ಅತಿದೊಡ್ಡ ಕಂಪನಿಗಳಾದ ಆಲ್ಫಾಬೆಟ್ ಮತ್ತು ಗೂಗಲ್‌ನ ಸಿಇಒ ಸುಂದರ್ ಪಿಚೈ (Sundar Pichai) ಅವರು ದೀಪಾವಳಿಯಂದು ಪ್ರಪಂಚದಾದ್ಯಂತ ಸಾಕಷ್ಟು ಸರ್ಚ್ ನಡೆದಿವೆ ಎಂದು ಪೋಸ್ಟ್ ಮಾಡಿದ್ದಾರೆ. ಪ್ರಪಂಚದಾದ್ಯಂತ ದೀಪಾವಳಿಗೆ ಸಂಬಂಧಿಸಿದಂತೆ 5 ಹೆಚ್ಚು ಸರ್ಚ್ ಮಾಡಿರುವ ಪ್ರಶ್ನೆಗಳಿವೆ ಎಂದು ಅವರು ಹೇಳಿದರು ಅದರಲ್ಲಿ ಮೊದಲ ಪ್ರಶ್ನೆ ಭಾರತೀಯರು ದೀಪಾವಳಿಯನ್ನು ಏಕೆ ಆಚರಿಸುತ್ತಾರೆ? ದೀಪಾವಳಿಯ ಸಂದರ್ಭದಲ್ಲಿ ಏಕೆ ಟಾಪ್ ಟ್ರೆಂಡಿಂಗ್ ಆಗಿ ಉಳಿದಿದೆ. ಏಕೆಂದರೆ ಕೇವಲ ಭಾರತೀಯರಷ್ಟೇ ಅಲ್ಲ ಇತರ ಭಾರತೀಯರಂತೆ ಅವರು ಕೂಡ ದೀಪಾವಳಿಯ ಮಹತ್ವವನ್ನು ಅರ್ಥಮಾಡಿಕೊಳ್ಳುತ್ತಾರೆ.
ಇದಕ್ಕಾಗಿ Google CEO ಈ GIF ಅನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ 5 ಚುಕ್ಕೆಗಳಿದ್ದು ಇವುಗಳ ಸಹಾಯದಿಂದ ಗೂಗಲ್ ನಲ್ಲಿ ಈ ಐದು ಪ್ರಶ್ನೆಗಳನ್ನು ಹೆಚ್ಚು ಹುಡುಕಲಾಗಿದೆ ಎಂದು ಹೇಳಲಾಗಿದೆ. ಆದ್ದರಿಂದ ಈ ದೀಪಾವಳಿಯ ಶುಭ ಸಂದರ್ಭದಲ್ಲಿ ಅವರು ದೀಪಾವಳಿಯ ಶುಭಾಶಯಗಳನ್ನು ಕೋರಿದ್ದಾರೆ. ಇದಲ್ಲದೆ ಸುಂದರ್ ಪಿಚೈ ಅವರು ಪ್ರತ್ಯೇಕ ಪೋಸ್ಟ್‌ನಲ್ಲಿ ದೀಪಾವಳಿ ಶುಭಾಶಯಗಳನ್ನು ಹಂಚಿಕೊಂಡಿದ್ದಾರೆ.
ಪ್ರಪಂಚದಾದ್ಯಂತ ಇಂಟರ್‌ನೆಟ್‌ನಲ್ಲಿ ಈ ಸರ್ಚ್ ಬ್ರೌಸರ್‌ಗಳನ್ನು ಯಾವುದೇ ವಿಷಯಗಳನ್ನು ಹುಡುಕಲು ಹೆಚ್ಚು ಬಳಸಲಾಗುತ್ತದೆ. Statcounter ಗ್ಲೋಬಲ್‌ನ ವರದಿಗಳ ಪ್ರಕಾರ 2023 ಅಕ್ಟೋಬರ್‌ನಲ್ಲಿ ಇಡೀ ವಿಶ್ವದ್ಯಾಂತ Google ಶೇಕಡಾ 91.55% ಮಾರುಕಟ್ಟೆ ಸರ್ಚ್ ಪಾಲನ್ನು ಹೊಂದಿದ್ದು ಎರಡನೇಯದಾಗಿ Bing ಶೇಕಡಾ 3.11% ಪಾಲು ಹೊಂದಿದ್ದು ಮೂರನೇಯದಾಗಿ YANDEX ಶೇಕಡಾ 1.83% ಸರ್ಚ್ ಪಾಲುದಾರಿಕೆಯನ್ನು ಹೊಂದಿವೆ. ಇದರ ಕ್ರಮವಾಗಿ ಕೇವಲ ಭಾರತದಲ್ಲಿನ ಸರ್ಚ್ ನೋಡುವುದಾದರೆ ಬರೋಬ್ಬರಿ 98.45% ಶೇಕಡಾರಷ್ಟು ಸರ್ಚ್ ಪಾಲುದಾರಿಕೆಯನ್ನು ಹೊಂದಿವೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ