AC Buying Guide: ಬೇಸಿಗೆಗಾಗಿ ಹೊಸ ಏರ್ ಕಂಡಿಷನರ್ ಖರೀದಿಸುವ ಮುಂಚೆ ಈ ಮಾಹಿತಿಗಳು ನಿಮಗಿರಲಿ!

AC Buying Guide: ಬೇಸಿಗೆಗಾಗಿ ಹೊಸ ಏರ್ ಕಂಡಿಷನರ್ ಖರೀದಿಸುವ ಮುಂಚೆ ಈ ಮಾಹಿತಿಗಳು ನಿಮಗಿರಲಿ!
HIGHLIGHTS

ನೀವೊಂದು ಹೊಸ ಏರ್ ಕಂಡಿಷನರ್ (Air Conditioner) ಖರೀದಿಸುವ ಯೋಚಿಸುತ್ತಿದ್ದರಾ?

ಹೊಸ ಏರ್ ಕಂಡಿಷನರ್ ಖರೀದಿಸುವ ಮುಂಚೆ ನೀವು ತಿಳಿಯಲೇಬೇಕಾದ ಒಂದಿಷ್ಟು ಮಾಹಿತಿಗಳು ಇಲ್ಲಿವೆ.

ಈ ಮಾಹಿತಿಯೊಂದಿಗೆ ಅತಿ ಕಡಿಮೆ ಬೆಲೆಯಲ್ಲಿ ಉತ್ತಮವಾದ ಏರ್ ಕಂಡಿಷನರ್ ಖರೀದಿಸಲು ನೀವು ಸಜ್ಜಾಗಬಹುದು.

AC Buying Guide: ಈಗಾಗಲೇ ಬೇಸಿಗೆಯ ಬಿಸಿ ತಟ್ಟಲು ಶುರುವಾಗಿದ್ದು ಬೇಸಿಗೆ ಕಾಲ ಆರಂಭವಾಗುವ ಮುಂಚೆ ಹೊಸ ಏರ್ ಕಂಡಿಷನರ್ (Air Conditioner) ಖರೀದಿಸುವ ಯೋಚನೆ ಬರಲು ಶುರುವಾಗುತ್ತದೆ. ಹಾಗಾದ್ರೆ ಈ ಬಾರಿ ಹೊಸ ಅಥವಾ ಎರಡನೇ ಮಾಲೀಕತ್ವದ ಏರ್ ಕಂಡಿಷನರ್ ಖರೀದಿಸುವಾಗ ಜನರ ಮನಸ್ಸಿನಲ್ಲಿ ಹಲವು ಅನುಮಾನಗಳು ಮತ್ತು ಪ್ರಶ್ನೆಗಳು ಬರುವುದು ಸಹಜ. ಅಂತಹ ಪರಿಸ್ಥಿತಿಯಲ್ಲಿ ಈ ಬೇಸಿಗೆಯಲ್ಲಿ ಹೊಸ ಏರ್ ಕಂಡಿಷನರ್ ಖರೀದಿಸುವ ಮೊದಲು ನೀವು ಕೆಲವು ವಿಷಯಗಳನ್ನು ತಿಳಿದಿರಬೇಕು. ಈ ಮಾಹಿತಿಯೊಂದಿಗೆ ಅತಿ ಕಡಿಮೆ ಬೆಲೆಯಲ್ಲಿ ಉತ್ತಮವಾದ ಏರ್ ಕಂಡಿಷನರ್ (Air Conditioner) ಖರೀದಿಸಲು ನೀವು ಸಜ್ಜಾಗಬಹುದು.

AC Buying Guide in Kannada:

ನಿಮ್ಮ ರೂಮ್ ಸೈಜ್ ಅನುಗುಣವಾಗಿ ಎಸಿ ಖರೀದಿಸಿ: ಮೊದಲಿಗೆ ನೀವು ಅಗತ್ಯಗಿಂತ ಹೆಚ್ಚಾಗಿ ಅಥವಾ ಅಗತ್ಯಕ್ಕಿಂತ ಕಡಿಮೆ ಸಾಮರ್ಥ್ಯದ ಏರ್ ಕಂಡಿಷನರ್ (Air Conditioner) ಬಗ್ಗೆ ಗಮನವಿರಲಿ. ಯಾಕೆಂದರೆ ಎಸಿ ನಿಮ್ಮ ಕೋಣೆಯ ಗಾತ್ರವನ್ನು ಅವಲಂಬಿಸಿ ಗಾಳಿಯನ್ನು ನೀಡುತ್ತದೆ ನಿಮಗೆ ಸಣ್ಣ ಕೋಣೆಗೆ ಅಂದರೆ ಸುಮಾರು 100x 120 ಚದರ ಅಡಿ ಕೋಣೆಗೆ 1 ಟನ್ ಎಸಿ ಸೂಕ್ತವಾಗಿರುತ್ತದೆ. ಆದರೆ ಇದಕ್ಕಿಂತ ದೊಡ್ಡ ಕೋಣೆಗಳಿಗೆ 1.5 ಟನ್ ನಿಂದ ಸುಮಾರು 2 ಟನ್ ಏರ್ ಕಂಡಿಷನರ್ (Air Conditioner) ಉತ್ತಮ ಆಯ್ಕೆಯಾಗಿದೆ.

Also Read: ಸ್ಯಾಮ್‌ಸಂಗ್‌ನಿಂದ ಜಬರ್ದಸ್ತ್ ಡೀಲ್! ಈ ಎರಡು 5G Smartphones ಮೇಲೆ ಬರೋಬ್ಬರಿ 11,000 ರೂಗಳ ಡಿಸ್ಕೌಂಟ್!

ಮನೆಯೊಳಗೆ ಬರುವ ಸೂರ್ಯನ ಬೆಳಕು ಮತ್ತು ನೆಲದ ಎತ್ತರವನ್ನು ಅಳೆಯಿರಿ: ಹೌದು, ನೀವು ಎಸಿಯನ್ನು ಖರೀದಿಸುವ ಮೊದಲು ಜನರು ಮನೆಯ ನೆಲ ಮತ್ತು ಮನೆಗೆ ಪ್ರವೇಶಿಸುವ ಸೂರ್ಯನ ಬೆಳಕಿನ ಪ್ರಮಾಣವನ್ನು ಸಹ ಪರಿಶೀಲಿಸಬೇಕು. ಇದರಿಂದ ಎಸಿಯ ಪ್ರಯೋಜನ ಮತ್ತು ಕವರೇಜ್ ಅನ್ನು ಹೊಂದಿಸಲು ಉತ್ತಮವಾಗಿರುತ್ತದೆ. ಉದಾಹರಣೆಗೆ ನೀವು ಮೇಲಿನ 5 ಮಹಡಿಗಳಲ್ಲಿ ವಾಸಿಸುತ್ತಿದ್ದರೆ ಉತ್ತಮ ತಂಪಾಗಿಸುವಿಕೆಯನ್ನು ಒದಗಿಸಲು AC ಕನಿಷ್ಠ 0.5 ಟನ್ ಆಗಿರಬೇಕು.

AC Buying Guide in Kannada
AC Buying Guide in Kannada

ಸ್ಪ್ಲಿಟ್ ಅಥವಾ ವಿಂಡೋ ಎಸಿಯನ್ನು ಆರಿಸಿಕೊಳ್ಳಿ: ಮೊದಲಿಗೆ ನೀವು ಈ ಎರಡು ವಿಧದಲ್ಲಿನ ಏರ್ ಕಂಡಿಷನರ್ (Air Conditioner) ಅನ್ನು ನಿಮ್ಮ ಮನೆಗೆ ಅನುಗುಣವಾಗಿ ಆರಿಸಿ. ಯಾಕೆಂದರೆ ಅವುಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಬೆಲೆ ಮತ್ತು ಒಂದಿಷ್ಟು ಫೀಚರ್ಗಳಾಗಿವೆ. ಈ ವಿಂಡೋ ಎಸಿಗಳು ಕಡಿಮೆ ಬೆಲೆಯಲ್ಲಿ ಬರುವ ಕಾರಣ ಕಡಿಮೆ ಫೀಚರ್ಗಳೊಂದಿಗೆ ಬರುತ್ತವೆ. ಆದರೆ ಸ್ಪ್ಲಿಟ್ ಎಸಿಗಳು ಬೆಲೆ ಹೆಚ್ಚಾದರೂ ಅಡ್ವಾನ್ಸ್ ಫೀಚರ್ ಆನ್‌ಬೋರ್ಡ್ ಸ್ಲೀಪಿಂಗ್, ಟರ್ಬೊ ಕೂಲಿಂಗ್ ಇತ್ಯಾದಿ ವೈಶಿಷ್ಟ್ಯಗಳೊಂದಿಗೆ ಬರುತ್ತವೆ. ಈ ಸ್ಪ್ಲಿಟ್ ಎಸಿಗಳನ್ನು ಯಾವುದೇ ಕೋಣೆಯಲ್ಲಿ ಅಳವಡಿಸಬದಾದರೂ ವಿಂಡೋ ಎಸಿಗೆ ನಿಯಮಿತ ಸೈಜ್ ವಿಂಡೋ ಅಗತ್ಯವಿರುತ್ತದೆ.

ಕೆಲವು ಎಸಿಗಳು ಹೀಟರ್‌ಗಳೊಂದಿಗೂ ಲಭ್ಯವಿವೆ: ಪ್ರಸ್ತುತ ಮಾರುಕಟ್ಟೆಯಲ್ಲಿ ಹೀಟರ್‌ಗಳೊಂದಿಗೆ ಬರುವ ಅನೇಕ ಎಸಿಗಳಿವೆ. ಅಂತಹ ಪರಿಸ್ಥಿತಿಯಲ್ಲಿ ನೀವು ತಾಪನ ವೈಶಿಷ್ಟ್ಯದೊಂದಿಗೆ ಏರ್ ಕಂಡಿಷನರ್ (Air Conditioner) ಅನ್ನು ಸಹ ಖರೀದಿಸಬಹುದು. ಇದರಿಂದ ಚಳಿಗಾಲದಲ್ಲಿ ಹೀಟರ್ ಖರೀದಿಸುವ ಬಗ್ಗೆ ಯೋಚಿಸುವ ಅಗತ್ಯವಿರೋದಿಲ್ಲ ಆದರೆ ಇದು ನಿಮಗೆ ಸ್ವಲ್ಪ ಹೆಚ್ಚು ವೆಚ್ಚವಾಗಬಹುದು. ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿ ವೈಶಿಷ್ಟ್ಯಗಳನ್ನು ಆರಿಸಬಹುದು ಕಂಪನಿಯು ಎಸಿಯಲ್ಲಿ ಆಟೋ ಕ್ಲೀನ್, ಸ್ಲೀಪ್ ಟೈಮ್ ಸೇರಿದಂತೆ ಹಲವು ಹೆಚ್ಚುವರಿ ವೈಶಿಷ್ಟ್ಯಗಳನ್ನು ಒದಗಿಸುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo