ಭಾರತದಲ್ಲಿ ಹೆಚ್ಚುತ್ತಿರುವ ಆನ್‌ಲೈನ್ ವಂಚಗಳಿಗೆ ಬ್ರೇಕ್ ಹಾಕಲು ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ (UPI) ಆನ್‌ಲೈನ್ ಪಾವತಿಗಳ ವಂಚನೆ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ RBI ಹೊಸ ನೀತಿಯನ್ನು ಪರಿಚಯಿಸಲು ಸಜ್ಜಾಗಿದೆ. ಯುಪಿಐ ಮೂಲಕ ತಪ್ಪಾಗಿ ಬೇರೆ ಬೇರೆ ಐಡಿಗಳಿಗೆ ಹಣ ಕಳುಹಿಸಿ ಮರಳಿ ಪಡೆಯಲು ಸಾಧ್ಯವಾಗದ ಸಾಕಷ್ಟು ಪ್ರಕರಣಗಳ ದೂರುಗಳು ದೇಶಾದ್ಯಂತ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಈ ಹೊಸ ನಿಯಮ ಬರಲಿದೆ. ಹೊಸ ಖಾತೆಗೆ 2000 ರೂಗಿಂತ ಹೆಚ್ಚಿನ ಮೊತ್ತದ ಹಣವನ್ನು ಕಳುಹಿಸಿದಾಗ 4 ಗಂಟೆಯೊಳಗೆ ಹಿಂಪಡೆಯಲು ಸೌಲಭ್ಯ ಒದಗಿಸುವ ಪ್ರಸ್ತಾಪದಲ್ಲಿ ಕೆಲಸ ಮಾಡುತ್ತಿದೆ.
Also Read: 5G ಡೇಟಾ ಮತ್ತು Unlimited ಕರೆಯೊಂದಿಗೆ 866 ರೂಗಳ ಈ Jio ಪ್ಲಾನ್ ಕ್ಯಾಶ್‌ಬ್ಯಾಕ್ ಸಹ ನೀಡುತ್ತಿದೆ
ಇದರ್ಥ ಈ ವಿಳಂಬ ನೀತಿಯ ಮೇರೆಗೆ ಆನ್ಲೈನ್ ವಂಚನೆಗಳನ್ನು ಒಂದು ಮಟ್ಟಕ್ಕೆ ತಡೆಯಬಹುದೆಂಬ ಲೆಕ್ಕಾಚಾರ ಸರ್ಕರದಾಗಿದೆ. ಮೊದಲ ಬಾರಿಗೆ 2000 ರೂ.ಗಿಂತ ಹೆಚ್ಚಿನ ವರ್ಗಾವಣೆಯನ್ನು ಸ್ವೀಕರಿಸುವವರ ಖಾತೆಗೆ ತಕ್ಷಣವೇ ಕಳುಹಿಸಲಾಗುವುದಿಲ್ಲ. ಇದಕ್ಕಾಗಿ 4 ಗಂಟೆಗಳ ಕಾಲಾವಕಾಶ ನೀಡಲಾಗುವುದು. ಈ ಪ್ರಸ್ತಾವನೆಯನ್ನು ಕಾರ್ಯಗತಗೊಳಿಸಿದರೆ ಇದನ್ನು ಬಹುಶಃ ಇತರ ನೈಜ ಸಮಯದ ಹಣ ವರ್ಗಾವಣೆ ಸೇವೆಗಳಲ್ಲಿಯೂ ಕಾರ್ಯಗತಗೊಳಿಸಬಹುದು.
ನೀವು ಮಾಡುವ ಯುಪಿಐ ಸೇವೆಗಳನ್ನು IMPS ಮತ್ತು RTGS ಸಹ ಸೇರಿದ್ದು ನೀವು ಮೊದಲ 24 ಗಂಟೆಗಳಲ್ಲಿ ಗರಿಷ್ಠ 5000 ರೂಗಳನ್ನು ವರ್ಗಾಯಿಸಬಹುದು. NEFT ಸಂದರ್ಭದಲ್ಲಿ ಮೊದಲ 24 ಗಂಟೆಗಳಲ್ಲಿ ಗರಿಷ್ಠ 50,000 ರೂಗಳನ್ನು ಕಳುಹಿಸಬಹುದು. ಈ ಮೊತ್ತವನ್ನು ಒಂದೇ ಬಾರಿಗೆ ಅಥವಾ ಬಹು ಕಂತುಗಳಲ್ಲಿ ಕಳುಹಿಸಬಹುದು. ಆದರೆ ಇದಕ್ಕಿಂತ ಹೆಚ್ಚಿನ ಮೊತ್ತವನ್ನು ಕಳುಹಿಸಲಾಗುವುದಿಲ್ಲ. ಹೊಸ ಯೋಜನೆಯ ಪ್ರಕಾರ ಒಬ್ಬ ವ್ಯಕ್ತಿಯು ಯುಪಿಐ ಮೂಲಕ ಮೊದಲ ಬಾರಿಗೆ 2000 ರೂಗಳನ್ನು ಯಾರಿಗಾದರೂ ಕಳುಹಿಸುತ್ತಿದ್ದರೆ ಅದು 4000 ಗಂಟೆಗಳ ನಂತರ ಅವರ ಖಾತೆಯನ್ನು ತಲುಪುತ್ತದೆ.
ಈ ನಿಟ್ಟಿನಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳು, ಗೂಗಲ್ ಮತ್ತು ರೇಜರ್‌ಪೇಯಂತಹ ಟೆಕ್ ಕಂಪನಿಗಳೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಂಗಳವಾರ ಈ ಸಭೆ ನಡೆದಿದ್ದು RBI ಪ್ರತಿನಿಧಿಗಳೂ ಭಾಗಿಯಾಗಿದ್ದರು. ಮೊದಲ ಬಾರಿಗೆ 2000 ರೂಪಾಯಿ ಪಾವತಿಸುವ ಜನರು ತಮ್ಮ ವಹಿವಾಟನ್ನು ಹಿಂತಿರುಗಿಸಲು 4 ಗಂಟೆಗಳ ಕಾಲಾವಕಾಶ ನೀಡಲಾಗುವುದು ಎಂದು ಅವರು ಹೇಳಿದರು.
ಈ ನಿಯಮ ಇನ್ನೂ ಪರಿಶೀಲನೆಯ ಹಂತದಲ್ಲಿದ್ದು ಜಾರಿಯಾಗಲು ಮತ್ತೆ ಒಂದಿಷ್ಟು ಸಮಯ ತೆಗೆದುಕೊಳ್ಳಬಹುದು. ನೀವು ಅಪರಿಚಿತ ಜಾಗಗಳಲ್ಲಿ ಮೊದಲ ಬಾರಿಗೆ ಹಣ ಪಾವತಿ ಮಾಡುವಾಗ ಇದು ಸಮಸ್ಯೆಯಾಗಲಿದೆ. ಜತೆಗೆ ಡಿಜಿಟಲ್ ಇಂಡಿಯಾದ ಕಲ್ಪನೆಯೇ ನಗದುರಹಿತ ವ್ಯವಹಾರ ತಡೆಯುವುದು ಈ ನಿಯಮ ಜಾರಿಯಾದರೆ ಆ ಯೋಜನೆಗೇ ಹೊಡೆತ ಬೀಳಲಿದ್ದು ನಂತರ ಗ್ರಾಹಕರು ಕಾರ್ಡ್ ವ್ಯವಹಾರಕ್ಕೆ ಕೈಹಾಕಬೇಕಾಗುತ್ತದೆ. ಆದರೆ ನಮ್ಮ ಗ್ರಾಮಾಂತರ ಪ್ರದೇಶಗಳಲ್ಲಿ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಕೆ ಅಷ್ಟಾಗಿ ಇಲ್ಲದಿರುವುದರಿಂದ ಬಹಳ ಗೊಂದಲವಾಗುವುದು ಅನಿವಾರ್ಯವಾಗುತ್ತದೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ