ಎಚ್ಚರ! ಕತ್ತಲಲ್ಲಿ ಸ್ಮಾರ್ಟ್ಫೋನ್ ಬಳಸುತ್ತೀರಾ? ಡಿಜಿಟಲ್ ವಿಷನ್ ಸಿಂಡ್ರೋಮ್ ಖಾಯಿಲೆಗೆ ತುತ್ತಾಗುವ ಸಾಧ್ಯತೆ!

ಎಚ್ಚರ! ಕತ್ತಲಲ್ಲಿ ಸ್ಮಾರ್ಟ್ಫೋನ್ ಬಳಸುತ್ತೀರಾ? ಡಿಜಿಟಲ್ ವಿಷನ್ ಸಿಂಡ್ರೋಮ್ ಖಾಯಿಲೆಗೆ ತುತ್ತಾಗುವ ಸಾಧ್ಯತೆ!
HIGHLIGHTS

ಸ್ಮಾರ್ಟ್‌ಫೋನ್ ಅನ್ನು ಜನರು ಅತಿ ಹೆಚ್ಚಾಗಿ ಬಳಸುತ್ತಲಿದ್ದು ಇದರಿಂದ ಅನೇಕ ದುಷ್ಪರಿಣಾಮಗಳು ಪರಿಣಾಮಗಳು ಉಂಟಾಗುತ್ತವೆ.

ಈ ಅಭ್ಯಾಸದಿಂದ ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲು ಅವಕಾಶ ನೀಡುತ್ತದೆ.

ಕತ್ತಲಲ್ಲಿ ಸ್ಮಾರ್ಟ್ ಫೋನ್ ಬಳಸುವ ಅಭ್ಯಾಸದಿಂದಾಗಿ 30 ವರ್ಷದ ಮಹಿಳೆಯೊಬ್ಬರ ದೃಷ್ಟಿಗೆ ಹೇಗೆ ಹಾನಿಯಾಗಿದೆ ಎನ್ನುವುದನ್ನು ತಮ್ಮ ಟ್ವಿಟರ್ ನಲ್ಲಿ ಬಹಿರಂಗಪಡಿಸಿದ್ದಾರೆ.

ಸ್ಮಾರ್ಟ್‌ಫೋನ್ ಅನ್ನು ಜನರು ಅತಿ ಹೆಚ್ಚಾಗಿ ಬಳಸುತ್ತಲಿದ್ದು ಇದರಿಂದ ಅನೇಕ ದುಷ್ಪರಿಣಾಮಗಳು ಪರಿಣಾಮಗಳು ಉಂಟಾಗುತ್ತವೆ. ಈ ಅಭ್ಯಾಸದಿಂದ ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲು ಅವಕಾಶ ನೀಡುತ್ತದೆ. ಹೈದರಾಬಾದ್‌ನ ಮಹಿಳೆಯೊಬ್ಬರು ರಾತ್ರಿ ವೇಳೆ ಸ್ಮಾರ್ಟ್‌ಫೋನ್ ಬಳಸುತ್ತಿದ್ದರು. ಇವರು ರಾತ್ರಿಯಲ್ಲಿ ಸಾಮಾಜಿಕ ಜಾಲತಾಣಗಳನ್ನು ಸ್ಕ್ರೋಲಿಂಗ್ ಮಾಡುವ ಅಭ್ಯಾಸದಿಂದ ದೃಷ್ಟಿ ಕಳೆದುಕೊಳ್ಳುವಂತೆ ಆಗಿದೆ. ಹೈದರಾಬಾದ್‌ನ ನರರೋಗ ತಜ್ಞ ಡಾ.ಸುಧೀರ್ ರವರು ಕತ್ತಲಲ್ಲಿ ಸ್ಮಾರ್ಟ್ ಫೋನ್ ಬಳಸುವ ಅಭ್ಯಾಸದಿಂದಾಗಿ 30 ವರ್ಷದ ಮಹಿಳೆಯೊಬ್ಬರ ದೃಷ್ಟಿಗೆ ಹೇಗೆ ಹಾನಿಯಾಗಿದೆ ಎನ್ನುವುದನ್ನು ತಮ್ಮ ಟ್ವಿಟರ್ ನಲ್ಲಿ ಬಹಿರಂಗಪಡಿಸಿದ್ದಾರೆ. 

ಸ್ಮಾರ್ಟ್‌ಫೋನ್ ಡಿಜಿಟಲ್ ವಿಷನ್ ಸಿಂಡ್ರೋಮ್

ಮಂಜು ಎಂಬ ರೋಗಿಯೊಬ್ಬರು ಫ್ಲೋಟರ್ಸ ಇರುವ ಲಕ್ಷಣ (ಕಣ್ಣು ಮಂಜಾಗುವ ತೊಂದರೆ ಖಾಯಿಲೆ) ಮತ್ತು ಸಾಂದರ್ಭಿಕವಾಗಿ ದೃಷ್ಟಿ ಕೊರತೆ ಅಥವಾ ವಸ್ತುಗಳ ಮೇಲೆ ಏಕಾಗ್ರತೆಯ ಕೊರತೆ ಈ ರೀತಿಯ ರೋಗಲಕ್ಷಣಗಳೊಂದಿಗೆ ಅವರನ್ನು ಭೇಟಿ ಮಾಡಿದ್ದಾರೆ ಎಂದು ವೈದ್ಯರು ಟ್ವಿಟರ್ ಥ್ರೆಡ್‌ನಲ್ಲಿ ಬಹಿರಂಗಪಡಿಸಿದ್ದಾರೆ. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ನಂತರ ಆಕೆಗೆ ಸ್ಮಾರ್ಟ್‌ಫೋನ್ ವಿಷನ್ ಸಿಂಡ್ರೋಮ್ (ಎಸ್‌ವಿಎಸ್) ಇರುವುದು ಪತ್ತೆಯಾಗಿದೆ. ಇದು ಕುರುಡುತನ ಸೇರಿದಂತೆ ಕಣ್ಣಿನ ಸಂಬಂಧಿತ ಸಮಸ್ಯೆಗಳನ್ನು ಉಂಟುಮಾಡಬಹುದು. ವೈದ್ಯರ ಪ್ರಕಾರ ಕತ್ತಲೆಯಲ್ಲಿ ಫೋನ್‌ ಅನ್ನು ಹೆಚ್ಚು ಸಮಯ ಬಳಸುವ ಅವರ ಈ ಅಭ್ಯಾಸವೇ ದೃಷ್ಟಿ ಕಳೆದುಕೊಳ್ಳಲು ಕಾರಣವಾಗಿದೆ. 

ಅವರು ಸುಮಾರು ಒಂದೂವರೆ ವರ್ಷಗಳಿಂದ ಈ ಅಭ್ಯಾಸ ಮಾಡಿಕೊಂಡಿದ್ದಾರೆ. ವಿಶೇಷ ಅಗತ್ಯವುಳ್ಳ ತಮ್ಮ ಮಗುವನ್ನು ನೋಡಿಕೊಳ್ಳಲು ಅವರು ಬ್ಯೂಟಿಷಿಯನ್ ವೃತ್ತಿಯನ್ನು ಬಿಟ್ಟಾಗ ಅವರ ರೋಗಲಕ್ಷಣಗಳು ಪ್ರಾರಂಭವಾದವು. ಲೈಟ್‌ಗಳನ್ನು ಆಫ್ ಮಾಡಿ ರಾತ್ರಿಯಲ್ಲಿ ಎರಡು ಗಂಟೆಗಳಿಗಿಂತ ಹೆಚ್ಚು ಕಾಲ ಪ್ರತಿದಿನ ತಮ್ಮ ಸ್ಮಾರ್ಟ್‌ಫೋನ್ ಬಳಸುವ ಹೊಸ ಅಭ್ಯಾಸವನ್ನು ಅವರು ಬೆಳೆಸಿಕೊಂಡರು ಎಂದು ಡಾ ಸುಧೀರ್ ತಮ್ಮ ಟ್ವಿಟರ್ ಥ್ರೆಡ್‌ನಲ್ಲಿ ಹೇಳಿದ್ದಾರೆ. ವೈದ್ಯರು ಅವರ ಅಭ್ಯಾಸವನ್ನು ನೋಡಿದ ನಂತರ ವೈದ್ಯಕೀಯ ಸಲಹೆಯನ್ನು ನೀಡಿದರು.

ನರರೋಗ ತಜ್ಞ ಡಾ.ಸುಧೀರ್ ರವರ ಟ್ವಿಟರ್ 

Digit.in
Logo
Digit.in
Logo