ಇವು ಭಾರತದಲ್ಲಿರುವ ಮೂರು ಅತಿ ದೊಡ್ಡ ಸ್ಮಾರ್ಟ್ಫೋನ್ ಕಂಪನಿಗಳು

ಇವು ಭಾರತದಲ್ಲಿರುವ ಮೂರು ಅತಿ ದೊಡ್ಡ ಸ್ಮಾರ್ಟ್ಫೋನ್ ಕಂಪನಿಗಳು
HIGHLIGHTS

ನಿಮಗೊತ್ತಾ ಭಾರತ ಜಾಗತಿಕವಾಗಿ ಸ್ಮಾರ್ಟ್ಫೋನ್ ವಲಯದಲ್ಲಿ ಎರಡನೇ ಅತಿದೊಡ್ಡ ಸ್ಮಾರ್ಟ್ಫೋನ್ ಮಾರುಕಟ್ಟೆಯಾಗಿದೆ

ಇತ್ತೀಚಿನ ಸ್ಮಾರ್ಟ್ಫೋನ್ ಮಾರುಕಟ್ಟೆ ಕೌಂಟರ್ಪಾಯಿಂಟ್ ರಿಸರ್ಚ್ ಮಾನಿಟರ್ ಪ್ರಕಾರ ಭಾರತೀಯ ಸ್ಮಾರ್ಟ್ಫೋನ್ ಮಾರುಕಟ್ಟೆ 2019 ರಲ್ಲಿ  ಮೊದಲ ಬಾರಿಗೆ ಅಮೇರಿಕವನ್ನು ಮೀರಿಸಿದೆ. ಅಂದ್ರೆ ಜಾಗತಿಕವಾಗಿ ಭಾರತ ಸ್ಮಾರ್ಟ್ಫೋನ್ ವಲಯದಲ್ಲಿ ಎರಡನೇ ಅತಿದೊಡ್ಡ ಸ್ಮಾರ್ಟ್ಫೋನ್ ಮಾರುಕಟ್ಟೆಯಾಗಿದೆ. ಭಾರತದಲ್ಲಿ ಸಾಗಣೆಗಳು 2019 ರಲ್ಲಿ 158 ದಶಲಕ್ಷವನ್ನು ಮುಟ್ಟಿದ್ದು ಅಂದ್ರೆ ವರ್ಷಕ್ಕೆ 7% ರಂತೆ ಬೆಳವಣಿಗೆಯಾಗಿದೆ. ಇದರಲ್ಲಿ ಚೀನಾದ ಬ್ರ್ಯಾಂಡ್‌ಗಳ ಸ್ಮಾರ್ಟ್‌ಫೋನ್‌ಗಳಲ್ಲಿ ಅನೇಕ ಪ್ರಮುಖ ದರ್ಜೆಯ ವೈಶಿಷ್ಟ್ಯಗಳನ್ನು ಮತ್ತು ಸಾಮರ್ಥ್ಯಗಳನ್ನು ಆಕ್ರಮಣಕಾರಿಯಾಗಿ ಪರಿಚಯಿಸಿದ ಭಾರತದಲ್ಲಿ ಮಧ್ಯ ಶ್ರೇಣಿಯ ವಿಭಾಗದ ಬೆಳವಣಿಗೆಯೇ ಇದಕ್ಕೆ ಕಾರಣವಾಗಿದೆ. ಸ್ವಲ್ಪ ಆಶ್ಚರ್ಯವೆನಿಸುವ ಮಾತೆಂದರೆ ಚೀನಾದ ಬ್ರ್ಯಾಂಡ್‌ಗಳ ಪಾಲು ಕಳೆದ ವರ್ಷ 2019 ರಲ್ಲಿ 72% ಕ್ಕೆ ಏರಿದೆ ಇದು ಒಂದು ವರ್ಷದ ಹಿಂದೆ 60% ಆಗಿತ್ತು. ಹಾಗಾದ್ರೆ ಭಾರತದಲ್ಲಿರುವ ಐದು ಅತಿ ದೊಡ್ಡ ಸ್ಮಾರ್ಟ್ಫೋನ್ ಕಂಪನಿಗಳು ಯಾವುವೆಂದು ಈ ಕೆಳಗೆ ತಿಳಿಯೋಣ.

Xiaomi

ಈ ಚೀನಾ ಕಂಪನಿ 2019 ರಲ್ಲಿ ಭಾರತದ ನಂಬರ್ ಒನ್ ಸ್ಮಾರ್ಟ್ಫೋನ್ ಕಂಪನಿಯಾಗಿ ತನ್ನನ್ನು ಗುರುತಿಸಿಕೊಂಡಿದೆ. ಇದಕ್ಕೆ ಮೂಲ ಕಾರಣ ಈ ಕಂಪನಿಯ ಫೋನ್ಗಳು ಕಡಿಮೆ ಹಣದಲ್ಲಿ ಜನಸಾಮಾನ್ಯರಿಗೆ ಉನ್ನತ ಫೀಚರ್ಗಳನ್ನು ನೀಡುವುದಾಗಿದೆ. ಆದರೂ ಭಾರತದಲ್ಲಿ ಚೀನಾದ ಎಲ್ಲಾ ಕಂಪನಿಗಳ ವಿರುದ್ಧ ಧ್ವನಿ ಎಳುತ್ತಲೇ ಇರುತ್ತವೆ ಆದರೆ ಇದಕ್ಕೆ ಸರಿ ಸಮನಾಗುವ ಭಾರತದ ಬೇರೆ ಯಾವುದೇ ಸ್ಮಾರ್ಟ್ಫೋನ್ ಕಂಪನಿ ಸದ್ಯಕ್ಕೆ ನಮ್ಮಲ್ಲಿಲ್ಲ. ಈ ಕಂಪನಿಯ 28% ಮಾರುಕಟ್ಟೆ ಹಂಚಿಕೆಯೊಂದಿಗೆ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಮುನ್ನಡೆ ಸಾಧಿಸಿದೆ. ಕಂಪನಿಯು ವರ್ಷದಿಂದ ವರ್ಷಕ್ಕೆ 5% ರಷ್ಟು ಬೆಳೆಯುತ್ತಲೇ ಇದೆ. ಭಾರತ ಈಗ Xiaomi ಕಂಪನಿಗೆ ಚಿನ್ನದ ಮೊಟ್ಟೆ ಕೊಡುವ ಕೋಳಿಯಾಗಿದೆ. ಇದರ ಮಾರಾಟ ಯಾವ ರೀತಿ ಇದೆ ಅಂದ್ರೆ ತಮ್ಮ ದೇಶವನ್ನೇ ಹಿಂದಿಕ್ಕುವಷ್ಟು ಫೋನ್ಗಳನ್ನು ಭಾರತದಲ್ಲಿ ಮಾರಾಟ ಮಾಡಿವೆ. ಭಾರತದಲ್ಲಿ ಬಿಡುಗಡೆಯಾದ ಇದರ ಮೊಟ್ಟ ಮೊದಲ ಫೋನ್ ಇದಾಗಿತ್ತು.

Samsung

ಈಗ ಇದರ ಬಗ್ಗೆ ಹೆಚ್ಚಾಗಿ ನಿಮಗೆ ಪರಿಚಯಿಸುವ ಅಗತ್ಯವಿಲ್ಲವೆನಿಸುತ್ತದೆ. ಇದರ ಹೆಸರೇ ಒಂದು ರೀತಿಯಲ್ಲಿ ಜನಸಾಮಾನ್ಯರಲ್ಲಿ ಭರವಸೆಯ ಬೇರು ಬಿಟ್ಟಿದೆ. ಈ ಕಂಪನಿಯ ಯಾವುದೇ ವಸ್ತುಗಳಾಗಿರಬವುದು ಫೋನ್, ಸ್ಮಾರ್ಟ್ಫೋನ್, ಟಿವಿ, ಆಡಿಯೋ ಪ್ಲೇಯರ್, ವಿಡಿಯೋ ಪ್ಲೇಯರ್, ಗೃಹಪಯೋಗಿ ವಸ್ತುಗಳಾಗಿರಬವುದು ಖರೀದಿಸಲು ಅಥವಾ ಸಲಹೆ ನೀಡಲು ಹೆಸರೇ ಸಾಕಾಗುತ್ತದೆ. ಆದರೂ ಸ್ಯಾಮ್‌ಸಂಗ್ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ 21% ರಷ್ಟು ಮಾರುಕಟ್ಟೆ ಷೇರುಗಳೊಂದಿಗೆ ಎರಡನೇ ಸ್ಥಾನವನ್ನು ಉಳಿಸಿಕೊಂಡಿದೆ. ಕಂಪನಿಯು 2019 ರ ವರ್ಷದಲ್ಲಿ 5% ಮಾರುಕಟ್ಟೆ ಪಾಲನ್ನು ಕಳೆದುಕೊಂಡಿದ್ದರೂ ಆದಾಯದ ದೃಷ್ಟಿಯಿಂದ ಇದು ಅತಿದೊಡ್ಡ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿ ಉಳಿದಿದೆ. ಭಾರತದಲ್ಲಿ ಬಿಡುಗಡೆಯಾದ ಇದರ ಮೊಟ್ಟ ಮೊದಲ ಫೋನ್ ಇದಾಗಿತ್ತು.

Realme

ಇದು ಕಳೆದ ವರ್ಷ 2018 ರಲ್ಲಿ Oppo ಕಂಪನಿಯ ಸಬ್ ಬ್ರಾಂಡ್ ಆಗಿ ಭಾರತವನ್ನು ಪ್ರವೇಶಿಸಿತು. ತಮ್ಮ ಮೊದಲ ರಿಯಲ್ಮೆ ಫೋನ್ Realme 1 ಬಿಡುಗಡೆಯಾದ ತಿಂಗಳುಗಳ ನಂತರ ಕಂಪನಿಯು ಒಪ್ಪೊದಿಂದ ಬೇರ್ಪಟ್ಟ ನಂತರ ತಾನು ಸ್ವತಂತ್ರ ಬ್ರಾಂಡ್ ಆಗಿ ಮಾರ್ಪಟ್ಟಿತು. ಕೌಂಟರ್ಪಾಯಿಂಟ್ ರಿಸರ್ಚ್ ಇದು ಭಾರತದಲ್ಲಿ ತನ್ನ ಎಫೆಕ್ಟಿವ್ ಸ್ಪೆಕ್ಸ್ ನೀಡುತ್ತಾ ಬದಲಾಗುತ್ತಿರುವ ಮಾರುಕಟ್ಟೆಗೆ ತಕ್ಕಂತ ಪ್ರವೃತ್ತಿಗಳಿಂದ ಗುರುತಿಸಲ್ಪಟ್ಟಿದೆ. ನಂತರ ಶೀಘ್ರವೇ Realme 3 ಅನ್ನು ಆನ್‌ಲೈನ್ ಚಾನೆಲ್‌ಗಳಲ್ಲಿ ಮೊದಲ ಬಾರಿಗೆ ಬಿಟ್ಟು ನಂಬರ್ 1 ಮಾದರಿಯಾಗಲು ಸಹಾಯ ಮಾಡಿತು. ಕಡಿಮೆ ಸಮಯದಲ್ಲಿ ಹೆಮ್ಮರವಾಗಿ ಬೆಳೆದ ಕಂಪನಿಯ ಹೆಗ್ಗಳಿಕೆಗೆ ಇದು ಪಾತ್ರವಾಗುತ್ತೆ. 2109 ರಲ್ಲಿ ವೇಗವಾಗಿ ಬೆಳೆದು ಒಂದೇ ವರ್ಷದಲ್ಲಿ ಕಂಪನಿಯ ಮಾರುಕಟ್ಟೆ ಪಾಲು 3% ರಿಂದ 10% ಕ್ಕೆ ಏರಿಸಿದೆ. ಅಲ್ಲದೆ ಇದರ ಕೆಲವು ವಿಶೇಷತೆಗಳೆಂದರೆ ಮೊದಲ ಬಾರಿಗೆ 50W ಫಾಸ್ಟ್ ಚಾರ್ಜರ್, ಮೊದಲ ಬಾರಿಗೆ ಬಜೆಟ್ ಫೋನ್ಗಳಲ್ಲಿ 90Hz ಡಿಸ್ಪ್ಲೇ, ಮೊದಲ 64MP ಕ್ಯಾಮೆರಾ ಮುಂತಾದವುಗಳು. ಭಾರತದಲ್ಲಿ ಬಿಡುಗಡೆಯಾದ ಇದರ ಮೊಟ್ಟ ಮೊದಲ ಫೋನ್ ಇದಾಗಿತ್ತು.

 

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo