ಸೂಚನೆಯೂ ಹೌದು. ನಿಮ್ಮ ಫೋನ್‌ನ ಅಪ್ಲಿಕೇಶನ್‌ಗಳು ಆಗಾಗ್ಗೆ ಮುಚ್ಚಿದರೆ ಅಥವಾ ಕ್ರ್ಯಾಶ್ ಆಗಿದ್ದರೆ ನಿಮ್ಮ ಫೋನ್ ಜೈಲ್ ಬ್ರೋಕನ್ ಆಗಿರಬಹುದು. ಅಲ್ಲದೆ ಫೋನ್ ಸ್ಕ್ರೀನ್ ಲೈಟ್ ಮಿಟುಕಿಸುತ್ತಲೇ ಇದ್ದರೆ ಹ್ಯಾಕ್ ಆಗುವ ಸಾಧ್ಯತೆ ಇದೆ. ಹಿಂದೆಂದೂ ಸ್ವೀಕರಿಸದ ಮತ್ತು ಯಾವುದೇ ಅಪ್ಲಿಕೇಶನ್‌ನಲ್ಲಿ ಸೇರಿಸದ ನೋಟಿಫಿಕೇಶನ್ ನೀವು ಸ್ವೀಕರಿಸಿದರೆ ಅಥವಾ ವೈರಸ್ ಎಚ್ಚರಿಕೆಯನ್ನು ಸ್ವೀಕರಿಸಿದರೆ ಹ್ಯಾಕರ್ ದಾಳಿಯ ಸಾಧ್ಯತೆ ಇರುತ್ತದೆ.
Also Read: POCO C75 5G First Sale ಇಂದಿನಿಂದ ಆರಂಭ! ಆಫರ್ ಬೆಲೆ ಮತ್ತು ಫೀಚರ್ಗಳೇನು ಎಲ್ಲವನ್ನು ತಿಳಿಯಿರಿ!
ಹ್ಯಾಕರ್‌ಗಳು ಅತ್ಯಾಧುನಿಕ ಹ್ಯಾಕಿಂಗ್ ತಂತ್ರಜ್ಞಾನಗಳನ್ನು ಬಳಸುತ್ತಾರೆ. ನಿಮ್ಮ ಫೋನ್‌ನ ಇಂಟರ್ನೆಟ್ ಡೇಟಾ ತ್ವರಿತವಾಗಿ ಖಾಲಿಯಾದರೆ ನಿಮಗೆ ತಿಳಿಯದೆ ಯಾರಾದರೂ (ಅಪ್ಲಿಕೇಶನ್) ನಿಮ್ಮ ಡೇಟಾವನ್ನು ಬಳಸುತ್ತಿದ್ದಾರೆ ಎಂದರ್ಥ. ಫೋನ್‌ನಲ್ಲಿ ದುರುದ್ದೇಶಪೂರಿತ ಅಥವಾ ವೈರಸ್ ಅಪ್ಲಿಕೇಶನ್‌ಗಳನ್ನು ಸ್ಥಾಪಿಸಿರುವುದು ಇದಕ್ಕೆ ಕಾರಣವಾಗಬಹುದು.
ನಿಮ್ಮ Phone Hack ಆಗಿರುವುದು ತಿಳಿಯುವುದು ಹೇಗೆ?
- ಮೊದಲಿಗೆ ನಿಮ್ಮ ಗೂಗಲ್ ಖಾತೆಯನ್ನು ತನ್ನನ್ ತಾನೇ ಸೈನ್ ಔಟ್ ಆದರೆ ನಿಮ್ಮ ಫೋನ್ ಹ್ಯಾಕರ್‌ನ ಕೈಗೆ ಬಿದ್ದಿರುವುದರ ದೊಡ್ಡ ಸಂಕೇತವಾಗಿದೆ. ಅದನ್ನು ಏಕೆ ಸೈನ್ ಔಟ್ ಮಾಡಲಾಗಿದೆ ಎಂಬುದನ್ನು ಪರಿಶೀಲಿಸುವುದು ನಿಮ್ಮ ಕೆಲಸವಾಗಿದೆ.
- ನೀವು ಫೋನ್‌ನಲ್ಲಿ ನೀವು ಬಳಸದ ಪಾಪ್-ಅಪ್‌ಗಳು ಮತ್ತು ಜಾಹೀರಾತುಗಳನ್ನು ಡೌನ್ಲೋಡ್ ಆಗಿದ್ದರೆ ಅದು ಹ್ಯಾಕ್ ಆಗುವ ಸಾಧ್ಯತೆಯಿದೆ.
- ಇದ್ದಕ್ಕಿಂದಂತೆ ನಿಮ್ಮ ಫೋನ್ ತುಂಬಾ ನಿಧಾನವಾಗಿ ಕಾರ್ಯನಿರ್ವಹಿಸುತ್ತಿದ್ದರೆ ಇದಕ್ಕೆ ಕಾರಣವೇನು ಎಂಬುದನ್ನು ಪರಿಶೀಲಿಸಬೇಕು.
- ನಿಮ್ಮ ಫೋನ್ನಲ್ಲಿ ಸ್ಟೋರೇಜ್ ಇದ್ದಕ್ಕಿದ್ದಂತೆ ಹೆಚ್ಚಾಗಿದ್ದರೆ ಏಕೆ ಎಂಬುದನ್ನು ನೀವು ನೋಡಬೇಕು. ಏಕೆಂದರೆ ಅನೇಕ ಬಾರಿ ಹ್ಯಾಕರ್‌ಗಳು ಅನುಮತಿಯಿಲ್ಲದೆ ಫೋನ್‌ನಲ್ಲಿ ಏನನ್ನಾದರೂ ಡೌನ್‌ಲೋಡ್ ಮಾಡುತ್ತಾರೆ.
- ನಿಮ್ಮ ಬ್ರೌಸರ್ ವಿವಿಧ ವೆಬ್‌ಸೈಟ್‌ಗಳಿಗೆ ಅಥವಾ ವಯಸ್ಕರ ವಿಷಯಕ್ಕೆ ಮರುನಿರ್ದೇಶಿಸಲು ಪ್ರಾರಂಭಿಸಿದರೆ ನಿಮ್ಮ ಫೋನ್ ಅನ್ನು ಟ್ಯಾಂಪರ್ ಮಾಡಲಾಗುತ್ತಿದೆ ಎಂದು ಅರ್ಥಮಾಡಿಕೊಳ್ಳಿ.
- ನೀವು ಎಂದಿಗೂ ಕಳುಹಿಸದ ಮೆಸೇಜ್‌ಗಳು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರು ಕಳುಹಿಸದ ಲಿಂಕ್ ಹೊಂದಿರುವ ಅಸಾಮಾನ್ಯ ಮೆಸೇಜ್ ಖಂಡಿತವಾಗಿಯೂ ಬೇರೆಯವರು ನಿಮ್ಮ ಫೋನ್ ಅನ್ನು ಪ್ರವೇಶಿಸಲು ಪ್ರಯತ್ನಿಸುತ್ತಿರಬಹುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile