Pushpa 2: The Rule Released: ಅಲ್ಲು ಅರ್ಜುನ್ ಅಭಿನಯದ ಸೂಪರ್ ಡೂಪರ್ ಹಿಟ್ ಸಿನಿಮಾ ಪುಷ್ಪಾ ಬರೋಬ್ಬರಿ ಮೂರು ವರ್ಷಗಳ ನಂತರ ಈಗ 5ನೇ ಡಿಸೆಂಬರ್ 2024 ರಂದು ಇದರ ನಿರ್ದೇಶಕ ಸುಕುಮಾರ್ (Sukumar) ಬಹು ನಿರೀಕ್ಷಿತ ಎರಡನೇ ಭಾಗವನ್ನು ಬಿಡುಗಡೆಗೊಳಿಸಿದ್ದಾರೆ. ಈ ಪುಷ್ಪಾ (Pushpa 2) ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹಾದ್ ಫಾಸಿಲ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಪುಷ್ಪಾ (Pushpa 2) ಸೀಕ್ವೆಲ್ ಏನನ್ನು ತರಲಿದೆ ಎನ್ನುವುದನ್ನು ಅಭಿಮಾನಿಗಳು ಮತ್ತು ಚಲನಚಿತ್ರ ಪ್ರೇಮಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಆದ್ದರಿಂದ ಸಾವಿರಾರು ಚಿತ್ರ ಮಂದಿರಗಳಲ್ಲಿ ಪುಷ್ಪಾ ರಾಜನ ಅಬ್ಬರ ಜೋರಾಗಿದ್ದು ಇದರ ಮುಂಗಡ ಬುಕಿಂಗ್ ಮಾಡೋದು ಹೇಗೆ? ಎನ್ನುವುದನ್ನು ತಿಳಿಯಿರಿ.
ಈ ಹೊಸ ಭಾಗದ ಸಿನಿಮಾ 6ನೇ ಡಿಸೆಂಬರ್ 2024 ರಂದು ವಿಶ್ವದಾದ್ಯಂತ ಥಿಯೇಟರ್ಗಳನ್ನು ತಲುಪಲು ನಿರ್ಧರಿಸಲಾಗಿದೆ ಮತ್ತು ಹಿಂದೆ ಅದು 2D ಆಗಿತ್ತು ಆದರೆ ಈಗ 3D ಸ್ವರೂಪಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು ಆದರೆ ಈಗ ಬಾಲಿವುಡ್ ಹಂಗಾಮಾದ ವರದಿಯ ಪ್ರಕಾರ ಚಿತ್ರದ 2D ಆವೃತ್ತಿಯನ್ನು ಮಾತ್ರ ಬಿಡುಗಡೆ ಮಾಡಲಾಗುತ್ತದೆ.
ಪುಷ್ಪಾ (Pushpa 2) ಸಿನಿಮಾ 3D ಆವೃತ್ತಿಯು ಮುಂದಿನ ವಾರ 13ನೇ ಡಿಸೆಂಬರ್ನಿಂದ ಹೊರಬರುತ್ತದೆ. ಈ ವಿಳಂಬಕ್ಕೆ ಕಾರಣವನ್ನು ವಿವರಿಸಿದ ಮೂಲಗಳು ಬಾಲಿವುಡ್ ಹಂಗಾಮಾಗೆ ಚಿತ್ರದ 3D ಆವೃತ್ತಿ ಇನ್ನೂ ಪೂರ್ತಿಯಾಗಿ ಸಿದ್ಧವಾಗಿಲ್ಲ ಎಂದು ಹೇಳಿದರು.
ಈ ಹೊಸ ಚಲನಚಿತ್ರವನ್ನು Bookmyshow ಮೂಲಕ ಪುಷ್ಪಾ (Pushpa 2) ಸಿನಿಮಾದ ಟಿಕೆಟ್ಗಳನ್ನು ಬುಕಿಂಗ್ ಮಾಡಲು ನೀವು Bookmyshow ಅಪ್ಲಿಕೇಶನ್ ಅಥವಾ ವೆಬ್ಸೈಟ್ ತೆರೆಯುವ ಅಗತ್ಯವಿದೆ. ನಂತರ ನಿಮ್ಮ ಖಾತೆಯನ್ನು ಲಾಗಿನ್ ಮಾಡಿ ಅಥವಾ ನೋಂದಾಯಿಸಿ. ನಂತರ ನೀವು ಸ್ಥಳ, ಚಲನಚಿತ್ರ, ದಿನಾಂಕ ಮತ್ತು ಎಷ್ಟು ಆಸನವನ್ನು ಎಲ್ಲವನ್ನು ಆಯ್ಕೆ ಮಾಡಿಕೊಳ್ಳಿ.
ಇದರ ನಂತರ ನಿಮ್ಮ ಬಳಿ ಪ್ರೋಮೋ ಕೋಡ್ ಇದ್ದಾರೆ ಕಾರ್ಟ್ಗೆ ಹೋದ ನಂತರ ನೀವು ವೋಚರ್ ಅನ್ನು ಸೇರಿಸಬೇಕಾಗುತ್ತದೆ. ಅದು ನಿಮಗೆ ಒಟ್ಟು ಟಿಕೆಟ್ ದರದ ರಿಯಾಯಿತಿಯನ್ನು ನೀಡುತ್ತದೆ. ಅದನ್ನು ಪಾವತಿಸಿ ಇ-ಟಿಕೆಟ್ ಮೇಲ್ ಮತ್ತು ಮೆಸೇಜ್ ಮೂಲಕ ಪಡೆಯಬಹದು. ಇದನ್ನು ಸಿನಿಮಾ ಮಂದಿಯರ ಕೌಂಟರ್ನಲ್ಲಿ ತೋರಿಸಿದರೆ ಸಾಕು.
ಈ ಹೊಸ ಭಾಗ ಪುಷ್ಪಾ (Pushpa 2) ಚಲನಚಿತ್ರವು ಒಟ್ಟಾರೆಯಾಗಿ 3 ಗಂಟೆ 20 ನಿಮಿಷಗಳ ಸಮಯ ನಡೆಯಲಿದ್ದು ಆಕ್ಷನ್ ತ್ರಿಲ್ಲರ್ ವಿಭಾಗದಲ್ಲಿ UA ಪ್ರಮಾಣೀಕರಣದೊಂದಿಗೆ ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ಚಲನಚಿತ್ರಗಳಲ್ಲಿ ಒಂದಾಗಿ ಪ್ರದರ್ಶನಗೊಳ್ಳುತ್ತಿದೆ. ಈ ಸಿನಿಮಾದ ಟಿಕೆಟ್ ಬೆಲೆಯ ಬಗ್ಗೆ ಮಾತಾನಾಡುವುದಾದರೆ ದೆಹಲಿಯಲ್ಲಿ 350 ರೂಗಳಿಂದ 1500 ರೂಗಳವರೆಗೆ ತಲುಪಿದೆ. ಪುಷ್ಪಾ (Pushpa 2) ಇನ್ನು ಹೆಚ್ಚಿನ ದರಗಳೊಂದಿಗೆ ಟಿಕೆಟ್ ಬೆಲೆ ಭಾರಿ ಏರಿಕೆ ಕಂಡುಬಂದಿದೆ. ಅಲ್ಲದೆ ಈ ಪುಷ್ಪಾ (Pushpa 2) ಸಿನಿಮಾಕ್ಕೆ ಆಂಧ್ರಪ್ರದೇಶ ಸರ್ಕಾರವು ಚಿತ್ರದ ಟಿಕೆಟ್ ದರವನ್ನು ಹೆಚ್ಚಿಸಲು ಅನುಮೋದನೆ ಸಹ ನೀಡಿದೆ.