AI Camera: ಕೇರಳದಲ್ಲಿ ಟ್ರಾಫಿಕ್ ಸುರಕ್ಷತೆ ಮತ್ತು ಚಲನ್‌ಗಳಿಗಾಗಿ AI ಕ್ಯಾಮೆರಾಗಳನ್ನು ಪ್ರಾರಂಭ!

AI Camera: ಕೇರಳದಲ್ಲಿ ಟ್ರಾಫಿಕ್ ಸುರಕ್ಷತೆ ಮತ್ತು ಚಲನ್‌ಗಳಿಗಾಗಿ AI ಕ್ಯಾಮೆರಾಗಳನ್ನು ಪ್ರಾರಂಭ!
HIGHLIGHTS

AI Camera ಕೇರಳದಲ್ಲಿ ಟ್ರಾಫಿಕ್ ಸುರಕ್ಷತೆ ಮತ್ತು ಚಲನ್‌ಗಳಿಗಾಗಿ AI ಕ್ಯಾಮೆರಾಗಳನ್ನು ಪ್ರಾರಂಭಿಸಲಾಗಿದೆ.

AI Camera ಇದನ್ನು ಆಯೋಜಿಸಲು ಪ್ರತಿ 14 ಜಿಲ್ಲೆಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗುವುದು.

AI Camera ಪೊಲೀಸ್, ಅಬಕಾರಿ, ಮೋಟಾರು ವಾಹನ ಮತ್ತು ಜಿಎಸ್‌ಟಿ ಇಲಾಖೆಗಳ ನಡುವೆ ವಿಭಜಿಸಲಾಗಿದೆ.

AI Camera: ಕೇರಳದಲ್ಲಿ ಟ್ರಾಫಿಕ್ ಸುರಕ್ಷತೆ ಮತ್ತು ಚಲನ್‌ಗಳಿಗಾಗಿ AI ಕ್ಯಾಮೆರಾಗಳನ್ನು ಪ್ರಾರಂಭಿಸಲಾಗಿದೆ. ತಿರುವನಂತಪುರಂನಲ್ಲಿರುವ ಕೆಲ್ಟ್ರಾನ್‌ನ ಮಾನ್ವಿಲಾ ಘಟಕದಲ್ಲಿ ಸ್ಥಾಪಿಸಲಾದ ಡೇಟಾ ಬ್ಯಾಂಕ್‌ನಲ್ಲಿ ಈ ದೃಶ್ಯಗಳನ್ನು ಸಂಗ್ರಹಿಸಲಾಗುತ್ತದೆ. ಈಗಾಗಲೇ ಕೇರಳ ಸಾರಿಗೆ ಇಲಾಖೆಗೆ (Kerala State Road Transport Corporation) ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಹೊಂದಿದ 726 ಕ್ಯಾಮೆರಾಗಳು ಕಾರ್ಯಾರಂಭ ಮಾಡಿವೆ. ಇದು ಸಂಪೂರ್ಣ ಸ್ವಯಂಚಾಲಿತ ಸಂಚಾರ ಜಾರಿ ವ್ಯವಸ್ಥೆಯನ್ನು ಅಳವಡಿಸುವ ಮೂಲಕ ತಪಾಸಣೆಗಾಗಿ ವಾಹನಗಳನ್ನು ಫ್ಲ್ಯಾಗ್‌ಡೌನ್ ಮಾಡುವ ಅಗತ್ಯವನ್ನು ತಡೆಯುತ್ತದೆ.

ಒಟ್ಟು 726 AI ಕ್ಯಾಮೆರಾಗಳನ್ನು ಅಳವಡಿಕೆ:

ಕೇರಳದ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ (Kerala State Road Transport Corporation) ಒಟ್ಟು 726 AI ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಪೊಲೀಸ್, ಅಬಕಾರಿ, ಮೋಟಾರು ವಾಹನ ಮತ್ತು ಜಿಎಸ್‌ಟಿ ಇಲಾಖೆಗಳ ನಡುವೆ ವಿಭಜಿಸಲಾಗಿದೆ. ಅಲ್ಲದೆ ಇದರಲ್ಲಿ ಮುಖ್ಯವಾಗಿ ಸೆರೆಹಿಡಿಯುವಿಕೆ, ಸಾಕ್ಷ್ಯ ಸಂಗ್ರಹಣೆ ಮತ್ತು ಕಣ್ಗಾವಲು (Capture, Evidence gathering and Surveillance) ಎಂಬ ಮೂರು ಕಾರ್ಯಗಳನ್ನು ಈ AI-ಸಕ್ರಿಯಗೊಳಿಸಿದ ಕ್ಯಾಮರಾಗಳು ನಿರ್ವಹಿಸುತ್ತವೆ.

AI ಕ್ಯಾಮೆರಾಗಳು ಹೇಗೆ ಕಾರ್ಯನಿರ್ವಹಿಸಲಿದೆ:

726 ಕ್ಯಾಮೆರಾಗಳ ಪೈಕಿ 675 ಕ್ಯಾಮೆರಾಗಳನ್ನು ಅಪಘಾತದ ನಂತರ ನಿಲ್ಲಿಸದ ವಾಹನಗಳು, ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರು ಮತ್ತು ಸೀಟ್ ಬೆಲ್ಟ್ ಇಲ್ಲದೆ ಗಾಡಿ ಓಡಿಸುವ ಚಾಲಕರನ್ನು ಹಿಡಿಯಲು ಬಳಸಲಾಗುವುದು. ಇನ್ನು ಕಾನೂನುಬಾಹಿರ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ ಗಾಡಿಗಳನ್ನು ಹಿಡಿಯಲು 25 ಕ್ಯಾಮೆರಾಗಳು, ವೇಗದ ಚಾಲಕರನ್ನು ಹಿಡಿಯಲು ನಾಲ್ಕು ಸ್ಥಿರ ಕ್ಯಾಮೆರಾಗಳು ಮತ್ತು ಕೆಂಪು ದೀಪಗಳನ್ನು ಹಾರಿಸುವವರನ್ನು ಹಿಡಿಯಲು 18 ಕ್ಯಾಮೆರಾಗಳನ್ನು ಬಳಸಲಾಗುವುದು. ಇದನ್ನು ಆಯೋಜಿಸಲು ಪ್ರತಿ 14 ಜಿಲ್ಲೆಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗುವುದು.

ಉಲ್ಲಂಘನೆಯ 6 ಗಂಟೆಗಳೊಳಗೆ ಮೆಸೇಜ್ ಬರುತ್ತೆ 

ಈ ದೃಶ್ಯಗಳನ್ನು ಪಟ್ಟಿ ಮಾಡಿ ಜಿಲ್ಲಾ ಮಟ್ಟದ ನಿಯಂತ್ರಣ ಕೇಂದ್ರಗಳಿಗೆ ಕಳುಹಿಸಲಾಗುವುದು ಎಂದು ಮೋಟಾರು ವಾಹನ ಇಲಾಖೆ (MVD) ಫೇಸ್‌ಬುಕ್‌ನಲ್ಲಿ ತಿಳಿಸಿದೆ. ನಂತರ ರಾಷ್ಟ್ರೀಯ ಡೇಟಾಬೇಸ್‌ಗೆ ರವಾನಿಸಲಾಗುತ್ತದೆ ಮತ್ತು ಇ-ಚಲನ್ ಅನ್ನು ರಚಿಸಲಾಗುತ್ತದೆ. ಉಲ್ಲಂಘನೆಯಾದ 6 ಗಂಟೆಗಳ ಒಳಗೆ ನೋಂದಾಯಿತ ಕಾರು ಮಾಲೀಕರ ಫೋನ್‌ಗೆ ಮೆಸೇಜ್ ಅನ್ನು ಕಳುಹಿಸಲಾಗುತ್ತದೆ.  ಈ ಚಲನ್‌ಗಳ ಬಗ್ಗೆ ಸಂಬಂಧಿಸಿದ ಯಾವುದೇ ದೂರುಗಳನ್ನ ಪರಿಶೀಲಿಸುವುದಕ್ಕೆ ಆಯಾ ಜಿಲ್ಲಾ RTO ಜಾರಿ ಕಚೇರಿಯನ್ನ ಸಂಪರ್ಕಿಸಬೇಕು ಎಂದು MVD ತಿಳಿಸಿದ್ದಾರೆ.

ಯಾವ ಉಲ್ಲಂಘನೆಗೆ ಎಷ್ಟು ಚಲನ್‌ಗಳ ಶುಲ್ಕ!

Use of mobile phone while driving: Rs 2,000
Overspeeding: Rs 1,500
Driving/riding without seat belts or helmets: Rs 500
Vehicles without rear-view mirrors: Rs 200
Triple riding (bike): Rs 2,000

ಇದಷ್ಟೇ ಅಲ್ಲದೆ ಒಂದು ವೇಳೆ ನೀವು ಹೆದ್ದಾರಿಯಲ್ಲಿ ಬರುವ ಆಂಬ್ಯುಲೆನ್ಸ್‌ಗಳು, ಅಗ್ನಿಶಾಮಕ ಮತ್ತು ರಕ್ಷಣಾ ವಿಭಾಗದ ಆಟೋಮೊಬೈಲ್‌ಗಳಂತಹ ತುರ್ತು ವಾಹನಗಳ ಚಲನೆಗೆ ಅಡ್ಡಿಪಡಿಸುವ ಚಾಲಕರ ಬಗ್ಗೆಯೂ ಕ್ಯಾಮೆರಾಗಳು ಗಮನಿಸುತ್ತವೆ. ಅಲ್ಲದೆ ಇಂತಹ ಸಂದರ್ಭಗಳಲ್ಲಿ ವಿಶೇಷವಾಗಿ ದಂಡವನ್ನು ಸಹ ಹಾಕಲಾಗುವುದು. ಆದರೆ ಸದ್ಯಕ್ಕೆ ಇದಕ್ಕೆ ತಕ್ಕ ಅಧಿಕೃತ ಮಾಹಿತಿಗಳನ್ನು ಕೇರಳ ಸಾರಿಗೆ ಇಲಾಖೆ ಹಂಚಿಕೊಂಡಿಲ್ಲ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo