AC Buying Guide: ದಿನದಿಂದ ದಿನಕ್ಕೆ ಬಿಸಿಲು ಶಖೆ ಹೆಚ್ಚುತ್ತಿದ್ದು ಬೇಸಿಗೆ ಕಾಲ ಸಹ ಶುರುವಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಎಸಿಗೆ ಬೇಡಿಕೆ ಹೆಚ್ಚಾಗುತ್ತದೆ. ನೀವು ಹೊಸ ಎಸಿ (Air Conditioner) ಖರೀದಿಸಲು ಯೋಚಿಸುತ್ತಿದ್ದರೆ ನೀವು 5 ವಿಷಯಗಳನ್ನು ನೋಡಿಕೊಳ್ಳಬೇಕು. ಇಲ್ಲದಿದ್ದರೆ ನೀವು ನಷ್ಟವನ್ನು ಅನುಭವಿಸಬೇಕಾಗಬಹುದು. ಇದರಲ್ಲಿ ವಿಂಡೋ (Window AC) ಮತ್ತು ಸ್ಪ್ಲಿಟ್ (Split AC) ನಡುವೆ ಸರಿಯಾದ ಆಯ್ಕೆಯನ್ನು ಮಾಡಬೇಕು. ಸ್ಟಾರ್ ರೇಟಿಂಗ್ ಮತ್ತು ವಾರಂಟಿಯನ್ನು ಸಹ ಪರಿಶೀಲಿಸಿ. ಅಪ್‌ಗ್ರೇಡ್ ದಿನಗಳು ಹೆಚ್ಚು ಮಾರಾಟವಾಗುವ ಎಸಿಗಳಲ್ಲಿ 50% ವರೆಗೆ ರಿಯಾಯಿತಿ ಪಡೆಯಿರಿ.
ಮೊದಲಿಗೆ ಎಸಿ ಕೊಳ್ಳಲು ಕಾರಣ ಮತ್ತು ಆ ಎಸಿಯನ್ನು ಯಾವ ಸ್ಥಳದಲ್ಲಿ ಇಡಬೇಕು ಎನ್ನುವುದರ ಬಗ್ಗೆ ಗಮನವಿರಲಿ ಅಂದ್ರೆ ನಿಮ್ಮ ಕೋಣೆಯ ಗಾತ್ರಕ್ಕೆ ಅನುಗುಣವಾಗಿ ಎಸಿ ಆಯ್ಕೆ ಮಾಡಬೇಕು. ವಿಂಡೋ ಎಸಿ ಕಡಿಮೆ ವೆಚ್ಚವಾಗುತ್ತದೆ. ಆದರೆ ವಿಂಡೋ ಎಸಿಗಳು ಕೊಂಚ ಹೆಚ್ಚಾಗಿಯೇ ಶಬ್ದವನ್ನು ನೀಡುತ್ತವೆ. ವಿಂಡೋ ಎಸಿ ಹೆಚ್ಚು ತೂಕ ಹೊಂದಿದೆ. ನಿಮ್ಮ ಕೋಣೆಯಲ್ಲಿ ದೊಡ್ಡ ಕಿಟಕಿಗಳಿಲ್ಲದಿದ್ದರೆ ಸ್ಪ್ಲಿಟ್ ಎಸಿ ಖರೀದಿಸುವುದು ಸರಿಯಾದ ನಿರ್ಧಾರವಾಗಿದೆ. ಸ್ಪ್ಲಿಟ್ ಎಸಿ ಒಳಾಂಗಣ ಮತ್ತು ಹೊರಾಂಗಣದಲ್ಲಿ ಎರಡು ಘಟಕಗಳನ್ನು ಹೊಂದಿದೆ. ಸ್ಪ್ಲಿಟ್ ಎಸಿ ಅಳವಡಿಸಿದರೆ ಕೊಠಡಿ ಹೆಚ್ಚು ಸುಂದರವಾಗಿ ಕಾಣುತ್ತದೆ.
ಯಾವುದೇ ಒಂದು ಎಸಿ ಟನ್ ಅಥವಾ ಅದರ ತೂಕ ಅದರ ಕೂಲಿಂಗ್ ಸಾಮರ್ಥ್ಯವನ್ನು ಸೂಚಿಸುತ್ತದೆ. ನಿಮ್ಮ ಕೋಣೆಯ ಗಾತ್ರವು ದೊಡ್ಡದಾಗಿದ್ದರೆ ನೀವು ಹೆಚ್ಚು ಟಾನ್ ಹೊಂದಿರುವ AC ಅನ್ನು ಸ್ಥಾಪಿಸಬೇಕು. ದೊಡ್ಡ ಕೋಣೆಗೆ ಎಷ್ಟು ಟನ್ ಎಸಿ ಸರಿಯಾಗುತ್ತದೆ ಎಂಬ ಪ್ರಶ್ನೆ ಉದ್ಭವಿಸುವುದು ಸಾಮಾನ್ಯ. ಗಮನದಲ್ಲಿಡಿ ಸುಮಾರು 120 ಚದರ ಅಡಿ ಕೋಣೆಗೆ 1 ಟನ್ ಎಸಿ ಹೊಂದಿಕೊಳ್ಳುತ್ತದೆ. ಕ್ರಮವಾಗಿ 180 ಚದರ ಅಡಿ ವಿಸ್ತೀರ್ಣದ ಕೋಣೆಗೆ 1.5 ಟನ್ ಎಸಿ ಸೂಕ್ತವಾಗಿರುತ್ತದೆ. ಆದರೆ 250 ಚದರ ಅಡಿಗಳಿಗೆ 2 ಟನ್ ಎಸಿ ಅಳವಡಿಸಬೇಕು.
ಹೆಚ್ಚಿನ ಸ್ಟಾರ್ ರೇಟಿಂಗ್ ಹೊಂದಿರುವ ಎಸಿಗಳು ಹೆಚ್ಚು ವಿದ್ಯುತ್ ಉಳಿತಾಯ ಮಾಡುವುದರಿಂದ ಅವು ದುಬಾರಿಯಾಗಿರುತ್ತವೆ. ನೀವು ಪ್ರತಿ ವರ್ಷ 4-5 ತಿಂಗಳ ಕಾಲ ಪ್ರತಿದಿನ 7 ಗಂಟೆಗಳ ಕಾಲ ಎಸಿ ಓಡಿಸಬೇಕಾದರೆ 5 ಸ್ಟಾರ್ ರೇಟಿಂಗ್ ಸರಿಯಾಗಿರುತ್ತದೆ. ನಿಮ್ಮ AC ಪ್ರತಿದಿನ 2 ರಿಂದ 3 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿದ್ದರೆ ನೀವು 1, 3 ಅಥವಾ 5 ಸ್ಟಾರ್ ರೇಟಿಂಗ್ AC ಅನ್ನು ಖರೀದಿಸಬಹುದು.
ಇನ್ವರ್ಟರ್ ತಂತ್ರಜ್ಞಾನವು ಸಾಮಾನ್ಯವಾಗಿ ಸ್ಪ್ಲಿಟ್ AC ಗಳಿಗೆ ಸಂಬಂಧಿಸಿದೆ ಆದರೆ ನೀವು ಅದನ್ನು ಕೆಲವು ವಿಂಡೋ AC ಗಳಲ್ಲಿಯೂ ಕಾಣಬಹುದು. ಸರಳವಾಗಿ ಹೇಳುವುದಾದರೆ ಇನ್ವರ್ಟರ್ ಎಸಿಗಳು ಹೆಚ್ಚು ಪರಿಣಾಮಕಾರಿ ತಂಪಾಗಿಸುವಿಕೆಯೊಂದಿಗೆ ಕಡಿಮೆ ಶಕ್ತಿಯನ್ನು ಬಳಸುತ್ತವೆ. ಆದರೆ ಅವರ ವೆಚ್ಚ ಹೆಚ್ಚು. ನಿಮ್ಮ ಕೋಣೆಯಲ್ಲಿ ದಿನವಿಡೀ ಎಸಿ ಓಡಿಸಿದರೆ ಇನ್ವರ್ಟರ್ ಎಸಿ ಖರೀದಿಸುವುದು ಒಳ್ಳೆಯದು.
ಎಸಿ ಖರೀದಿಸುವಾಗ ವಾರಂಟಿ ಬಗ್ಗೆ ಕಾಳಜಿ ವಹಿಸಬೇಕು. ಅನೇಕ ಬಾರಿ ಜನರು ಖಾತರಿಯನ್ನು ನಿರ್ಲಕ್ಷಿಸುತ್ತಾರೆ. ಇದರೊಂದಿಗೆ ಸೇವಾ ಕೇಂದ್ರದ ಬಗ್ಗೆಯೂ ಕಾಳಜಿ ವಹಿಸಬೇಕು. ರಿಟರ್ನ್ ನೀತಿಯನ್ನು ಸಹ ಪರಿಶೀಲಿಸಿ. ಇದರೊಂದಿಗೆ ನಿಮ್ಮ ಹತ್ತಿರದ ಅಥವಾ ಸದಾ ನಿಮ್ಮ ಕರೆಗಳಿಗೆ ಸರಿಯಾದ ಮಾಹಿತಿಯನ್ನು ಸರಿಯಾದ ಸಮಯಕ್ಕೆ ನೀಡುವ ಕಸ್ಟಮರ್ ಕೇರ್ ಮತ್ತು ಬ್ರಾಂಡ್ ಸೇವಕರ ಮಾಹಿತಿಯನ್ನು ಖರೀದಿಸುವ ಮೊದಲು ಒಮ್ಮೆ ನೀವೇ ಕರೆ ಮಾಡಿ ಅನುಭವ ಪಡೆಯುವುದು ಉತ್ತಮ.