AI Voice Scam: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನಿಂದ ಭಾರಿ ವಂಚನೆಗಳು! ಏನಿದು ಎಐ ವಾಯ್ಸ್ ಸ್ಕ್ಯಾಮ್?

Updated on 26-Dec-2023
HIGHLIGHTS

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನಿಂದ (AI Voice Scam) ಭಾರಿ ತಲೆನೋವು ಉಂಟಾಗಿರುವುದು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತದೆ.

ಇತ್ತೀಚಿನ ಪ್ರಕರಣದಲ್ಲಿ (AI Scam) ಲಕ್ನೋದ ವ್ಯಕ್ತಿಯೊಬ್ಬರು 45,000 ರೂಗಳನ್ನು ಕಳೆದುಕೊಂಡ ಘಟನೆ ಸಹ ಪ್ರಕರಣ ಬೆಳಕಿಗೆ ಬಂದಿದೆ.

AI Voice Scam: ವೇಗವಾಗಿ ಬೆಳೆಯುತ್ತಿರುವ ನಮ್ಮ ಜನಜೀವನದಲ್ಲಿ ಟೆಕ್ನಾಲಜಿ ನಮಗಿಂತ ಹತ್ತು ಪಟ್ಟು ವೇಗವಾಗಿ ಸಾಗುತ್ತಿರುವ ದಾರಿಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನಿಂದ ಭಾರಿ ತಲೆನೋವು ಪಡೆಯುತ್ತಿರುವುದು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತದೆ. AI (Artificial Intelligence) ಅತ್ಯಂತ ಜನಪ್ರಿಯ ಪದಗಳಲ್ಲಿ ಒಂದಾಗಿದೆ. ಏಕೆಂದರೆ ಇಂದಿನ ಚಾಟ್‌ಜಿಪಿಟಿಯಂತಹ ಎಐ ಟೋಲ್‌ಗಳು ಹೆಚ್ಚು ಬಳಕೆಗೆ ಅಗತ್ಯವಾಗುವಂತೆ ಮಾಡಿ ಪ್ರತಿದಿನ ನಾವು ಯಾವುದಾದರೊಂದು ರೂಪದಲ್ಲಿ ಅದರೊಂದಿಗೆ ಸಂಪರ್ಕಕ್ಕೆ ಬರುತ್ತಿದ್ದೇವೆ. ಮತ್ತೊಂಡೆಯಲ್ಲಿ AI ಜೊತೆಗೆ ಅನೇಕ ವಿಷಯಗಳು ಸುಲಭವಾಗುತ್ತಿದ್ದರೆ ಮತ್ತೊಂದೆಡೆಯಲ್ಲಿ ಭಾರಿ ಅಪಾಯಗಳು ಸಹ ಅದೇ ಪ್ರಮಾಣದಲ್ಲಿ ಹೆಚ್ಚುತ್ತಿವೆ.

Also Read: Amazon Prime Lite: ಭಾರತದಲ್ಲಿ ಅಮೆಜಾನ್ ಪ್ರೈಮ್ ಲೈಟ್ ಬೆಲೆ ಕಡಿತ! ಹೊಸ ಬೆಲೆ ಮತ್ತು ಪ್ರಯೋಜನಗಳೇನು?

ಈ ರೀತಿ ವಂಚನೆಗೆ (AI Voice Scam) ಮೂಹರ್ತ ಇಟ್ಟ ಹ್ಯಾಕರ್

ಎಐ ವಾಯ್ಸ್ ಹಗರಣದ ಇತ್ತೀಚಿನ ಪ್ರಕರಣದಲ್ಲಿ ಲಕ್ನೋದ ವ್ಯಕ್ತಿಯೊಬ್ಬರು 45,000 ರೂಗಳನ್ನು ಕಳೆದುಕೊಂಡ ಘಟನೆ ಸಹ ಪ್ರಕರಣ ಬೆಳಕಿಗೆ ಬಂದಿದೆ. ಲಕ್ನೋ ಪ್ರಕರಣವನ್ನು ನೋಡುವುದಾದರೆ ವಂಚಿತನಿಗೆ ಆನ್ಲೈನ್ ಸೈಬರ್ ಕ್ರಿಮಿನಲ್ ತಾನು ನಿಮ್ಮ ಸಂಬಂಧಿ ಎಂದು ತೋರಿಸಿಕೊಂಡಿದ್ದಾನೆ. AI ಸಹಾಯದಿಂದ ಕ್ರಿಮಿನಲ್ ತನ್ನ ಸಂಬಂಧಿಯ ಧ್ವನಿಯಲ್ಲೇ ಮಾತಾಡಿ ಸುಮಾರು 90,000 ಸಾವಿರ ಹಣವನ್ನು ಒಬ್ಬರಿಗೆ ಕಳುಹಿಸಬೇಕು ಆದರೆ ಪೇಮೆಂಟ್ ವಿಫಲವಾಗಿದೆ ಎಂದು ಸಂತ್ರಸ್ತೆಗೆ ಹೇಳಿದ್ದಾನೆ. ನಿಮ್ಮ ಬಳಿ ಇದ್ರೆ ತಕ್ಷಣ ನೀಡಿ ನಾನು ನಂತರ ನಿಮಗೆ ಪಾವತಿಸುತ್ತೇನೆ ಎಂದಿದ್ದಾನೆ ಇದಕ್ಕೆ ಒಪ್ಪಿದ ಸಂತ್ರಸ್ತೆ ಅವರ ಧ್ವನಿ ಮತ್ತು ಕಾರಣವನ್ನು ಪರಿಗಣಿಸಿ ನೀಡಿದ ಸಂಖ್ಯೆಗೆ ಸಣ್ಣ ಸಣ್ಣ ಕಂತುಗಳಂತೆ ಹಣವನ್ನು ಕಳುಹಿಸಿದ್ದಾರೆ. ಅದೃಷ್ಟವಶಾತ್ ಕೆಲವು ಪಾವತಿಗಳು ವಿಫಲವಾಗಿದ್ದು ಪೂರ್ತಿ 90,000 ಬದಲಿಗೆ ಕೇವಲ 44,500 ರೂಗಳನ್ನು ಕಳೆದುಕೊಂಡ ನಂತರ ಇದೊಂದು ವಂಚನೆ ಎಂದು ಅರಿವಾಗಿದೆ. ಇದರ ನಂತರ ಸಂತ್ರಸ್ತೆ ಮತ್ತು ಕುಟುಂಬದವರು ಪೋಲೀಸರ ಮೊರೆ ಹೋಗಿದ್ದಾರೆ.

AI Voice ScamAI Voice Scam

ವಿಡಿಯೋ ಕಾಲ್ ವಂಚನೆಗಳು ಸಾಕಷ್ಟು ನಡೆಯುತ್ತಿವೆ

AI ವಾಯ್ಸ್ ಸ್ಕ್ಯಾಮ್‌ನಂತೆ ವೀಡಿಯೊ ಕರೆ ಹಗರಣಗಳು ಸಹ ಪ್ರಚಲಿತವಾಗುತ್ತಿವೆ. ಇದರಲ್ಲಿ ಅಪರಾಧಿಗಳು ಡೀಪ್‌ಫೇಕ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ ಬಳಸಿಕೊಂಡು ತಮ್ಮ ಪರಿಚಯಸ್ಥರಂತೆ ನಟಿಸುವ ಜನರಿಗೆ ವೀಡಿಯೊ ಕರೆಗಳನ್ನು ಮಾಡಲು ಮತ್ತು ಯಾವುದೋ ನೆಪದಲ್ಲಿ ಪಾವತಿಯನ್ನು ಪಡೆಯುತ್ತಾರೆ. ಡೀಪ್‌ಫೇಕ್‌ಗಳನ್ನು ಬಳಸಿಕೊಂಡು ಅಶ್ಲೀಲ ಚಿತ್ರಗಳು ಅಥವಾ ವೀಡಿಯೊಗಳನ್ನು ರಚಿಸುವ ಮೂಲಕ ಅನೇಕ ಬಾರಿ ಜನರನ್ನು ಬ್ಲ್ಯಾಕ್‌ಮೇಲ್ ಮಾಡಲಾಗುತ್ತದೆ.

ಡೀಪ್‌ಫೇಕ್‌ನಂತಹ ತಂತ್ರಜ್ಞಾನಗಳು ಭಾರಿ ಸದ್ದು ಮಾಡುತ್ತಿವೆ

AI ವಾಯ್ಸ್ ಸ್ಕ್ಯಾಮ್‌ಗಳು ಡೀಪ್‌ಫೇಕ್ ವೀಡಿಯೊ ಸ್ಕ್ಯಾಮ್‌ಗಳು ಇತ್ಯಾದಿಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳುವುದು ಈಗ ಪ್ರಮುಖ ವಿಷಯವಾಗಿದೆ. ಇದಕ್ಕಾಗಿ ನೀವು ತುಂಬಾ ಜಾಗರೂಕರಾಗಿರಬೇಕು ಏಕೆಂದರೆ AI ಮತ್ತು ಡೀಪ್‌ಫೇಕ್‌ನಂತಹ ತಂತ್ರಜ್ಞಾನಗಳು ನೈಜ ಮತ್ತು ನಕಲಿ ನಡುವಿನ ರೇಖೆಯನ್ನು ಅಳಿಸಿಹಾಕಿವೆ. ಬಹಳ ಬುದ್ಧಿವಂತ ಜನರು ಸಹ ಅವರನ್ನು ಹಿಡಿಯಲು ಮತ್ತು ವಂಚನೆಗೆ ಬಲಿಯಾಗಲು ಸಾಧ್ಯವಾಗುವುದಿಲ್ಲ.

AI Voice Scam ಬಚಾವ್ ಆಗಲು ಈ ಕ್ರಮಗಳನ್ನು ಅನುಸರಿಸಿ

➥ಅಪರಿಚಿತ ಸಂಖ್ಯೆಗಳಿಂದ ಬರುವ ಫೋನ್ ಕರೆಗಳಿಗೆ ಉತ್ತರಿಸುವಾಗ ಜಾಗರೂಕರಾಗಿರಿ.

➥ನಿಮ್ಮ ಪರಿಚಯದವರಂತೆ ನಟಿಸುತ್ತಿರುವ ಯಾರಾದರೂ ನಿಮಗೆ ಅಪರಿಚಿತ ಸಂಖ್ಯೆಯಿಂದ ಕರೆ ಮಾಡಿದರೆ ಅದನ್ನು ಮೊದಲು ಪರಿಶೀಲಿಸಿ.

➥ವಂಚಕರು ಆಗಾಗ್ಗೆ ಬಹಳ ತುರ್ತು ಈಗ ಅಗತ್ಯಗಳಂತಹ ಸನ್ನಿವೇಶಗಳೊಂದಿಗೆ ಕರೆ ಮಾಡುತ್ತಾರೆ ಆದ್ದರಿಂದ ಅಂತಹ ಕರೆಗಳಿಂದ ಎಚ್ಚರದಿಂದಿರಿ.

➥ಅನುಮಾನಾಸ್ಪದ ಮೆಸೇಜ್ ಅಥವಾ ಇಮೇಲ್‌ಗಳಲ್ಲಿ ಕಳುಹಿಸಲಾದ ಲಿಂಕ್‌ಗಳನ್ನು ಅಪ್ಪಿತಪ್ಪಿಯೂ ಕ್ಲಿಕ್ ಮಾಡಲೆಬೇಡಿ.

➥ಅಪರಿಚಿತ ಮೂಲಗಳಿಂದ ಪಡೆದ QR ಕೋಡ್‌ಗಳನ್ನು ಸ್ಕ್ಯಾನ್ ಮಾಡುವುದನ್ನು ತಪ್ಪಿಸಿ.

➥ನಿಮ್ಮ ಬ್ಯಾಂಕ್ ಅಥವಾ ಕಾರ್ಡ್ ಸಂಬಂಧಿತ ಮಾಹಿತಿಯನ್ನು ಯಾರಿಗೂ ನೀಡಬೇಡಿ.

➥ಬ್ಯಾಂಕ್ ಅಥವಾ ಕರೆಗಳಲ್ಲಿ ಅನುಮಾನಾಸ್ಪದವಾಗಿ ಏನಾದರೂ ಕಂಡು ಬಂದರೆ ತಕ್ಷಣ ಬ್ಯಾಂಕ್/ಪೊಲೀಸರಿಗೆ ದೂರು ನೀಡುವುದು ಮುಖ್ಯವಾಗಿದೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :