Watch Kannada movies on Jio Cinema for free: ಭಾರತದಲ್ಲಿ ಪ್ರತಿ ತಿಂಗಳು ಒಂದಲ್ಲ ಒಂದು ಹೊಸ ಮತ್ತು ಜನಪ್ರಿಯ ಸಿನಿಮಾಗಳು ಬಿಡುಗಡೆಯಾಗುತ್ತಲೇ ಇರುತ್ತದೆ ಸಮಯ ಸಿಕ್ಕಿಲ್ಲ ಅಂಥ ಕನ್ನಡದ ಈ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು (Kannada Movies) ಇನ್ನೂ ನೋಡದಿದ್ರೆ ಇಂದೇ Jio Cinema ಮೂಲಕ ಉಚಿತವಾಗಿ HD ಅಲ್ಲಿ ವೀಕ್ಷಿಸಬಹುದು. ಆದರೆ ಕೆಲವೊಂದು ಕಾರಣಗಳಿಂದ ನಾವು ಒಂದಿಷ್ಟು ಸಿನಿಮಾಗಳನ್ನು ನೋಡಲು ಸಮಯವೆ ಇರೋಲ್ಲ ಇದರೊಂದಿಗೆ ಆ ಸಿನಿಮಾ ಹಾಗೆ ನೋಡದೆ ಉಳಿದುಕೊಳ್ಳುವುದು ಸಾಕಷ್ಟು ಬಾರಿ ಅನುಭವವಾಗಿರಬಹುದು. ಆದರೆ ಕೊಂಚ ಸಮಯ ಕಳೆದ ನಂತರ ಈ ಸಿನಿಮಾಗಳು OTT ಅಪ್ಲಿಕೇಶನ್‌ಗಳ ಮೂಲಕ ವೀಕ್ಷಿಸಬಹುದು.
ಒಂದು ವೇಳೆ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್ ಅಥವಾ ಡಿಸ್ನಿಯಂತಹ OTT ಅಪ್ಲಿಕೇಶನ್‌ಗಳ ಚಂದಾದಾರಿಕೆ ನೀಡಲು ಬಯಸದೆ ಸಿನಿಮಾಗಳನ್ನು ಹಾಗೆ ಬಿಟ್ಟಿದ್ದರೆ ಈಗ ನಿಮ್ಮ ಯಾವುದೇ ನೆಪಗಳನ್ನು ನೀಡದೆ Jio Cinema ಅಪ್ಲಿಕೇಶನ್ ಮೂಲಕ ಈ ಕನ್ನಡದ ಈ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು (Kannada Movies) ಉಚಿತವಾಗಿ HD ಕ್ವಾಲಿಟಿಯಲ್ಲಿ ವೀಕ್ಷಿಸಬಹುದು. ನಿಮ್ಮ ಬಳಿ ಅಥವಾ ನಿಮ್ಮ್ ಮನೆಯಲ್ಲಿ ಯಾರದೇ ಜಿಯೋ ಸಿಮ್ ಕಾರ್ಡ್ ಬಳಸುತ್ತಿದ್ದರೆ ಜಿಯೋ ಸಿನಿಮಾ ಅಪ್ಲಿಕೇಶನ್ ಡೌನ್ ಮಾಡಿ ನಂಬರ್ ಹಾಕಿ ಈ ಪೊಗರು, ಬೈರಾಗಿ, ಬಡವ ರಾಸ್ಕಲ್ ಮತ್ತು ನೀರ್ ದೋಸೆ ಬ್ಲಾಕ್ ಬಸ್ಟರ್ ಸಿನಿಮಾಗಳೊಂದಿಗೆ ಹತ್ತಾರು ಸಿನಿಮಾಗಳನ್ನು ವೀಕ್ಷಿಸಬಹುದು. ಈ ಮಾಹಿತಿ ಇಷ್ಟವಾದರೆ ತಿಳಿದಿಲ್ಲದವರೊಂದಿಗೆ ಹಂಚಿಕೊಳ್ಳಿ.
Also Read: 25 ವರ್ಷಗಳ ನಂತರ ಮತ್ತೆ ಕಾಲಿಡಲು ಸಜ್ಜಾಗಿರುವ Nokia 3210 (2024) ಫೋನ್! ನಿರೀಕ್ಷಿತ ಫೀಚರ್ಗಳೇನು?
ಧ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಕನ್ನಡದ ಸೂಪರ್ ಹಿಟ್ ಮತ್ತು ಬ್ಲಾಕ್ ಬಸ್ಟರ್ ಸಿನಿಮಾ ಪೊಗರು (POGARU) ಇದನ್ನು ಈಗ ನೀವು ಉಚಿತವಾಗಿ Jio Cinema ಅಪ್ಲಿಕೇಶನ್ ಮೂಲಕ ವೀಕ್ಷಿಸಬಹುದು. ಈ ಪೊಗರು ಥ್ರಿಲ್ಲಿಂಗ್ ಸಿನಿಮೀಯ ಅನುಭವವನ್ನು ನೀಡುತ್ತದೆ. ಇದರಲ್ಲಿ ನಿಮಗೆ ಆಕ್ಷನ್ ಸೀಕ್ವೆನ್ಸ್‌ಗಳು, ರೋಮ್ಯಾಂಟಿಕ್ ಎನ್‌ಕೌಂಟರ್‌ಗಳು ಮತ್ತು ರೋಮಾಂಚಕ ತಿರುವುಗಳಿಂದ ತುಂಬಿದ ರೋಲರ್‌ಕೋಸ್ಟರ್ ರೈಡ್‌ಗಳ ಅನುಭವವನ್ನು ಪಡೆಯಬಹುದು.
ಕನ್ನಡದ ಹ್ಯಾಟ್ರಿಕ್ ಹೀರೊ ಎಂದೇ ಜನಪ್ರಿಯರಾಗಿರುವ ಶಿವ ರಾಜ್ ಕುಮಾರ್ ಮತ್ತು ಡಾಲಿ ಧನಂಜಯ ಅಭಿನಯದ ಈ ಬೈರಾಗಿ (BAIRAGI) ಸಿನಿಮಾವನ್ನು ಈಗ ನೀವು ಉಚಿತವಾಗಿ Jio Cinema ಅಪ್ಲಿಕೇಶನ್ ಮೂಲಕ ವೀಕ್ಷಿಸಬಹುದು. ಬೈರಾಗಿ ಚಿತ್ರವನ್ನು ವಿಜಯ್ ಮಿಲ್ಟನ್ ನಿರ್ದೇಶಿಸಿದ್ದು 2022 ಭಾರತೀಯ ಕನ್ನಡ ಭಾಷೆಯ ಸಾಹಸ ನಾಟಕ ಚಿತ್ರವಾಗಿದೆ. ಈ ಸಿನಿಮಾ ಮಿಲ್ಟನ್ ಅವರ ಸ್ವಂತ ತಮಿಳು ಚಿತ್ರ ಕಡುಗು ಚಿತ್ರದ ರೂಪಾಂತರವಾಗಿದ್ದು ಚಿತ್ರದಲ್ಲಿ ಶಿವ ರಾಜ್‌ಕುಮಾರ್ ಮತ್ತು ಧನಂಜಯ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರೆ.
ಬಡವ ರಾಸ್ಕಲ್ (BADAVA RASCAL) ಎಂಬುದು 2021 ರ ಭಾರತೀಯ ಕನ್ನಡ ಭಾಷೆಯ ಆಕ್ಷನ್ ಹಾಸ್ಯ ಚಲನಚಿತ್ರವಾಗಿದ್ದು ಶಂಕರ್ ಗುರು ಅವರ ನಿರ್ದೇಶನದ ಚೊಚ್ಚಲ ನಿರ್ದೇಶನದಲ್ಲಿ ಮತ್ತು ಧನಂಜಯ್ ಅವರು ಡಾಲಿ ಪಿಕ್ಚರ್ಸ್ ಅಡಿಯಲ್ಲಿ ಅವರ ಮೊದಲ ನಿರ್ಮಾಣ ಉದ್ಯಮದಲ್ಲಿ ಧನಂಜಯ್ ನಟಿಸಿದ್ದಾರೆ. ಇದು 18 ಫೆಬ್ರವರಿ 2022 ರಂದು ತಮಿಳು ಮತ್ತು ತೆಲುಗಿನಲ್ಲೂ ಬಿಡುಗಡೆಯಾಯಿತು. ಈ ಬಡವ ರಾಸ್ಕಲ್ ಕನ್ನಡ ಸಿನಿಮಾವನ್ನು ನೀವು ಉಚಿತವಾಗಿ Jio Cinema ಅಪ್ಲಿಕೇಶನ್ ಮೂಲಕ ವೀಕ್ಷಿಸಬಹುದು.
ನೀರ್ ದೋಸೆ 2016 ರ ಭಾರತೀಯ ಕನ್ನಡ ಭಾಷೆಯ ಕಪ್ಪು ಹಾಸ್ಯ ಚಲನಚಿತ್ರವಾಗಿದ್ದು ಇದನ್ನು ಟಿ. ಗೋಸ್ವಾಮಿ ಮತ್ತು ಶಶಿಕಲಾ ಬಾಲಾಜಿ ನಿರ್ಮಿಸಿದ್ದಾರೆ. ಇದನ್ನು ವಿಜಯ ಪ್ರಸಾದ್ ಬರೆದು ನಿರ್ದೇಶಿಸಿದ್ದಾರೆ. ಇದರಲ್ಲಿ ಜಗ್ಗೇಶ್ ಮತ್ತು ಹರಿಪ್ರಿಯಾ ಜೊತೆಗೆ ಸುಮನ್ ರಂಗನಾಥನ್ ಮತ್ತು ಎಚ್ ಜಿ ದತ್ತಾತ್ರೇಯ ನಟಿಸಿದ್ದಾರೆ. ಈ ಸಿನಿಮಾ 2016 ಅತ್ಯಂತ ಹೆಚ್ಚು ಮೆಚ್ಚುಗೆ ಪಡೆದ ಚಲನಚಿತ್ರಗಳಲ್ಲಿ ಒಂದಾಗಿದೆ. ಕನ್ನಡ ಸಿನಿಮಾವನ್ನು ನೀವು ಉಚಿತವಾಗಿ Jio Cinema ಅಪ್ಲಿಕೇಶನ್ ಮೂಲಕ ವೀಕ್ಷಿಸಬಹುದು.