Online Scam 2025: ಮಗಳಿಗೆ ಫುಡ್ ಆರ್ಡರ್ ಮಾಡಿ ಬರೋಬ್ಬರಿ 1.5 ಕೋಟಿ ಕಳೆದುಕೊಂಡ ಮಹಿಳೆ! ಆಗಿದ್ದೇನು ಗೊತ್ತಾ?

Online Scam 2025: ಮಗಳಿಗೆ ಫುಡ್ ಆರ್ಡರ್ ಮಾಡಿ ಬರೋಬ್ಬರಿ 1.5 ಕೋಟಿ ಕಳೆದುಕೊಂಡ ಮಹಿಳೆ! ಆಗಿದ್ದೇನು ಗೊತ್ತಾ?
HIGHLIGHTS

ಮುಂಬೈ ಮೂಲದ ಮಹಿಳೆಯೊಂದಿಗೆ ಬರೋಬ್ಬರಿ 1.5 ಕೋಟಿಯ Online Scam 2025 ನಡೆದಿದೆ.

ಮಗಳಿಗೆ ಕೇವಲ 3000 ರೂಗಳ ಫುಡ್ ಆರ್ಡರ್ ಮಾಡಲು ಹೋಗಿ ವಂಚಕರ ಕೈಗೆ 1.5 ಕೋಟಿ ಕೊಟ್ಟಿರುವ ದುರ್ಘಟನೆ ಇಲ್ಲಿದೆ.

ನಿಮಗೆ ಬರುವ ಅಪರಿಚಿತ ಕರೆ, ಲಿಂಕ್ ಅಥವಾ ಮೆಸೇಜ್ ಬಗ್ಗೆ ಅದರಲ್ಲೂ ಹಣದ ವಹಿವಾಟಿನ ವಿಷಯದಲ್ಲಿ ಒಂದಕ್ಕೆ 5 ಬಾರಿ ಪರಿಶೀಲಿಸಿ.

Online Scam 2025: ಭಾರತದ ದಕ್ಷಿಣ ಮುಂಬೈನ 78 ವರ್ಷದ ಮಹಿಳೆಯೊಬ್ಬರು ಸೈಬರ್ ವಂಚನೆಗೆ ಬಲಿಯಾಗಿದ್ದಾರೆ. ಇವರನ್ನು ವಂಚಿಸಿರುವವರು ತಮ್ಮನ್ನು ದೆಹಲಿ ಪೊಲೀಸ್ ವಿಶೇಷ ತನಿಖಾ (Special Investigation Team of Delhi Police) ತಂಡದಿಂದ ಎಂದು ನಂಬಿಸಿ 1.5 ಕೋಟಿ ರೂಪಾಯಿಗಳನ್ನು ವಂಚಿಸಲಾಗಿದೆ. ಈ ವಯಸ್ಸಾದ ಮಹಿಳಾ ಗೃಹಿಣಿಯನ್ನು ನಿಮ್ಮ ಮೇಲೆ ಹಣ ವರ್ಗಾವಣೆ ಮತ್ತು ಮಾದಕವಸ್ತುಗಳ ಅಪರಾಧದ ತನಿಖೆಯಲ್ಲಿ ನೀವು ಭಾಗಿಯಾಗಿದ್ದಿರೆಂದು ನಂಬಿಸಿ ಎದರಿಸಿ ಸಂಭಂದವಿಲ್ಲದ ಪ್ರಕರಣಗಳನ್ನು ಆರೋಪಿಸಿ ಬರೋಬ್ಬರಿ 1.5 ಕೋಟಿ ಹಣ ಲೂಟಿ ಮಾಡಿರುವ ದುರ್ಘಟನೆಯ ಫುಲ್ ಮಾಹಿತಿ ಇಲ್ಲಿದೆ.

ಸಂಭಂದವಿಲ್ಲದ ಪ್ರಕರಣ ಆರೋಪಿಸಿ ಬರೋಬ್ಬರಿ 1.5 ಕೋಟಿ ಲೂಟಿ!

ಈ ವಂಚನೆಗೆ ಒಳಗಾದ ಮಹಿಳೆಯನ್ನು ಅವರಿದ್ದ ಪ್ರದೇಶದ ಪ್ರಮುಖ ಕಟ್ಟಡ ಗುತ್ತಿಗೆದಾರರ (Builder) ಸಂಬಂಧಿಕರೆಂದು ಗುರುತಿಸಲಾಗಿದೆ. ಕೆಲವು ವಾರಗಳ ಹಿಂದೆ ಮಹಿಳೆಯೊಬ್ಬರು ಯುಎಸ್‌ನಲ್ಲಿರುವ ತನ್ನ ಮಗಳಿಗೆ ದಿನಸಿ ವಸ್ತುಗಳನ್ನು ಕಳುಹಿಸಲು ಕೊರಿಯರ್ ಸೇವೆಯನ್ನು ನೇಮಿಸಿದಾಗ ಘಟನೆ ಪ್ರಾರಂಭವಾಯಿತು. ಮರುದಿನ ಆಕೆಗೆ ಕೊರಿಯರ್ ಸೇವೆಯಿಂದ ಅಪರಿಚಿತರ ಕರೆ ಬಂದಿದ್ದು ಆಕೆಯ ಪಾರ್ಸೆಲ್ ಒಳಗೆ ಕೇವಲ ದಿನಸಿ ಮಾತ್ರವಲ್ಲದೆ ಅದಕ್ಕಿಂತ ಹೆಚ್ಚಿನ ವರಸ್ತುಗಳನ್ನು ಹೊಂದಿರುವದಾಗಿ ಕರೆಯಲ್ಲಿ ತಿಳಿಸಲಾಗಿದೆ.

Also Read: ವಾವ್! 6GB RAM ಮತ್ತು 50MP AI ಕ್ಯಾಮೆರಾದ Realme NARZO 70x 5G ಅತಿ ಕಡಿಮೆ ಬೆಲೆಗೆ ಮಾರಾಟ!

ಈ ರೀತಿ ಆರೋಪಿಸಿ ಪಾರ್ಸೆಲ್ ಒಳಗೆ ಆಕೆಯ ನಕಲಿ ಆಧಾರ್ ಕಾರ್ಡ್, ಅವಧಿ ಮುಗಿದಿರುವ ಪಾಸ್‌ಪೋರ್ಟ್‌ಗಳು, ಕ್ರೆಡಿಟ್ ಕಾರ್ಡ್‌ಗಳು ಮತ್ತು ನಿಷೇಧಿತ ವಸ್ತುಗಳೊಂದಿಗೆ ಸುಮಾರು $2,000 ನಗದು ಇದೆಯೆಂದು ಮಾಹಿತಿ ನೀಡಿ ಎದರಿಸಿದ್ದಾರೆ. ಅಷ್ಟೇಯಲ್ಲದೆ ವಂಚಕರು ಈ ಮಹಿಳೆಯನ್ನು ಬೇರೆ ಇಬ್ಬರು ಪುರುಷರೊಂದಿಗೆ ಈ ಪ್ರಕರಣದ ಬಗ್ಗೆ ಮೊದಲೇ ಪಿತೂರಿ ನಡೆಸಲಾಗಿದೆ ಎಂದು ಹೇಳಿ ಮಹಿಳೆಯ ಮೈ ನಡಗುವಂತ ಸನ್ನಿವೇಶವನ್ನು ಕರೆಯಲ್ಲೆ ಸೃಷ್ಟಿಸಿದ್ದಾರೆ.

Online Scam 2025 - Woman loses Rs 1.5 Crore
Online Scam 2025 – Woman loses Rs 1.5 Crore

ಇದನ್ನು ಮತ್ತಷ್ಟು ಅಸಲಿಯಾಗಿ ತೋರಿಸಲು ವಂಚಕರು ಸೈಬರ್ ಕ್ರೈಮ್ ಇಲಾಖೆ ಮತ್ತು ಹಣಕಾಸು ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳೆಂದು ಪರಿಚಯಿಸಿಕೊಂಡಿದ್ದಾರೆ. ಕೊನೆಗೆ ವೀಡಿಯೊ ಕರೆಯನ್ನು ಮಾಡಿ ಪೊಲೀಸ್ ಸಮವಸ್ತ್ರದಲ್ಲಿ ಕಾಣಿಸಿಕೊಂಡು ಸಂಭಂದವಿಲ್ಲದ ಪ್ರಕರಣಗಳಿಗೆ ಬೆಂಬಲಿಸುವ ನಕಲಿ ಬಂಧನ ವಾರಂಟ್‌ಗಳು (Fake Arrest Warrant) ಮತ್ತು ತನಿಖಾ ವರದಿಗಳಂತಹ ಸುಳ್ಳು ದಾಖಲೆಗಳನ್ನು ಸಹ ವಿಡಿಯೋ ಕರೆಯಲ್ಲಿ ಮಹಿಳೆಗೆ ತೋರಿಸಿದ್ದಾರೆ.

ಕೊನೆಗೂ Online Scam 2025 ಬಲೆಗೆ ಬಿದ್ದೆ ಬಿಟ್ಟಳು!

ವಂಚಕರು ಮಹಿಳೆಗೆ ಅಸಲಿಯಾಗಿ ಕಾಣುವ ನಕಲಿ ಸರ್ಚ್ ವಾರಂಟ್‌ಗಳನ್ನು ವಾಟ್ಸಾಪ್‌ ಮೂಲಕ ಕಳುಹಿಸಿದ್ದಾರೆ. ಒತ್ತಡದಲ್ಲಿ ಮಹಿಳೆ ತನ್ನ ವೈಯಕ್ತಿಕ ಮಾಹಿತಿ ಮತ್ತು ಯಾವುದೇ ಹೆಚ್ಚುವರಿ ನಸ್ತವನ್ನು ಬರಿಸಲು ಅಸಹಾಯಕಾರದ ಕಾರಣ ಕೊನೆಗೆ ತಮ್ಮ ಬ್ಯಾಂಕ್ ವಿವರಗಳನ್ನು ಬಹಿರಂಗಪಡಿಸಲು ಮನವೊಲಿಸಿಕೊಂಡರು. ತನಿಖೆಯ ವೇಳೆ ವೈಯಕ್ತಿಕ ಮಾಹಿತಿ ಮತ್ತು ಆಸ್ತಿಯನ್ನು ರಕ್ಷಿಸಲು ಬಯಸುವುದಾಗಿ ನಂಬಿಸಿ ವಂಚಕ ನೀಡಿದ ಬ್ಯಾಂಕ್ ಖಾತೆಗೆ 1.51 ಕೋಟಿ ರೂಪಾಯಿಗಳನ್ನು ಪಡೆದುಕೊಂಡಿದ್ದಾರೆ. ಹಣ ಪಡೆದ ನಂತರ ಮಹಿಳೆ ಇದರ ಬಗ್ಗೆ ಮನೆಯವರೊಂದಿಗೆ ಮಾತನಾಡಿದ ಬಳಿಕವಷ್ಟೇ ತಾನು ಮೋಸ ಹೋಗಿರುವ ವಿಷಯ ತಿಳಿದು ಬಂದಿದೆ.

Online Scam 2025 - Woman loses Rs 1.5 Crore
Online Scam 2025 – Woman loses Rs 1.5 Crore

ತಕ್ಷಣವೇ ಸೈಬರ್ ಕ್ರೈಮ್ ಪೊಲೀಸ್ ಸಹಾಯವಾಣಿಗೆ ಅಪರಾಧವನ್ನು ವರದಿ ಮಾಡಿದರು ಮತ್ತು ಪ್ರಕರಣವನ್ನು ಮುಂಬೈ ಪೊಲೀಸ್ ದಕ್ಷಿಣ ಸೈಬರ್ ಸೆಲ್‌ಗೆ ವರ್ಗಾಯಿಸಲಾಯಿತು. ಆದರೆ ವಂಚಕರು ತ್ವರಿತವಾಗಿ ಹಣವನ್ನು ವರ್ಗಾಯಿಸಲು ಬಹು ಖಾತೆಗಳನ್ನು ಬಳಸುತ್ತಿದ್ದಾರೆ ಎಂದು ಅಧಿಕಾರಿಗಳು ಕಂಡುಕೊಂಡಿದ್ದು ಅವುಗಳನ್ನು ಪತ್ತೆಹಚ್ಚಲು ಈಗ ಕಷ್ಟವೆಂದು ಹೇಳಲಾಗಿದೆ. ಸೈಬರ್ ಕ್ರೈಮ್ ತಜ್ಞರು ಇಂತಹ ವಂಚನೆಗಳ ಬಗ್ಗೆ ಜನರು ವಿಶೇಷವಾಗಿ ವಯಸ್ಸಾದವರು ಜಾಗರೂಕರಾಗಿರಲು ಒತ್ತಾಯಿಸುತ್ತಾರೆ. ಅಲ್ಲದೆ ಇಂತಹ ಅನುಮಾನಾಸ್ಪದ ಚಟುವಟಿಕೆಯನ್ನು ತಕ್ಷಣವೇ ವರದಿ ಮಾಡಲು ಅವರು ಶಿಫಾರಸು ಮಾಡುತ್ತಾರೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo