ದೇಶದಲ್ಲಿ 5G ನೆಟ್ವರ್ಕ್ ಕನಸು ಶೀಘ್ರದಲ್ಲಿಯೇ ನನಸಾಗಲಿದ್ದು ಅಂತಿಮ ಹಂತಕ್ಕೆ ಕಾಲಿಟ್ಟಿದೆ

Updated on 19-Feb-2022
HIGHLIGHTS

ದೇಶದಲ್ಲಿ 5G ನೆಟ್ವರ್ಕ್ ಕನಸು ಶೀಘ್ರದಲ್ಲಿಯೇ ನನಸಾಗಲಿದೆ.

ಭಾರತದಲ್ಲಿಯೂ ಈ ವರ್ಷದ ಅಂತ್ಯದ ವೇಳೆಗೆ 13 ಮೆಟ್ರೋ ನಗರಗಳು ಮೊದಲ ಬಾರಿಗೆ 5G ಸೇವೆಗಳನ್ನು ಅನುಭವಿಸಲಿವೆ.

ಪ್ರಸ್ತುತ ಎರಡು ಗಂಟೆಗಳ ಚಲನಚಿತ್ರವನ್ನು ಡೌನ್‌ಲೋಡ್ ಮಾಡಲು ಸುಮಾರು 7 ನಿಮಿಷಗಳನ್ನು ಸಮಯಾವಕಾಶ ಬೇಕಾಗುತ್ತದೆ

ದೇಶದಲ್ಲಿ 5G ನೆಟ್ವರ್ಕ್ ಕನಸು ಶೀಘ್ರದಲ್ಲಿಯೇ ನನಸಾಗಲಿದೆ. ಏಕೆಂದರೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರ ಪ್ರಕಾರ ಭಾರತದಲ್ಲಿ 5G ನೆಟ್‌ವರ್ಕ್ ಅಭಿವೃದ್ಧಿ ಅಂತಿಮ ಹಂತದಲ್ಲಿದೆ. ಇಂಡಿಯಾ ಟೆಲಿಕಾಂ 2022 ಬಿಸಿನೆಸ್ ಎಕ್ಸ್‌ಪೋವನ್ನು ಉದ್ದೇಶಿಸಿ ಮಾತನಾಡಿದ ಸಚಿವರು ದೇಶವು ದೇಶೀಯ 4G ಕೋರ್ ಮತ್ತು ರೇಡಿಯೋ ನೆಟ್‌ವರ್ಕ್‌ಗಳನ್ನು ಅಭಿವೃದ್ಧಿಪಡಿಸಿದೆ ಮತ್ತು 6G ಮಾನದಂಡಗಳ ಅಭಿವೃದ್ಧಿಯಲ್ಲಿ ಭಾಗವಹಿಸುತ್ತಿದೆ. 

5G  ಶೀಘ್ರದಲ್ಲಿಯೇ ತಲುಪಲಿದೆ

ಈವೆಂಟ್ ಅನ್ನು ಟೆಲಿಕಾಂ ಸಲಕರಣೆ ಮತ್ತು ಸೇವೆಗಳ ರಫ್ತು ಪ್ರಮೋಷನ್ ಕೌನ್ಸಿಲ್ (TEPC) ವಾಣಿಜ್ಯ ಇಲಾಖೆಯ ಮಾರುಕಟ್ಟೆ ಪ್ರವೇಶ ಇನಿಶಿಯೇಟಿವ್ ಸ್ಕೀಮ್ (MAI) ಅಡಿಯಲ್ಲಿ ಆಯೋಜಿಸಿದೆ. ಭಾರತದಲ್ಲಿಯೂ ಈ ವರ್ಷದ ಅಂತ್ಯದ ವೇಳೆಗೆ 13 ಮೆಟ್ರೋ ನಗರಗಳು  ಮೊದಲ ಬಾರಿಗೆ 5G ಸೇವೆಗಳನ್ನು ಅನುಭವಿಸಲಿವೆ. ಇವುಗಳಲ್ಲಿ ದೆಹಲಿ, ಮುಂಬೈ, ಪುಣೆ, ಕೋಲ್ಕತ್ತಾ, ಚೆನ್ನೈ, ಲಕ್ನೋ, ಚಂಡೀಗಢ, ಗುರುಗ್ರಾಮ್, ಬೆಂಗಳೂರು, ಹೈದರಾಬಾದ್, ಅಹಮದಾಬಾದ್, ಗಾಂಧಿನಗರ ಮತ್ತು ಜಾಮ್‌ನಗರ ಶಾಮೀಲಾಗಿವೆ. ಈ ನಗರಗಳ ನಂತರ ಇತರ ನಗರಗಳು ಮತ್ತು ಹಳ್ಳಿಗಳನ್ನು 5G  ಶೀಘ್ರದಲ್ಲಿಯೇ ತಲುಪಲಿದೆ.

5G ಸೇವೆಗಳ ರೋಲ್‌ಔಟ್‌ಗೆ ಅನುಕೂಲವಾಗುವಂತೆ ಸ್ಪೆಕ್ಟ್ರಮ್ ಅನ್ನು ಮುಂಬರುವ ತಿಂಗಳುಗಳಲ್ಲಿ ಹರಾಜು ಮಾಡಲಾಗುವುದು ಮತ್ತು ನಂತರ ನೀವು ಪಡೆಯುವ ಇಂಟರ್ನೆಟ್ ವೇಗವು ಕನಿಷ್ಠ 10 ಪಟ್ಟು ವೇಗವಾಗಿರಲಿದೆ. ಅಷ್ಟೇ ಅಲ್ಲ ಇದು ವೇಗವನ್ನು 100 ಪಟ್ಟು ವೇಗವಾಗಿ ಹೆಚ್ಚಿಸಬಹುದು. ನೀವು ಡೌನ್‌ಲೋಡ್ ಮೂಲಕ  ಚಲನಚಿತ್ರವನ್ನು ವಿಕ್ಷೀಸುತ್ತಿದ್ದರೆ ಕೇವಲ 10 ಸೆಕೆಂಡುಗಳಲ್ಲಿ ಸಂಪೂರ್ಣ ಚಲನಚಿತ್ರ ಡೌನ್‌ಲೋಡ್ ಮಾಡಬಹುದು. 

ಪ್ರಸ್ತುತ ಎರಡು ಗಂಟೆಗಳ ಚಲನಚಿತ್ರವನ್ನು ಡೌನ್‌ಲೋಡ್ ಮಾಡಲು ಸುಮಾರು 7 ನಿಮಿಷಗಳನ್ನು ಸಮಯಾವಕಾಶ ಬೇಕಾಗುತ್ತದೆ. ಈ ವೇಗವು ಸ್ಥಳ ಮತ್ತು ಸಾಧನವನ್ನು ಅವಲಂಬಿಸಿರುತ್ತದೆ.  5G ನೆಟ್‌ವರ್ಕ್  ಇಷ್ಟೊಂದು ವೇಗವಾಗಿರಬೇಕಾದರೆ 6G ನೆಟ್ವರ್ಕ್ (6G Speed) ಯಾವ ಕಮಾಲ್ ಮಾಡಲಿದೆ ನೀವೇ ಊಹಿಸಬಹುದು.  6G ನೆಟ್‌ವರ್ಕ್ 5G ನೆಟ್‌ವರ್ಕ್‌ನ ಗರಿಷ್ಠ ವೇಗಕ್ಕಿಂತ 100 ಪಟ್ಟು ವೇಗವಾಗಿರಲಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :