Aadhaar Mitra: ಇತ್ತೀಚೆಗೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಆಧಾರ್ ಸಂಬಂಧಿತ ಪ್ರಶ್ನೆಗಳೊಂದಿಗೆ ಬಳಕೆದಾರರಿಗೆ ಸಹಾಯ ಮಾಡಲು AI ನಿಂದ ನಡೆಸಲ್ಪಡುವ ಹೊಸ ಚಾಟ್‌ಬಾಟ್ ಅನ್ನು ಪ್ರಾರಂಭಿಸಿದೆ. ಇದನ್ನು ಆಧಾರ್ ಮಿತ್ರ ಎಂಬ ಹೆಸರಿನಲ್ಲಿ ಪರಿಚಯಿಸಲಾಗಿದೆ. PVC ಸ್ಟೇಟಸ್ ಅನ್ನು ಟ್ರ್ಯಾಕ್ ಮಾಡಲು ಇದು ನಿಮ್ಮನ್ನು ಅನುಮತಿಸುತ್ತದೆ. ಇದರಿಂದ ದೂರುಗಳನ್ನು ಸಹ ದಾಖಲಿಸಿಕೊಳ್ಳಬಹುದು ಹಾಗೂ ಇನ್ನೂ ಅನೇಕ ಕೆಲಸಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ.
ಆಧಾರ್ ಮಿತ್ರ ಎಂದರೇನು ಮತ್ತು ಅದನ್ನು ಹೇಗೆ ಬಳಸುವುದು ಎಂಬುದರ ಫುಲ್ ಡಿಟೈಲ್ಸ್ ಇಲ್ಲಿದೆ ನೋಡಿ. ಇದಕ್ಕಾಗಿ UIDAI ಟ್ವೀಟ್ ಮಾಡಿದ್ದು "#ResidentFirst #UIDAI ನ ಹೊಸ AI/ML ಆಧಾರಿತ ಚಾಟ್ ಬೆಂಬಲವು ಉತ್ತಮ ಬಳಕೆದಾರ ಅನುಭವಕ್ಕಾಗಿ ಈಗ ಲಭ್ಯವಿದೆ. ಸಾರ್ವಜನಿಕರು ಈಗ ತಮ್ಮ ಕುಂದುಕೊರತೆಗಳನ್ನು ನೋಂದಾಯಿಸಿ ಟ್ರ್ಯಾಕ್ ಮಾಡಬಹುದು ಮತ್ತು ತಮ್ಮ #Aadhaar PVC ಕಾರ್ಡ್‌ಗಳ ಸ್ಟೇಟಸ್ ಅನ್ನು ಪರಿಶೀಲಿಸಬಹುದು. #AadhaarMitra ಅನ್ನು ಸಂಪರ್ಕಿಸಲು ನೀವು https://uidai.gov.in/en/ ಗೆ ಭೇಟಿ ನೀಡಬೇಕು.
UIDAI ನ ಹೊಸ ಚಾಟ್‌ಬಾಟ್ ಅನ್ನು ಆಧಾರ್ ಮಿತ್ರ ಎಂದು ಕರೆಯಲಾಗುತ್ತದೆ. www.uidai.gov.in ಗೆ ಹೋಗುವ ಮೂಲಕ ನೀವು ಇದನ್ನು ಪ್ರವೇಶಿಸಬಹುದು. ಚಾಟ್‌ಬಾಟ್ ವೆಬ್‌ಸೈಟ್‌ನೊಂದಿಗೆ ಬಳಕೆದಾರರ ಅನುಭವವನ್ನು ಸುಧಾರಿಸಲು ಮತ್ತು ಆಧಾರ್ ಕುರಿತು ಪ್ರಶ್ನೆಗಳಿಗೆ ಉತ್ತರಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಇದು ಆಧಾರ್ ಕೇಂದ್ರವನ್ನು ಹುಡುಕುವುದು, ನೋಂದಾಯಿಸುವುದು, ನಿಮ್ಮ ಮಾಹಿತಿಯನ್ನು ಅಪ್ಡೇಟ್ ಮಾಡಲು PVC ಕಾರ್ಡ್‌ಗಳನ್ನು ಆರ್ಡರ್ ಮಾಡುವುದು, ದೂರುಗಳನ್ನು ಸಲ್ಲಿಸುವುದು ಮತ್ತು ದಾಖಲಾತಿ ಕೇಂದ್ರವನ್ನು ಹುಡುಕುವಂತಹ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ. AI ಚಾಟ್‌ಬಾಟ್ ಈಗ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಲಭ್ಯವಿದೆ.
https://twitter.com/GoI_MeitY/status/1589146573963169792?ref_src=twsrc%5Etfw
➥ನೀವು ಮೊದಲು www.uidai.gov.in ಗೆ ಭೇಟಿ ನೀಡಬೇಕು.
➥ನಂತರ ಮುಖಪುಟದಲ್ಲಿ ಆಧಾರ್ ಮಿತ್ರ ಬಾಕ್ಸ್ ಅನ್ನು ಕೆಳಗಿನ ಬಲ ಮೂಲೆಯಲ್ಲಿ ಇರುವುದನ್ನು ನೋಡುತ್ತೀರಿ.
➥ಈ ಬಾಕ್ಸ್ ಅನ್ನು ಕ್ಲಿಕ್ ಮಾಡುವುದರಿಂದ ಚಾಟ್‌ಬಾಟ್ ತೆರೆಯುತ್ತದೆ.
➥ನಂತರ ನಿಮ್ಮ ಪ್ರಶ್ನೆಯನ್ನು ಕೇಳಲು ಪ್ರಾರಂಭಿಸಿ ಮೇಲೆ ಕ್ಲಿಕ್ ಮಾಡಬೇಕು.
➥ಸರ್ಚ್ ಬಾಕ್ಸ್ ನಲ್ಲಿ ನಿಮ್ಮ ಪ್ರಶ್ನೆಯನ್ನು ನೀವು ಟೈಪ್ ಮಾಡುವ ಮೂಲಕ ಉತ್ತರವನ್ನು ಪಡೆಯುತ್ತೀರಿ.