Best Geysers in India: ಚಳಿಗಾಲದಲ್ಲಿ ಗೀಸರ್ ಖರೀದಿಸುವ ಮುನ್ನ ಕೆಲವೊಂದು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ. ಸ್ಟಾರ್ ರೇಟಿಂಗ್‌ನಿಂದ ವಿದ್ಯುತ್ ಬಳಕೆಯನ್ನು ಅಂದಾಜು ಮಾಡಿ ಮತ್ತು ಕುಟುಂಬದ ಸದಸ್ಯರ ಪ್ರಕಾರ ಗಾತ್ರವನ್ನು ಆಯ್ಕೆಮಾಡಿ. ಯಾಕೆಂದರೆ ದುಬಾರಿ ಹಣ ನೀಡಿ ಉತ್ತಮ ಸೇವೆಯೊಂದಿಗೆ ಭರವಸೆ ಮತ್ತು ಸುರಕ್ಷೆ ಪಡೆಯುವುದು ಒಳ್ಳೆಯದ ಅಥವಾ ಕಡಿಮೆ ಬೆಲೆಗೆ ಸರಿಹೊಂದಿಸಿಕೊಂಡು ಸದಾ ಭಯಬೀತಾರಾಗಿ ಬಳಸುವುದು ಒಳ್ಳೇದ ಈ ಎರಡು ಆಯ್ಕೆಗಳು ನಿಮ್ಮ ಮುಂದಿವೆ. ನಿಮಗೆ ಬೇಕಾದನ್ನು ನಿಮ್ಮ ಜನತನಕ್ಕೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಬಹುದು.
ಚಳಿಗಾಲ ಶುರುವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಗೀಸರ್‌ಗಳಿಗೆ ಬೇಡಿಕೆಯೂ ಹೆಚ್ಚಾಗತೊಡಗಿದೆ. ನೀವೂ ಸಹ ಗೀಸರ್ ಖರೀದಿಸಲು ಯೋಚಿಸುತ್ತಿದ್ದರೆ ನಾವು ನಿಮಗೆ ಕೆಲವು ವಿಷಯಗಳ ಬಗ್ಗೆ ಹೇಳಲಿದ್ದೇವೆ. ಅದರ ಸಹಾಯದಿಂದ ಯಾವ ಗೀಸರ್ ಖರೀದಿಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವುದು ನಿಮಗೆ ಸುಲಭವಾಗುತ್ತದೆ? ಇದರಿಂದ ನಿಮ್ಮ ಜೇಬಿನಲ್ಲಿ ಹೆಚ್ಚಿನ ಹೊರೆ ಇರುವುದಿಲ್ಲ ಅಥವಾ ನಂತರ ನೀವು ವಿಷಾದಿಸಬೇಕಾಗಿಲ್ಲ.
ನೀವು ಗೀಸರ್ ಖರೀದಿಸಲು ಹೊರಟಿದ್ದರೆ ಮೊದಲು ನೀವು ಸ್ಟಾರ್ ರೇಟಿಂಗ್ ಅನ್ನು ಪರಿಶೀಲಿಸಬೇಕು. ಏಕೆಂದರೆ ಅದರ ಸಹಾಯದಿಂದ ನೀವು ಕಡಿಮೆ ಪವರ್ ಹೀರುವ ಉತ್ಪನ್ನವನ್ನು ಖರೀದಿಸಲು ಸುಲಭವಾಗುತ್ತದೆ. ನೀವೊಂದು ಹೊಸ ಗೀಸರ್ ಅನ್ನು ಇಷ್ಟಪಟ್ಟಿದ್ದರೆ ಮತ್ತು ಅದಕ್ಕೆ ಕಂಪನಿಯು ಹೆಚ್ಚಿನ ಸ್ಟಾರ್‌ಗಳನ್ನು ನೀಡಿದ್ದರೆ ಅದನ್ನು ಬಳಸುವಾಗ ನೀವು ಹೆಚ್ಚಿನ ವಿದ್ಯುತ್ ಅನ್ನು ಉಳಿಸಲು ಸಾಧ್ಯವಾಗುತ್ತದೆ ಎಂದರ್ಥ.
ಇದಕ್ಕೆ ವಿರುದ್ಧವಾಗಿ ಗೀಸರ್ ಕೇವಲ ಒಂದು ಅಥವಾ ಎರಡು ಸ್ಟಾರ್‌ಗಳನ್ನು ಹೊಂದಿದ್ದರೆ ಅದು ಶಕ್ತಿಯ ದಕ್ಷತೆಯನ್ನು ಹೊಂದಿರುವುದಿಲ್ಲ. ಇದರ ನೇರ ಪರಿಣಾಮವು ನಿಮ್ಮ ಬಿಲ್‌ನಲ್ಲಿ ಗೋಚರಿಸುತ್ತದೆ. ನೀವು ದೊಡ್ಡ ಕುಟುಂಬವನ್ನು ಹೊಂದಿದ್ದರೆ ನಂತರ ಸ್ಟಾರ್‌ಗಳನ್ನು ನೋಡಿಕೊಳ್ಳುವುದು ಹೆಚ್ಚು ಮುಖ್ಯವಾಗುತ್ತದೆ. ಏಕೆಂದರೆ ದೊಡ್ಡ ಕುಟುಂಬ ಎಂದರೆ ಹೆಚ್ಚು ಬಳಕೆ ಮತ್ತು ಕಡಿಮೆ ಸ್ಟಾರ್‌ಗಳು ಎಂದರೆ ಜೇಬಿಗೆ ಹೆಚ್ಚಿನ ಹೊರೆ ಎಂದು ಅರ್ಥ ಮಾಡಿಕೊಳ್ಳಬಹುದು.
ಈ ಅಂಶ ಪ್ರತಿ ಬಾರಿ ನಮಗೆಲ್ಲ ಕಾಡುವ ಅಸಾಧಾರಣವಾದ ಪ್ರಶ್ನೆಯಾಗಿದೆ. ಯಾಕೆಂದರೆ ನೀವು ಮೊದಲು ಗೀಸರ್ ಬಳಸಿದ್ದರೆ ಇದರ ಬಗ್ಗೆ ನಿಮಗೆ ಐಡಿಯಾ ಇರುತ್ತೆ ಆದರೆ ಮೊದಲ ಬಾರಿ ನೀವು ಹೊಸ ಗೀಸರ್ ಖರೀದಿಸಲು ಯೋಚಿಸುತ್ತದ್ದರೆ ನಮ್ಮ ಟೆಕ್ ತಜ್ಞರ ಪ್ರಕಾರ ಲಕ್ಷಾಂತರ ಜನರ ಅಭಿಪ್ರಾಯದ ನಂತರ ತಯಾರಿಸಿರುವ ಮತ್ತು ನಿಮಗೊಂದು ಸಲಹೆ ನೀಡುವ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದ್ದು ಇದರಿಂದ ನಿಮಗೆ ಅರ್ಧ ತಲೆನೋವು ಕಡಿಮೆಯಾಗಲಿದೆ. ಯಾಕೆಂದರೆ ಹೊಸ ಗೀಸರ್ ನೀವು ಮತ್ತು ನಿಮ್ಮ ಮನೆಯಲ್ಲಿರುವ ಸದ್ಯರ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.
ಯಾವುದೇ ಎಲೆಕ್ಟ್ರಾನಿಕ್ ಉತ್ಪನ್ನದಂತೆ ಗೀಸರ್ ಖರೀದಿಸುವ ಮೊದಲು ಅದರ ಬ್ರಾಂಡ್ ಬಗ್ಗೆ ಮಾಹಿತಿಯನ್ನು ಪಡೆಯಬೇಕು. ಗ್ರಾಹಕರ ವಿಮರ್ಶೆಗಳು ಮತ್ತು ಉದ್ಯಮದಲ್ಲಿನ ಅನುಭವವನ್ನು ಪರೀಕ್ಷಿಸಲು ಮರೆಯದಿರಿ. ಗ್ರಾಹಕರ ಸೇವೆಯಲ್ಲಿ ಯಾವ ಬ್ರಾಂಡ್ ಯಾವ ಸೌಲಭ್ಯಗಳನ್ನು ಒದಗಿಸುತ್ತಿದೆ. ನೀವು ಖರೀದಿಸುವ ಗೀಸರ್ ಬ್ರ್ಯಾಂಡ್ ಗ್ಯಾರಂಟಿ ಅವಧಿ ಎಷ್ಟು, ಗ್ಯಾರಂಟಿ ಮುಗಿದ ನಂತರ ಗ್ರಾಹಕ ಸೇವೆ (After Sales Service) ಹೇಗೆ ಇರುತ್ತದೆ ಇತ್ಯಾದಿಗಳ ಬಗ್ಗೆ ಮಾಹಿತಿ ತಿಳಿಯುವುದು ತುಂಬ ಮುಖ್ಯವಾಗಿರುತ್ತದೆ.