AI Voice Scam: ಇದೇ ನೋಡಿ ಪ್ರಪಂಚದಾದ್ಯಂತ ಹರಡಿಕೊಂಡಿರುವ ಲೇಟೆಸ್ಟ್ ಸ್ಕ್ಯಾಮ್!

AI Voice Scam: ಇದೇ ನೋಡಿ ಪ್ರಪಂಚದಾದ್ಯಂತ ಹರಡಿಕೊಂಡಿರುವ ಲೇಟೆಸ್ಟ್ ಸ್ಕ್ಯಾಮ್!
HIGHLIGHTS

ಅತಿ ವೇಗವಾಗಿ ಬೆಳೆಯುತ್ತಿರುವ ಲೇಟೆಸ್ಟ್ ಟೆಕ್ನಾಲಜಿಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ದೊಡ್ಡ ಪಾತ್ರವಹಿಸುತ್ತಿದೆ

AI ವ್ಯಕ್ತಿಯ ವಾಯ್ಸ್ ಗುಣಲಕ್ಷಣಗಳಾದ ಟೋನ್, ಪಿಚ್ ಮತ್ತು ಮ್ಯಾನೇಜ್ಮೆಂಟ್ ಕಲಿತು ಅದರಂತೆಯೇ ಅನುಕರಿಸಬಹುದು.

ಈ ಹೊಸ ಹಗರಣದ ಬಗ್ಗೆ ಒಂದಿಷ್ಟು ಇಂಟ್ರೆಸ್ಟಿಂಗ್ ಮತ್ತು ನೀವು ತಿಳಿಯಲೇಬೇಕಾದ ಮಾಹಿತಿಗಳನ್ನು ತಿಳಿಯೋಣ.

AI Voice Scam: ಇಂದಿನ ದಿನಗಳಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಲೇಟೆಸ್ಟ್ ಟೆಕ್ನಾಲಜಿಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ದೊಡ್ಡ ಪಾತ್ರವಹಿಸುತ್ತಿದೆ. ಇದರಿಂದ ಸಾಕಷ್ಟು ವಿಷಯಗಳು ಮೊದಲಿಗಿಂತ ಹೆಚ್ಚು ಸರಳ ಮತ್ತು ಸುಲಭವಾಗಿದ್ದರೂ ಮತ್ತೊಂಡೆಯಲ್ಲಿ ಹೊಸ ಮಾದರಿಯ ವಂಚನೆಗಳಿಗೆ ಇದು ದಾರಿ ದೀಪವಾಗಿದೆ ಅಂದ್ರೆ ತಪ್ಪಾಗಲಾರದು. ಇತ್ತೀಚಿಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ವಾಯ್ಸ್ ಸ್ಕ್ಯಾಮ್ (AI Voice Scam) ಹೆಚ್ಚು ಸದ್ದು ಮಾಡುತ್ತಿದೆ. ಈ ಹೊಸ ಹಗರಣದ ಬಗ್ಗೆ ಒಂದಿಷ್ಟು ಇಂಟ್ರೆಸ್ಟಿಂಗ್ ಮತ್ತು ನೀವು ತಿಳಿಯಲೇಬೇಕಾದ ಮಾಹಿತಿಗಳನ್ನು ತಿಳಿಯೋಣ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ವಾಯ್ಸ್ ಸ್ಕ್ಯಾಮ್ (AI Voice Scam)

ವಾಸ್ತವವಾಗಿ ಈ ಲೇಟೆಸ್ಟ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ವಾಯ್ಸ್ ಸ್ಕ್ಯಾಮ್ (AI Voice Scam) ಈವರೆಗೆ ನಾವು ನೀವು ನೋಡಿರುವ ಸಾಮಾನ್ಯ ಸ್ಕ್ಯಾಮ್‌ಗಳಿಗಿಂತ ಬಹಳ ಭಿನ್ನವಾಗಿವೆ. ಏಕೆಂದರೆ ಇದರಲ್ಲಿ ವಂಚಕರಿಗೆ ನಿಮ್ಮ OTP ಅಥವಾ ಬ್ಯಾಂಕ್ ಮಾಹಿತಿಗಳು ಬೇಕಿಲ್ಲ. ಈ ಹಗರಣಕ್ಕಾಗಿ ಕೇವಲ ಒಂದೇ ಒಂದು ಕರೆ ಸಾಕು. ನೀವು ನಿಮ್ಮ ಖಾತೆಯಿಂದ ಸ್ವತಃ ಹಣವನ್ನು ವಂಚಕರ ಕೈಗೆ ನೀಡುವ ಬಲೆಗೆ ಬೀಳಬಹುದು. ಏಕೆಂದರೆ ಈ ಸ್ಕ್ಯಾಮರ್‌ಗಳು ನಿಮ್ಮ ಕುಟುಂಬದವರ ಅಥವಾ ನಿಮ್ಮ ಸ್ನೇಹಿತರ ಸೋಶಿಯಲ್ ಮೀಡಿಯಾವನ್ನು ಚೆನ್ನಾಗಿ ಅರಿತು ಅವರ ಪೂರ್ತಿ ಮಾಹಿತಿಗಳನ್ನು ಒಟ್ಟುಗೂಡಿಸುತ್ತಾರೆ.

Also Read: ವಿರಾಟ್ ಕೊಹ್ಲಿ ಸೇರಿ ಹಲವಾರು ಸೆಲೆಬ್ರಟಿಗಳು ಬಳಸುವ ಈ WHOOP ಫಿಟ್‌ನೆಸ್ ಬ್ಯಾಂಡ್‌ನ ವಿಶೇಷತೆಗಳೇನು?

AI Voice Scam

ಅದರಲ್ಲೂ ಮುಖ್ಯವಾಗಿ ವಾಯ್ಸ್ ಮತ್ತು ಫೋನ್ ಕರೆಗಳ ಕ್ಲೋನ್ ಹೆಚ್ಚಾಗಿ ಬಳಸಿಕೊಂಡು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಅವರ ವಾಯ್ಸ್ ಪ್ರೋಗ್ರಾಂಗಳನ್ನು ತಯಾರಿಸಿ ನಿಮಗೆ ಗಾಳ ಹಾಕುತ್ತಾರೆ. ಈ ಮಾದರಿಯಲ್ಲಿ ವಾಯ್ಸ್ ಕ್ಲೋನಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು ನಿಮ್ಮ ಸ್ವಂತ ವಾಯ್ಸ್ ಅನ್ನು ಕ್ಲೋನ್ ಮಾಡಲು ಮತ್ತು ಬೇರೆಯವರ ವಾಯ್ಸ್ ಅನ್ನು ಪುನರಾವರ್ತಿಸುವ ಸಾಮರ್ಥ್ಯವನ್ನು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹೊಂದಿದೆ. ವಾಯ್ಸ್ ಕ್ಲೋನಿಂಗ್ ತಂತ್ರಜ್ಞಾನವು ಮಷೀನ್ ಲರ್ನಿಂಗ್ (Mission Learning) ಅಲ್ಗಾರಿದಮ್‌ಗಳನ್ನು ಆಧರಿಸಿದೆ. ಅದು ವ್ಯಕ್ತಿಯ ವಾಯ್ಸ್ ಗುಣಲಕ್ಷಣಗಳಾದ ಟೋನ್, ಪಿಚ್ ಮತ್ತು ಮ್ಯಾನೇಜ್ಮೆಂಟ್ ಕಲಿತು ಅದರಂತೆಯೇ ಅನುಕರಿಸಬಹುದು.

ನಡೆದೇ ಹೋಯ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ವಾಯ್ಸ್ ಸ್ಕ್ಯಾಮ್

ಲೇಟೆಸ್ಟ್ ಟೆಕ್ನಾಲಜಿಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ದೊಡ್ಡ ಪಾತ್ರವಹಿಸಿ ಪ್ರಭಜ್ಯೋತ್ ಎಂಬ 59 ವರ್ಷದ ಕೆನಡಾದ ಮಹಿಳೆ AI ಸಹಾಯದಿಂದ ರಚಿತವಾದ ವಾಯ್ಸ್ ವಂಚನೆಗೆ ಬಲಿಯಾಗಿ 1.4 ಲಕ್ಷ ರೂಗಳನ್ನು ಕಳೆದುಕೊಂಡಿದ್ದಾರೆ. ಈ ದಿಗ್ಭ್ರಮೆಗೊಳಿಸುವ ಮೊತ್ತವನ್ನು ಕಳೆದುಕೊಂಡವರಿಗೆ ತಮ್ಮ ಮೊಮ್ಮಗನಂತೆ ಮಾತನಾಡಿ ವಿಲಕ್ಷಣವಾಗಿ ಅನುಕರಿಸಿ ತಕ್ಷಣಕ್ಕೆ ಹಣದ ಹೆಚ್ಚು ಅಗತ್ಯವಿದೆ ಎಂದು ಹೇಳಿ ವಂಚಕರು ಈ ಮೊತ್ತವನ್ನು ಉಡಾಯಿಸಿದ್ದಾರೆ. ಸೈಬರ್ ಸೆಕ್ಯುರಿಟಿ ತಜ್ಞರ ಪ್ರಕಾರ ಈ ಸ್ಕ್ಯಾಮ್ ಹೆಚ್ಚಾಗಿ ಬೇರೆ ರಾಜ್ಯ ಅಥವಾ ದೇಶಗಳಲ್ಲಿ ಸಂಬಂಧಿಕರನ್ನು ಹೊಂದಿರುವವರನ್ನು ಗುರಿಯನ್ನಾಗಿಸಿಟ್ಟುಕೊಂಡಿದ್ದಾರೆ ಎಂದು ಎಚ್ಚರಿಸಿದ್ದಾರೆ.

ಭಾರತದ ಸೈಬರ್ ಇಂಟೆಲಿಜೆನ್ಸ್’ನಿಂದ ಎಚ್ಚರಿಕೆ!

ದೆಹಲಿಯ ಸೈಬರ್ ಇಂಟಲಿಜೆನ್ಸ್ ಮತ್ತು ಡಿಜಿಟಲ್ ಫೊರೆನ್ಸಿಕ್ಸ್ (CRCIDF) ಸಂಶೋಧನಾ ಕೇಂದ್ರದ ಕಾರ್ಯಾಚರಣೆಯ ನಿರ್ದೇಶಕರಾದ ಪ್ರಸಾದ್ ಪಾಟಿಬಂಡ್ಲಾ ಅವರು ಈ ಹಗರಣಗಳ ಸಂಕೀರ್ಣ ಕಾರ್ಯಗಳನ್ನು ವಿವರಿಸಿದರು. AI ವಾಯ್ಸ್ ಅನುಕರಿಸುವ ಸಾಧನಗಳು ಸೋಶಿಯಲ್ ಮೀಡಿಯಾ ರೆಕಾರ್ಡಿಂಗ್‌ಗಳು ಅಥವಾ ವಂಚಕರು ಮಾಡಿದ ಫೋನ್ ಕರೆಗಳಂತಹ ಸಾರ್ವಜನಿಕ ಡೊಮೇನ್‌ನಲ್ಲಿ ಲಭ್ಯವಿರುವ ಡೇಟಾವನ್ನು ಬಳಸಿಕೊಂಡು ವ್ಯಕ್ತಿಯ ವಾಯ್ಸ್ ಅನ್ನು ನಿಖರವಾಗಿ ಅನುಕರಿಸುವ ಸಾಮಥ್ಯವನ್ನು ಹೊಂದಿರುತ್ತವೆ.

ಇವರು ಹೆಚ್ಚಾಗಿ ಬೇರೆ ರಾಜ್ಯ ಅಥವಾ ದೇಶಗಳಲ್ಲಿ ಸಂಬಂಧಿಕರ ಸಂಕಷ್ಟದ ಪರಿಸ್ಥಿತಿಯನ್ನು ನಿರ್ಮಿಸುವ ಮೂಲಕ ತುರ್ತು ಸಂದರ್ಭಗಳನ್ನು ಸೃಷ್ಟಿಸುವುದು ಈ ಹಗರಣದ ಬಹು ಮುಖ್ಯವಾದ ಅಡಿಪಾಯವಾಗಿದೆ. ಈ ರೀತಿಯಲ್ಲಿ ನಿಮಗೆ ಯಾರದೇ ಕರೆ ಅಥವಾ ಮೆಸೇಜ್ ಬಂದರೆ ಆ ಕರೆಯ ನಂತರ ನೀವು ನಿಮ್ಮ ಫೋನ್ ಬಳಸಿ ಅವರೊಂದಿಗೆ ಮಾತಾಡಿ ಸತ್ಯದ ಪರದೆಯನ್ನು ನೀವೇ ನೋಡಬಹುದು. ಆದ್ದರಿಂದ ಸಂದರ್ಭ ಹೇಗೆ ಇರಲಿ ನೀವು ತಕ್ಷಣ ಪ್ರತಿಕ್ರಿಯಿಸದೆ ಕೊಂಚ ಸಮಯ ತೆಗೆದುಕೊಂಡು ಮುಂದಿನ ಹೆಜ್ಜೆಯನ್ನು ಅತಿ ಎಚ್ಚರಿಕೆಯಿಂದ ಇಡುವುದು ನಿಮ್ಮನ್ನು ವಾಯ್ಸ್ ಸ್ಕ್ಯಾಮ್ ಬಲೆಗಳಿಂದ ಸುರಕ್ಷಿಸುತ್ತದೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo