Cyber Scam: ಜನರನ್ನು ವಂಚಿಸಲು ವಂಚಕರು ಲೇಟೆಸ್ಟ್ ಮತ್ತು ಹೆಚ್ಚು ಸರಳವಾಗಿ ಬಲೆಗೆ ಬೀಳಿಸಿಕೊಳ್ಳುವ ಹೊಸ ಮಾರ್ಗಗಳೊಂದಿಗೆ ಮಾರುಕಟ್ಟೆಗೆ ಕಾಲಿಟ್ಟಿದ್ದಾರೆ. ಈ ವಂಚಕರು ನಿಮ್ಮ ವೈಯಕ್ತಿಕ ಇಮೇಲ್ ಮತ್ತು ನಂಬರ್‌ಗಳಿಗೆ ನಕಲಿ ಉದ್ಯೋಗಾವಕಾಶದ ಆಫರ್‌ಗಳೊಂದಿಗೆ ನಿಮ್ಮ ವಿದ್ಯುತ್ ಅಥವಾ ಫೋನ್ ಬಿಲ್‌ಗಳನ್ನು ತಕ್ಷಣವೇ ಪಾವತಿಸುವಂತೆ ಒತ್ತಾಯಿಸಲು WhatsApp, Facebook, SMS ಮತ್ತು ಕರೆಗಳೊಂದಿಗೆ ಸುಳ್ಳು ಜಾಹೀರಾತುಗಳನ್ನು ನೀಡಿ ಯಾಮಾರಿಸುತ್ತಿದ್ದ ಖತರ್ನಾಕ್ ಸ್ಟೋರಿ ಇಲ್ಲಿದೆ. ಈ ಸಾಮಾನ್ಯ ತರಕಾರಿ ವ್ಯಾಪಾರಿಯೊಬ್ಬ ದೇಶದ 10 ರಾಜ್ಯಗಳಿಂದ ಬರೋಬ್ಬರಿ 21 ಕೋಟಿ ಹಣ ದೋಚಿರುವ ಘಟನೆ ದೆಹಲಿ ಹತ್ತಿರದ ಫರೀದಾಬಾದ್‌ನಲ್ಲಿ ನಡೆದಿದೆ.
Also Read: Amazon ಸೇಲ್‌ನಲ್ಲಿ ಕೈಗೆಟಕುವ ಬೆಲೆಗೆ ಅತ್ಯುತ್ತಮ 4G ಫೋನ್‌ಗಳು ₹7000 ರೂಗಳೊಳಗೆ ಲಭ್ಯ
ದೇಶದಲ್ಲಿ ಅತಿ ಹೆಚ್ಚಾಗಿ ಹರಡಿದ ಈ ಕೋವಿಡ್ ಸಾಂಕ್ರಾಮಿಕದ ಮಧ್ಯೆ ಬರೋಬ್ಬರಿ 21 ಕೋಟಿ ರೂಗಳನ್ನು ಉಡೀಸ್ ಮಾಡಿರುವ ಈ ಖತರ್ನಾಕ್ ರಿಷಬ್ ಶರ್ಮಾ ಎಂಬ ವ್ಯಕ್ತಿಯನ್ನು ಪೊಲೀಸರು ಈಗ ಬಂಧಿಸಿದ್ದಾರೆ. ರಿಷಬ್ ಮೋಸದ ಮ್ಯಾರಿಯೊಟ್ ಬೊನ್ವಾಯ್ (Marriott Bonvoy) ಹೋಟೆಲ್ ವೆಬ್‌ಸೈಟ್‌ನಂತೆ ಕಾಣುವ ನಕಲಿ ವೆಬ್‌ಸೈಟ್ ಸೃಷ್ಟಿಸಿಕೊಂಡು ನಕಲಿ ಉದ್ಯೋಗಾವಕಾಶ ಮೂಲಕ ಹಣ ಕೀಳುವ ಉದ್ದೇಶದೊಂದಿಗೆ ಸಿಕ್ಕ ಸಿಕ್ಕವರನ್ನು ಅಮಾಯಕರನ್ನು ದಾರಿ ತಪ್ಪಿಸಿ ಮೋಸಗೊಳಿಸಿ ಅವರಿಂದ ಹಣ ಕಸಿಯುತ್ತಿದ್ದ.
ಇವರ ಅಪರಾಧಗಳ ತನಿಖೆಗಳು ಇತರ ದೇಶಗಳಲ್ಲಿನ ಕ್ರಿಮಿನಲ್ ಗುಂಪುಗಳೊಂದಿಗೆ ಸಂಪರ್ಕವನ್ನು ಕಂಡುಹಿಡಿಯಲು ಪೊಲೀಸರಿಗೆ ಕಾರಣವಾಯಿತು. ಒಮ್ಮೆ ರಿಷಭ್ ಶರ್ಮಾ ತರಕಾರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ ಸಾಂಕ್ರಾಮಿಕ ರೋಗದ ಸಮಯದಲ್ಲಿ ಇವರ ನಷ್ಟ ದೊಡ್ಡದಾದ ಕಾರಣ ಇದನ್ನು ತೊರೆದು ಮನೆಯಿಂದ ಕೆಲಸ ಮಾಡುವ ಕೆಲವು ಮೋಸದ ಯೋಜನೆಗಳಿದರು ಇಲ್ಲಿಂದ ಇವರ ಸೈಬರ್ ಕ್ರೈಂ ಕಹಾನಿ ಶುರುವಾಯ್ತು.
Also Read: SIM Swap Scam: ಮೂರು ಮಿಸ್ಡ್ ಕಾಲ್ ಕೊಟ್ಟು ವಕೀಲನ ಖಾತೆಯಿಂದ 50 ಲಕ್ಷ ಉಡೀಸ್ ಮಾಡಿದ ಹ್ಯಾಕರ್!
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ ಕೇವಲ ಆರು ತಿಂಗಳಲ್ಲಿ ರಿಷಭ್ ಶರ್ಮ ಜನರನ್ನು ಮೋಸಗೊಳಿಸಿ ಸುಮಾರು 21 ಕೋಟಿ ರೂಗಳನ್ನು ಭಾರತದ 10 ಹಲವು ರಾಜ್ಯಗಳಲ್ಲಿ 37 ವಂಚನೆ ಪ್ರಕರಣಗಳಲ್ಲಿ ಕೇಂದ್ರ ವ್ಯಕ್ತಿಯಾಗಿದ್ದಾನೆ. ಇದರೊಂದಿಗೆ ಇನ್ನು ಸುಮಾರು 855 ಇತರ ಹಗರಣಗಳಲ್ಲಿ ಸಹಾಯ ಮಾಡಿದ್ದಾರೆಂದು ತಿಳಿಸಿಲಾಗಿದೆ. ಇವನನ್ನು 28ನೇ ಅಕ್ಟೋಬರ್ 2023 ರಂದು ಪೊಲೀಸರು ಆತನನ್ನು ಬಂಧಿಸಿದರು. ಇನ್ನೂ ಆಘಾತಕಾರಿ ಸಂಗತಿಯೆಂದರೆ ಇವನು ಮತ್ತು ಇವರ ಗುಂಪು ಭಾರತ ಸೇರಿ ಚೀನಾ ಮತ್ತು ಸಿಂಗಾಪುರದಂತಹ ಇತರ ದೇಶಗಳಲ್ಲೂ ಇಂಹತ ಅಪರಾಧ ಗುಂಪುಗಳೊಂದಿಗೆ ರಹಸ್ಯ ವಿಧಾನಗಳನ್ನು ಬಳಸಿಕೊಂಡು ಹಣವನ್ನು ಕಳುಹಿಸಲಾಗುತ್ತಿದೆಂದು ತಿಳಿದಿದೆ.
ಆಗಲೇ ಆನ್ ಲೈನ್ ವಂಚನೆಯಲ್ಲಿ ತೊಡಗಿದ್ದ ಇವನ ಹಳೆಯ ಗೆಳೆಯನ ಜೊತೆ ಮತ್ತೆ ಕನೆಕ್ಷನ್ ಇಟ್ಟುಕೊಂಡನು ಅವನ ಸ್ನೇಹಿತ ಕೇಲವರ ಫೋನ್ ಸಂಖ್ಯೆ ಮತ್ತು ಇಮೇಲ್ಗಳನ್ನು ನೀಡಿದರು. ಇವನ್ನು ಕರೆ ಮಾಡಲು ಮತ್ತು ಇಮೇಲ್ ಮೂಲಕ ಅವರಿಗೆ ನಕಲಿ ಉದ್ಯೋಗದ ಆಸೆಯೊಡ್ಡಲು ಮುಂದಾದ. ಇವನು ಮ್ಯಾರಿಯಟ್ ಬೋನ್ವಾಯ್ ಹೋಟೆಲ್ ವೆಬ್‌ಸೈಟ್‌ನಂತೆ ಕಾಣುವ ನಕಲಿ ವೆಬ್‌ಸೈಟ್ ಅನ್ನು ರಚಿಸುವುದು ರಿಷಬ್‌ನ ತಂತ್ರವಾಗಿತ್ತು. ನಕಲಿ ಹೋಟೆಲ್ ವಿಮರ್ಶೆಗಳನ್ನು ಬರೆಯಲು ಅವರು ಪಾರ್ಟ್ ಟೈಮ್ ಉದ್ಯೋಗಗಳನ್ನು ನೀಡಿ ಮ್ಯಾರಿಯೊಟ್ ಬೊನ್ವಾಯ್‌ನ ಸಿಬ್ಬಂದಿಯಂತೆ ನಟಿಸಿದನು. ಹೆಚ್ಚಿನ ಭರವಸೆ ಗಳಿಸಲು ತನ್ನ ಸಹೋದ್ಯೋಗಿ ಸೋನಿಯಾ ಎಂಬಾಕೆಯೊಂದಿಗೆ ಉದ್ಯೋಗಾವಕಾಶಕ್ಕಾಗಿ ಬಂದ ವಂಚಿತರನ್ನು ಫೋನ್ ಮೂಲಕ ಮಾತನಾಡಿಸುತ್ತಿದ್ದನು. ಇವನ ಕೊನೆಯ ವಂಚಿತ 20 ಲಕ್ಷ ಕಳೆದುಕೊಂಡ ಡೆಹ್ರಾದೂನ್‌ನ ಉದ್ಯಮಿಯಾಗಿದ್ದಾನೆ.