ದೇಶದಲ್ಲಿ ಕೆಲವು ಇಂಟರ್ನೆಟ್ ಸೇವಾ ಪೂರೈಕೆದಾರರು (ISP ಗಳು) ತಮ್ಮ ಬ್ರಾಡ್‌ಬ್ಯಾಂಡ್ ಯೋಜನೆಗಳಲ್ಲಿ ನೆಟ್‌ಫ್ಲಿಕ್ಸ್ ಚಂದಾದಾರಿಕೆಯನ್ನು ಪ್ರಾರಂಭಿಸಿದೆ. ಕೆಲವು ವಾರಗಳ ಹಿಂದೆ ACT ನೆಟ್‌ಫ್ಲಿಕ್ಸ್ ಬಂಡಲ್ ಯೋಜನೆಗಳನ್ನು ನೀಡಲು ಪ್ರಾರಂಭಿಸಿದೆ. ಕಂಪನಿಯು ವಿವಿಧ ನಗರಗಳಲ್ಲಿ ವಿಭಿನ್ನ ಯೋಜನೆಗಳನ್ನು ನೀಡುತ್ತದೆ. ಇದರಿಂದಾಗಿ ನೀವು ಸದ್ಯಕ್ಕೆ ದೆಹಲಿಯಲ್ಲಿ ನೋಡಬಹುದಾದ ನೆಟ್‌ಫ್ಲಿಕ್ಸ್ ಬಂಡಲ್ ಯೋಜನೆಗಳು ಬೆಂಗಳೂರಿನ ಬಳಕೆದಾರರಿಗೆ ಲಭ್ಯವಿರುವ ಯೋಜನೆಗಳಿಗಿಂತ ಭಿನ್ನವಾಗಿರುತ್ತವೆ.
ನೀವು ದೆಹಲಿಯವರಾಗಿದ್ದರೆ ACT ನ ನೆಟ್‌ಫ್ಲಿಕ್ಸ್ ಪ್ಯಾಕೇಜ್ ಆಫರ್‌ಗಳ ಕುರಿತು ಇನ್ನಷ್ಟು ಡಿಟೈಲ್ಸ್ ಇಲ್ಲಿದೆ ನೋಡಿ. ದೆಹಲಿ ಬಳಕೆದಾರರಿಗಾಗಿ ACT ನಿಂದ Netflix ಗ್ರಾಹಕರಿಗೆ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಬಂಡಲ್ ಮಾಡಿದೆ. ACT ಕೇವಲ 6 ತಿಂಗಳ ಮತ್ತು 12 ತಿಂಗಳ ವ್ಯಾಲಿಡಿಟಿಯ ಬ್ರಾಡ್‌ಬ್ಯಾಂಡ್ ಯೋಜನೆಗಳೊಂದಿಗೆ ನೆಟ್‌ಫ್ಲಿಕ್ಸ್ ಚಂದಾದಾರಿಕೆಯನ್ನು ನೀಡುತ್ತದೆ. ಇದಲ್ಲದೆ ನಾವು ಇಲ್ಲಿ ಹೆಚ್ಚಿನ ವೇಗದ ಯೋಜನೆಗಳ ಬಗ್ಗೆ ಮಾತನಾಡುತ್ತಿದ್ದೇವೆ.
ದೆಹಲಿಯಲ್ಲಿರುವ ಬಳಕೆದಾರರು ನೆಟ್‌ಫ್ಲಿಕ್ಸ್ ಬೇಸಿಕ್‌ನೊಂದಿಗೆ ಮೂರು ಯೋಜನೆಗಳ ಆಯ್ಕೆಯನ್ನು ಹೊಂದಿದ್ದಾರೆ. ಮೊದಲ ಯೋಜನೆ ಇದು ತಿಂಗಳಿಗೆ ರೂ 799 ವೆಚ್ಚವಾಗುತ್ತದೆ ಮತ್ತು 150 Mbps ವೇಗವನ್ನು ಒದಗಿಸುತ್ತದೆ. ಈ ಯೋಜನೆಯನ್ನು ಸಿಲ್ವರ್ ಪ್ರೋಮೋ ಸ್ಟ್ರೀಮಿಂಗ್ ಎಂದು ಕರೆಯಲಾಗುತ್ತದೆ. ನೀವು ಉಚಿತ ನೆಟ್‌ಫ್ಲಿಕ್ಸ್ ಬೇಸಿಕ್ ಚಂದಾದಾರಿಕೆಯನ್ನು ಬಯಸಿದರೆ ಈ ಪ್ಯಾಕೇಜ್ ಅನ್ನು 6 ತಿಂಗಳು ಅಥವಾ 12 ತಿಂಗಳವರೆಗೆ ಖರೀದಿಸಬಹುದು.
ಇದರ ಎರಡನೇ ಯೋಜನೆ ಪ್ಲಾಟಿನಂ ಪ್ರೋಮೋ ಸ್ಟ್ರೀಮಿಂಗ್ ಗೆ ತಿಂಗಳಿಗೆ ರೂ 1049. ಈ ಯೋಜನೆಯೊಂದಿಗೆ ಬಳಕೆದಾರರು 250 Mbps ವೇಗವನ್ನು ಪಡೆಯುತ್ತಾರೆ. ಉಚಿತ ನೆಟ್‌ಫ್ಲಿಕ್ಸ್ ಬೇಸಿಕ್ ಚಂದಾದಾರಿಕೆಯನ್ನು ಸ್ವೀಕರಿಸಲು ಮೇಲೆ ತಿಳಿಸಿದ ಆಯ್ಕೆಗಳಂತೆಯೇ ನೀವು 6 ಅಥವಾ 12 ತಿಂಗಳವರೆಗೆ ಈ ಯೋಜನೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಕೊನೆಯದಾಗಿ ಡೈಮಂಡ್ ಸ್ಟ್ರೀಮಿಂಗ್ ಯೋಜನೆಯು ರೂ 1349 ಮತ್ತು 300Mbps ವೇಗವನ್ನು ಒದಗಿಸುತ್ತದೆ. ಅದೇ ನಿಯಮಗಳು ಮತ್ತು ಷರತ್ತುಗಳು ಈ ಯೋಜನೆಗೆ ಅನ್ವಯಿಸುತ್ತದೆ.
ನೀವು ಉಚಿತ ನೆಟ್‌ಫ್ಲಿಕ್ಸ್ ಬೇಸಿಕ್ ಚಂದಾದಾರಿಕೆಯನ್ನು ಪಡೆಯಲು 6 ಅಥವಾ 12 ತಿಂಗಳವರೆಗೆ ತೆಗೆದುಕೊಳ್ಳಬೇಕಾಗುತ್ತದೆ. ನೆಟ್‌ಫ್ಲಿಕ್ಸ್ ಬೇಸಿಕ್ ನಿಂದ ನೆಟ್‌ಫ್ಲಿಕ್ಸ್ ಸ್ಟ್ಯಾಂಡರ್ಡ್ಗೆ ಅಪ್‌ಗ್ರೇಡ್ ಮಾಡುವ ಆಯ್ಕೆಯನ್ನು ನೀವು ಹೊಂದಿರುವಿರಿ. ನೀವು ಅಪ್‌ಗ್ರೇಡ್ ಮಾಡಲು ಬಯಸಿದರೆ ಎರಡು ಚಂದಾದಾರಿಕೆಗಳ ನಡುವಿನ ಬೆಲೆ ವ್ಯತ್ಯಾಸವನ್ನು ಪಾವತಿಸಬೇಕು. ಉದಾಹರಣೆಗೆ ನೆಟ್‌ಫ್ಲಿಕ್ಸ್ ಸ್ಟ್ಯಾಂಡರ್ಡ್ಗೆ ಅಪ್‌ಗ್ರೇಡ್ ಮಾಡಲು ತಿಂಗಳಿಗೆ 499 ರೂಗಳಾಗಿವೆ. ಅಂದರೆ ನೆಟ್‌ಫ್ಲಿಕ್ಸ್ ಬೇಸಿಕ್ ಚಂದಾದಾರಿಕೆಗೆ ಪ್ರತಿ ತಿಂಗಳು ನಿಮಗೆ ಹೆಚ್ಚುವರಿ 300 ರೂ ವೆಚ್ಚವಾಗುತ್ತದೆ.